ಪ್ರಾಚೀನ ಈಜಿಪ್ಟಿಯನ್ನರ ಕುರಿತು ಅನೇಕ ವರ್ಷಗಳಿಂದ ಪ್ರಪಂಚದ ನಾನಾ ದೇಶದ ವಿಜ್ಞಾನಿಗಳು ಸಂಶೋದನೆ ನಡೆಸುತ್ತಿರುವ ವಿಷಯವು ನಮಗೆ ತಿಳಿದೇ ಇದೆ. ಹುಡುಕಿದಷ್ಟು ಹೆಚ್ಚೆಚ್ಚು ವಿಷಯಗಳು ಅವರ ಕುರಿತು ಸಿಗುತ್ತಲೇ ಇವೆ. ಇಲ್ಲಿಯವರೆಗು ಅವರ ಕುರಿತು ಅನೇಕ ಸಂಗತಿಗಳು ಸಿಕ್ಕಿದ್ದು ಇಂದು ನಿಮಗೆ ಅವುಗಳ ಪೈಕಿ 10 ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಸುತ್ತೇವೆ.

1) ಪುರಾತನ ಈಜಿಪ್ಟಿಯನ್ನರ ಕಾಲದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದವು. ಯಾವುದೇ ಬೇಧ ಭಾವ ಇಲ್ಲದೆ ಇಬ್ಬರು ಸಮಾನವಾಗಿ ಇರುತ್ತಿದ್ದರು. ಕೆಲ ವೃತ್ತಿಯನ್ನು ಪುರುಷರು ಮಾಡಿದರೆ ಮತ್ತೆ ಕೆಲವು ವೃತ್ತಿಯನ್ನು ಮಹಿಳೆಯರೇ ಮಾಡಬೇಕಿತ್ತು. ಉದಾಹರಣೆಗೆ ಹಾಡನ್ನು ಹಾಡುವುದು, ನೃತ್ಯ ಮಾಡುವುದು. ಹೀಗೆ ಅನೇಕ ಕೆಲಸಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗಿತ್ತು.

2) ಹೇಗೆ ನಾವುಗಳು ಸುಂದರವಾಗಿ ಕಾಣುವ ಸಲುವಾಗಿ ಅನೇಕ ಸೌಂದರ್ಯ ವಸ್ತುಗಳನ್ನು ಬಳಸುತ್ತೇವೆ ಅದೇ ರೀತಿ ಪುರಾತನ ಈಜಿಪ್ಟಿಯನ್ನರು ತಮ್ಮ ಸೌಂದರ್ಯವನ್ನು ವೃದ್ದಿಗೊಳಿಸಿಕೊಳ್ಳುವ ಸಲುವಾಗಿ ಅನೇಕ ವಸ್ತುಗಳನ್ನು ಬಳಸುತ್ತಿದ್ದರು. ತಮ್ಮ ಸೌಂದರ್ಯವನ್ನು ವೃದ್ದಿಗೊಳಿಸುವುದರಿಂದ ಶಕ್ತಿ ಬರುತ್ತದೆ ಎನ್ನುವ ನಂಬಿಕೆ ಕೂಡ ಅವರಿಗಿತ್ತು.

3) ಹೇಗೆ ನಮ್ಮ ದೇಶದಲ್ಲಿ ಹಾವು ಏಣಿ ಆಟ ಹಾಗು ಪಗಡೆ ಆಟಗಳು ಸಾಕಷ್ಟು ಪ್ರಸಿದ್ದಿಯಾಗಿವೆ ಅದೇ ರೀತಿ ಪುರಾತನ ಈಜಿಪ್ಟಿಯನ್ನರ ಕಾಲದಲ್ಲೂ “Senet ಮತ್ತು Mehen” ಎನ್ನುವ ಎರಡು ಆಟಗಳು ಸಾಕಷ್ಟು ಪ್ರಸಿದ್ದಿಯಾಗಿದ್ದವು. ಈ ಆಟಗಳು 5000 ವರ್ಷಗಳಷ್ಟು ಹಳೆಯದ್ದಾಗಿದೆ. ಅಕಸ್ಮಾತ್ ಯಾವುದಾದರು ವ್ಯಕ್ತಿಯು ಸತ್ತರೆ ಆತನ ಮಮ್ಮಿಯ ಜೊತೆಗೆ ಈ ಆಟವನ್ನು ಆಡುವ board ಗಳನ್ನು ಕೂಡ ಜೊತೆಯಲ್ಲಿ ಇಡಲಾಗುತ್ತಿತ್ತು.

4) ತಮ್ಮ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪುರಾತನ ಈಜಿಪ್ಟಿಯನ್ನರು Tooth brush ಗಳನ್ನು ಬಳಸುತ್ತಿದ್ದರು. ಮೊಟ್ಟೆಯ ಮೇಲಿನ ಪದರದಿಂದ Tooth paste ಅನ್ನು ತಯಾರಿಸಿ ಅದನ್ನು brush ಗಳ ಮೇಲೆ ಹಾಕಿಕೊಂಡು ಉಜ್ಜುತ್ತಿದ್ದರು. ಇದರ ಕುರಿತ ಅನೇಕ ಕುರುಹುಗಳು ಕೂಡ ಸಿಕ್ಕಿವೆ.

5) ಪುರಾತನ ಈಜಿಪ್ಟಿಯನ್ನರ ಕುರಿತು ತಿಳಿದುಕೊಳ್ಳಲು ಸಹಾಯ ಮಾಡಿದ ಕಲ್ಲೆಂದರೆ ಅದು Rosetta ಕಲ್ಲು. ಇದನ್ನು ಮೊದಲ ಬಾರಿಗೆ 1799 ರಲ್ಲಿ ಪತ್ತೆ ಮಾಡಲಾಯಿತು. ಇದರ ಮೇಲೆ ಬರೆದಿರುವ ಅಕ್ಷರಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಇದರ ಸಹಾಯದಿಂದಲೇ ಪುರಾತನ ಈಜಿಪ್ಟಿಯನ್ನರ ಕುರಿತ ಅನೇಕ ಮಾಹಿತಿ ಜಗತ್ತಿಗೆ ಲಭ್ಯವಾಗಿದೆ.

6) ಇದುವರೆಗು ಸಿಕ್ಕ ಅತ್ಯಂತ ಪ್ರಸಿದ್ದ ಈಜಿಪ್ಟಿಯನ್ ಮಮ್ಮಿಗಳ ಪೈಕಿ “Tutankhamun” ಮಮ್ಮಿ ಪ್ರಸಿದ್ದವಾದದ್ದು. ಈತನು ಒಬ್ಬ ಮಹಾನ್ ರಾಜನಾಗಿದ್ದನು. ಬಂಗಾರದ ಪೆಟ್ಟಿಗೆಯಲ್ಲಿ ಈತನ ಮೃತ ದೇಹವನ್ನು ಇಡಲಾಗಿತ್ತು. ಈ ಪೆಟ್ಟಿಗೆಯು 1923 ರಲ್ಲಿ ಸಿಕ್ಕಿತು. ಬರೋಬ್ಬರಿ 3000 ವರ್ಷಗಳ ಹಿಂದೆ ಈತನ ಮೃತ ದೇಹವನ್ನು ಈ ಪೆಟ್ಟಿಗೆಯ ಒಳಗೆ ಇಡಲಾಗಿತ್ತು.ಗಿರುವುದು. ಈಗ ಈ ಕಲ್ಲನ್ನು ಲಂಡನ್ ನಗರದ “ಬ್ರಿಟಿಷ್ ಮ್ಯೂಸಿಯಂ” ನಲ್ಲಿ ಇಡಲಾಗಿದೆ.

7) ಸತ್ತ ವ್ಯಕ್ತಿಯ ದೇಹದ ಅಂಗಾಂಗಗಳನ್ನು ಹೊರ ತೆಗೆದ ಮೇಲೆ ನಾಲ್ಕು ರೀತಿಯ ಬಾಟಲಿಗಳಲ್ಲಿ ಅವುಗಳನ್ನು ಶೇಖರಿಸಿ ಇಡುತ್ತಿದ್ದರು. ಮೊದಲ ಬಾಟಲಿಯ ಹೆಸರು “Imesty”, ಇದರ ಒಳಗೆ ಪಿತ್ತಕೋಶವನ್ನು ಹಾಕಿಡಲಾಗುತ್ತಿತ್ತು. ಎರಡನೆಯ ಬಾಟಲಿಯ ಹೆಸರು Qebehsenuf, ಈ ಬಾಟಲಿಯ ತಲೆಯು “ಹದ್ದಿನ ತಲೆಯನ್ನು” ಹೊಂದಿತ್ತು. ಇದರ ಒಳಗೆ ಕರಳನ್ನು ಇಡಲಾಗುತ್ತಿತ್ತು. ಮೂರನೆಯ ಬಾಟಲಿಯ ಹೆಸರು “Hapy”. ಇದರ ಒಳಗೆ ಶ್ವಾಸಕೋಶವನ್ನು ಇಡಲಾಗುತ್ತಿತ್ತು. ಇನ್ನು ಕೊನೆಯ ಬಾಟಲಿಯ ಹೆಸರು “Duamatef”. ಇದರ ಒಳಗೆ ಹೊಟ್ಟೆಯ ಭಾಗವನ್ನು ಇಡಲಾಗುತ್ತಿತ್ತು.

8) ಸತ್ತ ನಂತರ ಹೆಣವನ್ನು ಮಮ್ಮಿಗಳಾಗಿ ಪರಿವರ್ತಿಸುವ ಕೆಲಸ ಈಜಿಪ್ಟಿಯನ್ನರಿಗೆ ಸರ್ವೇ ಸಾಮಾನ್ಯವಾಗಿತ್ತು. ಅವರ ಪ್ರಕಾರ ಸತ್ತ ವ್ಯಕ್ತಿಯು ಮರಳಿ ಮತ್ತೆ ಹುಟ್ಟಿ ಬರುತ್ತಾನೆ. ಸತ್ತ ಮೇಲೆ ಹೆಣದ ಒಳಗಿರುವ ಅಂಗಾಗಗಳನ್ನು ಹೊರತೆಗೆದು ಒಂದು ಬಾಟಲಿಯಲ್ಲಿ ಶೇಖರಿಸಿ ಇಡುತ್ತಿದ್ದರು. ಒಂದು ಹೆಣದ ಮೈ ತುಂಬಾ ಬಟ್ಟೆಯನ್ನು ಸುತ್ತಿ ಅದನ್ನು ಮಮ್ಮಿಯನ್ನಾಗಿ ಪರಿವರ್ತಿಸಲು 70 ದಿನಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂಗಾಂಗಗಳನ್ನು ಹೊರ ತೆಗೆದ ಮೇಲೆ ದೇಹದ ಒಳಗಿರುವ ತೇವಾಂಶವನ್ನು ಹೊರತೆಗೆಯುತ್ತಿದ್ದರು, ಈ ರೀತಿ ಮಾಡಲು ಪುಡಿ ಉಪ್ಪನ್ನು ಬಟ್ಟೆಯಲ್ಲಿ ಸುತ್ತಿ ಸಂಪೂರ್ಣ ದೇಹಕ್ಕೆ ಸುತ್ತುತ್ತಿದ್ದರು. ಈ ರೀತಿ ಮಾಡುವುದರಿಂದ 35 ರಿಂದ 40 ದಿನಗಳ ನಂತರ ದೇಹದ ಒಳಗೆ ಇರುವ ಸಂಪೂರ್ಣ ತೇವಾಂಶವು ಹೊರಬರುತ್ತಿತ್ತು. ನಂತರ ಮತ್ತೊಂದು ಬಟ್ಟೆಯಿಂದ ಸಂಪೂರ್ಣ ದೇಹಕ್ಕೆ ಸುತ್ತಿ ಪೆಟ್ಟಿಗೆಯಲ್ಲಿ ಇಟ್ಟು ಮುಚ್ಚಲಾಗುತ್ತಿತ್ತು. ಬಟ್ಟೆಯನ್ನು ಸಂಪೂರ್ಣ ದೇಹಕ್ಕೆ ಸುತ್ತಲು ಬರೋಬ್ಬರಿ ಎರಡು ವಾರಗಳ ಸಮಯ ತೆಗೆದುಕೊಳ್ಳುತ್ತಿದ್ದರು. ಅದೇನೇ ಹೇಳಿ ಇಷ್ಟೆಲ್ಲಾ ವಿಧಾನಗಳನ್ನು ಪಾಲಿಸುತ್ತಿದ್ದರಿಂದಲೆ ಸಾವಿರಾರು ವರ್ಷಗಳ ನಂತರವೂ ಪೆಟ್ಟಿಗೆಯ ಒಳಗಿರುವ ಮಮ್ಮಿಗಳನ್ನು ಹೊರ ತೆಗೆದಾಗ ಕೊಳೆತ ಸ್ಥಿತಿಯಲ್ಲಿ ಸಿಗುತ್ತಿಲ್ಲ. ನಿಜಕ್ಕೂ ಅವರ ವಿಧಾನವನ್ನು ಮೆಚ್ಚಲೇ ಬೇಕು.

9) ಬೆಕ್ಕುಗಳನ್ನು ಪ್ರಾಚೀನ ಈಜಿಪ್ಟಿಯನ್ನರು ಅದೆಷ್ಟು ಪವಿತ್ರ ಪ್ರಾಣಿಯೆಂದು ಪರಿಗಣಿಸುತ್ತಿದ್ದರು ಎನ್ನುವುದಕ್ಕೆ ಮತ್ತೊಂದು ಉದಾಹರಣೆಯನ್ನು ಈ ಸಂಗತಿಯಲ್ಲಿ ತಿಳಿಸುವೆ ಕೇಳಿ. ಬೆಕ್ಕನ್ನು ದೇವರ ರೀತಿಯಲ್ಲಿ ಕಾಣುವ ಹೆಣ್ಣು ದೇವತೆಯನ್ನು ಈಜಿಪ್ಟಿಯನ್ನರು ಪೂಜಿಸುತ್ತಿದ್ದರು. ಆ ದೇವತೆಯ ಹೆಸರು “Bastet”. ಈ ದೇವತೆಯ ದೇಹವು ಬೆಕ್ಕಿನ ರೂಪದಲ್ಲಿ ಇದ್ದು ಮಹಿಳೆಯರನ್ನು, ಮಕ್ಕಳನ್ನು ಮತ್ತು ಎಲ್ಲಾ ಜನಗಳನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾಳೆ ಎಂದು ಭಾವಿಸಿ ಪೂಜಿಸಲಾಗುತ್ತಿತ್ತು.

10) ಹೇಗೆ ನಮ್ಮ ದೇಶದಲ್ಲಿ ಹಸುಗಳನ್ನು ನಾವು ಪವಿತ್ರವಾದ ಪ್ರಾಣಿಯೆಂದು ಪರಿಗಣಿಸಿ ಪೂಜಿಸುತ್ತೇವೆ ಅದೇ ರೀತಿ ಪ್ರಾಚೀನ ಈಜಿಪ್ಟಿಯನ್ನರು ಬೆಕ್ಕನ್ನು ಪೂಜಿಸುತ್ತಿದ್ದರು. ಅವರುಗಳ ಪ್ರಕಾರ ಪ್ರಾಣಿಗಳು ದೇವರ ಮತ್ತೊಂದು ಅವತಾರ. ಆದ್ದರಿಂದಲೇ ಪ್ರಾಣಿಗಳನ್ನು ಅವರುಗಳು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೇವಲ ಬೆಕ್ಕನ್ನು ಮಾತ್ರವಲ್ಲದೆ ನಾಯಿ, ಹದ್ದು, ಸಿಂಹ ಹಾಗು ಬಬೂನ್ ಗಳನ್ನು ಅವರು ಪವಿತ್ರವಾದ ಪ್ರಾಣಿಗಳೆಂದು ಪರಿಗಣಿಸಿ ಪೂಜಿಸುತ್ತಿದ್ದರು. ಅಕಸ್ಮಾತ್ ಯಾರಾದರು ಈ ಪ್ರಾಣಿಗಳಿಗೆ ಹಲ್ಲೆ ಮಾಡುವುದಾಗಲಿ ಕಂಡುಬಂದಲ್ಲಿ ಅವರುಗಳನ್ನು ಕೊಲ್ಲುತ್ತಿದ್ದರು.

Follow Karunadu Today for more Interesting Facts & Stories. 

Click here to Join Our Whatsapp Group