
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತ ಹೂಡಿಕೆದಾರರಿಗೆ ಕೆಲವೊಮ್ಮೆ ಹೆಚ್ಚಿನ ಮಟ್ಟದಲ್ಲಿ ಲಾಭದಾಯಕ ಆಗಬಹುದು ಅಥವಾ ನಷ್ಟ ಕೂಡ ಆಗಬಹುದು. ಈ ನಿಟ್ಟಿನಲ್ಲಿ ನಾವು ಸರಿಯಾದ ರೀತಿಯಲ್ಲಿ ಷೇರು ಮಾರುಕಟ್ಟೆ ಬಗ್ಗೆ ತಿಳಿದುಕೊಂಡು ಹಣವನ್ನು ಹೂಡಿಕೆ ಮಾಡಬೇಕು ಅಥವಾ ಷೇರ್ ಮಾರ್ಕೆಟ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ವ್ಯಕ್ತಿಗಳ ಸಲಹೆಗಳನ್ನು ಪಡೆದುಕೊಂಡು ನಂತರ ಹೂಡಿಕೆ ಮಾಡುವುದು ಒಳ್ಳೆಯದು.ಕೆಲವೊಂದು ಷೇರುಗಳು ನಿರ್ದಿಷ್ಟ ಸಮಯದಲ್ಲಿ ಹೆಚ್ಚಿನ ರೀತಿಯಲ್ಲಿ ಲಾಭವನ್ನು ತಂದು ಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಷೇರ್ ಮಾರ್ಕೆಟ್ ನಲ್ಲಿ ನಡೆಯುತ್ತಿರುವ ಪೈಪೋಟಿಯಲ್ಲಿ ಕೆಲವೊಂದು ಷೇರಿನ ಬೆಲೆಯು ಏರಿಕೆ ಕಾಣುತ್ತಿವೆ. ಈ ಹಾದಿಯಲ್ಲಿ (shilchar Technologies ltd) ಷೇರು ಪೇಟೆಯಲ್ಲಿ ಉತ್ತಮ ಗಳಿಕೆಯನ್ನು ಹೊಂದಿದೆ.ಶಿಲ್ಚಾರ್ ಟೆಕ್ನಾಲಜೀಸ್ ಲಿಮಿಟೆಡ್ ಇದರ ಮೇಲೆ ಹೂಡಿಕೆ ಮಾಡಿರುವಂತಹ ಹೂಡಿಕೆದಾರರಿಗೆ ಒಳ್ಳೆಯ ರೀತಿಯ ಲಾಭವನ್ನು ತಂದುಕೊಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ 11,000 ಹೆಚ್ಚು ಲಾಭ ನೀಡುವ ಮೂಲಕ ಷೇರ್ ಹೋಲ್ಡರ್ಸ್ ಗಳನ್ನ ಶ್ರೀಮಂತರಾಗಿಸಿದೆ. ಷೇರಿನ ಬೆಲೆಗಿಂತ ಹೆಚ್ಚಾದರೆ ಅವುಗಳನ್ನ ಮಲ್ಟಿ ಬ್ಯಾಗರ್ಸ್ ಎಂದು ಕರೆಯಲಾಗುತ್ತದೆ.ಕಳೆದ ನಾಲ್ಕು ವರ್ಷಗಳ ಹಿಂದೆ ಈ ಷೇರಿನ ಬೆಲೆಯು ಕೇವಲ 51.63 ರಷ್ಟು ಇತ್ತು ಆದರೆ ಇಂದು ಅದರ ಬೆಲೆಯು 6,246.25 ಅಷ್ಟಾಗಿದೆ. ಅಲ್ಪಾವಧಿಯಲ್ಲಿ ಲಾಭ ಮಾಡಿಕೊಡುವ ಸಾಮರ್ಥ್ಯವನ್ನು ಹೊಂದಿರುವಂತಹ (Shilchar Technologies ltd) ಇದೊಂದು ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಮತ್ತು ಪವರ್ & ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್‌ಗಳ ಭಾರತದ ಪ್ರಮುಖ ತಯಾರಕರಲ್ಲಿ ಒಂದಾಗಿದೆ. ಒಂದುವೇಳೆ ಹೂಡಿಕೆದಾರರು ನಾಲ್ಕು ವರ್ಷಗಳ ಹಿಂದೆ ಇದರ ಮೇಲೆ ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದ್ದಾರೆ ಇಂದು ಅವರ ಹತ್ತಿರ 1.12 ಕೋಟಿ ಏರುತ್ತಿತ್ತು.ಕಳೆದ 52 ವಾರದಲ್ಲಿ ಕನಿಷ್ಠ 895.00 ರಷ್ಟು ಇದ್ದರೆ, ಗರಿಷ್ಠ ಮಟ್ಟ 6,769.50 ರಷ್ಟು ಏರಿಕೆ ಕಂಡಿದೆ, ಈ ಕಂಪನಿಯ ಒಟ್ಟು ಮೌಲ್ಯವು 4,764 ಕೋಟಿ ರೂಪಾಯಿ ಹೊಂದಿದೆ.