ಮನುಷ್ಯನೇ ಹಾಗೆ, ತನ್ನ ಬಳಿ ಹಣವಿಲ್ಲದಿದ್ದಾಗ ಸಪ್ಪೆ ಮುಖ ಹಾಕಿಕೊಂಡು ಅವರಿವರನ್ನು ಬೈಯುತ್ತ ಕುಳಿತುಬಿಡುತ್ತಾನೆ. ಅದೇ ಅವನ ಬಳಿ ಸ್ವಲ್ಪ ಹಣ ಇದ್ದಾಗ ಅಯ್ಯೋ ಇನ್ನೂ ಸ್ವಲ್ಪ ಹಣ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಂದುಕೊಳ್ಳುತ್ತಾನೆ. ಹೆಚ್ಚು ಹಣ ಸಿಕ್ಕರೆ ಅದನ್ನು ಹೇಗೆ ಖರ್ಚು ಮಾಡುವುದು ಎಂದು ಯೋಚಿಸುವನು. ಇಲ್ಲೊಬ್ಬ ವ್ಯಕ್ತಿ ಇರುವರು ಅವರ ಬಳಿ ಅದೆಷ್ಟು ಹಣವಿದೆ ಎಂದರೆ ಇನ್ನೂ 10 ಜನ್ಮ ಹುಟ್ಟಿ ಬಂದರೂ ಅದು ಖರ್ಚಾಗುವುದಿಲ್ಲ. ತನ್ನ ಬಳಿ ಇರುವ ಹಣದಿಂದ ಅವರೇನು ದೊಡ್ಡ ದೊಡ್ಡ ಕಟ್ಟಡವನ್ನಾಗಲಿ ಅಥವ ನಮ್ಮ ಅಂಬಾನಿಯವರ ಹಾಗೆ ದೊಡ್ಡ ಮನೆಯನ್ನಾಗಲಿ ಕಟ್ಟಿಸಿಕೊಳ್ಳಲಿಲ್ಲ. ಅವರು ಮಾಡಿದ್ದೇನೆಂದರೆ ಪ್ರಪಂಚದಲ್ಲಿ ಇರುವ ದೊಡ್ಡ ದೊಡ್ಡ ಕಾರ್ ಕಂಪನಿಗಳಿಗೆ ಸೇರಿರುವ ಹೊಸ ಕಾರ್ ಗಳನ್ನು ಖರೀದಿಸಿ ತನ್ನ ಮನೆಯ ಗ್ಯಾರೇಜಿನಲ್ಲಿ ಸುಮ್ಮನೆ ಇಡುತ್ತಿದ್ದರು. ಇಂದು ನಿಮಗೆ ಆ ವ್ಯಕ್ತಿಯ ಬಗ್ಗೆ ಹಾಗು ಅವರ ಬಳಿ ಇರುವ ಕಾರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಮುಂದೆ ಓದಿ.

ಅವರ ಹೆಸರು “Hassani Bolkiah”. ಇವರ ಪೂರ್ತಿ ಹೆಸರನ್ನು ನೀವು ಕೇಳಿದರೆ ತಲೆ ತಿರುಗಿ ಬೀಳುತ್ತೀರ. ಹೌದು ಇವರ ಪೂರ್ತಿ ಹೆಸರು ಈ ತರಹ ಇದೆ. “Kebawah Duli Yang Maha Mulia Paduka Seri Baginda Sultan Haji Hassanal Bolkiah Mu’izzaddin Waddaulah ibni Al-Marhum Sultan Haji Omar ‘Ali Saifuddien Sa’adul Khairi Waddien, Sultan dan Yang Di-Pertuan Negara Brunei Darussalam”. “ಬ್ರೂನಿಯ(Brunei)” ಎನ್ನುವ ದೇಶದ ಸುಲ್ತಾನ ಇವರು. ಈ ಬ್ರೂನಿಯ ಎನ್ನುವ ಪುಟ್ಟ ದೇಶವು ಬೊರ್ನಿಯೊ ಎನ್ನುವ ಒಂದು ದ್ವೀಪದ ಮೇಲಿದೆ. ಮಲೇಷ್ಯಾ ಮತ್ತು ದಕ್ಷಿಣ ಚೀನಾದ ಸಮುದ್ರದಿಂದ ಸುತ್ತುವರೆದಿರುವ ಈ ದೇಶವು ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲದಿಂದ ತುಂಬಿದೆ. ಫೋರ್ಬ್ಸ್ ಪ್ರಕಾರ “ಬ್ರೂನಿಯ(Brunei)” ದೇಶವು ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲದಿಂದ ತುಂಬಿರುವ ಶ್ರೀಮಂತ ದೇಶಗಳ ಸಾಲಲ್ಲಿ ಐದನೆಯ ಸ್ಥಾನದಲ್ಲಿದೆ.

ಹೇಗೆ ನಮ್ಮ ದೇಶದಲ್ಲಿ ಬ್ರಿಟೀಷರ ಆಳ್ವಿಕೆ ಇದ್ದರೂ ಅವರ ಅಡಿಯಲ್ಲಿ ರಾಜರುಗಳು ಅಧಿಕಾರ ಸ್ವೀಕರಿಸುತ್ತಿದ್ದರೋ ಹಾಗೆಯೇ ಬ್ರಿಟೀಷರ ಕಾಲದಿಂದಲೂ ಸುಲ್ತಾನರ ಆಳ್ವಿಕೆ ಅಲ್ಲಿ ಇತ್ತು. ಆ ಸುಲ್ತಾನರ ಕುಡಿಗೆ ಸೇರಿದವನೇ ಈಗಿನ ಸುಲ್ತಾನ ಹಾಗು ಪ್ರದಾನ ಮಂತ್ರಿಯಾಗಿರುವ “ಹಸ್ಸನಿ ಬೋಲ್ಖಿಯ”. ಕೇವಲ 21 ವರ್ಷದವನಿದ್ದಾಗ “ಬ್ರೂನಿಯ(Brunei)” ದೇಶದ ಸುಲ್ತಾನ ಪಟ್ಟವನ್ನು ಏರಿದ ಇವರು 1967 ರಿಂದ ಆ ದೇಶವನ್ನು ಆಳುತ್ತಿದ್ದಾರೆ. ಕಾಲ ಬದಲಾದಂತೆ ಅಂದಿನ ಸುಲ್ತಾನ ಆಗಿದ್ದವರು ಇಂದು ಪ್ರದಾನ ಮಂತ್ರಿಯಾಗಿದ್ದಾರೆ. ಮೊದಲೇ ಹೇಳಿದ ಹಾಗೆ ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲದಿಂದ ತುಂಬಿರುವ “ಬ್ರೂನಿಯ(Brunei)” ದೇಶವು ಜಗತ್ತಿನೆಲ್ಲೆಡೆ ರಫ್ತು ಮಾಡಿ ಬಿಲಿಯನ್ ಗಟ್ಟಲೆ ಹಣ ಸಂಪಾದಿಸುತ್ತಿದೆ. ಮೊದಲೇ ದೇಶದ ಪ್ರದಾನಿಯಾಗಿರುವ “ಹಸ್ಸನಿ ಬೋಲ್ಖಿಯ” ಬಂದ ಹಣದಿಂದ ದೇಶವನ್ನು ಪ್ರಗತಿಗೊಳಿಸುವುದರ ಜೊತೆಗೆ ತನ್ನ ಸಂಪತನ್ನು ಕೂಡ ವೃದ್ದಿಗೊಳಿಸಿಕೊಂಡಿರುವರು. ಇವರ ಒಂದು ವರ್ಷದ ಆದಾಯ ಬರೋಬ್ಬರಿ 2 ಬಿಲಿಯನ್ ಡಾಲರ್. ಅಂದರೆ ಪ್ರತಿ ಕ್ಷಣಕ್ಕೆ 100 ಡಾಲರ್. ಕಳೆದ 52 ವರ್ಷಗಳಿಂದ “ಬ್ರೂನಿಯ(Brunei)” ದೇಶದ ಸುಲ್ತಾನನಾಗಿರುವ ಇವರಿಗೆ ಹೊಸ ಹೊಸ ಕಾರುಗಳನ್ನು ಖರೀದಿಸುವ ಹುಚ್ಚು ಜಾಸ್ತಿ. ಪ್ರಪಂಚದಲ್ಲಿ ಇರುವ ದೊಡ್ಡ ದೊಡ್ಡ ಕಂಪನಿಗಳು ಇವರಿಗೆ ಬೇಕಾಗಿರುವ ಹಾಗೆ ಕಾರನ್ನು ಸಿದ್ದಗೊಳಿಸಿ ಕೊಡುತ್ತವೆ. ಇವರ ಮನೆಯ ಗ್ಯಾರೇಜ್ ನಲ್ಲಿ ಇರುವ ಕಾರುಗಳ ದೊಡ್ಡ ಪಟ್ಟಿಯನ್ನು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.

ಇವರ ಮನೆಯ ಗ್ಯಾರೇಜಿನಲ್ಲಿ ಬರೋಬ್ಬರಿ 7000 ಕಾರುಗಳಿದ್ದು ಅವುಗಳನ್ನೆಲ್ಲಾ ಹೊರಗಡೆ ತೆಗೆಯಲು ಕನಿಷ್ಠ 2 ತಾಸು ಬೇಕು. ಆ ಗ್ಯಾರೇಜ್ ಅದೆಷ್ಟು ದೊಡ್ಡದಿದೆ ಎಂದರೆ 10 ಫುಟ್ಬಾಲ್ ಕ್ರೀಡಾಂಗಣವನ್ನು ಒಟ್ಟಿಗೆ ಸೇರಿಸಿದರೆ ಅದೆಷ್ಟು ಜಾಗವಾಗುತ್ತದೆ ಅಷ್ಟು ದೊಡ್ಡದಿದೆ. ಅವರ ಬಳಿ ಇರುವ ಕಾರಿನ ಪಟ್ಟಿ ಈ ತರಹ ಇದೆ.

1. ರೋಲ್ಸ್ ರಾಯ್ಸ್ ಕಂಪನಿಯ – 604 ಕಾರುಗಳು
2. ಮರ್ಸಡೀಸ್ ಬೆಂಜ್ ಕಂಪನಿಗೆ ಸೇರಿದ – 574 ಕಾರುಗಳು
3. ಫೆರಾರಿ ಕಂಪನಿಗೆ ಸೇರಿದ – 452 ಕಾರುಗಳು
4. ಬೆಂಟ್ಲಿ ಕಂಪನಿಗೆ ಸೇರಿದ – 382 ಕಾರುಗಳು
5. ಬಿ ಎಂ ಡಬ್ಲು ಕಂಪನಿಗೆ ಸೇರಿದ – 209 ಕಾರುಗಳು
6. ಜಾಗ್ವಾರ್ ಕಂಪನಿಗೆ ಸೇರಿದ – 179 ಕಾರುಗಳು
7. ಕೊಎನಿಗ್ಸೆಗ್ ಕಂಪನಿಗೆ ಸೇರಿದ – 134 ಕಾರುಗಳು
8. ಲಂಬೋರ್ಗಿನಿ ಕಂಪನಿಗೆ ಸೇರಿದ – 21 ಕಾರುಗಳು
9. ಅಸ್ಟೋನ್ ಮಾರ್ಟಿನ್ ಕಂಪನಿಗೆ ಸೇರಿದ – 11 ಕಾರುಗಳು

ಇವುಗಳಷ್ಟೇ ಅಲ್ಲದೆ ಇನ್ನು ಅನೇಕ ಕಂಪನಿಯ ಕಾರುಗಳು ಇವರ ಗ್ಯಾರೇಜ್ ನಲ್ಲಿ ಇವೆ. ಆದರೆ ಅವುಗಳಲ್ಲಿ ಅದೆಷ್ಟೋ ಕಾರುಗಳನ್ನು ಇದುವರೆಗೂ ಒಂದು ಬಾರಿಯೂ ಉಪಯೋಗಿಸದೆ ಹಾಗೆಯೇ ಇಡಲಾಗಿದೆ. ಯಾರ ಬಳಿಯೂ ಇರದ ಕೆಲವು ವಿಶೇಷ ಕಾರುಗಳನ್ನು ಇವರು ಪ್ರಪಂಚದ ಎದುರು ತೋರಿಸಿಕೊಂಡಿದ್ದಾರೆ, ಅವುಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ಕೆಳಗಡೆ ಓದಿ.

1. ರೋಲ್ಸ್ ರಾಯ್ಸ್ ಫ್ಯಾಂಟಮ್ – 6
ಈ ಕಾರನ್ನು ರೋಲ್ಸ್ ರಾಯ್ಸ್ ಕಂಪನಿಯು ಎಲ್ಲರಿಗೂ ಮಾರುವುದಿಲ್ಲ. ವಿಶೇಷವಾಗಿ ತಯಾರಿಸಲು ಆದೇಶ ಕೊಟ್ಟವರಿಗೆ ಮಾತ್ರ ತಯಾರಿಸುತ್ತದೆ. ಇದನ್ನು ತಯಾರಿಸಲು 800 ಜನರ ಪರಿಶ್ರಮ ಬೇಕು. ಪ್ರಪಂಚದಲ್ಲಿ ಈ ವಿಶೇಷ ಕಾರನ್ನು ಹೊಂದಿರುವ ಪಟ್ಟಿಯಲ್ಲಿ “ಹಸ್ಸನಿ ಬೋಲ್ಖಿಯ” ಕೂಡ ಒಬ್ಬರು.

2. ಮರ್ಸಡೀಸ್ ಬೆಂಜ್ ಸಿ.ಎಲ್.ಕೆ – ಜಿ.ಟಿ.ಅರ್
ಈ ಕಾರನ್ನು ಬೆಂಜ್ ಕಂಪನಿಯು “ಜಿ.ಟಿ. ಚಾಂಪಿಯನ್ಶಿಪ್” ಗೆಂದು ತಯಾರಿಸಿತ್ತು. ಆದರೆ ಇದನ್ನೂ ಬಿಡದ “ಹಸ್ಸನಿ ಬೋಲ್ಖಿಯ” ಬೆಂಜ್ ಕಂಪನಿಯವರಿಗೆ ವಿಶೇಷವಾಗಿ ತಯಾರಿಸಲು ಹೇಳಿ ಅದನ್ನು ಖರೀದಿಸಿದರು.

3. 24 ಕ್ಯಾರೆಟ್ ಗೋಲ್ಡ್ ಪ್ಲೇಟೆಡ್ ರೋಲ್ಸ್ ರಾಯ್ಸ್
“ಹಸ್ಸನಿ ಬೋಲ್ಖಿಯ” ಅವರು ಅದೆಷ್ಟು ಶ್ರೀಮಂತ ಎಂದು ಹೇಳಲು ಇದೊಂದು ಉತ್ತಮ ಉದಾಹರಣೆ. ರೋಲ್ಸ್ ರಾಯ್ಸ್ ಕಂಪನಿಯ “ಸಿಲ್ವರ್ ಸ್ಪರ್ 2” ಕಾರನ್ನು ಖರೀದಿಸಿ ಅದನ್ನು ತನ್ನ ಮದುವೆಗೋಸ್ಕರ ಸಂಪೂರ್ಣ ಚಿನ್ನದ ಕಾರನ್ನಾಗಿ ಪರಿವರ್ತನೆ ಮಾಡಿಸಿದರು. ಆ ಚಿನ್ನದ ಕಾರಿನಲ್ಲಿ ಮೆರವಣಿಗೆ ಹೋಗುವ ಮೂಲಕ ತಾನೆಷ್ಟು ಶ್ರೀಮಂತ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟರು.

4. ಫೆರಾರಿ ಮಿತೋಸ್
ಈ ಕಾರನ್ನು ಫೆರಾರಿ ಕಂಪನಿಯು ಮಾರಾಟ ಮಾಡಲು ಸಿದ್ದಪಡಿಸಿರಲಿಲ್ಲ. ಆದರೆ ನೋಡಲು ತುಂಬಾ ಸುಂದರವಾಗಿದೆ ಎಂದು ಈ ಕಾರನ್ನು ಫೆರಾರಿ ಕಂಪನಿಯವರಿಗೆ ಪ್ರತ್ಯೇಖವಾಗಿ ಆದೇಶ ಕೊಟ್ಟು ಎರಡು ಕಾರುಗಳನ್ನು ಕೊಂಡುಕೊಂಡು ತನ್ನ ಮನೆಯ ಗ್ಯಾರೇಜ್ ನಲ್ಲಿ ಇಟ್ಟಿದ್ದಾರೆ ಈ ಸುಲ್ತಾನ.

5. 24 ಕ್ಯಾರೆಟ್ ಗೋಲ್ಡ್ ಪ್ಲೇಟೆಡ್ ಮರ್ಸಡೀಸ್ ಬೆಂಜ್
ಈ ಕಾರು ಅವರ ಅಚ್ಚು ಮೆಚ್ಚಿನ ಕಾರು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ ಇದನ್ನು ಸಂಪೂರ್ಣವಾಗಿ ಚಿನ್ನದಿಂದ ಮಾಡಲಾಗಿದೆ ಎನ್ನುವುದು ಮಾತ್ರ ಬಹಿರಂಗವಾಗಿದೆ.

6. ಅಸ್ತಾನ್ ಮಾರ್ಟಿನ್
ಈ ಕಾರು ಹಿಡೀ ಜಗತ್ತಿನಲ್ಲಿ ಇರುವುದು ಕೇವಲ ಮೂರು ಮಾತ್ರ. ಆ ಮೂರು ಕಾರುಗಳು ಕೂಡ “ಹಸ್ಸನಿ ಬೋಲ್ಖಿಯ” ಅವರ ಬಳಿ ಇದೆ. ಈ ಕಾರಿನ ವಿಶೇಷತೆ ಏನೆಂದರೆ ಘಂಟೆಗೆ 330 ಕಿಲೋಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಈ ಕಾರಿಗಿದೆ.

ಇವುಗಳಷ್ಟೇ ಅಲ್ಲದೆ ಅದೆಷ್ಟೋ ಕಾರುಗಳನ್ನು ತನ್ನ ಗ್ಯಾರೇಜಿನ ಒಳಗಡೆ “ಹಸ್ಸನಿ ಬೋಲ್ಖಿಯ” ಅವರು ಇಟ್ಟಿದ್ದಾರೆ. ಪ್ರಪಂಚದಲ್ಲಿ ಯಾವುದೇ ಕಂಪನಿಯ ಕಾರುಗಳಾಗಿರಲಿ ಹಾಗು ಅದೆಷ್ಟೇ ದುಡ್ದಿರಲಿ ಒಮ್ಮೆ ಇವರಿಗೆ ಇಷ್ಟವಾದರೆ ಮುಗಿಯಿತು ಅದನ್ನು ಖರೀದಿಸುವವರೆಗೂ ಬಿಡುವುದಿಲ್ಲ ಈ ಸುಲ್ತಾನ.

Follow Karunadu Today for more Interesting Facts & Stories. 

Click here to Join Our Whatsapp Group