ಮಹಾದೇವ, ಈಶ್ವರ, ಶಿವ, ಮಹೇಶ್ವರ, ಬೋಳೇಶಂಕರ, ರುದ್ರ ಎಂದೇ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಮಹಾದೇವನಿಗೆ ಭಕ್ತಾದಿಗಳೆಂದರೆ ಅಚ್ಚು ಮೆಚ್ಚು. ಭಕ್ತರ ಕಷ್ಟಕ್ಕೆ ಬೇಗನೆ ಒಲಿಯುವ ಏಕೈಕ ದೇವರೆಂದರೆ ಅದು ಶಿವ ಮಾತ್ರ ಎನ್ನಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಭಕ್ತರ ಪಾಲಿನ ಬೇಗನೆ ಒಲಿಯುವ ಆರಾಧ್ಯ ದೈವನಾಗಿದ್ದಾನೆ.

ಹಿಂದೂ ಧರ್ಮದ ಪ್ರಕಾರ ಮಹಾದೇವನು ನೀಲಿ ಕಂಠವನ್ನು ಹೊಂದಿದ್ದಾನೆ. ಏಕೆಂದರೆ ಬ್ರಹ್ಮಾಂಡವನ್ನು ಉಳಿಸಲು ಸಮುದ್ರದಲ್ಲಿ ಇರುವ ವಿಷಯವನ್ನ ಕುಡಿದು ಇಡೀ ಮನುಕುಲವನ್ನು ಉಳಿಸಿದನು ಎನ್ನುವ ಪ್ರತೀತಿಯಿದೆ. ಅಷ್ಟೇ ಅಲ್ಲದೆ ಶಿವನು ಮೂರು ಕಣ್ಣುಗಳನ್ನು ಹೊಂದಿರುವ ಮುಕ್ಕಣ್ಣನೆಂದು ಕರೆಯುತ್ತಾರೆ. ಮೂರನೆಯ ಕಣ್ಣು ಅವನ ಹಣೆಯ ಮೇಲಿದೆ. ಬ್ರಹ್ಮ ಮತ್ತು ವಿಷ್ಣು ಸೇರಿದಂತೆ ತ್ರಿಮೂರ್ತಿಗಳಲ್ಲಿ ಶಿವ ಮೂರನೇ ಒಂದು ಭಾಗ . ಭಗವಾನ್ ಶಿವನು ತನ್ನ ಮಡದಿ ಪಾರ್ವತಿಯ ಜೊತೆಗೆ  ಮಕ್ಕಳಾದ ಕಾರ್ತಿಕೇಯ ಮತ್ತು ಗಣೇಶನೊಂದಿಗೆ  ಕೈಲಾಸ ಪರ್ವತದಲ್ಲಿ ವಾಸಿಸುತ್ತಾನೆ.

ಮಹಾದೇವನ ನಾನಾ ಹೆಸರುಗಳು

ಶಿವನನ್ನು ವಿಶ್ವನಾಥ (ವಿಶ್ವದ ಅಧಿಪತಿ), ಮಹಾದೇವ, ಮಹೇಶ, ಮಹೇಶ್ವರ, ಶಂಕರ, ಶಂಭು, ರುದ್ರ, ಹರ, ತ್ರಿಲೋಚನ, ದೇವೇಂದ್ರ (ದೇವತೆಗಳ ಮುಖ್ಯಸ್ಥ), ನೀಲಕಂಠ, ಶುಭಂಕರ, ತ್ರಿಲೋಕನಾಥ ( ಮೂರು ಲೋಕಗಳ ಅಧಿಪತಿ) ಎನ್ನುತ್ತಾರೆ. 

ಹಬ್ಬಗಳು

ಮಹಾ ಶಿವರಾತ್ರಿಯು ಪ್ರಮುಖ ಹಿಂದೂ ಹಬ್ಬವಾಗಿದೆ, ಜೀವನ ಮತ್ತು ಪ್ರಪಂಚದಲ್ಲಿ “ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವುದು” ಮತ್ತು ಶಿವನ ಅಸ್ತಿತ್ವದ ಧ್ರುವೀಯತೆಗಳ ಬಗ್ಗೆ ಧ್ಯಾನ ಮತ್ತು ಮಾನವಕುಲದ ಭಕ್ತಿಯ ಬಗ್ಗೆ ಗಂಭೀರವಾದ ಮತ್ತು ದೇವತಾಶಾಸ್ತ್ರದ ಸ್ಮರಣಾರ್ಥವಾಗಿದೆ ಶಿವರಾತ್ರಿ. ಶಿವಸಂಬಂಧಿತ ಕವನಗಳನ್ನು ಪಠಿಸುವುದು, ಪ್ರಾರ್ಥನೆಗಳನ್ನು ಪಠಿಸುವುದು, ಶಿವನ ಸ್ಮರಣೆ, ಉಪವಾಸ, ಯೋಗ ಮತ್ತು ನೈತಿಕತೆ ಮತ್ತು ಸದ್ಗುಣಗಳಾದ ಆತ್ಮಸಂಯಮ, ಪ್ರಾಮಾಣಿಕತೆ, ಇತರರಿಗೆ ಹಾನಿಯಾಗದಿರುವುದು, ಕ್ಷಮೆ, ಆತ್ಮಾವಲೋಕನ, ಸ್ವಯಂ-ಪಶ್ಚಾತ್ತಾಪ ಮತ್ತು ಶಿವನ ಅನ್ವೇಷಣೆಯ ಮೂಲಕ ಇದನ್ನು ಆಚರಿಸಲಾಗುತ್ತದೆ. . ಕಟ್ಟಾ ಭಕ್ತರು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ಇತರರು ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಅಥವಾ ಜ್ಯೋತಿರ್ಲಿಂಗ ದೇವಾಲಯಗಳಿಗೆ ತೀರ್ಥಯಾತ್ರೆಗೆ ಹೋಗುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುವವರು ಲಿಂಗಕ್ಕೆ ಹಾಲು, ಹಣ್ಣುಗಳು, ಹೂವುಗಳು, ತಾಜಾ ಎಲೆಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ಕೆಲವು ಸಮುದಾಯಗಳು ಶಿವನನ್ನು ನೃತ್ಯದ ಅಧಿಪತಿ ಎಂದು ಗುರುತಿಸಲು ವೈಯಕ್ತಿಕ ಮತ್ತು ಗುಂಪು ಪ್ರದರ್ಶನಗಳೊಂದಿಗೆ ವಿಶೇಷ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. 

ಇಂತಹ ಅದ್ಭುತ ಶಕ್ತಿಗಳನ್ನ ಹೊಂದಿರುವ ಮಹಾದೇವನು ಭಕ್ತರ ಪಾಲಿನ ಆರಾಧ್ಯ ದೈವನಾಗಿದ್ದಾನೆ.ಭಕ್ತಿ ನಿಷ್ಠೆಗಳಿಂದ ಮಹಾಶಿವನನ್ನು ಶಿವ ಎಂದು ಪ್ರಾರ್ಥಿಸಿ ಕರೆದರೆ ಸಾಕು ಮೋಕ್ಷವನ್ನು ಪಡೆಯಲು ಅರ್ಹರಾಗುತ್ತಾರೆ. ಮಹೇಶ್ವರನು ಉದಾರನು. ಬೇಡಿದ ಕೂಡಲೇ ವರಗಳನ್ನು ನೀಡುವ ಪರಮಶಿವನನ್ನು ಪ್ರಾರ್ಥಿಸುವುದರಿಂದ ಮಹಾ ಸಮುದ್ರವೆನ್ನುವ ಸಾಗರವನ್ನು ಕೂಡ ಸುಲಭವಾಗಿ ದಾಟಬಹುದು.

ಓಂ ನಮಃ ಶಿವಾಯ

ಅತ್ಯಂತ ಪ್ರಸಿದ್ಧವಾದ ಮತ್ತು ಮೂಲಭೂತವಾದ ಶಿವ ಮಂತ್ರವನ್ನು ಸರಳವಾಗಿ ಹೇಳುವುದಾದರೆ ‘ನಾನು ಶಿವನಿಗೆ ನಮಸ್ಕರಿಸುತ್ತೇನೆ’. ಇದು ಶಿವನಿಗೆ ಸಮರ್ಪಿತವಾಗಿದೆ ಮತ್ತು ಪ್ರತಿದಿನ 108 ಬಾರಿ ಜಪಿಸಿದರೆ, ಈ ಮಂತ್ರವು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಶಿವನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ಸುರಿಸುತ್ತಾನೆ.

Follow Karunadu Today for more Spiritual Informations like this

Click here to Join Our Whatsapp Group