ಈ ನಮ್ಮ ಭೂಮಿಯ ಮೇಲೆ ಇದುವರೆಗು ಕಂಡುಹಿಡಿಯಲಾಗದ ಅದೆಷ್ಟೋ ಅಚ್ಚರಿಗಳು ಇವೆ. ಅವುಗಳಲ್ಲಿ ಮಂಜುಗಡ್ಡೆಗಳಿಂದ ಕೂಡಿರುವ ಅಂಟಾರ್ಟಿಕ ಖಂಡದ ಕುರಿತಾದ ಸಂಗತಿಗಳು ಕೂಡ ಒಂದಾಗಿದೆ. ಬರೋಬ್ಬರಿ 14 ಮಿಲಿಯನ್ ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಸುಂದರವಾದ ಖಂಡದಲ್ಲಿ ಕಂಡುಹಿಡಿಯಲಾಗದ ಅದೆಷ್ಟೋ ರಹಸ್ಯಗಳು ಅಡಗಿವೆ. 1800 ರಿಂದ ಇಲ್ಲಿಯವರೆಗು ಈ ಸುಂದರವಾದ ಖಂಡದ ಬಗ್ಗೆ ಜಗತ್ತಿನ ಅನೇಕ ವಿಜ್ಞಾನಿಗಳು ಸಾಕಷ್ಟು ಆದ್ಯಯನ ಮಾಡುತ್ತಲೇ ಇರುವರು. ಬೃಹತ್ ಮಂಜುಗಡ್ಡೆಗಳ ಕೆಳಗೆ ದೊಡ್ಡ ಮಂಜಿನ ನಗರವೇ ಅಡಗಿದೆ ಎಂದು ಕೆಲವು ವಿಜ್ಞಾನಿಗಳು ಹೇಳಿದರೆ ಕೆಲವರು ಅಂಟಾರ್ಟಿಕವು ಏಲಿಯೆನ್ಸ್ ಗಳ ಅಡಗುತಾಣವಾಗಿದೆ ಎಂದು ನಂಬಿದ್ದಾರೆ. ಇಲ್ಲಿ ಸದಾ ಕಾಲ ತಾಪಮಾನವು ತುಂಬಾ ಕಡಿಮೆ ಇದ್ದು ಮನುಷ್ಯನು ಇಲ್ಲಿಯ ತಾಪಮಾನಕ್ಕೆ ತಡೆದುಕೊಳ್ಳಲಾಗದೆ ಸತ್ತೇ ಹೋಗುತ್ತಾನೆ. ಇಲ್ಲಿ ಇದುವರೆಗು ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶವೆಂದರೆ -89 ಡಿಗ್ರಿ ಸೆಲ್ಸಿಯಸ್. ಈ ಜಾಗದ ಬಗ್ಗೆ ವಿಜ್ಞಾನಿಗಳಿಗೆ ಸದಾ ಕಾಡುತ್ತಿರುವ ಒಂದು ಪ್ರಶ್ನೆ ಏನೆಂದರೆ ಇಂತಹ ಕಡಿಮೆ ತಾಪಮಾನದಲ್ಲೂ ಅನೇಕ ಜೀವಿಗಳು ಇಲ್ಲಿ ಹೇಗೆ ಬದುಕುತ್ತಿವೆ ಎನ್ನುವುದು. ಹೀಗೆ ಸಾವಿರಾರು ಪ್ರಶ್ನೆಗಳನ್ನು ತಲೆಯಲ್ಲಿ ತುಂಬಿಕೊಂಡು ಈ ಸುಂದರವಾದ ಖಂಡದ ಬಗ್ಗೆ ಆದ್ಯಯನ ಮಾಡುತ್ತ ಹೋದ ವಿಜ್ಞಾನಿಗಳಿಗೆ ಇದುವರೆಗು ಅನೇಕ ಅಚ್ಚರಿಯ ಸಂಗತಿಗಳು ಇಲ್ಲಿ ಸಿಕ್ಕಿವೆ. ಇಂದು ನಿಮಗೆ ವಿಜ್ಞಾನಿಗಳಿಗೆ ಸಿಕ್ಕ ಆ ಅಚ್ಚರಿಯ ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.

1) ಉದ್ದವಾದ ಬುರುಡೆಗಳು


1985 ರಲ್ಲಿ ಅಂಟಾರ್ಟಿಕಾದ “ಕೇಪ್ ಶಿರೆಫ್” ನಲ್ಲಿ 3 ಬೃಹತ್ ಗಾತ್ರದ ಮನುಷ್ಯನ ಬುರುಡೆಗಳು ವಿಜ್ಞಾನಿಗಳಿಗೆ ಸಿಕ್ಕಿವೆ. ಇವುಗಳು ಸಾಮಾನ್ಯ ಮನುಷ್ಯನ ಬುರುಡೆಗಳ ತರಹ ಇಲ್ಲ, ನೋಡಲು ತುಂಬಾ ಉದ್ದವಾಗಿವೆ. ಇದರ ಬಗ್ಗೆ ಆದ್ಯಯನ ಮಾಡಿದಾಗ ಈ ಬುರುಡೆಯು 20 ವರ್ಷದ ಬಾಲಕಿಯ ಬುರುಡೆ ಆಗಿದ್ದು 200 ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬುರುಡೆಯು ಅಲ್ಲಿ ಹೇಗೆ ಬಂದಿತು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಇದೇ ತರಹದ ಬುರುಡೆಯು ಈಜಿಪ್ಟ್ ನಲ್ಲಿ ವಿಜ್ಞಾನಿಗಳಿಗೆ ಇದಕ್ಕೂ ಮೊದಲು ಸಿಕ್ಕಿತ್ತು. ಇದರಿಂದ ವಿಜ್ಞಾನಿಗಳಿಗೆ ತಿಳಿದ ಸಂಗತಿ ಏನೆಂದರೆ ಆಫ್ರಿಕಾ ಖಂಡ, ದಕ್ಷಿಣ ಅಮೆರಿಕ ಖಂಡ ಮತ್ತು ಅಂಟಾರ್ಟಿಕ ಖಂಡಕ್ಕೆ ಯಾವುದೋ ಒಂದು ರೀತಿಯಾದ ಸಂಬಂದವಿದೆ ಎನ್ನುವುದು.

2) ಕ್ಷುದ್ರ ಗ್ರಹದ ತುಂಡು


ನಮಗೆಲ್ಲ ತಿಳಿದ ಹಾಗೆ ಪ್ರತಿ ದಿನ ಬಾಹ್ಯಾಕಾಶದಿಂದ ಭೂಮಿಗೆ ಸಾವಿರಾರು ಚಿಕ್ಕ ಪುಟ್ಟ ಕ್ಷುದ್ರ ಗ್ರಹದ ತುಂಡುಗಳು ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಕ್ಷುದ್ರ ಗ್ರಹಗಳ ತುಂಡುಗಳಲ್ಲಿ ಶೇಖಡ 90 ರಷ್ಟು ತುಂಡುಗಳು ಅಂಟಾರ್ಟಿಕಾಕ್ಕೆ ಅಪ್ಪಳಿಸುತ್ತವೆ. ಕಳೆದ 50 ವರ್ಷದಲ್ಲಿ ಬರೋಬ್ಬರಿ 10 ಸಾವಿರಕ್ಕಿಂತ ಹೆಚ್ಚು ಕ್ಷುದ್ರ ಗ್ರಹದ ತುಂಡುಗಳನ್ನು ವಿಜ್ಞಾನಿಗಳು ಅಂಟಾರ್ಟಿಕಾದಲ್ಲಿ ಪತ್ತೆ ಹಚ್ಚಿದ್ದಾರೆ. ವಿಜ್ಞಾನಿಗಳಿಗೆ ಸಿಕ್ಕ ಕ್ಷುದ್ರ ಗ್ರಹದ ತುಂಡುಗಳಲ್ಲಿ ಕೆಲ ತುಂಡುಗಳು 7 ಲಕ್ಷ ವರ್ಷಗಳಷ್ಟು ಹಳೆಯದ್ದಾಗಿವೆ. 2015 ರಲ್ಲಿ ಆಲೂಗಡ್ಡೆ ಗಾತ್ರದಷ್ಟು ಚಿಕ್ಕದಾದ ಒಂದು ಪುಟ್ಟ ಕ್ಷುದ್ರ ಗ್ರಹದ ತುಂಡು ವಿಜ್ಞಾನಿಗಳಿಗೆ ಅಂಟಾರ್ಟಿಕಾದ ಮಂಜುಗಡ್ಡೆಗಳಲ್ಲಿ ಸಿಕ್ಕಿದ್ದು ಅದು ಮಂಗಳ ಗ್ರಹದಿಂದ ನೇರವಾಗಿ ಭೂಮಿಗೆ ಅಪ್ಪಳಿಸಿದೆ ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

3) ಡೈನೋಸಾರ್ ಪಳೆಯುಳಿಕೆಗಳು


70 ರಿಂದ 200 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೋಸಾರ್ ಗಳು ಬದುಕಿದ್ದವು ಎನ್ನುವ ಸಂಗತಿ ನಮಗೆಲ್ಲ ತಿಳಿದ ವಿಚಾರವೆ. ಆದರೆ ಅಂಟಾರ್ಟಿಕಾದಂತಹ ಕಡಿಮೆ ಉಷ್ಣಾಂಶ ಹೊಂದಿರುವ ಪ್ರದೇಶದಲ್ಲೂ ಕೂಡ ಅವುಗಳು ಇದ್ದವು ಎನ್ನುವ ಸಂಗತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅಂಟಾರ್ಟಿಕಾದ ಮಂಜುಗಡ್ಡೆಗಳ ಒಳಗೆ ಸಿಕ್ಕ ಅನೇಕ ಪಳೆಯುಳಿಕೆಗಳಿಂದ ವಿಜ್ಞಾನಿಗಳಿಗೆ ತಿಳಿದ ಸಂಗತಿಯೇನೆಂದರೆ 75 ಮಿಲಿಯನ್ ವರ್ಷಗಳ ಹಿಂದೆ ಅಂಟಾರ್ಟಿಕಾದ ಮಂಜುಗಡ್ಡೆಗಳ ಕೆಳಗಿರುವ ನೀರಿನಲ್ಲಿ “ಪ್ಲೆಸಿಯೋಸಾರಸ್” ಮತ್ತು ಮೋಸಸಾರಸ್” ನಂತಹ ಜೀವಿಗಳು ವಾಸಿಸುತ್ತಿದ್ದವು ಎನ್ನುವುದು.

4) ಡ್ರೈ ವ್ಯಾಲಿ


ಅಂಟಾರ್ಟಿಕಾವೆಂದರೆ ಸಾಕು ನಮ್ಮ ತಲೆಯಲ್ಲಿ ಮೊದಲು ಮೂಡಿ ಬರುವ ದೃಶ್ಯವೆ ಮಂಜುಗಡ್ಡೆಗಳು, ಆದರೆ ಬೃಹತ್ ಮಂಜುಗಡ್ಡೆಗಳ ಮಧ್ಯೆ ಒಂದು ಬರುಡು ಪ್ರದೇಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಆ ಸ್ಥಳದಲ್ಲಿ ಕಳೆದ 2 ಮಿಲಿಯನ್ ವರ್ಷಗಳಿಂದ ಮಳೆಯೇ ಆಗಿಲ್ಲ, ಆ ಸ್ಥಳದ ಹೆಸರೇ “ಡ್ರೈ ವ್ಯಾಲಿ”. ಅಂಟಾರ್ಟಿಕಾದ ಶೇಖಡ 0.03 ರಷ್ಟು ಜಾಗವನ್ನು ಆವರಿಸಿರುವ ಈ ಸ್ಥಳವನ್ನು 1903 ರಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದೇ ತರಹದ ಪ್ರದೇಶವು ಮಂಗಳ ಗ್ರಹದಲ್ಲಿ ಇರುವುದನ್ನು ನಾಸಾದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

5) ರಕ್ತದ ಜಲಪಾತ


1911 ರಲ್ಲಿ ಆಸ್ಟ್ರೇಲಿಯದ ಭೂಗೋಳಶಾಸ್ತ್ರಜ್ಞ “ಗ್ರಿಫಿತ್ ಟೇಲರ್” ಅವರು ಮಂಜುಗಡ್ಡೆಯ ನಡುವೆ ಕೆಂಪು ನೀರು ಹೊರಬರುತ್ತಿರುವುದನ್ನು ಪತ್ತೆ ಮಾಡಿದರು. ಇದನ್ನು ಗಮನಿಸಿದ ಟೇಲರ್ ಅವರು ಅಲ್ಲಿ ಏನೋ ವಿಚಿತ್ರವಾದದ್ದು ಇದೆ ಎಂದು ಭಾವಿಸಿದ್ದರು. ಆದರೆ ವರ್ಷಗಳು ಕಳೆದಂತೆ ತಂತ್ರಜ್ಞಾನ ಬಳಸಿಕೊಂಡು ಪತ್ತೆ ಮಾಡಿದಾಗ ಸ್ವಲ್ಪ ದೂರದಲ್ಲಿ ಮಂಜು ಗಡ್ಡೆಗಳ ಕೆಳಗೆ ಒಂದು ಸರೋವರವಿದ್ದು ಅದರಲ್ಲಿರುವ ನೀರಿನ ಲವಣಾಂಶವು ಸಮುದ್ರದ ನೀರಿನಲ್ಲಿರುವ ಲವಣಾಂಶಕ್ಕಿಂತ 4 ಪಟ್ಟು ಹೆಚ್ಚಿರುವುದರಿಂದ ಈ ರೀತಿಯಾಗಿ ಕೆಂಪು ಬಣ್ಣದ ನೀರು ಹರಿದುಬರುತ್ತಿದೆ ಎಂದು ತಿಳಿಯಿತು.
ವರ್ಷಗಳು ಕಳೆದಂತೆ ಇದೇ ತರಹದ ಅನೇಕ ಕುತೂಹಲಕಾರಿ ಸಂಗತಿಗಳು ವಿಜ್ಞಾನಿಗಳಿಗೆ ಅಂಟಾರ್ಟಿಕಾದ ಮಂಜುಗಡ್ಡೆಗಳಲ್ಲಿ ಸಿಗುತ್ತಿವೆ. ಅದೇನೇ ಹೇಳಿ ಮನುಷ್ಯರಿಗೆ ವಾಸಿಸಲು ಯೋಗ್ಯವಾಗಿರದ ಈ ಸ್ಥಳದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಂಶೋದನೆಗಳನ್ನು ಮಾಡುತ್ತಿರುವ ವಿಜ್ಞಾನಿಗಳಿಗೆ ಒಂದು ದೊಡ್ಡ ಸಲಾಂ.

Follow Karunadu Today for more Interesting Facts & Stories. 

Click here to Join Our Whatsapp Group