
1) “798 ವರ್ಷ ಕಾಲ ಸೂರ್ಯನನ್ನು ಸುತ್ತುವ ವಿಚಿತ್ರ ಗ್ರಹ!” ಎಂಬುದು ವಿಜ್ಞಾನಿಗಳ ಗಮನ ಸೆಳೆದ ಮಹತ್ವದ ಆಕರ್ಷಣೆಯಾಗಿದೆ.ನಮ್ಮ ಸೌರ ಮಂಡಲದಲ್ಲಿ ಅದೆಷ್ಟೋ ಕಂಡುಹಿಡಿಯಲಾಗದ ರಹಸ್ಯಗಳಿವೆ ಎನ್ನುವ ವಿಷಯ ನಮಗೆಲ್ಲ ತಿಳಿದೇ ಇದೆ. ಈ ಸೌರ ಮಂಡಲವು ಅದೆಷ್ಟು ದೊಡ್ಡದಿದೆ ಎಂದು ಇದುವರೆಗು ನಿಖರವಾಗಿ ಪತ್ತೆ ಮಾಡಲಾಗಿಲ್ಲ. ಇನ್ನು ನಮ್ಮ ಸೌರ ಮಂಡಲದಲ್ಲಿ 8 ಗ್ರಹಗಳಿದ್ದು 9ನೆಯ ಗ್ರಹವು ಇದರಲ್ಲಿ ಇದೆಯೇ ಎಂದು ಅನೇಕ ವರ್ಷಗಳಿಂದ ವಿಜ್ಞಾನಿಗಳು ಹುಡುಕುತ್ತಲೆ ಇರುವರು. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ. ಹೀಗೆ ಹುಡುಕುತ್ತ ಹೋದಂತೆಲ್ಲ ಸೌರ ಮಂಡಲದ ತುತ್ತತುದಿ ಎಂದು ಭಾವಿಸಲಾದ ನೆಪ್ತ್ಚೂನ್ ಗ್ರಹದ ಬಳಿ ಒಂದು ಕುಬ್ಜ ಗ್ರಹವನ್ನು ಪತ್ತೆ ಮಾಡಲಾಯಿತು. ಜನವರಿ 2018 ರಲ್ಲಿ ಪತ್ತೆ ಮಾಡಲಾದ ಈ ಕುಬ್ಜ ಗ್ರಹಕ್ಕೆ ವಿಜ್ಞಾನಿಗಳು “2018 AG37” ಎಂದು ಹೆಸರಿಟ್ಟರು. ಇದು ಭೂಮಿಯಿಂದ 132 ರಿಂದ 140 astronomical units ಗಳಷ್ಟು ದೂರದಲ್ಲಿದೆ. ಅಂದಹಾಗೆ 1 astronomical unit ಎಂದರೆ ಭೂಮಿ ಮತ್ತು ಸೂರ್ಯನ ಮಧ್ಯೆ ಇರುವ ಅಂತರ. ಅದುವೇ 15 ಕೋಟಿ ಕಿಲೋಮೀಟರ್. ಇನ್ನು 132 astronomical units ಗಳೆಂದರೆ ಅದೆಷ್ಟರ ಮಟ್ಟಿಗೆ ದೂರದಲ್ಲಿ ಈ ಕುಬ್ಜ ಗ್ರಹವಿದೆ ಎಂದು ನೀವೇ ತಿಳಿದುಕೊಳ್ಳಿ. ಇಷ್ಟೊಂದು ದೂರದಲ್ಲಿ ಇರುವುದರಿಂದಲೇ ಈ ಗ್ರಹಕ್ಕೆ farfarout ಎನ್ನುವ ಹೆಸರಿನಿಂದ ಕೂಡ ಕರೆಯುತ್ತಾರೆ. ಇನ್ನು ಈ ಗ್ರಹದ ಕುರಿತ ಮತ್ತೊಂದು ವಿಸ್ಮಯಕಾರಿ ಸಂಗತಿ ಏನೆಂದರೆ 798 ವರ್ಷ ಕಾಲ ಸೂರ್ಯನನ್ನು ಸುತ್ತುವ ವಿಚಿತ್ರ ಗ್ರಹ! ಸೂರ್ಯನ ಸುತ್ತ ಒಂದು ಸುತ್ತು ಪೂರ್ಣಗೊಳಿಸಲು ಇದು ಬರೋಬ್ಬರಿ 798 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದುವರೆಗು ಸೌರ ಮಂಡಲದಲ್ಲಿ ಪತ್ತೆ ಮಾಡಲಾದ ಅತ್ಯಂತ ದೂರದ ಕುಬ್ಜ ಗ್ರಹ ಇದಾಗಿದ್ದು ಇದಕ್ಕಿಂತ ಮೊದಲು 2018 VG18 ಎನ್ನುವ ಕುಬ್ಜ ಗ್ರಹವನ್ನು ಸೌರಮಂಡಲದಲ್ಲಿರುವ ಅತ್ಯಂತ ದೂರದ ವಸ್ತು ಎಂದು ಪರಿಗಣಿಸಲಾಗಿತ್ತು. ಇದರ ದೂರವು ಸೂರ್ಯನಿಂದ 128 astronomical units ಗಳಷ್ಟಿದೆ.
2) ನಮಗೆಲ್ಲ ತಿಳಿದ ಹಾಗೆ ಕಳೆದ 22 ವರ್ಷಗಳಿಂದ ಜಗತ್ತಿನ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಮಂಗಳ ಗ್ರಹದ ಅಧ್ಯಯನ ಮಾಡುತ್ತಿವೆ. ಅದರಲ್ಲೂ ಅಮೇರಿಕದ ನಾಸಾ ಹಾಗು ಎಲನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯು ಒಂದು ಹೆಜ್ಜೆ ಮುಂದೆ ಹೋಗಿ ಬರುವ 2030ರ ಒಳಗೆ ಮಂಗಳ ಗ್ರಹದ ಮೇಲೆ ಮನುಷ್ಯರನ್ನು ಕಳುಹಿಸಲು ನಿರ್ಧರಿಸಿವೆ. ಹೇಗಾದರು ಮಾಡಿ ಮಂಗಳ ಗ್ರಹದ ಮೇಲೆ ನಗರಗಳನ್ನು ನಿರ್ಮಾಣ ಮಾಡಿ ಮನುಷ್ಯರನ್ನು ಅಲ್ಲಿ ವಾಸಿಸುವ ಹಾಗೆ ಮಾಡಬೇಕು ಎನ್ನುವುದೇ ನಾಸಾ ಹಾಗು ಸ್ಪೇಸ್ ಎಕ್ಸ್ ಕಂಪನಿಯ ಉದ್ದೇಶ. ಆದರೆ ಇದು ಅಷ್ಟು ಸುಲಭವಾಗಿ ಈಡೇರುವಂತಹ ಕನಸೆ? ಮಂಗಳ ಗ್ರಹದ ಮೇಲೆ ಭೂಮಿಯ ರೀತಿಯ ವಾತಾವರಣವಿದೆಯೇ? ಮನುಷ್ಯರು ಅಲ್ಲಿ ಜೀವಿಸಬೇಕೆಂದರೆ ಅಲ್ಲಿನ ವಾತಾವರಣವನ್ನು ಹಾಗು ಆ ಗ್ರಹದ ಮೇಲೆ ಇರುವ ತೊಂದರೆಗಳನ್ನು ಸರಿಪಡಿಸಬೇಕಿದೆ. ಈ ಸಂಗತಿಯಲ್ಲಿ ನಿಮಗೆ ಮಂಗಳ ಗ್ರಹದ ಮೇಲೆ ಅದೇನು ತೊಂದರೆಗಳಿವೆ ಎನ್ನುವುದನ್ನು ವಿವರಿಸುತ್ತೇನೆ ಕೇಳಿ. ಮಂಗಳ ಗ್ರಹದ ಮೇಲಿರುವ ಮೊದಲನೆಯ ತೊಂದರೆಯೆ “ಕಾಂತೀಯ ಕ್ಷೇತ್ರ”. ಭೂಮಿಯ ಮೇಲಿರುವ ಹಾಗೆ ಆ ಗ್ರಹದ ಮೇಲೆ ಕಾಂತೀಯ ಕ್ಷೇತ್ರವಿಲ್ಲ, ಇದರ ಜೊತೆಗೆ ಆ ಗ್ರಹದ ಸುತ್ತಲು ಓಜೋನ್ ಪದರವಿಲ್ಲ. ಇದರಿಂದಾಗಿ ಸೂರ್ಯನ ವಿಷಪೂರಿತ UV ಕಿರಣಗಳು ಆ ಗ್ರಹದ ಒಳಗೆ ಸುಲಭವಾಗಿ ಪ್ರವೇಶಿಸುತ್ತಿವೆ. ಇನ್ನು ಎರಡನೆಯ ತೊಂದರೆಯೆ ಆ ಗ್ರಹದಲ್ಲಿ 95% ನಷ್ಟು ಇಂಗಾಲದ ಡೈ ಆಕ್ಸೈಡ್ ಇದ್ದು ಕೇವಲ 0.174% ನಷ್ಟು ಆಮ್ಲಜನಕವಿದೆ. ಜೀವಿಗಳಿಗೆ ಉಸಿರಾಡಲು ಬೇಕಿರುವ ಪ್ರಮುಖ ಅಂಶವಾದ ಆಮ್ಲಜನಕದ ಪ್ರಮಾಣವೆ ಅಲ್ಲಿ ಕಡಿಮೆ ಇರುವುದರಿಂದ ಅದರ ಪ್ರಮಾಣವನ್ನು ವೃದ್ದಿಗೊಳಿಸುವುದು ಅಷ್ಟು ಸುಲಭವಲ್ಲ. ಮೂರನೆಯ ತೊಂದರೆ ಆ ಗ್ರಹದ ಮೇಲಿರುವ ತಾಪಮಾನ. ಭೂಮಿಯ ಮೇಲೆ ಇದ್ದ ಹಾಗೆ ಒಂದು constant ತಾಪಮಾನ ಆ ಗ್ರಹದಲ್ಲಿ ಇಲ್ಲ. ಬೆಳಗ್ಗೆ 13 ಡಿಗ್ರೀ ಸೆಲ್ಸಿಯಸ್ ನಷ್ಟು ತಾಪಮಾನವಿದ್ದರೆ ರಾತ್ರಿ ಆದರೆ ಸಾಕು -62 ಡಿಗ್ರೀ ಸೇಲ್ಸಿಯಸ್ ನಷ್ಟು ಇರುತ್ತದೆ. ಈ ರೀತಿಯ ತಾಪಾಮಾನದಲ್ಲಿ ನಾವುಗಳು ಬದುಕುವುದು ಅಸಾಧ್ಯವಾಗಿದೆ. ನಾಲ್ಕನೆಯ ತೊಂದರೆ ಆ ಗ್ರಹದ ಮೇಲಿರುವ ಭಯಾನಕ ಸುಂಟರಗಾಳಿಗಳು. ಗಂಟೆಗೆ 106 ಕಿಲೋಮೀಟರ್ ವೇಗದಲ್ಲಿ ಬೀಸುವಂತಹ ದೈತ್ಯ ಸುಂಟರಗಾಳಿಗಳು ಈ ಗ್ರಹದ ಮೇಲಿದ್ದು ದಿನಪೂರ್ತಿ ಈ ಸುಂಟರಗಾಳಿಗಳು ಗ್ರಹದ ತುಂಬೆಲ್ಲ ಚಲಿಸುತ್ತಲೇ ಇರುತ್ತವೆ. ಇನ್ನು ಕೊನೆಯ ತೊಂದರೆ ನೀರು. ಮಂಗಳ ಗ್ರಹದಲ್ಲಿ ಭೂಮಿಯ ಮೇಲೆ ಇರುವ ಹಾಗೆ ನದಿ, ಸರೋವರ್ ಅಥವ ಸಮುದ್ರಗಳಿಲ್ಲ. ಇರುವ ನೀರು ಕೂಡ ಮಂಜು ಗಡ್ಡೆಗಳ ರೂಪದಲ್ಲಿ ಹೆಪ್ಪುಗಟ್ಟಿದ್ದು ಅವುಗಳನ್ನು ಕರಗಿಸಬೇಕೆಂದರೆ ಆ ಗ್ರಹದ ಮೇಲೆ ಪರಮಾಣು ಬಾಂಬ್ ಗಳನ್ನು ಹಾಕಬೇಕು. ಆಗ ಅವುಗಳು ಕರಗಿ ನದಿ ಅಥವ ಸರೋವರಗಳಾಗಿ ಪರಿವರ್ತನೆಯಾಗಬಲ್ಲವು. ಇಷ್ಟೆಲ್ಲ ತೊಂದರೆಗಳು ಆ ಗ್ರಹದ ಮೇಲೆ ಇದ್ದು ಆದರೂ ಕೂಡ ವಿಜ್ಞಾನಿಗಳು ಆ ಗ್ರಹದ ಮೇಲೆ ಜೀವಿಸುವ ಕನಸ್ಸನ್ನು ಹೊತ್ತಿದ್ದಾರೆ. ಅದೇನೇ ಹೇಳಿ ವಿಜ್ಞಾನಿಗಳ ಈ ಭಂಡ ದೈರ್ಯವನ್ನು ಮೆಚ್ಚಲೇಬೇಕು.
3) ಇನ್ನು ಈ ಸಂಗತಿಯಲ್ಲಿ ಕೆಲ ಉಪಕರಣಗಳ ಕುರಿತ ಮಾಹಿತಿಯನ್ನು ನೀಡುತ್ತೇನೆ. ನೀರಿನ ಆಳವನ್ನು ಪತ್ತೆ ಮಾಡುವ ಸಲುವಾಗಿ “Fathometer” ಎನ್ನುವ ಉಪಕರಣವನ್ನು ಬಳಸಲಾಗುತ್ತದೆ. ಇದನ್ನು “Herbert Grove Dorsey” ಎನ್ನುವವರು ಕಂಡುಹಿಡಿದಿದ್ದಾರೆ. ಇದೇ ರೀತಿ ವಾತಾವರಣದಲ್ಲಿರುವ ತೇವಾಂಶವನ್ನು ಪತ್ತೆ ಮಾಡಲು “Hygrometer” ಎನ್ನುವ ಉಪಕರಣವನ್ನು ಬಳಸುತ್ತಾರೆ. ಇದನ್ನು ಪ್ರಸಿದ್ದ ಚಿತ್ರಕಲಾಕಾರನಾಗಿದ್ದ “Leonardo da Vinci” ಅವರು ಕಂಡುಹಿಡಿದಿದ್ದಾರೆ. ಇನ್ನು ಗಾಳಿಯ ವೇಗವನ್ನು ಪತ್ತೆ ಮಾಡಲು “Anemometer” ಎನ್ನುವ ಉಪಕರಣವನ್ನು ಬಳಸುತ್ತಾರೆ. ಇದನ್ನು “Leon Battista Alberti” ಎನ್ನುವವರು ಕಂಡುಹಿಡಿದಿದ್ದಾರೆ.
4) ದೇವರ ಹೆಸರಲ್ಲಿ ಪ್ರಾಣಿ, ಪಕ್ಷಿ ಹಾಗು ಮನುಷ್ಯರನ್ನೆ ಬಲಿ ಕೊಡುವ ಪದ್ದತಿ ಜಗತ್ತಿನ ಅನೇಕ ದೇಶಗಳಲ್ಲಿ ಇರುವುದು ನಮಗೆಲ್ಲ ತಿಳಿದೇ ಇದೆ. ಆದರೆ ಈ ಪದ್ದತಿಯು ಇತ್ತೀಚೆಗೆ ಬಂದಂತದ್ದಲ್ಲ. ನೂರಾರು ವರ್ಷಗಳಿಂದ ಈ ರೀತಿಯ ಪದ್ದತಿ ನಡೆದುಕೊಂಡು ಬಂದಿದೆ. ಇದಕ್ಕೆ ಉತ್ತಮವಾದ ಉದಾಹರಣೆಯನ್ನು ವಿಜ್ಞಾನಿಗಳು ಅರ್ಜೆಂಟೈನ್ ದೇಶದಲ್ಲಿ ಕಂಡುಹಿಡಿದಿದ್ದಾರೆ. ಅರ್ಜೆಂಟೈನಾದಲ್ಲಿ Llullaillaco ಎನ್ನುವ ಪರ್ವತವಿದ್ದು 1999ರಲ್ಲಿ ಈ ಪರ್ವತದ ಮೇಲೆ ಮಂಜುಗಡ್ಡೆಗಳ ಒಳಗೆ ಒಬ್ಬ ಯುವತಿಯ ಮೃತದೇಹವು ವಿಜ್ಞಾನಿಗಳಿಗೆ ಸಿಕ್ಕಿದೆ. ಸಾಯುವ ವೇಳೆ ಆ ಯುವತಿಯು ಹೇಗೆ ಕೂತಿದ್ದಳೋ ಅದೇ ಸ್ಥಾನದಲ್ಲಿ ಆಕೆಯ ದೇಹವು ಸಿಕ್ಕಿದೆ. ಈ ಯುವತಿಯನ್ನು ತಂದು ಪರೀಕ್ಷೆ ನಡೆಸಿದ ವಿಜ್ಞಾನಿಗಳು ಈಕೆಯನ್ನು 500 ವರ್ಷಗಳ ಹಿಂದೆ Llullaillaco ಪರ್ವತದ ಮೇಲೆ ಕೊರೆಯುವ ಚಳಿಯಲ್ಲಿ ಬಿಡಲಾಗಿದ್ದು ಆಕೆಯ ಸಾವನ್ನು ದೇವರಿಗೆ ಅರ್ಪಣೆ ಮಾಡಲಾಗಿದೆ. ಸಾಯುವ ವೇಳೆ ಈಕೆಗೆ ಕೇವಲ 15 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದ್ದು ಈಕೆಯ ದೇಹದ ಒಳಗಿರುವ ಬಹುತೇಕ ಅಂಗಾಂಗಗಳಿಗೆ ಹೆಚ್ಚು ಹಾನಿಯಾಗದೆ ಹಾಗೆಯೇ ಇದ್ದು ಸತ್ತಿರುವ ಹೆಣದ ಹಾಗೆ ಕಾಣದೆ ಮಲಗಿರುವ ವ್ಯಕ್ತಿಯ ಹಾಗೆ ಕಾಣುತ್ತಾಳೆ. ಈಕೆಯ ಈ ದೇಹವನ್ನು ಅರ್ಜೆಂಟೈನಾದ “High Altitude Archeology” ಮ್ಯೂಸಿಯಂ ನಲ್ಲಿ ಇಡಲಾಗಿದ್ದು ಪ್ರಪಂಚದಲ್ಲಿ ಇದುವರೆಗು ಸಿಕ್ಕಿರುವ ಅನೇಕ ಮಮ್ಮಿಗಳ ಪೈಕಿ ಅತಿ ಹೆಚ್ಚು ಸಂರಕ್ಷಣೆಗೆ ಒಳಪಟ್ಟ ಮಮ್ಮಿ ಇದಾಗಿದೆ.
5) ಗಿಳಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ನೀವೇ ಹೇಳಿ. ಮುದ್ದಾಗಿ ಕಾಣುವ ಹಾಗು ಸದ್ದು ಮಾಡುವ ಈ ಪಕ್ಷಿಗಳು ಎಲ್ಲರಿಗು ಅಚ್ಚು ಮೆಚ್ಚು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಬಣ್ಣ ಹಾಗು ಗಾತ್ರದ ಗಿಳಿಗಳನ್ನು ನಾವು ಕಾಣಬಹುದಾಗಿದೆ. ಆದರೆ papua new guena ದೇಶದಲ್ಲಿ ಕಾಣಸಿಗುವ ಗಿಳಿಗಳು ಮಾತ್ರ ತುಂಬಾ ಅಪರೂಪವಾದದ್ದು. ಏಕೆಂದರೆ ಈ ಗಿಳಿಗಳ ಮುಖವು ರಣಹದ್ದುವಿನ ರೀತಿಯ ಮುಖವನ್ನು ಹೊಂದಿವೆ. ಆದ್ದರಿಂದಲೇ ಇವುಗಳನ್ನು “vulturine parrot” ಎಂದು ಕರೆಯುತ್ತಾರೆ.