
ಮನುಷ್ಯನೇ ಹಾಗೆ, ಕುತೂಹಲಕಾರಿ ವಿಷಯಗಳನ್ನು ಪ್ರತಿದಿನ ಪತ್ತೆ ಹಚ್ಚುವುದೆಂದರೆ ಆತನಿಗೆ ಬಲು ಇಷ್ಟ. ಅದು ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಅದನ್ನು ಪತ್ತೆ ಮಾಡಿಯೇ ತಿರುತ್ತಾನೆ. ಹೀಗೆ ವಿಜ್ಞಾನ ಎನ್ನುವುದು ಹುಟ್ಟಿಕೊಂಡಿತು. ಈ ವಿಜ್ಞಾನದ ಹೆಸರಲ್ಲಿ ಇದುವರೆಗು ಅದೆಷ್ಟೋ ಕಂಡುಹಿಡಿಯಲಾದ ಪ್ರಶ್ನೆಗಳಿಗೆ ಉತ್ತರವನ್ನು ಮನುಷ್ಯನು ಕಂಡುಹಿಡಿದುಕೊಂಡಿದ್ದಾನೆ. ಯಾವುದು ನಮ್ಮಿಂದ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೆವು ಅವುಗಳನ್ನು ಕಂಡು ಹಿಡಿದು ತೋರಿಸಿದೆ ಈ ವಿಜ್ಞಾನ. ಹಾಗಂತ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ತಂತ್ರಜ್ಞಾನದಲ್ಲಿ ಮತ್ತು ವಿಜ್ಞಾನದಲ್ಲಿ ಮನುಷ್ಯನು ಅದೆಷ್ಟೇ ಮುಂದುವರೆದಿರಬಹುದು ಆದರೆ ಜಗತ್ತಿನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಅನೇಕ ವರ್ಷಗಳಿಂದ ಆ ಪ್ರಶ್ನೆಗಳಿಗೆ ಉತ್ತರವನ್ನು ವಿಜ್ಞಾನಿಗಳು ಹುಡುಕುತ್ತಲೇ ಇದ್ದು ಒಂದಲ್ಲ ಒಂದು ದಿನ ಉತ್ತರ ಕಂಡು ಹಿಡಿದೇ ಇರುತ್ತೇವೆ ಎನ್ನುವ ವಿಶ್ವಾಸ ಅವರಿಗಿದೆ. ಬನ್ನಿ ವಿಜ್ಞಾನಿಗಳ ನಿದ್ದೆಗೆಡಿಸಿರುವ ಆ ಪ್ರಶ್ನೆಗಳು ಯಾವುವು ಎನ್ನುವುದನ್ನು ನಿಮಗೆ ಇಂದು ತಿಳಿಸಿಕೊಡುತ್ತೇವೆ.
1) ಬಾಹ್ಯಾಕಾಶದಲ್ಲಿರುವ ಕಪ್ಪು ಕುಳ

ಬಾಹ್ಯಾಕಾಶದ ಬಗ್ಗೆ ಆದ್ಯಯನ ಮಾಡಲು ಪ್ರಪಂಚದಲ್ಲಿ ಅನೇಕ ಸಂಸ್ಥೆಗಳಿವೆ ಎನ್ನುವುದು ನಮಗೆಲ್ಲ ತಿಳಿದ ವಿಚಾರವೆ. ಆದರೆ ಅವುಗಳಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಅಮೇರಿಕದ ನಾಸ. ಈ ಸಂಸ್ಥೆಯು ಪ್ರಪಂಚದ ಬೇರೆ ಯಾವ ಸಂಸ್ಥೆಗಳು ಮಾಡದ ಸಾಧನೆಗಳನ್ನು ಮಾಡಿ ಜಗತ್ತಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದುವರೆಗು ಬಾಹ್ಯಾಕಾಶದಲ್ಲಿ ಇರುವ ಅನೇಕ ಗ್ರಹ ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಿರುವ ಈ ಸಂಸ್ಥೆಯು ಜಗತ್ತಿನ ಅನೇಕ ವಿಜ್ಞಾನಿಗಳನ್ನು ತನ್ನ ಬಳಿ ಹೊಂದಿದೆ. ನಮಗೆಲ್ಲ ಗೊತ್ತಿರುವ ಹಾಗೆ ಐನ್ಸ್ಟೀನ್ ಅವರು ಮೊಟ್ಟ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಕಪ್ಪು ಕುಳಗಳಿವೆ ಎಂದು ಪ್ರಪಂಚಕ್ಕೆ ಹೇಳಿದರು. ಆದರೆ ಇದನ್ನು ಮೊದಲು ಯಾರು ನಂಬಲಿಲ್ಲ. ವರ್ಷಗಳು ಕಳೆದಂತೆ ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಅದನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಕಪ್ಪು ಕುಳಗಳನ್ನು ನಾಸಾ ಪತ್ತೆ ಮಾಡಿತು. ಇದನ್ನು ಜಗತ್ತಿಗೆ ನಿರೂಪಿಸಲು ಅದರ ಫೋಟೋವನ್ನು ಕೂಡ ತೆಗೆಯಲಾಯಿತು. ಆದರೆ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಈ ಬ್ಲ್ಯಾಕ್ ಹೋಲ್ ಗಳ ಒಳಗೆ ಏನಿದೆ ಎನ್ನುವುದು. ಕೆಲವು ವಿಜ್ಞಾನಿಗಳು ಇದರ ಒಳಗೆ ಬೇರೆ ಬ್ರಹ್ಮಾಂಡಕ್ಕೆ ಹೋಗುವ ದಾರಿಯಿದೆ ಎಂದು ಹೇಳಿದರೆ ಕೆಲವರು ಇದರ ಒಳಗೆ ಏನೂ ಇಲ್ಲ ಎಂದು ಹೇಳುತ್ತಾರೆ. ಇದಕ್ಕೆ ಬೇಕಾದ ಸರಿಯಾದ ಉತ್ತರವನ್ನು ವಿಜ್ಞಾನಿಗಳು ಪತ್ತೆ ಮಾಡುತ್ತಲೇ ಇರುವರು. ಆದರೆ ಇದುವರೆಗು ಉತ್ತರ ಮಾತ್ರ ಸಿಕ್ಕಿಲ್ಲ. ಮುಂದೊಂದು ದಿನ ಪುರಾವೆ ಸಮೇತ ಉತ್ತರವನ್ನು ವಿಜ್ಞಾನಿಗಳು ನೀಡುವರೆ ಎನ್ನುವುದನ್ನು ನಾವು ಕಾದು ನೋಡಬೇಕಿದೆ.
2) ಸಂಪೂರ್ಣ ಬ್ರಹ್ಮಾಂಡ ಯಾವುದರಿಂದ ಮಾಡಲಾಗಿದೆ

ನಮಗೆಲ್ಲ ತಿಳಿದಿರುವ ಹಾಗೆ ನಮ್ಮ ಬ್ರಹ್ಮಾಂಡದ ಪ್ರತಿಯೊಂದು ಕಣ ಕಣವು ಅಣುವಿನಿಂದ ಮಾಡಲಾಗಿದೆ. ಆದರೆ ನೆನಪಿರಲಿ ಇದು ಬ್ರಹ್ಮಾಂಡದ ಶೇಕಡ 5 ರಷ್ಟು ಮಾತ್ರ. ಉಳಿದ 95ರಷ್ಟು ಯಾವುದರಿಂದ ಮಾಡಲಾಗಿದೆ ಎನ್ನುವುದು ಮಾತ್ರ ಇದುವರೆಗು ತಿಳಿದಿಲ್ಲ. ಇಲ್ಲಿಯವರೆಗು ವಿಜ್ಞಾನಿಗಳು ಬ್ರಹ್ಮಾಂಡದ ಬಗ್ಗೆ ಅದೆಷ್ಟು ಪತ್ತೆ ಹಚ್ಚಿದ್ದಾರೆ ಅದು ಎರಡು ಘಟಕಗಳಿಂದ ಮಾಡಲಾಗಿದೆ. ಅದುವೇ “ಡಾರ್ಕ್ ಮ್ಯಾಟರ್” ಮತ್ತು “ಡಾರ್ಕ್ ಎನೆರ್ಜಿ”. ಆದರೆ ಇದರ ಬಗ್ಗೆ ಹೆಚ್ಚು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ಇದನ್ನು ಯಾವುದೇ ತರಹದ ಸಾಧಕಗಳಿಂದ ಸೆರೆ ಹಿಡಿಯುವುದು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ವಿಜ್ಞಾನಿಗಳಿಗೆ ನಮ್ಮ ಬ್ರಹ್ಮಾಂಡದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.
3) ಕನಸುಗಳು ಏಕೆ ಬೀಳುತ್ತವೆ

ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಕನಸುಗಳು ಬೀಳುತ್ತವೆ ಎನ್ನುವ ಸಂಗತಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆದರೆ ಈ ಕನಸುಗಳು ಏಕೆ ಬೀಳುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಇದುವರೆಗು ಸಿಕ್ಕಿಲ್ಲ. ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ನಾವು ಜೀವನದಲ್ಲಿ ಕೆಲವು ಕೆಲಸಗಳನ್ನು ಮಾಡಬೇಕು ಅಂತ ಅಂದುಕೊಂಡಿರುತ್ತೇವೆ ಆದರೆ ಅದನ್ನು ಮಾಡಲು ಆಗಿರುವುದಿಲ್ಲ ಅದು ನಮಗೆ ಕನಸಿನ ರೂಪದಲ್ಲಿ ಬರುತ್ತದೆ. ಮತ್ತೊಂದು ವಿಜ್ಞಾನಿಗಳ ಗುಂಪು ಹೇಳುವ ಪ್ರಕಾರ ನಮ್ಮ ಮೆದುಳು ಕಂಪ್ಯೂಟರ್ ಒಳಗಿರುವ ಹಾರ್ಡ್ ಡಿಸ್ಕ್ ತರಹ. ನಮ್ಮ ಮೆದುಳಿನಲ್ಲಿ ಇರುವ ನಿರುಪಯುಕ್ತ ವಿಷಯಗಳನ್ನು ಮೆದುಳಿನಿಂದ ಕನಸಿನ ರೂಪದಲ್ಲಿ ತೆಗೆದುಹಾಕುತ್ತದೆ. ಆದರೆ ಇಲ್ಲಿಯವರೆಗು ಇದಕ್ಕೆ ಸರಿಯಾದ ಉತ್ತರ ಮಾತ್ರ ಸಿಕ್ಕಿಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ವಿಜ್ಞಾನಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
4) ವಿಧ ವಿಧವಾದ ರಕ್ತದ ಗುಂಪುಗಳು ಏಕಿವೆ?

ನಮಗೆಲ್ಲ ತಿಳಿದ ಹಾಗೆ ಮನುಷ್ಯರ ದೇಹದಲ್ಲಿ ವಿಧವಿಧವಾದ ರಕ್ತದ ಗುಂಪುಗಳಿವೆ. ಕೆಲವರ ದೇಹದಲ್ಲಂತು ಯಾರ ಮೈಒಳಗೂ ಸಿಗದಂತಹ ರಕ್ತದ ಗುಂಪು ಇರುತ್ತದೆ. ಅಚ್ಚರಿಯ ಸಂಗತಿ ಏನೆಂದರೆ ಒಬ್ಬರ ಮೈಯೊಳಗೆ ಇರುವ ರಕ್ತದ ಗುಂಪು ಬೇರೆ ರಕ್ತದ ಗುಂಪು ಹೊಂದಿರುವ ವ್ಯಕ್ತಿಯ ಮೈಗೆ ಹೊಂದುವುದಿಲ್ಲ. ಇದಕ್ಕೆ ಕಾರಣವೇನು, ಈ ರಕ್ತದ ಗುಂಪುಗಳು ಹೇಗೆ ಹುಟ್ಟಿಕೊಂಡವು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಇದುವರೆಗು ಸಿಕ್ಕಿಲ್ಲ.
5) ಭೂಮಿಯ ಮೇಲೆ ಎಷ್ಟು ಜೀವಿಗಳಿವೆ

ನೆಲ, ನೀರು ಮತ್ತು ಗಾಳಿಯಿಂದ ಕೂಡಿರುವ ಈ ಸುಂದರವಾದ ಭೂಮಿಯಲ್ಲಿ ಹುಡುಕುತ್ತ ಹೋದಂತೆ ದಿನಕ್ಕೊಂದು ಜೀವರಾಶಿಗಳು ಹೊಸದಾಗಿ ಸಿಗುತ್ತಲೇ ಇವೆ. ಇದುವರೆಗು ವಿಜ್ಞಾನಿಗಳು ಕೇವಲ ಶೇಕಡ 5 ರಷ್ಟು ಜೀವರಾಶಿಗಳನ್ನು ಮಾತ್ರ ಕಂಡುಹಿಡಿದ್ದಾರೆ. ಹುಡುಕುತ್ತಾ ಹೋದಂತೆ ಹೊಸ ಹೊಸ ಜೀವಿಗಳು ಸಿಗುತ್ತಲೇ ಇವೆ. ಹಾಗಾದರೆ ಇದಕ್ಕೆ ಅಂತ್ಯವಿಲ್ಲವೆ? ಹೀಗೆ ಅದೆಷ್ಟು ವರ್ಷಗಳ ಕಾಲ ಜೀವಿಗಳನ್ನು ಹುಡುಕಬೇಕು ಎನ್ನುವ ಪ್ರಶ್ನೆಗೆ ವಿಜ್ಞಾನದ ಬಳಿ ಉತ್ತರವಿಲ್ಲ.
Follow Karunadu Today for more Interesting Facts & Stories.
Click here to Join Our Whatsapp Group