
ಟೈಮ್ ಟ್ರಾವೆಲ್ ಮಾಡಬಹುದೇ ಎನ್ನುವುದು ಅನೇಕ ವರ್ಷಗಳಿಂದ ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನಗಳ ಪ್ರಶ್ನೆಯಾಗಿದೆ. ಭೂತಕಾಲ ಅಥವ ಭವಿಷ್ಯಕ್ಕೆ ಹೋಗಿ ನಡೆಯುವ ಅಥವ ನಡೆದಿರುವ ಘಟನೆಗಳನ್ನು ಸರಿ ಪಡಿಸಿಕೊಳ್ಳುವುದು ಟೈಮ್ ಟ್ರಾವೆಲ್ ನ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಟೈಮ್ ಟ್ರಾವೆಲ್ ಎನ್ನುವ ವಿಷಯ ಪ್ರಸ್ತಾಪವಾದಾಗ ಜನಗಳಿಗೆ ಅದರ ಕುರಿತು ತುಂಬಾ ಆಸಕ್ತಿ ಮೂಡುತ್ತದೆ. ಆದರೆ ಈ ಟೈಮ್ ಟ್ರಾವೆಲ್ ಮಾಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಟೈಮ್ ಟ್ರಾವೆಲ್ ಮಾಡಬೇಕೆಂದರೆ ಬೌತಶಾಸ್ತ್ರದ ನಿಯಮಗಳನ್ನು ಮುರಿಯಬೇಕು.ಆದರೆ ಇದು ಸಾಧ್ಯವಿಲ್ಲ. ಏಕೆಂದರೆ ಪ್ರಕೃತಿಯ ನಿಯಮದ ವಿರುದ್ಧ ಹೋಗುವ ಶಕ್ತಿ ಮನುಷ್ಯರ ಬಳಿಯಿಲ್ಲ. ಜಗತ್ತಿನಲ್ಲಿರುವ ಕೆಲವು ವಿಜ್ಞಾನಿಗಳು ಟೈಮ್ ಟ್ರಾವೆಲ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿ ಟೈಮ್ ಟ್ರಾವೆಲ್ ಮಾಡುವ ಯಂತ್ರಗಳನ್ನು ಕಂಡುಹಿಡಿಯಲು ಹೋಗಿ ವಿಫಲರಾಗಿದ್ದಾರೆ. ಈ ರೀತಿ ಇರುವಾಗ ಕೆಲ ವ್ಯಕ್ತಿಗಳು ಟೈಮ್ ಟ್ರಾವೆಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ಹೇಳಿದರೆ ನಿಮಗೆ ನಂಬಲು ಸಾಧ್ಯವಾಗದೆ ಇರಬಹುದು. ಹೌದು, ಜಗತ್ತಿನಲ್ಲಿ ಕೆಲ ಘಟನೆಗಳು ನಡೆದಿದ್ದು ಭವಿಷ್ಯದಿಂದ ಕೆಲ ವ್ಯಕ್ತಿಗಳು ವರ್ತಮಾನಕ್ಕೆ ಬಂದಿದ್ದರೆ ಮತ್ತೆ ಕೆಲವು ವ್ಯಕ್ತಿಗಳು ವರ್ತಮಾನದಿಂದ ಭೂತಕಾಲಕ್ಕೆ ಹೋಗಿ ಬಂದಿದ್ದಾರೆ. ಅಂದರೆ ಅವರುಗಳು ಟೈಮ್ ಟ್ರಾವೆಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನಿ, ಇಂದು ಆ ವ್ಯಕ್ತಿಗಳ ಕುರಿತು ತಿಳಿದುಕೊಂಡು ಬರೋಣ.
- ಘಟನೆ 1
1964 ರಲ್ಲಿ ಜಪಾನ್ ದೇಶದ ಟೋಕಿಯೋ ನಗರದ ವಿಮಾನ ನಿಲ್ಧಾಣಕ್ಕೆ ವಿಮಾನದ ಮೂಲಕ ಒಬ್ಬ ವ್ಯಕ್ತಿ ಬಂದಿದ್ದ.ವಿಮಾನ ನಿಲ್ಧಾಣದಿಂದ ಹೊರಬರುವಾಗ exit door ನಲ್ಲಿ ಆತನ ಪಾಸ್ಪೋರ್ಟ್ ಅನ್ನು ನೋಡಿದ ಅಧಿಕಾರಿಗಳಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಅದರಲ್ಲಿ ಆ ವ್ಯಕ್ತಿಯು “TAURED” ಎನ್ನುವ ದೇಶದ ಪ್ರಜೆಯೆಂದು ನೋಂದಾಯಿಸಲಾಗಿತ್ತು. ಆದರೆ ಭೂಮಿಯ ಮೇಲೆ ಆ ಹೆಸರಿನ ದೇಶವು ಎಲ್ಲೆಲ್ಲೂ ಇರದೆ ಇರುವುದರಿಂದ ಅಲ್ಲಿನ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದರು.
ವಿಚಾರಣೆಯ ವೇಳೆ ಆ ವ್ಯಕ್ತಿಯು ತನ್ನ ದೇಶವು ಫ್ರಾನ್ಸ್ ಮತ್ತು ಸ್ಪೇನ್ ದೇಶದ ಮಧ್ಯೆ ಇದ್ದು ಅಲ್ಲಿಂದ ತಾನು ಬಂದಿದ್ದೇನೆ ಎಂದು ಹೇಳಿದನು. ಆದರೆ ಪ್ರಪಂಚದಲ್ಲಿರುವ ದೇಶಗಳ ನಕ್ಷೆಯನ್ನು ತೋರಿಸಿ ನೀನು ಹೇಳುತ್ತಿರುವ ದೇಶವು ನಕ್ಷೆಯಲ್ಲಿ ಇಲ್ಲ ನೀನು ಹೇಳುತ್ತಿರುವ ಆ ದೇಶದ ಸ್ಥಳದಲ್ಲಿ ANDORRA ಎನ್ನುವ ದೇಶವಿದೆ ಎಂದು ಹೇಳಿದರು. ಇದನ್ನು ಕೇಳಿದ ಆ ವ್ಯಕ್ತಿಗೆ ಸಾಕಷ್ಟು ಆಶ್ಚರ್ಯವಾಗತೊಡಗಿತ್ತು. ನಂತರ ತಾನು ಇದು ಮೊದಲ ಬಾರಿ ಇಲ್ಲಿ ಬಂದಿಲ್ಲ, ಕಳೆದ 5 ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಲು ಜಪಾನ್ ದೇಶಕ್ಕೆ ಅನೇಕ ಬಾರಿ ಬಂದಿರುವುದಾಗಿ ಹೇಳಿದನು. ಆತನ ಪಾಸ್ಪೋರ್ಟ್ ನಲ್ಲೂ ಕೂಡ ಕಳೆದ 5 ವರ್ಷಗಳಿಂದ ಅನೇಕ ಬಾರಿ ಜಪಾನ್ ದೇಶಕ್ಕೆ ಬಂದಿರುವ ದಾಖಲೆಯಿತ್ತು.ಅದರ ಜೊತೆಗೆ ಆ ವ್ಯಕ್ತಿಯ ಬಳಿ ಡ್ರೈವಿಂಗ್ ಲೈಸೆನ್ಸ್ ಹಾಗು ಆ ದೇಶದ ಒಂದು ಬ್ಯಾಂಕಿನ ಚೆಕ್ ಬುಕ್ ಕೂಡ ಇತ್ತು. ಇದನ್ನು ಕಂಡ ಅಧಿಕಾರಿಗಳು ಕೂಡ ಆಶ್ಚರ್ಯಗೊಂಡರು. ನಂತರ ಆತನನ್ನು ವಿಮಾನ ನಿಲ್ದಾಣದ ಬಳಿಯಿರುವ ಒಂದು ಹೋಟಲ್ ಗೆ ಕಳುಹಿಸಿ ಆ ಹೊಟೇಲ್ ನಲ್ಲಿ ಆ ವ್ಯಕ್ತಿ ಇರುವ ರೂಮಿನ ಕೋಣೆಯನ್ನು ಹೊರಗಡೆಯಿಂದ ಲಾಕ್ ಮಾಡಿ ತಾವು ಹೇಳುವವರೆಗು ಎಲ್ಲೂ ಹೋಗದ ಹಾಗೆ ಇರಬೇಕೆಂದು ಪೊಲೀಸರು ಹೇಳಿದರು. ಆದರೆ ಮಾರನೆಯ ದಿನ ರೂಮಿನ ಕೋಣೆಯನ್ನು ತೆರೆದು ನೋಡಿದಾಗ ಆ ವ್ಯಕ್ತಿಯು ಇರಲಿಲ್ಲ. ಆತನು ಕೋಣೆಯಿಂದ ತಪ್ಪಿಸಿಕೊಂಡಿರಬಹುದು ಎಂದು ತಿಳಿದು ನಗರದಲ್ಲಿ ಎಲ್ಲೆಡೆ ಹುಡುಕಾಟ ನಡೆಸಲಾಯಿತು. ಆದರೆ ಆ ವ್ಯಕ್ತಿ ಮಾತ್ರ ಸಿಗಲಿಲ್ಲ. ಕೆಲವು ವ್ಯಕ್ತಿಗಳು ಹೇಳುವ ಪ್ರಕಾರ ಆ ವ್ಯಕ್ತಿಯು ಬೇರೆ ಲೋಕದಿಂದ (Parallel universe) ಬಂದಿರಬಹುದಂತೆ. ಇದಕ್ಕೆಂದು ಆತನು ಟೈಮ್ ಟ್ರಾವೆಲ್ ಯಂತ್ರವನ್ನು ಬಳಸಿದ್ದಾನಂತೆ. ಆದರೆ ಇದರ ಸತ್ಯಾಸತ್ಯತೆ ಮಾತ್ರ ಇದುವರೆಗು ರಹಸ್ಯವಾಗಿಯೇ ಉಳಿದಿದೆ.
2. ಘಟನೆ – 2
1932 ರಲ್ಲಿ ಜರ್ಮನ್ ದೇಶದ J Bernard Hutton ಮತ್ತು Joachim Brandt ಎನ್ನುವ ಇಬ್ಬರು ಪತ್ರಕರ್ತರು ಜರ್ಮನಿ ದೇಶದಲ್ಲಿರುವ “Hamburg-Altona ಬಂದರಿಗೆ ಭೇಟಿ ನೀಡಿದ್ದರು.ಅವರು ಭೇಟಿ ನೀಡುತ್ತಿದ್ದಂತೆ ಒಮ್ಮೆಲೇ ಆಕಾಶದಿಂದ ಯುದ್ಧ ವಿಮಾನಗಳು ಆ ಬಂದರಿನ ಕಡೆಗೆ ಹಾರಿಬಂದು ಕಂಡ ಕಂಡ ಹಡಗುಗಳ ಮೇಲೆ ದಾಳಿ ಮಾಡಲು ಶುರು ಮಾಡಿದವು. ಈ ದಾಳಿಯನ್ನು ತಮ್ಮ ಬಳಿಯಿದ್ದ ಕ್ಯಾಮೆರಾದಿಂದ ಸೆರೆಹಿಡಿದರು. ನಂತರ ಗಾಬರಿಯಿಂದ ಆ ಇಬ್ಬರು ಪತ್ರಕರ್ತರು ಅಲ್ಲಿಂದ ವೇಗವಾಗಿ ಕಾರು ಚಲಾಯಿಸುತ್ತ ಸ್ವಲ್ಪ ದೂರ ನಡೆದರು. ಸ್ವಲ್ಪ ದೂರ ಹೋಗಿ ಹಿಂದೆ ತಿರುಗಿ ನೋಡಿದಾಗ ಎಲ್ಲವೂ ಸಾಮಾನ್ಯವಾಗಿತ್ತು. ಇದನ್ನು ಕಂಡು ಆಶ್ಚರ್ಯಗೊಂಡ ಅವರಿಬ್ಬರು ತಮಗಾದ ಅನುಭವವನ್ನು ತಾವು ಕೆಲಸ ಮಾಡುತ್ತಿರುವ ಪತ್ರಿಕೆಯ ಯಜಮಾನನಿಗೆ ಹೇಳಿದರು. ಆದರೆ ಆತನು ಇದನ್ನು ನಂಬಲಿಲ್ಲ.ತಾವು ಸೆರೆಹಿಡಿದ ಫೋಟೋ ತೋರಿಸಲು ಹೋದಾಗ ಆ ಫೋಟೋದಲ್ಲಿ ಯಾವ ದೃಶ್ಯಗಳು ಇರಲಿಲ್ಲ. ಯಾರ ಬಳಿ ಹೇಳಿದರು ಕೂಡ ಇವರಿಬ್ಬರ ಮಾತನ್ನು ಮಾತ್ರ ಯಾರೂ ನಂಬಲಿಲ್ಲ. ದಿನಗಳು ಕಳೆದಂತೆ ಈ ಘಟನೆಯನ್ನು ಎಲ್ಲರು ಮರೆತರು. ಆದರೆ 11 ವರ್ಷಗಳ ಬಳಿಕ, ಅಂದರೆ 1943 ರಲ್ಲಿ ಅದೊಂದು ದಿನ Bernard Hutton ಅವರು ಅದೊಂದು ದಿನ ಬೆಳಗ್ಗೆ ತಮ್ಮ ಮನೆಯಲ್ಲಿ newspaper ಓದುತ್ತಿರುವಾಗ “Hamburg-Altona ಬಂದರಿನ ಮೇಲೆ Royal Air Force squadron ದಾಳಿ ಮಾಡಿರುವ ಸುದ್ದಿಯನ್ನು ನೋಡಿ ಆಶ್ಚರ್ಯಗೊಂಡರು. ಆ ದಾಳಿಯಲ್ಲಿ ತೆಗೆದ ಫೋಟೋಗಳು 11 ವರ್ಷಗಳ ಕೆಳಗೆ ತಾನು ತೆಗೆದಿದ್ದ ಫೋಟೋ ತರಹವೇ ಇದ್ದವು. ಇದರೊಂದಿಗೆ ಆ ಇಬ್ಬರು ಪತ್ರಕರ್ತರಿಗೆ 1932 ರಲ್ಲಿದ್ದಾಗ 1943ಕ್ಕೆ ಟೈಮ್ ಟ್ರಾವೆಲ್ ಮಾಡಿ ಬಂದಿದ್ದೇವೆ ಎಂದು ತಿಳಿದುಬಂದಿತು.
3. ಘಟನೆ – 3
1996 ರಲ್ಲಿ ಲಂಡನ್ ನಗರದಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಪೊಲೀಸ್ ವ್ಯಕ್ತಿಯು ತನ್ನ ಹೆಂಡತಿಯ ಜೊತೆಗೆ ಪುಸ್ತಕದ ಅಂಗಡಿಗೆ ಬಂದಿದ್ದ. ಪುಸ್ತಕದ ಅಂಗಡಿಯಲ್ಲಿ ತನ್ನ ಹೆಂಡತಿಯನ್ನು ಬಿಟ್ಟು ಹೊರಗೆ ಬಂದಾಗ ಆತನಿಗೆ ರಸ್ತೆಯಲ್ಲಿ ವಿಚಿತ್ರವಾದ ಬದಲಾವಣೆ ಆಗಿರುವುದು ಖಂಡಿತು. ಅದೇನೆಂದರೆ ರಸ್ತೆಯಲ್ಲಿ ಅಲೆದಾಡುತ್ತಿರುವ ವಾಹನಗಳಿಂದ ಹಿಡಿದು ಎಲ್ಲಾ ಜನಗಳು 1950 ರ ಜಮಾನದಲ್ಲಿ ಇದ್ದ ಹಾಗೆ ಆಗಿದ್ದರು. ಅದನ್ನು ಕಂಡು ಕೆಲ ನಿಮಿಷಗಳ ಕಾಲ ಆಶ್ಚರ್ಯಗೊಂಡು ಮರಳಿ ತನ್ನ ಹೆಂಡತಿ ಇರುವ ಪುಸ್ತಕದ ಅಂಗಡಿಯ ಕಡೆಗೆ ಹೋಗಲು ಪ್ರಯತ್ನ ಪಟ್ಟಾಗ ಅಲ್ಲಿ ಪುಸ್ತಕದ ಅಂಗಡಿ ಇರದೆ ಬಟ್ಟೆಯ ಅಂಗಡಿ ಇರುವುದನ್ನು ಕಂಡನು. ಅದರಿಂದ ಮತ್ತಷ್ಟು ಗಾಬರಿಯಾದ ಆತನು ಆ ಅಂಗಡಿಯ ಒಳಗೆ ತನ್ನ ಹೆಂಡತಿ ಇರಬಹುದು ಎಂದು ಹುಡುಕುತ್ತಾ ಹೋದಾಗ ಮರಳಿ 1996ಕ್ಕೆ ಆತನು ಬಂದನು. ನಂತರ ಆತನಿಗೆ ತಿಳಿದ ಸಂಗತಿ ಏನೆಂದರೆ ತಾನು ಕೆಲ ಕ್ಷಣಗಳ ಕಾಲ ಟೈಮ್ ಟ್ರಾವೆಲ್ ಮಾಡಿ ಬಂದಿದ್ದೆ ಎನ್ನುವುದು.
4. ಘಟನೆ – 4
ಭವಿಷ್ಯದಿಂದ ಒಬ್ಬ ವ್ಯಕ್ತಿ ಬಂದು ನಾವುಗಳು ಬಳಸುತ್ತಿರುವ internet ನಲ್ಲಿ ಭೂಮಿಯ ಭವಿಷ್ಯ ಹೇಗಿರಲಿದೆ ಎಂದು ವಿವರಿಸಿದರೆ ಖಂಡಿತವಾಗಿಯು ಆಶ್ಚರ್ಯವಾಗುತ್ತದೆ ಅಲ್ಲವೆ? ಇದನ್ನು ಏಕೆ ಹೇಳುತಿದ್ದೇನೆಂದರೆ 1998 ರಲ್ಲಿಇದೇ ರೀತಿ ಆಗಿತ್ತು. ಒಬ್ಬ ಅನಾಮಿಕ ವ್ಯಕ್ತಿಯು ತನ್ನ ಹೆಸರು John Titor ಎಂದು ಹೇಳಿಕೊಂಡು ತಾನು 2036 ರಿಂದ ಬಂದಿದ್ದು ಮುಂಬರುವ ವರ್ಷಗಳಲ್ಲಿ ಭೂಮಿಯು ಹೇಗೆ ಅಂತ್ಯ ಕಾಣಲಿದೆ ಎನ್ನುವುದನ್ನು ವಿವರಿಸಿದ್ದ. Coast to Coast AM ಎನ್ನುವ Talk show ದಲ್ಲಿ ಕೆಲಸ ಮಾಡುತ್ತಿದ್ದ Art Bell ಎನ್ನುವ ವ್ಯಕ್ತಿಗೆ ಈ ಟೈಮ್ ಟ್ರಾವೆಲ್ಲರ್ ಆದ John Titor fax ಅನ್ನು ಕಳುಹಿಸಿದ್ದ. ಆ fax ನಲ್ಲಿ ತಾನು ಯಾವಾಗ ಟೈಮ್ ಟ್ರಾವೆಲ್ ಮಾಡಿ ಬಂದಿರುವುದು ಹಾಗು ತಾನು ಬಂದಿರುವ ಉದ್ದೇಶವೇನು ಎನ್ನುವುದನ್ನು ಸಂಪೂರ್ಣವಾಗಿ ವಿವರಿಸಿದ್ದ. ಈ fax ಕಳುಹಿಸಿದ ಮೇಲೆ ಎರಡು ವರ್ಷಗಳ ಕಾಲ ಆ ವ್ಯಕ್ತಿಯು ಒಮ್ಮೆಲೇ ಮಾಯವಾದನು. ಆದರೆ 2000 ದಲ್ಲಿ ಆ ವ್ಯಕ್ತಿಯು ಮರಳಿ ಕಾಣಿಸಿಕೊಂಡನು. Internet ನಲ್ಲಿ Time travel institute ಎನ್ನುವ forum ನಲ್ಲಿ “TimeTravel_O” ಎನ್ನುವ username ಮೂಲಕ post ಗಳನ್ನು ಹಾಕಲು ಶುರುಮಾಡಿದ. ಆ ಪೋಸ್ಟ್ ಗಳಲ್ಲಿ ತಾನು 2036 ರಿಂದ ಬಂದಿದ್ದು 2036 ರಲ್ಲಿ ಒಂದು ಅಪಾಯಕಾರಿ computer ವೈರಸ್ ಸಂಪೂರ್ಣ ಭೂಮಿಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಮನುಷ್ಯರ ವಿರುದ್ಧ ಯುದ್ಧ ಸಾರುತ್ತದೆ. ಇದರಿಂದಾಗಿ ಪ್ರಪಂಚದಲ್ಲಿ ಅನೇಕ ಸಾವು ನೋವುಗಳು ಸಂಭವಿಸಲಿವೆ. ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ತಾನು ಟೈಮ್ ಟ್ರಾವೆಲ್ ಮಾಡಿ 1975 ಕ್ಕೆ ಹೊರಟಿದ್ದು IBM ಕಂಪನಿಯ 5100 ಕಂಪ್ಯೂಟರ್ ಅನ್ನು ನಾಶ ಮಾಡುವುದು ತನ್ನ ಉದ್ದೇಶವಾಗಿದೆ. ಏಕೆಂದರೆ ಆ ಕಂಪ್ಯೂಟರ್ ಒಳಗೆ ಇರುವಂತಹ ಕೆಲವು ವಸ್ತುಗಳಿಂದಲೇ ಆ ವೈರಸ್ ಜನಿಸುತ್ತದೆ. ಅದನ್ನು ನಾಶ ಮಾಡಿದರೆ 2036 ಕ್ಕೆ ಸಂಭವಿಸಲಿರುವ ಯುದ್ಧವನ್ನು ನಿಲ್ಲಿಸಬಹುದು ಎಂದು ಪೋಸ್ಟ್ ಮೂಲಕ forum ನಲ್ಲಿ ಹೇಳಿಕೊಂಡಿದ್ದ. ಈ ರೀತಿ ಕೆಲ ದಿನಗಳ ಕಾಲ ಪೋಸ್ಟ್ ಗಳನ್ನು ಹಾಕಿ ನಂತರ ಒಮ್ಮೆಲೆ ಮಾಯವಾದ. ಆತನು ಕೊನೆಯ ಬಾರಿ ಪೋಸ್ಟ್ ಮಾಡಿದ್ದು 2001 ರ ಮಾರ್ಚ್ ತಿಂಗಳು. ಅದಾದ ಮೇಲೆ ಆತನ ಯಾವುದೇ ಪೋಸ್ಟ್ ಗಳು internet ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆ ವ್ಯಕ್ತಿಯು ಕೇವಲ ಪೋಸ್ಟ್ ಮಾಡುವುದಲ್ಲದೆ ಟೈಮ್ ಟ್ರಾವೆಲ್ ಮಾಡಲು ತಾನು ಯಾವ ರೀತಿಯ machine ಅನ್ನು ಬಳಸಿದ್ದೇನೆ ಎನ್ನುವುದನ್ನು ಕೂಡ ವಿವರಿಸಿದ್ದಾನೆ. ಆದರೆ ಆ machine ಅನ್ನು ತಯಾರಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕೆಂದು ಅತ್ಯಾಧುನಿಕ ತಂತ್ರಜ್ಞಾನ ಬೇಕೆಂದು ಆತನು ಹೇಳಿದ್ದಾನೆ. ಕೆಲವು ಜನಗಳು ಹೇಳುವ ಪ್ರಕಾರ ಇದು 1984 ರಲ್ಲಿ ಬಿಡುಗಡೆಯಾದ Terminator ಸಿನಿಮಾದ ಕಥೆಯ ತರಹ ಇದ್ದು ಯಾರೋ ಒಬ್ಬ ಅನಾಮಿಕ ವ್ಯಕ್ತಿಯು ಜನಗಳನ್ನು ಮೂರ್ಖರನ್ನಾಗಿ ಮಾಡಲು ಈ ರೀತಿ ಇಲ್ಲ ಸಲ್ಲದ ಕತೆಗಳನ್ನು ಸೃಷ್ಟಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದೆ. ಆದರೆ ಕೆಲವರು ಆ ವ್ಯಕ್ತಿಯು ನಿಜವಾಗಿಯೂ ಟೈಮ್ ಟ್ರಾವೆಲ್ ಮಾಡಿ ಬಂದಿದ್ದಾನೆ ಎಂದು ಹೇಳುತ್ತಾರೆ. ಆ ವ್ಯಕ್ತಿಯು ನಿಜವಾಗಿಯು ಟೈಮ್ ಟ್ರಾವೆಲ್ ಮಾಡಿ ಬಂದಿದ್ದನೋ ಅಥವ ಇಲ್ಲವೋ ಎನ್ನುವುದು ಮಾತ್ರ ಖಚಿತವಾಗಿ ಇಂದಿನವರೆಗು ದೃಡಪಟ್ಟಿಲ್ಲ.
Follow Karunadu Today for more Interesting Facts & Stories.
Click here to Join Our Whatsapp Group