ಟಾಪ್ 10

ಭಾರತ ದೇಶವು ಒಂದು ಆಧ್ಯಾತ್ಮಿಕ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ ಈ ನೆಲದಲ್ಲಿ ಸನಾತನ ಧರ್ಮ ವಾತ ಹಿಂದೂ ಧರ್ಮ, ಬೌದ್ಧ ಧರ್ಮ,ಇಸ್ಲಾಂ ಧರ್ಮ, ಕ್ರಿಶ್ಚಿಯನ್ ಧರ್ಮಗಳು ಸೇರಿದಂತೆ ಅನೇಕ ಧರ್ಮಗಳಿಗೆ ನೆಲೆಯಾಗಿದೆ. ಅದೇ ರೀತಿ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ರೀತಿಯ ಆಚಾರ ವಿಚಾರಗಳನ್ನು ಒಳಗೊಂಡಿರುತ್ತದೆ. ಆದರೆ ಪ್ರಮುಖವಾಗಿ ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಇರುವಂತಹ ಸಂಸ್ಕೃತಿ ಸಂಪ್ರದಾಯವು ಇನ್ನೂ ಯಾವ ಧರ್ಮದಲ್ಲೂ ಕೂಡ ನಾವು ಕಾಣಲು ಸಾಧ್ಯವಿಲ್ಲ. ಹೇಗೆ ಧರ್ಮಗಳಲ್ಲಿ ಇರುವಂತಹ ಆಚಾರ ವಿಚಾರಗಳಿಗೆ ಹೆಸರುವಾಸಿಯಾಗಿದೆಯೋ ಅದೇ ರೀತಿ ಭಾರತವು ವಿವಿಧತೆಯಲ್ಲಿ ಏಕತೆಯ ದೇಶ ಎಂದು ಕರಿಯಲಾಗುತ್ತದೆ. ಭಾರತದಲ್ಲಿರುವಂತಹ ಪ್ರತಿಯೊಂದು ರಾಜ್ಯವು ಕೂಡ ಒಂದೊಂದು ಪ್ರತ್ಯೇಕ ದೇವಾಲಯಗಳನ್ನು ಹೊಂದಿರುವ ಸಾಲುಗಳಲ್ಲಿ ಕಾಣಸಿಗುತ್ತವೆ. ಇಂದು ನಾವು ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವಂತಹ ರಾಜ್ಯಗಳ ಬಗ್ಗೆ ತಿಳಿದುಕೊಂಡುಬರೋಣ ಬನ್ನಿ.

1) ಆಂಧ್ರಪ್ರದೇಶ :

ಭಾರತ ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಸಾಲುಗಳಲ್ಲಿ ಆಂಧ್ರ ಪ್ರದೇಶ ರಾಜ್ಯ ಆರನೇ ಸ್ಥಾನದಲ್ಲಿ ಇದೇ .ಒಟ್ಟು ಈ ರಾಜ್ಯದಲ್ಲಿ ಸರಿಸುಮಾರು 47,000 ದೇವಸ್ಥಾನಗಳಿವೆ ಅದರಲ್ಲಿ ತಿರುಪತಿ ತಿಮ್ಮಪ್ಪ ದೇವಸ್ಥಾನ, ಕಾಳಹಸ್ತಿ, ವಿಜಯವಾಡ ಕಣಕದುರ್ಗಮ್ಮ, ಮಂತ್ರಾಲಯ ರಾಘವೇಂದ್ರ ಸ್ವಾಮಿ,ನೆಲ್ಲೂರು ರಂಗನಾಥ ದೇವಸ್ತಾನ ಮತ್ತು ಇನ್ನು ಇತರ ದೇವಸ್ಥಾನಗಳು.

2) ಗುಜರಾತ್ :

ಹೆಚ್ಚು ದೇವಸ್ಥಾನಗಳನ್ನು ಹೊಂದಿರುವ ಸ್ಥಾನಗಳಲ್ಲಿ ಗುಜರಾತ್ ರಾಜ್ಯವು ಐದನೇ ಸ್ಥಾನದಲ್ಲಿ ಇದೇ. ಈ ರಾಜ್ಯದಲ್ಲಿ ಒಟ್ಟು 50,000 ದೇವಾಲಯಗಳಿವೆ.ಇದರಲ್ಲಿ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನ, ಅಂಬಾಜಿ ದೇವಾಲಯ, ಅಕ್ಷರಧಾಮ ದೇವಾಲಯ,ರುಕ್ಮಿಣಿ ದೇವಿ ಇನ್ನು ಹಲವು ದೇವಾಲಯಗಳು ಇವೆ.

3) ಪಶ್ಚಿಮ ಬಂಗಾಳ :

ಪಶ್ಚಿಮ ಬಂಗಾಳ ಒಟ್ಟು 53,500 ದೇವಾಲಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಪುರಾತನ ದೇವಾಲಯಗಳು ಇವೆ ಅದರಲ್ಲಿ ಮಾಡನಮೋಹನ ದೇವಸ್ತಾನ ಬಿಟ್ಟುಪುರ, ನಂದಿಕೇಶ್ವರ ದೇವಸ್ತಾನ, ಶ್ರೀ ಶ್ರೀ ಮಾತೃ ಮಂದಿರ ಜಯಾರಂಭತಿ, ತಾರಕನಾಥ ದೇವಸ್ಥಾನ ತಾರಕೇಶ್ವರ.ಇನ್ನು ಮುಂತಾದ ದೇವಾಲಯಗಳು ಇಲ್ಲಿ ಪ್ರಸಿದ್ಧವಾಗಿದೆ.

4) ಕರ್ನಾಟಕ :

ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಸಾಲುಗಳಲ್ಲಿ ಕರ್ನಾಟಕ ರಾಜ್ಯವು ಕೂಡ ಒಂದು ಒಟ್ಟು 61,000 ದೇವಾಲಯಗಳನ್ನು ಹೊಂದಿದೆ. ಈ ಪ್ರಸಿದ್ಧ ದೇವಾಲಯಗಳಲ್ಲಿ ಧರ್ಮಸ್ಥಳ, ಕೊಲ್ಲೂರು, ಕುಕ್ಕೆ, ಚಾಮುಂಡಿ ಬೆಟ್ಟ, ಅಂಜನಾದ್ರಿ ದೇವಸ್ಥಾನ,ಮುರುಡೇಶ್ವರ, ಉಡುಪಿ ಕೃಷ್ಣ ದೇವಸ್ಥಾನ ಮತ್ತು ಇನ್ನು ಇತರ ದೇವಸ್ಥಾನಗಳು ಪ್ರಸಿದ್ಧ ಐತಿಹಾಸಿಕ ಸ್ಥಳಗಳಿವೆ.

5) ಮಹಾರಾಷ್ಟ್ರ :

ಒಟ್ಟು 77,000 ದೇವಾಲಯಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವು ಕಂಡು ಬರುತ್ತದೆ.ಇದರಲ್ಲಿ ಪ್ರಮುಖವಾಗಿ ಶಿರಡಿ ಸಾಯಿಬಾಬಾ, ಮೋರೇಶ್ವರ, ಶನಿ ಸಿಂಗನಾಪುರ,ಗಿರಿಜಾ ಮಾತಾ, ಕೈಲಾಸ ದೇವಾಲಯ ಇನ್ನು ಹಲವಾರು ದೇವಾಲಯಗಳಿವೆ.

6) ತಮಿಳು ನಾಡು :

ಭಾರತದಲ್ಲಿ ದೇವರಗಳ ನಾಡು ಎಂದು ಪ್ರಸಿದ್ಧವಾದದ್ದು ತಮಿಳುನಾಡು ಒಟ್ಟು 79,000 ದೇವಾಲಯಗಳನ್ನು ಹೊಂದಿರುವ ಈ ರಾಜ್ಯವು ಭಾರತದಲ್ಲಿಯೇ ಮೊದಲನೇ ಸ್ಥಾನವನ್ನು ಅಲಂಕರಿಸಿದ. ಈ ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ಬ್ರಿಹಾದೇಶ್ವರ ದೇವಸ್ಥಾನ,ಶ್ರೀ ರಂಗನಾಥಸ್ವಾಮಿ ಟೆಂಪಲ್,ಮಹ ವಿಷ್ಣು ದೇವಸ್ತಾನ ಇನ್ನು ಪ್ರಸಿದ್ಧವಾದ ದೇವಾಲಯಗಳು ಇಲ್ಲಿ ಕಂಡುಬರುತ್ತದೆ.

Follow Karunadu Today for more Top ten like this

Click here to Join Our Whatsapp Group