
ವಿಜ್ಞಾನ ಎನ್ನುವುದು ಅದೆಷ್ಟೇ ಮುಂದುವರೆದಿರಬಹುದು, ತಂತ್ರಜ್ಞಾನ ಎನ್ನುವುದು ಅದೆಷ್ಟೇ ಬೆಳೆದಿರಬಹುದು ಆದರೆ ಅವೆಲ್ಲವನ್ನು ಮೀರಿಸುವ ಶಕ್ತಿ ಒಂದಿದೆ, ಅದುವೇ ದೈವ ಶಕ್ತಿ. ಈ ಶಕ್ತಿ ನಮ್ಮ ಕಣ್ಣಿಗೆ ಕಾಣದಿರಬಹುದು ಆದರೆ ಸದಾ ನಮ್ಮನ್ನು ದುಷ್ಟ ಶಕ್ತಿಯಿಂದ ರಕ್ಷಿಸುತ್ತಿರುತ್ತದೆ. ಯಾವುದೇ ದೇಶವಿರಬಹುದು, ಧರ್ಮವಿರಬಹುದು ಪ್ರತಿಯೊಬ್ಬರಿಗೂ ತಮ್ಮದೇ ಆದ ದೈವ ಶಕ್ತಿ ಎನ್ನುವುದು ಒಂದಿದೆ. ಹಿಂದೂ ಧರ್ಮದಲ್ಲಿ ಆ ದೈವ ಶಕ್ತಿಯನ್ನು ವಿಷ್ಣು, ಶಿವ, ಗಣೇಶ ಹೀಗೆ ಅನೇಕ ಹೆಸರುಗಳಲ್ಲಿ ಹಿಂದೂಗಳು ಕಂಡರೆ, ಇಸ್ಲಾಂ ಮತ್ತು ಕ್ರೈಸ್ತ ಧರ್ಮದಲ್ಲಿ ಅಲ್ಲಾ ಹಾಗು ಯೇಸು ಎನ್ನುವ ಹೆಸರಿನಿಂದ ಕಾಣುತ್ತಾರೆ. ಹೀಗೆ ಅವರವರ ಧರ್ಮಕ್ಕೆ ಅನುಗುಣವಾಗಿ ಬೇರೆ ಬೇರೆ ಹೆಸರಿನಿಂದ ದೈವ ಶಕ್ತಿಯನ್ನು ಕಾಣುತ್ತಾರೆ. ಈ ದೈವ ಶಕ್ತಿಗಳನ್ನು ಕಾಣಲು ಪ್ರಪಂಚದಲ್ಲಿ ಕೆಲ ಸ್ಥಳಗಳಿದ್ದು ಆ ಸ್ಥಳಗಳಿಗೆ ಪ್ರತಿ ವರ್ಷ ಕೋಟ್ಯಾನು ಕೋಟಿ ಜನರು ಬೇಟಿ ನೀಡುತ್ತಾರೆ. ತಾವು ಪೂಜಿಸುವ ಆ ದೈವ ಶಕ್ತಿ ಇರುವ ಸ್ಥಳವನ್ನು ಜೀವನದಲ್ಲಿ ಒಮ್ಮೆಯಾದರೂ ಬೇಟಿ ನೀಡಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಅದೆಷ್ಟೇ ಕಷ್ಟವಾದರೂ ಕೂಡ ಅದನ್ನು ಎದುರಿಸಿ ಆ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಂದು ನಿಮಗೆ ಈ ರೀತಿ ತಾವು ಪೂಜಿಸುವ ದೇವರನ್ನು ನೋಡುವ ಸಲುವಾಗಿ ಬೇರೆ ಬೇರೆ ಸ್ಥಳಗಳಿಂದ ಭೇಟಿ ನೀಡುವುದರೊಂದಿಗೆ ಅತಿ ಹೆಚ್ಚು ಭಕ್ತರು ಭೇಟಿ ನೀಡುತ್ತಿರುವ ಪುಣ್ಯ ಸ್ಥಳ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ದೈವ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ.
1. ತಿರುಪತಿ ತಿರುಮಲ ದೇವಸ್ಥಾನ

ಹಿಂದೂಗಳ ಪವಿತ್ರ ಸ್ಥಳಗಳ್ಳಿ ಒಂದಾದ ಈ ದೇವಸ್ಥಾನದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ವಿಷ್ಣುವಿನ ಅವತಾರಗಳಲ್ಲಿ ಒಂದಾದ ವೆಂಕಟೇಶ್ವರ ಸ್ವಾಮಿಯು ಕಲ್ಲಾಗಿ ನೆಲೆಸಿರುವ ಈ ಸ್ಥಳವನ್ನು ಪ್ರತಿ ವರ್ಷ ಕನಿಷ್ಟಪಕ್ಷ 35 ರಿಂದ 40 ಲಕ್ಷ ಜನರು ಭೇಟಿ ಮಾಡುತ್ತಾರೆ. ಸಮುದ್ರ ಮಟ್ಟದಿಂದ 853 ಮೀಟರ್ ಎತ್ತರದಲ್ಲಿ ಇರುವ ಈ ದೇವಸ್ಥಾನವು ಪ್ರಪಂಚದಲ್ಲಿರುವ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಕೆಲವೊಮ್ಮೆ ವಿಶೇಷ ಹಬ್ಬಗಳ ದಿನದಂದು ಇನ್ನೂ ಹೆಚ್ಚು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
2. ಮೈಜಿ ಶ್ರೈನ್ ಮತ್ತು ಸೆಂಸೋಜಿ ದೇವಸ್ಥಾನ – Meiji Shrine and Sensoji temple

ಜಪಾನ್ ದೇಶವನ್ನು ಆಳುತ್ತಿದ್ದ ರಾಜ “ಮೈಜಿ” ಮತ್ತು ಆತನ ಹೆಂಡತಿ “ಶೊಕೇನ್” ನೆನಪಿಗಾಗಿ ನಿರ್ಮಿಸಿರುವ ಈ ದೇವಸ್ಥಾನವನ್ನು ಪ್ರತಿ ವರ್ಷ ಕನಿಷ್ಟಪಕ್ಷ 30 ಲಕ್ಷ ಜನರು ಭೇಟಿ ನೀಡುತ್ತಾರೆ. ಬರೋಬ್ಬರಿ 170 ಎಕರೆ ಜಾಗದಲ್ಲಿ ವಿಸ್ತಾರವಾಗಿರುವ ಈ ಸುಂದರ ದೇವಸ್ಥಾನದ ಸುತ್ತಲೂ 1,20,000 ಮರಗಳು ಇರುವ ಅರಣ್ಯ ಪ್ರದೇಶವಿದೆ. ಈ ದೇವಸ್ಥಾನವು ಎರಡನೆಯ ಪ್ರಪಂಚ ಯುದ್ಧ ನಡೆಯುವ ವೇಳೆ ದಾಳಿಗೊಳಗಾಗಿತ್ತು. ಆದರೆ ಜಪಾನ್ ದೇಶದ ಜನರು ಇದನ್ನು ಮರುನಿರ್ಮಾಣ ಮಾಡಲು ಅಲ್ಲಿನ ಸರ್ಕಾರಕ್ಕೆ ಸಹಾಯ ಮಾಡಿ 1958 ರಲ್ಲಿ ಮತ್ತೆ ಸ್ಥಾಪಿಸಿದರು. ಈ ದೇವಸ್ಥಾನವನ್ನು ಕೇವಲ ಜಪಾನ್ ದೇಶದ ಜನರು ಮಾತ್ರವಲ್ಲದೆ ಬೇರೆ ಬೇರೆ ದೇಶದ ಜನರು ಕೂಡ ಭೇಟಿ ನೀಡುತ್ತಾರೆ. ಅಂದ ಹಾಗೆ ಒಬ್ಬ ರಾಜನಿಗಾಗಿ ಜಪಾನ್ ದೇಶದ ಜನರು ಏಕೆ ದೇವಸ್ಥಾನ ನಿರ್ಮಾಣ ಮಾಡಿರುವರು ಎಂದು ಯೋಚಿಸುತ್ತಿದ್ದೇರ? ಈತ ಕೇವಲ ರಾಜನಲ್ಲ, ಜಪಾನ್ ದೇಶವನ್ನು ಪ್ರಪಂಚದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ ಒಬ್ಬ ಮಹಾನ್ ವ್ಯಕ್ತಿ. 1867 ಕ್ಕಿಂತ ಮೊದಲು ಜಪಾನ್ ದೇಶವನ್ನು ಪ್ರಪಂಚದಲ್ಲಿ ಕೇವಲ ಒಂದು ಪುಟ್ಟ ದೇಶ ಎಂದು ಅದರಿಂದ ಏನೂ ಉಪಯೋಗವಿಲ್ಲ ಎಂದು ಜಗತ್ತು ತಿಳಿದಿತ್ತು. ಆದರೆ ಈ ರಾಜನು ಆಳ್ವಿಕೆಗೆ ಬಂದ ಮೇಲೆ ಜಪಾನ್ ದೇಶದಲ್ಲಿ ಹೊಸ ಕ್ರಾಂತಿಯೇ ಆಗಿ 1912 ರ ಹೊತ್ತಿಗೆ ಜಪಾನ್ ದೇಶವನ್ನು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಮಾಡಿದನು. ಇದೇ ಕಾರಣದಿಂದ ಅಲ್ಲಿನ ಜನರು ಈತನನ್ನು ದೇವರ ಹಾಗೆ ಪೂಜಿಸುತ್ತಾರೆ.
3. ಹಜ್ – Hajj

ಮುಸ್ಲೀಮರ ಪವಿತ್ರ ಸ್ಥಳವಾದ ಮಕ್ಕಾ ಮದೀನ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಇರುವ ಈ ಸ್ಥಳಕ್ಕೆ ಪ್ರಪಂಚದ ಎಲ್ಲಾ ದೇಶದಲ್ಲಿರುವ ಮುಸ್ಲೀಮರು ಭೇಟಿ ನೀಡುತ್ತಾರೆ. ವರ್ಷಕ್ಕೆ ಒಂದು ಬಾರಿ ಭೇಟಿ ನೀಡುವ ಈ ಸ್ಥಳಕ್ಕೆ ಕೇವಲ ಮುಸ್ಲಿಮರಿಗೆ ಮಾತ್ರ ಭೇಟಿ ನೀಡಲು ಅವಕಾಶ ಇದೆ. ವರ್ಷಕ್ಕೊಮ್ಮೆ ಭೇಟಿ ನೀಡುವ ಈ ಸ್ಥಳವನ್ನು ಪ್ರತಿ ವರ್ಷ ಕನಿಷ್ಠಪಕ್ಷ 20 ರಿಂದ 25 ಲಕ್ಷ ಜನರು ಭೇಟಿ ನೀಡುತ್ತಾರೆ. ಈ ಹಜ್ ಪವಿತ್ರ ಸ್ಥಳವನ್ನು ಬಿಟ್ಟರೆ ಇರಾಕ್ ದೇಶದಲ್ಲಿರುವ “ಅರ್ಬಾಈನ್” ಸ್ಥಳಕ್ಕೆ ಹೆಚ್ಚು ಮುಸ್ಲೀಮರು ಭೇಟಿ ನೀಡುತ್ತಾರೆ.
4. ಕಾಶಿ ವಿಶ್ವನಾಥ ದೇವಸ್ಥಾನ

ಉತ್ತರಪ್ರದೇಶ ರಾಜ್ಯದಲ್ಲಿರುವ ಪ್ರಪಂಚದ ಅತ್ಯಂತ ಹಳೆಯ ನಗರ ಎಂದೇ ಖ್ಯಾತಿ ಪಡೆದಿರುವ ವಾರಣಾಸಿಯಲ್ಲಿರುವ ಈ ದೇವಸ್ಥಾನವು ಹಿಂದೂಗಳ ಪವಿತ್ರ ದೇವರುಗಳಲ್ಲಿ ಒಬ್ಬನಾದ ಪರಮೇಶ್ವರನಿಗಾಗಿ ಸಮರ್ಪಣೆಯಾಗಿದೆ. ಗಂಗಾ ನದಿಯ ದಂಡೆಯ ಮೇಲೆ ಇರುವ ಈ ಪುಣ್ಯ ಸ್ಥಳವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಪವಿತ್ರ ಸ್ಥಳವನ್ನು ಪ್ರತಿ ವರ್ಷ ಬರೋಬ್ಬರಿ 21 ಲಕ್ಷ ಜನರು ಭೇಟಿ ನೀಡುತ್ತಾರೆ. ಇತಿಹಾಸ ತೆರೆದು ನೋಡಿದಾಗ ಈ ಸುಂದರ ದೇವಾಲಯವು ಅನೇಕ ಬಾರಿ ಮೋಘಲರ ದಾಳಿಗೆ ಒಳಗಾಗಿದೆ. ಈ ದೇವಸ್ಥಾನವನ್ನು ಕೊನೆಯ ಬಾರಿ ಮರಾಠ ರಾಣಿ “ಅಹಿಲ್ಯ ಬಾಯಿ ಹೊಲ್ಕರ್” 1780 ರಲ್ಲಿ ಮರುನಿರ್ಮಾಣ ಮಾಡಿದ್ದು ಅಂದಿನಿಂದ ಯಾವುದೇ ದಾಳಿಗೆ ಒಳಗಾಗಿಲ್ಲ. 1983 ರವರೆಗೂ ರಾಜ ಮನೆತನ ಈ ದೇವಸ್ಥಾನದ ಜವಾಬ್ದಾರಿ ಹೊತ್ತಿತ್ತು, ಅದಾದ ಮೇಲೆ ಉತ್ತರ ಪ್ರದೇಶ ಸರ್ಕಾರವು ಇದರ ಮಾಲೀಕತ್ವ ವಹಿಸಿದೆ.
5. ಬಸಿಲಿಯ ಆಫ್ ಅವರ್ ಲೇಡಿ ಆಫ್ ಗುಯಡಲುಪೆ – Basilica of our lady of guadalupe

ಈ ಸ್ಥಳವನ್ನು “La villa” ಎಂದು ಕೂಡ ಕರೆಯಲಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಪವಿತ್ರ ಚರ್ಚ್ ಗಳಲ್ಲಿ ಒಂದಾದ ಈ ಸ್ಥಳಕ್ಕೆ ಪ್ರತಿ ವರ್ಷ ಡಿಸೆಂಬರ್ 12 ರಂದು ಬರೋಬ್ಬರಿ 20 ಲಕ್ಷ ಜನರು ಸೇರುತ್ತಾರೆ. ಮೆಕ್ಸಿಕೋ ದೇಶದಲ್ಲಿ ಇರುವ ಈ ಸ್ಥಳದಲ್ಲಿ “ವರ್ಜಿನ್ ಮೇರಿ” ಎನ್ನುವ ಕ್ರಿಶ್ಚಿಯನ್ ದೇವತೆ ಇದ್ದು ಅವಳನ್ನು ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಕ್ಯಾಥೊಲಿಕ್ ಕ್ರಿಶ್ಚಿಯನ್ ಜನರು ಬರುತ್ತಾರೆ.
6. ನಾಟ್ರೆ ಡಮ್ ಕೆತೆಡ್ರಾಲ್ – Notre Dame Cathedral

“ಫ್ರೆಂಚ್ ಗೋತಿಕ್” ವಾಸ್ತುಶಿಲ್ಪದಿಂದ ನಿರ್ಮಾಣವಾಗಿರುವ ಈ ಚರ್ಚ್ ಪ್ಯಾರಿಸ್ ನಗರದಲ್ಲಿ ಇದ್ದು ಇದು ಕೂಡ ಕ್ರಿಶ್ಚಿಯನ್ ದೇವತೆ ““ವರ್ಜಿನ್ ಮೇರಿ” ಗಾಗಿ ನಿರ್ಮಾಣವಾದ ಚರ್ಚ್. 1345 ರಲ್ಲಿ ನಿರ್ಮಾಣವಾದ ಈ ಚರ್ಚ್ ಒಳಗಡೆ ಬೃಹತ್ ಗಂಟೆಗಳು ಹಾಗು ಪ್ರತಿಮೆಗಳಿದ್ದು ಪ್ರತಿ ವರ್ಷ 14 ಲಕ್ಷ ಜನರು ಈ ಸುಂದರ ಚರ್ಚ್ ಒಳಗೆ ಬೈಬಲ್ ಓದುವ ಮೂಲಕ ಮೇರಿ ದೇವತೆಗೆ ತಮ್ಮ ಪ್ರಾರ್ಥನೆ ಸಲ್ಲಿಸಲು ಪ್ರಪಂಚದ ಮೂಲೆ ಮೂಲೆಯಿಂದ ಬರುತ್ತಾರೆ.
7. ಕಿಯೋಮಿಜು ದೇರ ದೇವಸ್ಥಾನ – Kiyomizu-dera Temple

ಜಪಾನ್ ದೇಶದ “Kyoto” ನಗರದಲ್ಲಿ ಇರುವ ಈ ಬುದ್ಧ ಧರ್ಮದ ದೇವಸ್ಥಾನವು 778ನೆ ವರ್ಷದಲ್ಲಿ ಬೃಹತ್ ಕಾಡಿನ ಮಧ್ಯೆ ಕಾಣಿಸಿಕೊಂಡಿತ್ತು. ನಂತರ ಇದಕ್ಕೆ 1633 ರಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. 2007 ರವರೆಗೂ ಪ್ರಪಂಚದ 7 ಅದ್ಬುತಗಳ ಪಟ್ಟಿಯಲ್ಲಿ ಈ ಸ್ಥಳವು ಕೂಡ ಒಂದಾಗಿತ್ತು. ಈ ಪವಿತ್ರ ಬೌದ್ದ ಧರ್ಮದ ಸ್ಥಳಕ್ಕೆ ಪ್ರತಿ ವರ್ಷ ಬರೋಬ್ಬರಿ 10 ಲಕ್ಷ ಜನರು ಭೇಟಿ ನೀಡುತ್ತಾರೆ.
Follow Karunadu Today for more Interesting Facts & Stories.
Click here to Join Our Whatsapp Group