ನಮ್ಮ ಸುತ್ತ ಮುತ್ತಲು ಅನೇಕ ರೀತಿಯ ಮರಗಳನ್ನು ನಾವು ನೋಡಿದ್ದೇವೆ. ಮನುಷ್ಯ ಮತ್ತು ಮರಗಳಿಗೆ ಇರುವ ಸಂಬಂದ ತುಂಬಾ ಅಮೂಲ್ಯವಾದದ್ದು. ಮರಗಳು ಇರುವುದರಿಂದಲೇ ನಮಗೆ ಉಸಿರಾಡಲು ಬೇಕಾಗಿರುವ ಆಮ್ಲಜನಕ ಸಿಗುತ್ತಿರುವುದು. ಅಂದಹಾಗೆ ನಾನು ಮರಗಳ ಕುರಿತು ಏಕೆ ಮಾತನಾಡುತ್ತಿದ್ದೇನೆಂದರೆ ಇಂದು ನಮ್ಮ ಭೂಮಿಯ ಮೇಲೆ ಪತ್ತೆ ಮಾಡಲಾಗಿರುವ ಕೆಲ ಬೃಹತ್ ಗಾತ್ರದ ಮರಗಳ ಕುರಿತ ಮಾಹಿತಿ ನೀಡಲಿದ್ದೇನೆ. ಆ ಮರಗಳ ಗಾತ್ರವನ್ನು ನೋಡುತ್ತಿದ್ದರೆ ನಿಮಗೆ ಸಾಕಷ್ಟು ಆಶ್ಚರ್ಯವಾಗುತ್ತದೆ.

  1. ಜಗ್ಗರ್ನಾಟ್ ಮರ(Juggernaut tree)

ಅಮೇರಿಕದ ಕ್ಯಾಲಿಫೋರ್ನಿಯದಲ್ಲಿರುವ ಈ ದೈತ್ಯ ಮರದ ಎತ್ತರ ಬರೋಬ್ಬರಿ 140.2 ಮೀಟರ್ ಇದೆ. ಇದರೊಂದಿಗೆ ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಮರಗಳ ಪಟ್ಟಿಯಲ್ಲಿ ಇದು ಕೂಡ ಇದೆ. ಈ ಮರವನ್ನು ಪತ್ತೆ ಮಾಡಿದಾಗಿನಿಂದ ಇಲ್ಲಿಯವರೆಗೂ ಅಲ್ಲಿನ ಸರ್ಕಾರ ಇದನ್ನು ರಕ್ಷಿಸುತ್ತಿದೆ. 8.3 ಮೀಟರ್ ವೃತ್ತಾಕಾರದಲ್ಲಿ ವಿಸ್ತಾರವಾಗಿರುವ ಈ ಮರವು ಪ್ರಪಂಚದಲ್ಲಿರುವ ಎತ್ತರದ ಮರಗಳ ಪಟ್ಟಿಯಲ್ಲಿ 9ನೆಯ ಸ್ಥಾನದಲ್ಲಿದೆ.

2) ನೀಮಿನ ಲಾಗ್ಗೊರಲೆ ಮೀನ ಮರ (Neeminah loggorale meena tree)

ಈ ಮರದ ಹೆಸರು ಅದೆಷ್ಟು ಉದ್ದವಿದೆ ಅಷ್ಟೇ ಉದ್ದ ಇದರ ಎತ್ತರ ಕೂಡ ಇದೆ. ಬರೋಬ್ಬರಿ 90 ಮೀಟರ್ ಎತ್ತರವಿರುವ ಈ ಮರವು ಕೂಡ ಆಸ್ಟ್ರೇಲಿಯಾದ Tasmania ದಲ್ಲಿದೆ. ಈ ಮರದ ಹೆಸರಿನ ಅರ್ಥ “ತಾಯಿ ಮತ್ತು ಮಗಳು”. ಈ ಮರವನ್ನು TT 363 ಎಂದು ಕೂಡ ಕರೆಯುತ್ತಾರೆ. ಇದರ ವೃತ್ತಾಕಾರ 3.88 ಮೀಟರ್ ಇದ್ದು 233 cubic ಮೀಟರ್ volume ಹೊಂದಿದೆ.

3) ಡೋರ್ನರ್ ಫರ್(Doerner Fir)

500 ವರ್ಷಗಳಷ್ಟು ಹಳೆಯದಾದ ಈ ಮರವು 100 ಮೀಟರ್ ಎತ್ತರವಿದ್ದು 3.54 ಮೀಟರ್ ವೃತ್ತಾಕಾರ ಹೊಂದಿದೆ. ಅಂದರೆ ಕುತುಬ್ ಮಿನಾರ್ ಗಿಂತಲು 27 ಮೀಟರ್ ಎತ್ತರವಿದೆ ಈ ಮರ. 19ನೆಯ ಶತಮಾನದವರೆಗು ಈ ಮರವು ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಮರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರ ಅಮೇರಿಕದ oregon ನಲ್ಲಿರುವ ಈ ಮರದ ಮೇಲ್ಭಾಗದ 15 ಮೀಟರ್ ಸಂಪೂರ್ಣವಾಗಿ ಸತ್ತಿದೆ. ಆದ್ದರಿಂದ ಇದು ಹೆಚ್ಚು ಎತ್ತರಕ್ಕೆ ಬೆಳೆಯದೆ ವರ್ಷದಿಂದ ವರ್ಷಕ್ಕೆ ಇದರ ಎತ್ತರ ಕಡಿಮೆಯಾಗುತ್ತ ಹೋಗುತ್ತಿದೆ.

4) ಸೆಂಚುರಿಯನ್ (Centurion)

ಆಸ್ಟ್ರೇಲಿಯಾದ ದಕ್ಷಿಣ Tasmania ದ “Huon valley” ಯಲ್ಲಿರುವ ಈ ಮರದ ಎತ್ತರ 99.6 ಮೀಟರ್ ಇದ್ದು ವೃತ್ತಾಕಾರವು 4.05 ಮೀಟರ್ ಇದೆ. ಹೇಗೆ ಕೆನಡಾ ದೇಶದಲ್ಲಿ Cheewhat Giant ಅತ್ಯಂತ ಎತ್ತರದ ಮರವಾಗಿದೆ ಅದೇ ರೀತಿ ಈ ಮರವು ಆಸ್ಟ್ರೇಲಿಯಾದಲ್ಲಿ ಅತ್ಯಂತ ಎತ್ತರದ ಮರವಾಗಿದೆ. 2019ರ ಫೆಬ್ರವರಿಯಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ ಈ ಮರಕ್ಕೆ ಸ್ವಲ್ಪ damage ಕೂಡ ಆಗಿದೆ. ಆದರೆ ಅದೃಷ್ಟವಶಾತ್ ಈ ಮರಕ್ಕೆ ಹೆಚ್ಚು ಹಾನಿಯಾಗದೆ ಜಗತ್ತಿನಲ್ಲಿರುವ ಅತ್ಯಂತ ಎತ್ತರದ ಮರಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆದುಕೊಂಡಿದೆ.

5) ತನೆ ಮಹುತ (Tane Mahuta)

ನ್ಯೂಜಿಲ್ಯಾಂಡ್ ದೇಶದ waipoua ಕಾಡಿನಲ್ಲಿರುವ ಈ ಮರವು 2500 ವರ್ಷಗಳಷ್ಟು ಹಳೆಯದಾಗಿದೆ. ಇದರ ಎತ್ತರವು 45.2 ಮೀಟರ್ ಇದ್ದು volume 255.5 cubic ಮೀಟರ್ ಇದೆ. ಈ ಮರವನ್ನು ಆ ದೇಶದಲ್ಲಿ god of the forest ಎಂದು ಕರೆಯಲಾಗುತ್ತದೆ.

6) ಚೀವಾಟ್ ಜೈಂಟ್ (Cheewhat Giant)

ಇದು ಕೆನಡಾ ದೇಶದಲ್ಲಿರುವ ಅತ್ಯಂತ ದೊಡ್ಡ ಮರವಾಗಿದೆ. ಮೊಟ್ಟಮೊದಲ ಬಾರಿಗೆ ಇದನ್ನು 1988 ರಲ್ಲಿ ಪತ್ತೆ ಮಾಡಲಾಯಿತು. 2000 ವರ್ಷಗಳ ಆಯಸ್ಸಿನ ಈ ಮರವು 55 ಮೀಟರ್ ಎತ್ತರವಿದ್ದು 6 ಮೀಟರ್ ವೃತ್ತಾಕಾರದಲ್ಲಿ ವಿಸ್ತಾರವಾಗಿದೆ. ಈ ಮರವನ್ನು Pacific Rim National Park ನಲ್ಲಿ ಸುರಕ್ಷಿತವಾಗಿ ಕಾಪಾಡಲಾಗುತ್ತಿದೆ.

Follow Karunadu Today for more Interesting Facts & Stories. 

Click here to Join Our Whatsapp Group