ನಮಗೆಲ್ಲ ಗೊತ್ತಿರುವ ಹಾಗೆ ಮನುಷ್ಯನು ತುಂಬಾ ಬುದ್ದಿವಂತ. ತನಗೆ ಬೇಕಾಗಿರುವುದನ್ನು ಪಡೆಯಲು ಅದೆಷ್ಟೇ ಕಷ್ಟವಾದರೂ ಕೂಡ ಕೈಬಿಡದೆ ಪಡೆದೇ ತಿರುತ್ತಾನೆ. ಇಂದು ನಮ್ಮೆಲ್ಲರ ಜೀವನ ಸಂಪೂರ್ಣವಾಗಿ ವಿದ್ಯುತ್ ಮೇಲೆ ಅವಲಂಬಿತವಾಗಿದೆ. ವಿದ್ಯುತ್ ಇಲ್ಲದೆ ಒಂದು ದಿನವು ಕೂಡ ಬದುಕಲು ಸಾದ್ಯವಿಲ್ಲ. ದಿನಗಳು ಕಳೆದಂತೆ ವಿದ್ಯುತ್ ಬೇಡಿಕೆ ಹೆಚ್ಚಾದಾಗ ಅದರ ಉತ್ಪಾದನೆಗೆ ಸಾಕಷ್ಟು ಕಷ್ಟ ಪಡಬೇಕಾಯಿತು. ಆಗ ವಿದ್ಯುತ್ ಉತ್ಪಾದನೆ ಮಾಡಲು ಪರ್ಯಾಯ ವ್ಯವಸ್ಥೆ ಮಾಡಲು ಮನುಷ್ಯನು ತೀರ್ಮಾನಿಸಿದ. ಆಗ ಹಗಲಿರುಳು ವಿಜ್ಞಾನಿಗಳು ಶ್ರಮಿಸಿ ನೀರಿನಿಂದ ವಿದ್ಯುತ್ ತಯಾರಿಸಲು ತೀರ್ಮಾನಿಸಿದರು. ಆಗ ವಿಜ್ಞಾನಿಗಳ ತಲೆಯಲ್ಲಿ ಬಂದ ವಿಚಾರವೇ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ನಿರ್ಮಿಸುವುದು.ಆಣೆಕಟ್ಟುಗಳನ್ನು ನಿರ್ಮಿಸುವುದರಿಂದ ರಭಸವಾಗಿ ನೀರು ಹರಿಯುತ್ತದೆ ಇದರಿಂದ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಪ್ರಕ್ರಿಯೆ ಪತ್ತೆಹಚ್ಚಿದ ಮೇಲೆ ಪ್ರಪಂಚದ ಎಲ್ಲಾ ದೇಶಗಳು ಇದನ್ನೇ ಪಾಲಿಸಲು ತಮ್ಮ ತಮ್ಮ ದೇಶಗಳಲ್ಲಿ ಇರುವ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ನಿರ್ಮಿಸಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲು ಶುರು ಮಾಡಿದರು. ಹೀಗೆ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ನಿರ್ಮಿಸಲು ಶುರು ಮಾಡಿದ ಮೇಲೆ ದೊಡ್ಡ ದೊಡ್ಡ ಸವಾಲುಗಳನ್ನು ಕೆಲವು ದೇಶಗಳು ಎದುರಿಸಿದವು. ಅದೇನೆಂದರೆ ಕೆಲವು ಆಣೆಕಟ್ಟುಗಳು ನದಿಯ ನೀರಿನ ತೀವ್ರತೆ ತಾಳಲಾರದೆ ಒಡೆದುಹೋದವು. ಏಕೆಂದರೆ ನಮಗೆಲ್ಲ ಗೊತ್ತಿರುವ ಹಾಗೆ ಪ್ರಕೃತಿಗೆ ಸವಾಲಾಗಿ ಮನುಷ್ಯನು ನಿಲ್ಲಲು ಸಾದ್ಯವಿಲ್ಲ. ಹಾಗಂತ ಮನುಷ್ಯನು ಹೆದರಿ ಹಿಂದೆ ಸರಿಯಲೂ ಇಲ್ಲ. ಬೃಹತ್ ಆಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಿಸಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲು ನಿರ್ಧಾರ ಮಾಡಿದ. ಹೀಗೆ ಪ್ರಪಂಚದೆಲ್ಲೆಡೆ ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುತ್ತಿರುವ ಮನುಷ್ಯನು ಪ್ರಕೃತಿಗೆ ಸವಾಲು ಹಾಕಿ ಗೆದ್ದಿದ್ದಾನೆ. ಇಂದು ನಿಮಗೆ ಪ್ರಪಂಚದೆಲ್ಲೆಡೆ ಈ ರೀತಿ ಪ್ರಕೃತಿಗೆ ಸವಾಲು ಹಾಕಿ ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿರುವ ಕುರಿತಾದ ಮಾಹಿತಿ ನೀಡುತ್ತೇವೆ.

1) ಹಿರಾಕುಡ್ ಆಣೆಕಟ್ಟು – Hirakud dam

ಮಹಾನದಿಗೆ ಅಡ್ಡಲಾಗಿ ಒರಿಸ್ಸಾದ ಸಂಬಾಲ್ಪುರ್ ನಿಂದ 15 ಕಿಲೋಮೀಟರ್ ದೂರದಲ್ಲಿ ನಿರ್ಮಿಸಿರುವ ಈ ಆಣೆಕಟ್ಟು ಬರೋಬ್ಬರಿ 25.8 ಕಿಲೋಮೀಟರ್ ಉದ್ದವಿದೆ. ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ನಿರ್ಮಿಸಲು ತೀರ್ಮಾನಿಸಿದ ಈ ಆಣೆಕಟ್ಟಿಗೆ ಭಾರತ ಕಂಡ ಸರ್ವ ಶ್ರೇಷ್ಠ ಇಂಜಿನಿಯರ್ “ಸರ್.ಎಂ.ವಿಶ್ವೇಶ್ವರಯ್ಯ” ಅವರು ಉಪಾಯ ಹಾಕಿದ್ದರು. ನಮ್ಮ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಈ ಆಣೆಕಟ್ಟು ಬರೋಬ್ಬರಿ 61 ಮೀಟರ್ ಎತ್ತರವಿದೆ. ಈ ಆಣೆಕಟ್ಟಿನಿಂದ ಬರೋಬ್ಬರಿ 347.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಒರಿಸ್ಸಾದ ಕರಾವಳಿ ತೀರದ ನಗರಗಳು ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿತ್ತು ಆದರೆ ಈ ಆಣೆಕಟ್ಟು ನಿರ್ಮಾಣವಾದ ಮೇಲೆ ಪ್ರವಾಹವಾಗುವುದು ಸಂಪೂರ್ಣವಾಗಿ ನಿಂತಿದ್ದು ಒರಿಸ್ಸಾ ರಾಜ್ಯಕ್ಕೆ ಇದರಿಂದ ಸಾಕಷ್ಟು ಲಾಭವಾಗಿದೆ.

2) ಒರೋವಿಲ್ಲೇ ಆಣೆಕಟ್ಟು – Oroville dam

ಅಮೇರಿಕದ ಕ್ಯಾಲಿಫೋರ್ನಿಯ ನಗರದ ಪಶ್ಚಿಮದಲ್ಲಿ ಇರುವ ಒರೋವಿಲ್ಲೇ ಬಳಿ ಇರುವ ಈ ಆಣೆಕಟ್ಟು 235 ಮೀಟರ್ ಎತ್ತರವಿದ್ದು ಅಮೆರಿಕದಲ್ಲಿಯೇ ಅತ್ಯಂತ ಎತ್ತರದ ಆಣೆಕಟ್ಟು ಇದಾಗಿದೆ. ಮಾನವ ನಿರ್ಮಿತ “ಒರೋವಿಲ್ಲೇ ಸರೋವರಕ್ಕೆ” ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟನ್ನು 1961 ರಲ್ಲಿ ನಿರ್ಮಿಸಲು ಶುರು ಮಾಡಿತು ಹಾಗು 1968 ರಲ್ಲಿ ಲೋಕಾರ್ಪಣೆ ಮಾಡಲಾಯಿತು. 1.1 ಬಿಲಿಯನ್ ಅಮೇರಿಕನ್ ಡಾಲರ್ ಹಣ ಖರ್ಚು ಮಾಡಿ ನಿರ್ಮಿಸಿರುವ ಈ ಆಣೆಕಟ್ಟಿನಿಂದ 819 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.

3) ಕರೀಬಾ ಆಣೆಕಟ್ಟು – Kariba Dam

ಜಿಂಬಾಬ್ವೆ ದೇಶದಲ್ಲಿ ಇರುವ ಕರೀಬಾ ಸರೋವರಕ್ಕೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಆಣೆಕಟ್ಟಿನಲ್ಲಿ ಒಂದಾಗಿದೆ. 128 ಮೀಟರ್ ಎತ್ತರ ಹಾಗು 617 ಮೀಟರ್ ಉದ್ದವಿರುವ ಈ ಆಣೆಕಟ್ಟು ಬರೋಬ್ಬರಿ 1470 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಜಿಂಬಾಬ್ವೆ ದೇಶಕ್ಕೆ ಬೇಕಾಗಿರುವ ಶೇಕಡ 60 ರಷ್ಟು ವಿದ್ಯುತ್ ಇದೊಂದೇ ಆಣೆಕಟ್ಟಿನಿಂದ ಸಿಗುತ್ತದೆ.

4) ಮಂಗ್ಲಾ ಆಣೆಕಟ್ಟು – Mangla Dam

ಪಾಕಿಸ್ತಾನದ ಮಿರಪುರ್ ಜಿಲ್ಲೆಯ ಜೆಲುಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು ಪ್ರಪಂಚದಲ್ಲಿಯೇ 7ನೆಯ ದೊಡ್ಡ ಆಣೆಕಟ್ಟಾಗಿದೆ. ಈ ಆಣೆಕಟ್ಟನ್ನು ನಿರ್ಮಿಸಲು “ವರ್ಲ್ಡ್ ಬ್ಯಾಂಕ್” 15.5 ಬಿಲಿಯನ್ ಅಮೇರಿಕನ್ ಡಾಲರ್ ಹಣ ನೆರವು ನೀಡಿದ್ದು 1961 ರಿಂದ 1965ರ ಮದ್ಯೆ ಇದನ್ನು ನಿರ್ಮಿಸಲಾಗಿದೆ. 147 ಮೀಟರ್ ಎತ್ತರ ಹಾಗು 3140 ಮೀಟರ್ ಉದ್ದವಿರುವ ಈ ಆಣೆಕಟ್ಟಿನಿಂದ 1500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

5) ಜಿನ್ಪಿಂಗ್ ಆಣೆಕಟ್ಟು – Jinping Dam

ಚೀನಾದ ಯಲಾಂಗ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು ಬರೋಬ್ಬರಿ 305 ಮೀಟರ್ ಎತ್ತರವಿದ್ದು ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಆಣೆಕಟ್ಟು ಇದಾಗಿದೆ. 568 ಮೀಟರ್ ಉದ್ದದ ಕಮಾನು(arch) ಹೊಂದಿರುವ ಈ ಆಣೆಕಟ್ಟು ಬರೋಬ್ಬರಿ 3600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. 2005 ರಲ್ಲಿ ನಿರ್ಮಿಸಲು ಪ್ರಾರಂಭ ಮಾಡಲಾದ ಈ ಆಣೆಕಟ್ಟು 2014 ರಲ್ಲಿ ಸಂಪೂರ್ಣಗೊಂಡಿತು.

6) ಗುರಿ ಆಣೆಕಟ್ಟು – Guri Dam

ವೆನಿಜುವೆಲ ದೇಶದ ಕರೋನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಆಣೆಕಟ್ಟುಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. 162 ಮೀಟರ್ ಎತ್ತರ ಹಾಗು 7426 ಮೀಟರ್ ಉದ್ದವಿರುವ ಈ ಆಣೆಕಟ್ಟು ವರ್ಷಕ್ಕೆ 47 ಸಾವಿರ ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.

7) ಫೋರ್ಟ್ ಪೆಕ್ ಆಣೆಕಟ್ಟು – Fort peck Dam

ಅಮೇರಿಕಾದ ಮಿಸೌರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು 76 ಮೀಟರ್ ಎತ್ತರ ಹಾಗು 6409 ಮೀಟರ್ ಉದ್ದವಿದೆ. ಅಮೇರಿಕಾದ ಸೇನೆ ನಿರ್ಮಿಸಿರುವ ಈ ಆಣೆಕಟ್ಟು 185 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ನೀರು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಆಣೆಕಟ್ಟುಗಳ ಸಾಲಲ್ಲಿ ಇದು ಎರಡನೆಯ ಸ್ಥಾನದಲ್ಲಿದೆ.

8) ತ್ರೀ ಜಾರ್ಜ್ ಆಣೆಕಟ್ಟು – Three George Dam

ಚೀನಾದ “ಯಂಗ್ತೆಜ್ ನದಿಗೆ” ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಆಣೆಕಟ್ಟು. 181 ಮೀಟರ್ ಎತ್ತರ ಹಾಗು 2335 ಮೀಟರ್ ಉದ್ದವಿರುವ ಈ ಆಣೆಕಟ್ಟು 2014 ರಲ್ಲಿ 98.8 ಟೆಟ್ರಾವ್ಯಾಟ್ ವಿದ್ಯುತ್ತ್ ಉತ್ಪಾದಿಸುವ ಮೂಲಕ ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದ್ಯುತ್ತ್ ಉತ್ಪಾದಿಸುವ ಆಣೆಕಟ್ಟು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

9) ಇಟೈಪು ಆಣೆಕಟ್ಟು – Itaipu Dam

ಬ್ರೆಜಿಲ್ ಮತ್ತು ಪರುಗ್ವೆ ದೇಶದ ಗಡಿಯಲ್ಲಿರುವ ಪರಾನ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಆಣೆಕಟ್ಟು 196 ಮೀಟರ್ ಎತ್ತರವಿದ್ದು 7919 ಮೀಟರ್ ಉದ್ದವಿದೆ. 2016 ರಲ್ಲಿ ಬರೋಬ್ಬರಿ 103,098,366 ಮೆಗಾವ್ಯಾಟ್ ವಿದ್ಯುತ್ತ್ ಉತ್ಪಾದಿಸುವ ಮೂಲಕ ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಆಣೆಕಟ್ಟು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೇ ತರಹ ಪ್ರಪಂಚದಲ್ಲಿ ಇನ್ನೂ ಅನೇಕ ಆಣೆಕಟ್ಟುಗಳು ಇದ್ದು ಅವುಗಳಿಂದ ಸಾಕಷ್ಟು ಲಾಭವಾಗುತ್ತಿದೆ. ಮಾನವ ನಿರ್ಮಿತ ಈ ಆಣೆಕಟ್ಟುಗಳಿಂದ ಕೇವಲ ವಿದ್ಯುತ್ತ್ ಉತ್ಪಾದನೆ ಮಾತ್ರವಲ್ಲದೆ ಪ್ರವಾಹವನ್ನು ಕೂಡ ತಡೆಗಟ್ಟುವುದರಿಂದ ಆಗಬಹುದಾದ ವಿನಾಶವನ್ನು ಕೂಡ ತಡೆಯಬಹುದಾಗಿದೆ.

Follow Karunadu Today for more Interesting Facts & Stories. 

Click here to Join Our Whatsapp Group