
ಅದೊಂದು ಕಾಲವಿತ್ತು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕೆಂದರೆ ನಡೆದುಕೊಂಡೇ ಹೋಗಬೇಕಿತ್ತು. ಅದೇನೇ ತುರ್ತು ಪರಿಸ್ಥಿತಿ ಇದ್ದರೂ ಕೂಡ ಬೇರೆ ದಾರಿಯಿಲ್ಲದೆ ನಡೆದುಕೊಂಡೇ ಹೋಗಬೇಕಿತ್ತು. ಇದರಿಂದ ತುಂಬಾ ತೊಂದರೆಗಳನ್ನು ಎದುರಿಸಲು ಶುರು ಮಾಡಿದ ಮನುಷ್ಯನು ವರ್ಷಗಳು ಕಳೆದಂತೆ ತನ್ನ ಬುದ್ದಿ ಶಕ್ತಿ ಬಳಸಿ ಕುದುರೆಗಳನ್ನು ಬಳಸತೊಡಗಿದ ಆನಂತರ ಸೈಕಲ್, ಗಾಡಿ ಹೀಗೆ ಅನೇಕ ವಾಹನಗಳನ್ನು ತನ್ನ ಸಂಚಾರ ವ್ಯವಸ್ಥೆಗೆ ಉಪಯೋಗವಾಗಲಿ ಎಂದು ಕಂಡುಹಿಡಿದುಕೊಂಡ. ಹೀಗೆ ಕಾಲಗಳು ಉರುಳಿದಂತೆ ಹೊಸ ಹೊಸ ತಂತ್ರಜ್ಞಾನ ಬಳಸುತ್ತಾ ಹೋದ ಮನುಷ್ಯನು ಆದಷ್ಟು ಬೇಗ ಬೇರೆ ಸ್ಥಳಗಳಿಗೆ ತಲುಪುವ ಹಾಗೆ ಸಂಚಾರ ವ್ಯವಸ್ಥೆ ಮಾಡಿಕೊಂಡ. ಇದರ ಪರಿಣಾಮವಾಗಿಯೇ ಇಂದು ನಾವು ನೋಡುತ್ತಿರುವ ವಿಮಾನ ಹಾಗೂ ರೈಲುಗಳು. ಅತಿ ಕಡಿಮೆ ಸಮಯದಲ್ಲಿ ದೂರದ ಸ್ಥಳಗಳನ್ನು ಈ ಸಾರಿಗೆ ವ್ಯವಸ್ಥೆಯ ಮೂಲಕ ತಲುಪಬಹುದಾಗಿದೆ.ಪ್ರಪಂಚದ ಅನೇಕ ದೇಶಗಳು ತಮ್ಮ ಬಳಿ ಇರುವ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ವೇಗವಾಗಿ ಚಲಿಸುವ ರೈಲುಗಳನ್ನು ಕಂಡು ಹಿಡಿದುಕೊಂಡಿದ್ದಾರೆ. ಇಂದು ನಿಮಗೆ ಈ ರೀತಿ ವೇಗವಾಗಿ ಚಲಿಸುವ ರೈಲುಗಳಲ್ಲಿ ಕೆಲ ರೈಲುಗಳನ್ನು ತಿಳಿಸುತ್ತೇವೆ. ಆ ರೈಲುಗಳು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲುಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ.
1) THSR 700T

ತೈವಾನ್ ದೇಶದ “nangang ನಿಂದ zuoying” ಮಧ್ಯೆ ಚಲಿಸುವ ಈ ರೈಲು ಗಂಟೆಗೆ ಬರೋಬ್ಬರಿ 300 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಜಪಾನಿನ ಪ್ರಸಿದ್ದ ಕಂಪನಿಗಳಾದ “Kawasaki heavy industry, Nippon sharyo ಮತ್ತು hitachi” ಜೊತೆಗೂಡಿ ಇದನ್ನು ತಯಾರಿಸಿದ್ದು ತೈವಾನ್ ದೇಶಕ್ಕೆ ಜಪಾನ್ ಮಾರಿದೆ. ಈ ರೈಲಿನ ತೂಕ ಬರೋಬ್ಬರಿ 550 ಟನ್ ಇದ್ದು 13,760 ಹಾರ್ಸ್ ಪವರ್ ಸಾಮರ್ಥ್ಯ ಹೊಂದಿದೆ. ಅಕಸ್ಮಾತ್ ಈ ರೈಲು ಆಪಘಾತಕ್ಕೀಡಾದಾಗ ಅದಕ್ಕೆ ಯಾವುದೇ ತೊಂದರೆ ಆಗಬಾರದೆಂದು “energy absorbing system” ಅಳವಡಿಸಲಾಗಿದೆ. ಇದರಿಂದ ರೈಲಿನ ಒಳಗೆ ಇರುವ ಪ್ರಯಾಣಿಕರಿಗೂ ಕೂಡ ತೊಂದರೆ ಆಗುವುದಿಲ್ಲ. ತೈವಾನ್ ದೇಶದ 8 ನಗರಗಳನ್ನು ಹಾಡು ಹೋಗುವ ಈ ರೈಲು ದಿನಕ್ಕೆ 3 ಲಕ್ಷ ಜನರನ್ನು ಹೊತ್ತೋಯ್ಯುತ್ತದೆ.
2) ETR 500 frecciarossa

ಇಟಲಿ ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ಈ ರೈಲು ಗಂಟೆಗೆ 360 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ರೈಲಿಗೆ “frecciarossa” ಎಂದು ಹೆಸರಿಡಲು ಕಾರಣವಿದೆ. “frecciarossa” ಎಂದರೆ ಬಾಣ, ಅದು ಕೂಡ ಗಂಟೆಗೆ 360 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇಟಲಿಯಲ್ಲಿ ಬಿಲ್ಲು ಬಾಣದ ಆಟವು ಸಾಕಷ್ಟು ಪ್ರಸಿದ್ದಿ ಹೊಂದಿರುವುದರಿಂದ ಈ ರೈಲಿಗೆ ಈ ರೀತಿ ಹೆಸರಿಡಲಾಗಿದೆ. ದಿನಕ್ಕೆ 75 ನಿಲ್ದಾಣವನ್ನು ತಲುಪುವ ಸಾಮರ್ಥ್ಯ ಈ ರೈಲಿಗಿದ್ದು ಕೆಲವೊಮ್ಮೆ 360 ಕಿಲೋಮೀಟರ್ ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲು ಹೊಂದಿದೆ.
3) Alstom euroduplex

ಡಬಲ್ ಡೆಕ್ಕರ್ ಹೊಂದಿರುವ ಈ ರೈಲನ್ನು “Alstom” ಎನ್ನುವ ಕಂಪನಿಯು ತಯಾರಿಸಿದೆ. 200.19 ಮೀಟರ್ ಉದ್ದ 2.90 ಮೀಟರ್ ಅಗಲ ಹಾಗು 4320 ಮೀಟರ್ ಎತ್ತರವಿರುವ ಈ ರೈಲಿನಲ್ಲಿ 533 ಆಸನಗಳಿವೆ. ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲಿಗಿದ್ದು ಇದರ ತೂಕವು 399 ಟನ್ ಇದೆ. 2011 ರಿಂದ ಕಾರ್ಯನಿರ್ವಹಿಸುತ್ತಿರುವ ಈ ರೈಲು ಯೂರೋಪಿಯನ್ ದೇಶಗಳಾದ ಫ್ರಾನ್ಸ್, ಜರ್ಮನಿ,ಸ್ವಿಜ್ಜರ್ಲ್ಯಾಂಡ್, ಸ್ಪೇನ್ ಮತ್ತು ಲಕ್ಸಂಬರ್ಗ್ ಮದ್ಯೆ ಚಲಿಸುತ್ತದೆ.
4) Shinkasen

ಈ “ಬುಲೆಟ್ ರೈಲು” ಜಪಾನ್ ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲು. 50 ವರ್ಷಗಳ ಇತಿಹಾಸವಿರುವ ಈ ರೈಲು ಇದುವರೆಗೂ 10 ಬಿಲಿಯನ್ ಪ್ರಯಾಣಿಕರನ್ನು ಹೊತ್ತು ಸಾಗಿದೆ. ಅಚ್ಚರಿ ಏನೆಂದರೆ ಇದುವರೆಗೂ ಒಂದೇ ಒಂದು ಅಪಘಾತ ಈ ರೈಲಿಗೆ ಆಗಿಲ್ಲ. ಜಪಾನಿನ ಪ್ರಮುಖ ನಗರಗಳನ್ನು ತಲುಪುವ ಈ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
5) AVE CLASS 102

ಸ್ಪೇನ್ ದೇಶದ ಪ್ರಮುಖ ನಗರಗಳಾದ “ಮೇಡ್ರಿಡ್ ಮತ್ತು ಬಾರ್ಸಿಲೋನಾ” ಮದ್ಯೆ ಚಲಿಸುವ ಈ ರೈಲು ಗಂಟೆಗೆ 349 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಎರಡೂ ನಗರಗಳ ಮದ್ಯೆ ಕಾರಿನಲ್ಲಿ ಚಲಿಸಿದರೆ ಬರೋಬ್ಬರಿ 6 ಗಂಟೆಗಳು ಬೇಕು ಆದರೆ ಈ ರೈಲಿನಲ್ಲಿ ಹೋದರೆ ಕೇವಲ 3 ಗಂಟೆಯಲ್ಲಿ ತಲುಪಬಹುದು. 2005 ರಿಂದ ಕಾರ್ಯನಿರ್ವಹಿಸುತ್ತಿರುವ ಈ ರೈಲಿನ ಮುಂಬಾಗವು ಬಾತುಕೋಳಿಯ ಆಕಾರದಲ್ಲಿದ್ದು ಸ್ಪೇನ್ ದೇಶದ ಬಾಷೆಯಲ್ಲಿ ಇದಕ್ಕೆ “ಪಟೊ” ಎಂದು ಕರೆಯುತ್ತಾರೆ.
6) Harmony crh 380a

ಚೀನಾದ ಈ ಎಲೆಕ್ಟ್ರಿಕ್ ರೈಲನ್ನು “ಸಿಯೆಸ್ಆರ್ ಕಾರ್ಪೊರೇಷನ್ ಲಿಮಿಟೆಡ್” ಕಂಪನಿಯು ಸಿದ್ದಗೊಳಿಸಿದೆ. 2010 ರಿಂದ ಕಾರ್ಯನಿರ್ವಹಿಸುತ್ತಿರುವ ಈ ರೈಲು ಗಂಟೆಗೆ 380 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ರೈಲಿನ ದೇಹವು “ಅಲ್ಯುಮೀನಿಯಂ” ನಿಂದ ಮಾಡಲಾಗಿದ್ದು ಇದರ ಒಳಗೆ “ವಿಐಪಿ” ಗಳಿಗಾಗಿ ವಿಶೇಷವಾದ ಬೋಗಿ ಇರಿಸಲಾಗಿದೆ.ಈ ವಿಐಪಿ ಬೋಗಿಯಲ್ಲಿ ವಿಶೇಷ ಸೌಲಭ್ಯಗಳಿದ್ದು ರೈಲು ಚಲಿಸುವ ವೇಳೆ ಮಳೆ ಬಂದರೆ ಹೊರಗಿನ ಸುಂದರವಾದ ಪ್ರಕೃತಿಯನ್ನು ನೋಡಲು ಅಡ್ಡಿಯಾಗದಿರಲಿ ಎಂದು ರೈಲಿನ ಕಿಟಕಿಗೆ ಕಾರಿಗೆ ಇರುವ ಹಾಗೆ “ವೈಪರ್” ಗಳನ್ನು ಇಡಲಾಗಿದೆ. ಪ್ರಪಂಚದಲ್ಲಿ ಅತಿ ವೇಗವಾಗಿ ಚಲಿಸುವ ರೈಲುಗಳ ಪಟ್ಟಿಯಲ್ಲಿ ಇರುವ ಈ ರೈಲು ಚೀನಾದ ಪ್ರಮುಖ ನಗರಗಳ ಮದ್ಯೆ ಚಲಿಸುತ್ತದೆ.
7) Shanghai maglev

ಚೀನಾದ ಪ್ರಮುಖ ನಗರವಾದ “ಶಂಗೈ”ನ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ ಹಾಗು ಲೊಂಗ್ಯಂಗ್ ರಸ್ತೆ ನಿಲ್ಧಾಣದ ಮದ್ಯೆ ಚಲಿಸುವ ಈ ರೈಲು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲು. ಗಂಟೆಗೆ 430 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ರೈಲು ಕೇವಲ 4 ನಿಮಿಷದಲ್ಲಿ ಈ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಕೇವಲ 350 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದರೆ ಸಾಕು ಪ್ರತಿ 15 ನಿಮಿಷಕ್ಕೊಮ್ಮೆ “ಶಂಗೈ”ನ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ ಹಾಗು ಲೊಂಗ್ಯಂಗ್ ರಸ್ತೆ ನಿಲ್ಧಾಣದ ಮದ್ಯೆ ಈ ರೈಲಿನಲ್ಲಿ ಚಲಿಸಬಹುದು.
ಪ್ರಪಂಚದಲ್ಲಿ ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಅದಕ್ಕೆ ಅನುಗುಣವಾಗಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಈ ರೈಲುಗಳಷ್ಟೇ ಅಲ್ಲದೆ ಇನ್ನೂ ವೇಗವಾಗಿ ಚಲಿಸುವ ರೈಲನ್ನು ಅಭಿವೃದ್ದಿ ಹೊಂದಿರುವ ದೇಶಗಳು ಕಂಡು ಹಿಡಿಯುತ್ತಿವೆ. ಒಟ್ಟಿನಲ್ಲಿ ಮನುಷ್ಯನಿಗೆ ಕಡಿಮೆ ಸಮಯದಲ್ಲಿ ತಾನು ತಲುಪಬೇಕಾದ ಸ್ಥಳವನ್ನು ತಲುಪಿದರೆ ಸಾಕು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.
Follow Karunadu Today for more Interesting Facts & Stories.
Click here to Join Our Whatsapp Group