
ವಿಜ್ಞಾನ ಎನ್ನುವುದು ಎಷ್ಟೇ ಮುಂದುವರೆದರು ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟ ಪಡಬೇಕಿದೆ.ಭೂಮಿಯ ಮೇಲೆ ಕೆಲವು ಪುರಾತನ ರಹಸ್ಯಗಳಿದ್ದು ಅವುಗಳಿಗೆ ಉತ್ತರವನ್ನು ಕಂಡು ಹಿಡಿಯಲು ಇದುವರೆಗು ಸಾಧ್ಯವಾಗುತ್ತಿಲ್ಲ. ಆ ರಹಸ್ಯಮಯ ಪ್ರಶ್ನೆಗಳು ವಿಜ್ಞಾನದ ದೃಷ್ಟಿಯಿಂದ ದೂರವಿದ್ದು ಅನೇಕ ವರ್ಷಗಳಿಂದ ಅವುಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ. ಇಂದು ನಿಮಗೆ ವಿಜ್ಞಾನಕ್ಕೆ ಸವಾಲಾಗಿ ಕಾಡುತ್ತಿರುವ ಅಂತಹ 5 ರಹಸ್ಯಮ ಪುರಾತನ ಉತ್ಖನನಗಳ ಕುರಿತು ತಿಳಿಸಿಕೊಡುತ್ತೇವೆ.
1) ಕೋಸ್ಟಾರಿಕಾದ ಕಲ್ಲುಗಳು – Stone spheres of costa Rica
ಕೋಸ್ಟಾ ರಿಕಾ ದೇಶದ “ದಿಕ್ವಿಸ್ ಡೆಲ್ಟಾ ಮತ್ತು ಇಸ್ಲಾ ಡೆಲ್ ಕಾನೋ” ಎನ್ನುವ ದ್ವೀಪಗಳ ಮೇಲೆ ಬರೋಬ್ಬರಿ 600 ಕ್ಕಿಂತ ಹೆಚ್ಚು ಗೋಳಾಕಾರದ ಕಲ್ಲುಗಳು ಇದ್ದು ಅವುಗಳನ್ನು ಯಾರು ನಿರ್ಮಿಸಿದ್ದಾರೆ ಮತ್ತು ಅಲ್ಲಿ ಹೇಗೆ ಬಂದಿವೆ ಎನ್ನುವುದನ್ನು ಇದುವರೆಗು ಪತ್ತೆ ಮಾಡಲಾಗಿಲ್ಲ. ಪುರಾತತ್ವ ಇಲಾಖೆಯ ಪ್ರಕಾರ ಈ ಕಲ್ಲುಗಳನ್ನು ಕರಗಿದ ಮೆಗ್ಮಾದಿಂದ(MoltenMegma) ಮಾಡಲಾಗಿದೆ. ಆದರೆ ಇದನ್ನು ರಚಿಸಿರುವ ಹಿಂದಿನ ಉದ್ದೇಶವೇನು ಎನ್ನುವುದು ಮಾತ್ರ ತಿಳಿದಿಲ್ಲ. 2 ಮೀಟರ್ ವೃತ್ತಾಕಾರದಲ್ಲಿ ಇರುವ ಈ ಕಲ್ಲುಗಳು 15 ಟನ್ ಗಿಂತಲೂ ಹೆಚ್ಚು ತೂಕವಿದೆ. ಈ ಕಲ್ಲುಗಳ ನಿರ್ಮಾಣದ ನಂತರ ಇವುಗಳನ್ನು ಹೇಗೆ ಕಾಡುಗಳ ಮಧ್ಯಭಾಗದಲ್ಲಿ ಸಾಗಿಸಲಾಗಿದೆ ಎನ್ನುವುದೇ ಪುರಾತತ್ವ ಇಲಾಖೆಗೆ ಪ್ರಶ್ನೆಯಾಗಿಯೇ ಉಳಿದಿದೆ. ಕೋಸ್ಟಾರಿಕಾದ ಜನರು ಈ ಕಲ್ಲುಗಳ ಬಗ್ಗೆ ಅನೇಕ ಕತೆಗಳನ್ನು ಹೇಳುತ್ತಾರೆ. ಕೆಲವರು ಈ ಕಲ್ಲುಗಳು “ಅಟ್ಲಾಂಟಿಸ್” ಎನ್ನುವ ಕಾಲ್ಪನಿಕ ದ್ವೀಪದಿಂದ ಬಂದಿದೆ ಎಂದು ಹೇಳಿದರೆ ಮತ್ತೆ ಕೆಲವರು ಇದು ಪ್ರಕೃತಿಯೇ ಸೃಷ್ಟಿಸಿದೆ ಎಂದು ಹೇಳುತ್ತಾರೆ. ಆದರೆ ಇದುವರೆಗೂ ಇದರ ಕುರಿತ ಸರಿಯಾದ ಸಬೂತು ಇನ್ನೂ ಸಿಕ್ಕಿಲ್ಲ.
2) ಕ್ಲಿಯೋಪತ್ರಾ ಸಮಾಧಿ – Cleopatra Tomb
ಕ್ಲಿಯೋಪತ್ರ ಮತ್ತು ಆಂಟೋನಿ, ಈ ಹೆಸರನ್ನು ಕೇಳಿದರೆ ಸಾಕು ಈಜಿಪ್ಟ್ ದೇಶದ ಹಳೆಯ ದಿನಗಳು ನೆನಪಿಗೆ ಬರುತ್ತವೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್ ಅನ್ನು ಆಳುತ್ತಿದ್ದ ಅತ್ಯಂತ ಸುಂದರವಾದ ರಾಣಿ “ಕ್ಲಿಯೋಪತ್ರ”. ಈಕೆಯು ಅದೆಷ್ಟು ಸುಂದರವಾಗಿದ್ದಾಳೆಂದರೆ ಈಕೆಯ ಹಾಗೆ ಸುಂದರವಾಗಿರುವ ಮತ್ತೊಬ್ಬ ರಾಣಿಯು ಸಂಪೂರ್ಣ ಭೂಮಿಯ ಮೇಲೆ ಇರಲಿಲ್ಲವೆಂದು ಅನೇಕ ಪುರಾತನ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈಕೆಯು ಎಷ್ಟು ಸುಂದರವಾಗಿದ್ದಾಳೋ ಅದಕ್ಕಿಂತ ಹೆಚ್ಚು ಕ್ರೂರಿ ಮತ್ತು ಬುದ್ದಿವಂತ ರಾಣಿಯಾಗಿದ್ದಳು ಎಂದು ಕೂಡ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಈಕೆಯ ಸೌಂದರ್ಯಕ್ಕೆ ಮಾರು ಹೋಗಿ ಅದೆಷ್ಟೋ ರಾಜರುಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರಂತೆ. ಈಕೆಯು ತನ್ನ ಸೌಂದರ್ಯವನ್ನೇ ಆಯುಧವನ್ನಾಗಿ ಬಳಸಿಕೊಂಡು ಅನೇಕ ಸಾಮ್ರಾಜ್ಯಗಳನ್ನು ಸರ್ವನಾಶ ಮಾಡಿದ್ದಳಂತೆ. ಆದರೆ “ಒಕ್ಟಾವಿಯನ್” ಎನ್ನುವ ರೋಮನ್ ಸಾಮ್ರಾಜ್ಯದ ಅಧಿಪತಿ ಈಕೆಯ ಸೌಂದರ್ಯಕ್ಕೆ ಮಾರು ಹೋಗದೆ ಈಕೆ ಮತ್ತು ಅವಳ ಪ್ರಿಯತಮನಾಗಿದ್ದ ಆಂಟೋನಿಯನ್ನು ಯುದ್ದದಲ್ಲಿ ಸೋಲಿಸಿದ ನಂತರ ಜೊತೆಯಾಗಿಯೇ ಮಣ್ಣು ಮಾಡಲಾಯಿತು ಎಂದು ಇತಿಹಾಸ ಹೇಳುತ್ತದೆ. ಇವರಿಬ್ಬರ ಸಮಾಧಿ ಎಲ್ಲಿದೆ ಎಂದು ಪುರಾತತ್ವ ಇಲಾಖೆಯು ಅನೇಕ ವರ್ಷಗಳಿಂದ ಈಜಿಪ್ಟ್ ದೇಶದ “ಅಲೆಕ್ಸಾಂಡ್ರಿಯ” ನಗರದ ಸುತ್ತಲೂ ಹುಡುಕುತ್ತಲೇ ಇದೆ. ಆದರೆ 2009 ರಲ್ಲಿ “ಜಾಹಿ ಹವಾಸ್” ಎನ್ನುವ ಪುರಾತತ್ವ ಇಲಾಖೆಯ ಅಧಿಕಾರಿಯು “ಅಲೆಕ್ಸಾಂಡ್ರಿಯ” ನಗರದ ಪಶ್ಚಿಮ ಭಾಗದಲ್ಲಿ ಇರುವ “ಒಸಿರಿಸ್ ದೇವಸ್ಥಾನದ” ಬಳಿ ಈಕೆಯ ಸಮಾಧಿ ಇರುವುದನ್ನು ಪತ್ತೆ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗು ಆ ಸಮಾಧಿಯನ್ನು ಹೊರ ತೆಗೆಯಲು ಸಾಕಷ್ಟು ಪ್ರಯತ್ನ ನಡೆಯುತ್ತಿದ್ದು ಹುಡುಕುತ್ತಾ ಹೋದಂತೆಲ್ಲಾ ಅನೇಕ ಸಮಾಧಿಗಳು ಸಿಗುತ್ತಲೇ ಇವೆ ಹೊರತು ಈ ರಾಣಿಯ ಸಮಾಧಿ ಮಾತ್ರ ಸಿಗುತ್ತಿಲ್ಲ. ಕೆಲವರಿಗೆ ನಿಜವಾಗಿಯೂ ಅಲ್ಲಿ ಸಮಾಧಿ ಇದೆಯೆ ಎಂದು ಅನುಮಾನ ಕೂಡ ಇದೆ.
3) ಈಜಿಪ್ಟ್ ದೇಶದ ಪಿರಾಮಿಡ್ ಗಳು –Pyramids of Egypt
ರಹಸ್ಯ ಎನ್ನುವ ಪದವನ್ನು ಕೇಳಿದರೆ ನೆನಪಿಗೆ ಬರುವ ಪ್ರಪಂಚದ ಅನೇಕ ಪುರಾತನ ಸ್ಥಳಗಳ ಪೈಕೆ ಈಜಿಪ್ಟ್ ದೇಶದಲ್ಲಿರುವ “ಪಿರಾಮಿಡ್” ಗಳು ಕೂಡ ಒಂದು. ತ್ರಿಕೋನ ಆಕಾರದಲ್ಲಿ ಇರುವ ಈ ಪಿರಾಮಿಡ್ ಗಳು 5000 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಪಿರಾಮಿಡ್ ಗಳ ಒಳಗೆ ಅನೇಕ ರಹಸ್ಯಮಯ ಸ್ಥಳಗಳನ್ನು ಪುರಾತತ್ವ ಇಲಾಖೆಗಳು ಪತ್ತೆ ಹಚ್ಚಿದ್ದು ಹುಡುಕುತ್ತಾ ಹೋದಂತೆ ಹೊಸ ಹೊಸ ವಿಚಾರಗಳು ಸಿಗುತ್ತಲೇ ಇವೆ. ಈ ಪಿರಾಮಿಡ್ ಗಳನ್ನು ಏಕೆ ಮತ್ತು ಹೇಗೆ ನಿರ್ಮಾಣ ಮಾಡಲಾಯಿತು ಎನ್ನುವ ಪ್ರಶ್ನೆಗೆ ಬೇಕಾಗಿರುವ ಸಂಪೂರ್ಣ ಉತ್ತರವನ್ನು ಮಾತ್ರ ಇದುವರೆಗು ಪತ್ತೆ ಮಾಡಲಾಗಿಲ್ಲ. ಅದೆಷ್ಟೇ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಇದರ ಒಳಗೆ ಪತ್ತೆ ಮಾಡುತ್ತಾ ಹೋದರೂ ಕೂಡ ಕೊನೆಯೇ ಇಲ್ಲದ ರಹಸ್ಯಗಳು ಸಿಗುತ್ತಲೇ ಇವೆ.
4) ಆಂಟಿಕೈಥೆರಾ ಕಾರ್ಯವಿಧಾನ– Anti kythera Mechanism
ಇಂದು ನಾವುಗಳು ಅನೇಕ ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಬಾಹ್ಯಾಕಾಶದಲ್ಲಿ ಆಗುವ ಗ್ರಹಣಗಳಿಂದ ಹಿಡಿದು ಅನೇಕ ಬದಲಾವಣೆಗಳನ್ನು ಟೆಲಿಸ್ಕೋಪ್ ಮತ್ತು ಮುಂದುವರೆದಿರುವ ಅನೇಕ ತಂತ್ರಜ್ಞಾನದಿಂದ ಪತ್ತೆ ಹಚ್ಚುತ್ತಿದ್ದೇವೆ. ಆದರೆ ಈ ರೀತಿಯ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು ವಿಜ್ಞಾನಿಗಳಿಗೆ ಅನೇಕ ಪುರಾತನ ತಂತ್ರಜ್ಞಾನಗಳು ಸ್ಪೂರ್ತಿಯಾಗಿವೆ. ಅಂತಹ ಪುರಾತನ ತಂತ್ರಜ್ಞಾನಗಳ ಪೈಕಿ ಸಮುದ್ರದ ಆಳದಲ್ಲಿ ಸಿಕ್ಕ ಗ್ರೀಕಿನ “ಆಂಟಿಕೈಥೆರಾಕಾರ್ಯವಿಧಾನ” ಕೂಡ ಒಂದು. ಇದು 2000 ವರ್ಷಗಳಷ್ಟು ಹಳೆಯದ್ದಾಗಿದ್ದು ಇದರ ಮೂಲಕ ಗ್ರಹ ನಕ್ಷತ್ರಗಳ ಚಲನವಲನ ಮತ್ತು ಗ್ರಹಣದ ಕುರಿತು ಪತ್ತೆ ಮಾಡಲಾಗುತ್ತಿತ್ತು. ಆದರೆ ಇದು ಯಾವ ಮೆಕ್ಯಾನಿಸಮ್ ಆದಾರದ ಮೇಲೆ ಕಾರ್ಯ ನಿರ್ವಹಿಸುತ್ತಿತ್ತು ಎನ್ನುವುದನ್ನು ಪತ್ತೆ ಮಾಡಲು ಇದುವರೆಗು ಸಾಧ್ಯವಾಗಿಲ್ಲ. ಬರೋಬ್ಬರಿ 30 ತಾಮ್ರದ ಗೇರುಗಳಿಂದ ಮಾಡಲಾಗಿರುವ ಇದನ್ನು “antikythera” ಎನ್ನುವ ದ್ವೀಪದ ಸುತ್ತಲಿರುವ ಸಮುದ್ರದಾಳದಲ್ಲಿ ಮುಳುಗಿದ್ದ ಹಡಗಿನಲ್ಲಿ 1901 ರಲ್ಲಿ ಪತ್ತೆ ಮಾಡಲಾಗಿತ್ತು. ಅಂದಿನಿಂದ ಇದು ಹೇಗೆ ಕಾರ್ಯ ನಿರ್ವಹಿಸುತ್ತಿದ್ದೆ ಎನ್ನುವುದನ್ನು ಪತ್ತೆ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.
5) ಅಟ್ಲಾಂಟಿಸ್ ನಗರ
ಈ ನಗರದ ಕುರಿತು ಪ್ರಸಿದ್ದ ಗ್ರೀಸ್ ಸಾಮ್ರಾಜ್ಯದಲ್ಲಿದ್ದ “ಪ್ಲಾಟೋ” ಎನ್ನುವ ತತ್ವಜ್ಞಾನಿ ತನ್ನ ಕವಿತೆಗಳಲ್ಲಿ ಉಲ್ಲೇಖಿಸಿದ್ದಾನೆ. ಈತನು ಹೇಳಿರುವ ಪ್ರಕಾರ ಈ ನಗರವು ಆಗಿನ ಕಾಲದಲ್ಲಿ ಅತ್ಯಂತ ಆಧುನಿಕತೆ ಹೊಂದಿದಂತಹ ನಗರವಾಗಿತ್ತಂತೆ. ಆದರೆ ಸುನಾಮಿಗೆ ಸಿಕ್ಕು ಈ ನಗರವು ಸಮುದ್ರದ ಆಳದಲ್ಲಿ ಮುಳುಗಿ ಹೋಗಿದೆಯಂತೆ. ಈ ನಗರ ಈಗ ಎಲ್ಲಿದೆ ಎಂದು ಅನೇಕ ವರ್ಷಗಳಿಂದ ಪತ್ತೆ ಮಾಡಲಾಗುತ್ತಿದೆ. ಜಪಾನ್ ಮತ್ತು ಕ್ಯೂಬಾ ದೇಶಗಳು ಈ ನಗರವನ್ನು ತಾವು ಪತ್ತೆ ಮಾಡಿರುವುದಾಗಿ ಹೇಳಿಕೊಂಡರು ಕೂಡ ಕವಿತೆಯಲ್ಲಿ ಉಲ್ಲೇಖಿಸಿರುವ ಹಾಗೆ ಅವುಗಳಿಲ್ಲ. ಕೆಲವರು ಇದು ಕೇವಲ ಕಾಲ್ಪನಿಕ ನಗರ ಎಂದು ಹೇಳಿದರೆ ಇನ್ನು ಕೆಲವರು ಇದು ಸಮುದ್ರದ ಆಳದಲ್ಲಿ ಈಗಲೂ ಇದೆ ಎಂದು ಹೇಳುತ್ತಾರೆ. ಇದರ ಸತ್ಯಾಸತ್ಯತೆಯನ್ನು ಪುರಾತತ್ವ ಇಲಾಖೆಯು ಅನೇಕ ವರ್ಷಗಳಿಂದ ಪತ್ತೆ ಮಾಡುತ್ತಲೆ ಇದೆ.
ನೋಡಿದಿರಲ್ಲ, ಇದೇ ರೀತಿ ಅನೇಕ ರಹಸ್ಯಮಯ ಸ್ಥಳಗಳು ನಮ್ಮ ದೇಶದಲ್ಲೂ ಇದ್ದು ಅವುಗಳನ್ನು ಹುಡುಕಲು ಅನೇಕ ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡುತ್ತಲೆ ಇರುವರು. ಪ್ರಪಂಚದಲ್ಲಿರುವ ಇಂತಹ ನೂರಾರು ರಹಸ್ಯಗಳಿಗೆ ಇಂದಿಗೂ ಕೂಡ ಉತ್ತರ ಸಿಗುತ್ತಿಲ್ಲ. ನನ್ನ ಪ್ರಕಾರ ಕೆಲವು ರಹಸ್ಯಗಳು ರಹಸ್ಯಗಳಾಗಿಯೇ ಉಳಿದರೆ ಚೆನ್ನ, ಎಲ್ಲದಕ್ಕೂ ಉತ್ತರ ತಿಳಿದುಕೊಂಡರೆ ಮನುಷ್ಯನನ್ನು ಹಿಡಿಯುವವರು ಸಂಪೂರ್ಣ ಬ್ರಹ್ಮಾಂಡದಲ್ಲಿ ಮತ್ತೊಬ್ಬರು ಇಲ್ಲದಂತಾಗುತ್ತದೆ.
Follow Karunadu Today for more Interesting Facts & Stories.
Click here to Join Our Whatsapp Group