"ಕುತೂಹಲಕಾರಿ ಸಂಗತಿಗಳು"

43 ವರ್ಷದ ಜೋನಥಾನ್ ಜಾಕೋಬ್ ಮೋಯರ್ ಎಂಬ ಈ ವ್ಯಕ್ತಿ ನೆದರ್ಲ್ಯಾಂಡ್ ನಲ್ಲಿ ನೆಲೆಸಿರುತ್ತಾನೆ. ಈ ವ್ಯಕ್ತಿಯ ಕುರಿತು ಕುತೂಹಲಕಾರಿ ವಿಷಯ ಏನೆಂದರೆ ಬರೋಬ್ಬರಿ 1,000 ಮಕ್ಕಳ ತಂದೆ ಅಂದ್ರೆ ನೀವು ನಂಬಲೇಬೇಕು. ಈ ವ್ಯಕ್ತಿ ಹೇಳುವ ಮಾತಿನ ಪ್ರಕಾರ ವಿವಿಧ ದೇಶಗಳಲ್ಲಿ ಈತನ ಮಕ್ಕಳಿದ್ದಾರೆ. ಹಾಗೆ ಅಲ್ಲಿಯ ಸರ್ಕಾರ ಈತನಿಂದ ಒಂದೇ ಒಂದು ಮಗು ಆದರೂ ಕೂಡ 91 ಲಕ್ಷ ದಂಡ ವಿಧಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಅದು ಹೇಗೆ ಒಬ್ಬ ವ್ಯಕ್ತಿ ಸಾವಿರ ಮಕ್ಕಳ ತಂದೆಯಾಗಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಪ್ರತಿಯೊಬ್ಬರಲ್ಲೂ ಕೂಡ ಹುಟ್ಟುತ್ತದೆ ?

ಅಲ್ಲಿನ ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಜೋನಥಾನ್ ಜಾಕೋಬ್ ಮೋಯರ್ ಮಕ್ಕಳು ಪಡೆಯುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾನೆ. ಈ ವ್ಯಕ್ತಿಯ ಕುರಿತು ಈಗಾಗಲೇ ನೆಟ್ ಫ್ಲಿಕ್ಸ್ ನಲ್ಲಿ ಇವರ ಕುರಿತು ಡಾಕ್ಯುಮೆಂಟರಿ ಸಹ ಇದೆ ಎಂದು ಹೇಳಲಾಗುತ್ತದೆ. ನೆದರಲ್ಯಾಂಡ್ ನ ನಿವಾಸಿಯಾದ ಇವರು ಸಮಾಜ ಸೇವೆ ಮಾಡಬೇಕೆಂದು ಯೋಚಿಸಿ ಜೋನಥಾನ್ ಜಾಕೋಬ್ ಮೋಯರ್ ತನ್ನ 23ನೇ ವಯಸ್ಸಿನಲ್ಲಿ ವೀರ್ಯ ದಾನಿಯಾಗಿ ಹೆಸರುವಾಸಿಯಾಗಿದ್ದಾನೆ. ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ವೀರ ದಾನವನ್ನು ಮಾಡುವುದನ್ನು ನಿಲ್ಲಿಸಿದ್ದಾನೆ.

ಈ ವ್ಯಕ್ತಿ ಅಂದಾಜು ಲೆಕ್ಕದ ಪ್ರಕಾರ ಸರಿ ಸುಮಾರು 550ಕ್ಕೂ ಹೆಚ್ಚು ಈತನಿಗೆ ಮಕ್ಕಳಿರುವದಾಗಿ ಹೇಳಿಕೊಂಡಿರುವನು ಆದರೆ ಡಾಕ್ಯುಮೆಂಟರಿಯ ವರದಿ ಪ್ರಕಾರ ಜೋನಥಾನ್ ಜಾಕೋಬ್ ಮೋಯರ್ ನಿಗೆ ಸಾವಿರ ಮಕ್ಕಳ ತಂದೆಯಾಗಿರುವನು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಜೋನಥಾನ್ ಜಾಕೋಬ್ ಮೋಯರ್ ಹೇಳುವ ಪ್ರಕಾರ ಎಷ್ಟು ಮಕ್ಕಳಿರುವವರು ಎಂಬುದರ ಬಗ್ಗೆ ನಿಖರವಾದ ಲೆಕ್ಕವಿಲ್ಲ ಹಾಗೆ ನನಗೆ ಅವರ ಬಗ್ಗೆ ಯಾವ ರೀತಿಯ ಭಾವನೆಗಳಿಲ್ಲ ಎಂದು ಹೇಳುತ್ತಾನೆ.ಜೀವನದಲ್ಲಿ ಸಾರ್ಥಕವಾದ ಕೆಲಸ ಮಾಡಬೇಕು ಎಂದು ನಾನು ವೀರ್ಯ ದಾನ ಮಾಡಲು ಮುಂದಾದೆ. ತನ್ನ ದೇಶ ಮಾತ್ರವಲ್ಲದೇ ವಿದೇಶದ ಹಲವು ದಂಪತಿಗೆ ನಾನು ಸ್ಪರ್ಮ್ ದಾನವಾಗಿ ನೀಡಿದ್ದೇನೆ. ನಾನು ವೀರ್ಯ ದಾನ ಮಾಡುವದರಿಂದ ದಂಪತಿ ತಂದೆ-ತಾಯಿಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಜೋನಾಥನ್ ಹೇಳುತ್ತಾನೆ. ಈತನ ವೀರ್ಯದಿಂದ ಮಕ್ಕಳನ್ನು ಪಡೆದುಕೊಂಡಿರುವ ದಂಪತಿ ಭವಿಷ್ಯದಲ್ಲಿ ತಮ್ಮ ಮಲಸೋದರ/ರಿಯರ ಜೊತೆ ಸಂಬಂಧ ಬೆಳೆಸಿದ್ರೆ ಹೇಗೆ ಎಂದು ಭಯಗೊಂಡಿದ್ದಾರೆ.

ಜೋನಾಥನ್ ಮೇಯರ್ ತನ್ನ 26ನೇ ವಯಸ್ಸಿನಲ್ಲಿಯೇ ವೀರ್ಯದಾನಿಯಾಗಿ ಕೆಲಸ ಶುರು ಮಾಡಿದ್ದನು. ಜೀವನಕ್ಕಾಗಿ ಸಂಗೀತಕಾರನಾಗಿರುವ ಜೋನಾಥನ್ ಓರ್ವ ಖ್ಯಾತ ಯುಟ್ಯೂಬರ್ ಸಹ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ ಜೋನಾಥನ್ ಹಲವು ಮಕ್ಕಳನ್ನು ಭೇಟಿಯಾಗಿರೋದಾಗಿ ಹೇಳಿದ್ದಾನೆ. ಮಕ್ಕಳ ಜೊತೆ ರಜಾದಿನಗಳಲ್ಲಿ ಪ್ರವಾಸ ಕೈಗೊಂಡಿರೋದಾಗಿ ಎಂಬ ವಿಷಯವನ್ನು ಹಂಚಿಕೊಂಡಿದ್ದಾನೆ. ಕೆಲ ಮಕ್ಕಳಿಗೆ ನಾನು ಅವರ ತಂದೆ ಎಂಬ ವಿಷಯ ಗೊತ್ತಿದೆ. ಕೆಲ ಪೋಷಕರು ಸಹ ಧೈರ್ಯದಿಂದ ವೀರ್ಯದಾನಿಯಿಂದ ತಾವು ಪೋಷಕರಾಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ತುಂಬಾ ಎಚ್ಚರಿಕೆಯಿಂದ ವೀರ್ಯದಾನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಜೋನಾಥನ್ ಹೇಳುತ್ತಾನೆ. ಓರ್ವ ಮಹಿಳೆ ವೀರ್ಯಕ್ಕಾಗಿ ಜೋನಾಥನ್ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಳು. ನೈಸರ್ಗಿಕ ರೀತಿಯಲ್ಲಿ ಆಕೆಗೆ ಗರ್ಭಧರಿಸಬೇಕು ಎಂಬ ಕಾರಣಕ್ಕಾಗಿ ಸಂಬಂಧ ಹೊಂದಿದ್ದಳು. ಇದೀಗ ಒಂದೇ ಒಂದು ಮಗುವಾದರೂ ಜೋನಾಥನ್ ಜಾಕೋಬ್ ಮೇಯರ್ 91 ಲಕ್ಷ ಬೀಳಲಿದೆ. ಈ ಹಿನ್ನೆಲೆ ಜೋನಾಥನ್ ವೀರ್ಯದಾನದಿಂದ ನಿವೃತ್ತಿ ಘೋಷಿಸಿದ್ದಾನೆ.

ಬಾಲಿವುಡ್‌ನಲ್ಲಿದೆ ಸಿನಿಮಾ :

ವೀರ್ಯದಾನಿಯ ಕುರಿತ ಕಥೆಯುಳ್ಳ ಸಿನಿಮಾವೊಂದು ಬಾಲಿವುಡ್‌ನಲ್ಲಿ ತೆರೆಕಂಡಿತ್ತು. 2012ರಲ್ಲಿ ಬಿಡುಗಡೆಯಾಗಿದ್ದ ವಿಕ್ಕಿ ಡೋನರ್ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ಯಾಮಿ ಗೌತಮಿ, ಅನ್ನು ಕಪೂರ್, ಕಮ್ಲೇಶ್ ಗಿಲ್, ಡಾಲಿ ಅಹ್ಲುವಾಲಿಯಾ, ತರುಣ್ ಬಾಲಿ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿತ್ತು. ಚಿತ್ರದಲ್ಲಿ ಆಯುಷ್ಮಾನ್ ವೀರ್ಯದಾನಿಯ ಪಾತ್ರದಲ್ಲಿ ನಟಿಸಿದ್ದರು.

Follow Karunadu Today for more Interesting Facts & Stories. 

Click here to Join Our Whatsapp Group