ನಮಗೆಲ್ಲ ತಿಳಿದಿರುವ ಹಾಗೆ ಗುರುತ್ವಾಕರ್ಷಣೆ ಇರುವುದಕ್ಕೆ ನಾವೆಲ್ಲರು ಇಂದು ಭೂಮಿಯ ಮೇಲೆ ನಡೆದಾಡಲು ಸಾಧ್ಯವಾಗಿರುವುದು. ಅಕಸ್ಮಾತ್ ಅದು ಇಲ್ಲವೆಂದಿದ್ದರೆ ನಾವೆಲ್ಲರು ತೇಲುತ್ತಿದ್ದೆವು. ಇದನ್ನು ಮೊದಲು ಕಂಡು ಹಿಡಿದದ್ದು ನ್ಯೂಟನ್ ಎಂದು ನಾವುಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ, ಆದರೆ ನ್ಯೂಟನ್ ಗಿಂತಲೂ ಮೊದಲು ನಮ್ಮ ಭರತ ಖಂಡದಲ್ಲಿದ್ದ ಅನೇಕ ಋಷಿ ಮುನಿಗಳಿಗೆ ಇದರ ಬಗ್ಗೆ ಗೊತ್ತಿತ್ತು. ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಬ್ರಹ್ಮಾಂಡದ ಬೇರೆ ಬೇರೆ ಗ್ರಹ ನಕ್ಷತ್ರಗಳು ಕೂಡ ಗುರುತ್ವಾಕರ್ಷಣೆ ಹೊಂದಿವೆ. ಆದರೆ ಆಧುನಿಕ ಕಾಲದ ವಿಜ್ಞಾನಿಗಳು ಈ ನಮ್ಮ ಭೂಮಿಯ ಮೇಲೆ ಕೆಲ ಸ್ಥಳಗಳನ್ನು ಪತ್ತೆ ಮಾಡಿದ್ದು ಅಲ್ಲಿ ಈ ಗುರುತ್ವಾಕರ್ಷಣೆ ಕೆಲಸ ಮಾಡುವುದಿಲ್ಲ. ಹೌದು ಇದು ನಿಮಗೆ ಅಚ್ಚರಿ ಎನಿಸಿದರು ಕೂಡ ಸತ್ಯ. ಇಂದು ನಿಮಗೆ ಆ ಅಚ್ಚರಿಯ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.

1) ತಲೆಕೆಳಗಾದ ಜಲಪಾತ


ಸಹಜವಾಗಿ ಜಲಪಾತವೆಂದರೆ ಪರ್ವತದ ಮೇಲಿಂದ ರಭಸವಾಗಿ ಕೆಳಗೆ ಬೀಳುವ ನೀರು ಎನ್ನುವುದು ನಮಗೆಲ್ಲ ತಿಳಿದ ಸಂಗತಿ. ಆದರೆ “ಐಸ್ಲ್ಯಾಂಡ್” ದೇಶದಲ್ಲಿ ಒಂದು ಜಲಪಾತವಿದ್ದು ಆ ಜಲಪಾತದ ನೀರು ಕೆಳಗೆ ಬೀಳುವುದೇ ಇಲ್ಲ. ಇದಕ್ಕೆ ಕಾರಣ ಬಲಿಷ್ಠವಾಗಿ ಬೀಸುವ ಗಾಳಿ. ಗಾಳಿಯ ರಭಸಕ್ಕೆ ಜಲಪಾತದ ನೀರು ಭೂಮಿಯನ್ನು ತಲುಪುವ ಮುನ್ನ ಗಾಳಿಯ ಜೊತೆಗೆ ಆಕಾಶದಲ್ಲಿಯೇ ಹಾರಿಹೋಗುತ್ತದೆ. ಆದರೆ ಇಲ್ಲಿ ನಮಗೆಲ್ಲ ಕಾಡುವ ಪ್ರಶ್ನೆ ಏನೆಂದರೆ ಗುರುತ್ವಾಕರ್ಷಣೆಗೆ ವಿರುದ್ದವಾಗಿ ಗಾಳಿಯು ಅದು ಹೇಗೆ ನೀರನ್ನು ತನ್ನೊಡನೆ ಎಳೆದುಕೊಂಡು ಹೋಗುತ್ತದೆ ಎನ್ನುವುದು. ಅದೆಷ್ಟೇ ಬಲಿಷ್ಠ ಗಾಳಿ ಇದ್ದರೂ ಕೂಡ ಗುರುತ್ವಾಕರ್ಷಣೆ ಎನ್ನುವುದು ಎಲ್ಲದಕ್ಕಿಂತ ಬಲಿಷ್ಟವಾದದ್ದು. ಅದರ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಈ ಜಲಪಾತದ ನೀರು ಗುರುತ್ವಾಕರ್ಷಣೆಯ ಶಕ್ತಿಯನ್ನು ಮೀರಿ ಗಾಳಿಯ ಜೊತೆಗೆ ಸೇರುತ್ತಿದೆ. ಇದರಿಂದ ಈ ಜಲಪಾತದ ಬಳಿ ಗುರುತ್ವಾಕರ್ಷಣೆಯ ಶಕ್ತಿ ತುಂಬಾ ದುರ್ಬಲವಾಗಿದೆ ಎನ್ನುವ ಸಂಗತಿ ನಮಗೆ ತಿಳಿದುಬರುತ್ತದೆ.

2) ಸ್ಯಂಟ ಕ್ರೂಜಿನ ರಹಸ್ಯ ಸ್ಥಳ


ಅಮೇರಿಕದ ಕ್ಯಾಲಿಫೋರ್ನಿಯದ “ಸ್ಯಾಂಟ ಕ್ರೂಜ್” ಬಳಿಯಿರುವ ದಟ್ಟ ಅರಣ್ಯದಲ್ಲಿ ಈ ರಹಸ್ಯ ಸ್ಥಳವಿದ್ದು 1939 ರಲ್ಲಿ “ಜಾರ್ಜ್ ಪ್ರೇತರ್” ಎನ್ನುವ ವ್ಯಕ್ತಿ ಇದನ್ನು ಕಂಡು ಹಿಡಿದಿದ್ದಾನೆ. ಅದೊಂದು ದಿನ ಅರಣ್ಯದಲ್ಲಿ ಟ್ರೆಕ್ಕಿಂಗ್ ಮಾಡುತ್ತಿರುವ ವೇಳೆ ಈ ಸ್ಥಳದ ಹತ್ತಿರ ಹೋಗುತ್ತಿದ್ದಂತೆ ತನ್ನ ಬಳಿಯಿದ್ದ ದಿಕ್ಕನ್ನು ತೋರಿಸುವ ದಿಕ್ಸೂಚಿಯು ವಿಚಿತ್ರವಾಗಿ ತಿರುಗಲು ಪ್ರಾರಂಭಿಸಿತ್ತು. ಇದನ್ನು ಕಂಡು ದಿಗ್ಬ್ರಮೆಗೆ ಒಳಗಾದ ಜಾರ್ಜ್ ಈ ಸ್ಥಳದಲ್ಲಿ ಗುರುತ್ವಾಕರ್ಷಣೆ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಸಂಗತಿಯನ್ನು ಪತ್ತೆ ಹಚ್ಚಿದನು. ನಂತರ ಇಲ್ಲೊಂದು ಮನೆ ನಿರ್ಮಾಣ ಮಾಡಿ ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಿದನು. ಈ ಕಟ್ಟಿಗೆಯ ಮನೆಯ ಗೋಡೆಯ ಮೇಲೆ ಯಾವುದೇ ಸಹಾಯವಿಲ್ಲದೆ ಗುರುತ್ವಾಕರ್ಷಣೆಗೆ ವಿರುದ್ದವಾಗಿ ನಿಂತುಕೊಳ್ಳಬಹುದು.

3) ಮೌಂಟ್ ಅರಗಾಟ್ಸ್


“ಅರ್ಮೇನಿಯ” ದೇಶದಲ್ಲಿರುವ ಈ ಶಿಖರದ ಕೆಲ ಭಾಗದಲ್ಲಿ ಗುರುತ್ವಾಕರ್ಷಣೆಯು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿಗೆ ಕಾರಿನಲ್ಲಿ ಹೋಗುವ ಪ್ರವಾಸಿಗರಿಗೆ ವಿಚಿತ್ರವಾದ ಅನುಭವಗಳಾಗುತ್ತಿವೆ. ಕಾರನ್ನು ನಿಲ್ಲಿಸಿದರು ಕೂಡ ಒಮ್ಮೆಲೇ ಅದು ಶಿಖರದ ಕಡೆಗೆ ತನ್ನಷ್ಟಕ್ಕೆ ತಾನು ಚಲಿಸುತ್ತದೆ. ಇಷ್ಟೇ ಅಲ್ಲದೆ ಇಲ್ಲಿ ಹರಿಯುತ್ತಿರುವ ಸಣ್ಣ ಪುಟ್ಟ ಜರಿಗಳು ಕೂಡ ಶಿಖರದಿಂದ ಕೆಳಗೆ ಹರಿಯದೆ ಮರಳಿ ಶಿಖರದ ಕಡೆಗೆ ಹರಿಯುತ್ತಿದೆ.

4) ಆಯಸ್ಕಾಂತದ ಬೆಟ್ಟ


ಭಾರತದ ಲಡಾಖ್ ನಲ್ಲಿರುವ ಈ ಬೆಟ್ಟವನ್ನು “ಸೈಕ್ಲೋಪ್ಸ್ ಬೆಟ್ಟ” ಎಂದು ಕೂಡ ಕರೆಯುತ್ತಾರೆ. ಈ ಬೆಟ್ಟದಲ್ಲಿಯು ಕೂಡ ಒಂದು ನಿರ್ಧಿಷ್ಟ ಸ್ಥಳವಿದ್ದು ಅಲ್ಲಿ ಕಾರನ್ನು ನಿಲ್ಲಿಸಿದರೆ ಸಾಕು ತನ್ನಷ್ಟಕ್ಕೆ ತಾನು ಬೆಟ್ಟದ ಕಡೆಗೆ ಚಲಿಸುತ್ತದೆ. ಆ ನಿರ್ಧಿಷ್ಟವಾದ ಸ್ಥಳದಲ್ಲಿ ಗುರುತ್ವಾಕರ್ಷಣೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದೇ ತರಹ ಕೆನಡಾ ದೇಶದ “ಮೊಂಕ್ಟನ್” ಬಳಿ ಒಂದು ಬೆಟ್ಟವಿದೆ.

5) ಹೂವರ್ ಆಣೆಕಟ್ಟು


ಅಮೇರಿಕದ “ನೆವಾಡ ಮತ್ತು ಅರಿಜೋನಾ” ರಾಜ್ಯಗಳ ಮಧ್ಯೆ ನಿರ್ಮಿಸಿರುವ ಈ ಆಣೆಕಟ್ಟಿನಲ್ಲಿ ಕೂಡ ಐಸ್ಲ್ಯಾಂಡ್ ದೇಶದಲ್ಲಿರುವ ತಲೆಕೆಳಗಾದ ಜಲಪಾತದ ಹಾಗೆಯೆ ಆಗುತ್ತಿದೆ. ಈ ಆಣೆಕಟ್ಟಿನ ಮೇಲಿಂದ ನೀರನ್ನು ಕೆಳಗೆ ಚೆಲ್ಲಿದರೆ ಆ ನೀರು ಕೆಳಗೆ ಬೀಳದೆ ಗಾಳಿಯ ಜೊತೆಗೆ ಬೆರೆತು ಆಕಾಶದಲ್ಲಿ ಹಾರಿಹೋಗುತ್ತದೆ.

Follow Karunadu Today for more Interesting Facts & Stories. 

Click here to Join Our Whatsapp Group