ಶಿವ, ನಮ್ಮ ಹಿಂದೂ ಧರ್ಮದ ಪ್ರಮುಖ ದೇವರು. ಮುಕ್ಕಣ್ಣ, ಹರ, ಪರಮೇಶ್ವರ ಹೀಗೆ ಅನೇಕ ಹೆಸರುಗಳಿಂದ ಈತನನ್ನು ಪೂಜಿಸುತ್ತಾರೆ. ಶಾಂತ ರೂಪಿಯಾದ ಈತನನ್ನು ಪೂಜಿಸುವ ದೇವಸ್ಥಾನಗಳು ನಮ್ಮ ದೇಶದ ತುಂಬೆಲ್ಲ ಸಿಗುತ್ತವೆ. ಭೂಮಿಯ ಮೇಲೆ ಇರುವ ತನ್ನ ಭಕ್ತರಿಗೆ ದರ್ಶನ ನೀಡಲು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಹೆಸರು ಮತ್ತು ಅವತಾರಗಳಲ್ಲಿ ನೆಲೆಸಿರುವ ಈತನನ್ನು ನೋಡಲು ಭಕ್ತ ಸಮೂಹವು ಹೋಗುತ್ತದೆ. ಇಂದು ನಿಮಗೆ ಈ ರೀತಿ ನೆಲೆಸಿರುವ ಶಿವನ ಒಂದು ಪುಣ್ಯ ಸ್ಥಳದ ಬಗ್ಗೆ ಹೇಳುತ್ತೇವೆ. ಆ ಸ್ಥಳವು ಶಿವನು ನೆಲೆಸಿರುವ ಬೇರೆ ಎಲ್ಲಾ ಸ್ಥಳಗಳಿಗಿಂತ ತುಂಬಾ ವಿಶೇಷವಾದದ್ದು. ಆ ಸ್ಥಳದ ಮಹಿಮೆ ತಿಳಿದುಕೊಂಡ ಮೇಲೆ ಒಮ್ಮೆಯಾದರು ಅಲ್ಲಿ ಭೇಟಿ ನೀಡಲು ಪ್ರಯತ್ನ ಪಡಿ.

ಆ ಸ್ಥಳದ ಹೆಸರು “ತಿರುವಣ್ಣಾಮಲೈ”. ತಮಿಳುನಾಡಿನ ಈ ಊರಿನಲ್ಲಿ ಇರುವ ಅರುಣಾಚಲೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಶಿವನು ತುಂಬಾ ವಿಶೇಷವಾದವನು. ಬರೋಬ್ಬರಿ 10 ಎಕರೆ ಜಾಗದಲ್ಲಿ ವಿಸ್ತಾರವಾಗಿರುವ ಈ ದೇವಸ್ಥಾನವನ್ನು 9 ನೆಯ ಶತಮಾನದಲ್ಲಿ ಚೋಳರು ನಿರ್ಮಿಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನು ಪಂಚ ಭೂತ ಸ್ಥಳಗಳಲ್ಲಿ ಒಂದಾಗಿದೆ. ಶಿವನು ಅಗ್ನಿಯ ರೂಪದಲ್ಲಿ ಇಲ್ಲಿ ನೆಲೆಸಿದ್ದು ಆತನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಬರುತ್ತಾರೆ.

ಈ ಸ್ಥಳದಲ್ಲಿ ನೆಲೆಸಿರುವ ಶಿವನ ಬಗ್ಗೆ ಪುರಾಣದಲ್ಲಿ ಒಂದು ಮಹತ್ವವಾದ ಕಥೆಯಿದೆ. ಒಮ್ಮೆ ಪಾರ್ವತಿಯು ಕೈಲಾಸದಲ್ಲಿ ಧ್ಯಾನದಲ್ಲಿ ಮುಳುಗಿದ್ದ ಶಿವನ ಮೂರನೆಯ ಕಣ್ಣನ್ನು ಮುಚ್ಚಿದಳು ಆಗ ಸಂಪೂರ್ಣ ಬ್ರಹ್ಮಾಂಡ ಕತ್ತಲೆಯಿಂದ ಆವೃತಗೊಂಡಿತ್ತು. ಇದರಿಂದ ಎಲ್ಲಾ ಜೀವರಾಶಿಗಳು ಒದ್ದಾಡುತ್ತಿದ್ದಾಗ ಪಾರ್ವತಿಯು ಅಯ್ಯೋ ಇದೇನು ಆಯಿತು ನನ್ನಿಂದ ಎಂದು ಮರುಗತೊಡಗಿದಳು. ನಂತರ ಶಿವನನ್ನು ದಯವಿಟ್ಟು ಕಾಪಾಡಿ ಎಂದು ಬೇಡಿಕೊಂಡಾಗ ಶಿವನು ಬೆಂಕಿಯ ಉಂಡೆಯಾಗಿ ಅರುಣಾಚಲ ಪರ್ವತದ ತೊಪ್ಪಲಿನಲ್ಲಿ ಪ್ರತ್ಯಕ್ಷನಾಗುತ್ತಾನೆ. ಆಗ ಭೂಮಿಯ ಮೇಲೆ ಮತ್ತೆ ಬೆಳಕು ಎಲ್ಲೆಡೆ ವಿಸ್ತಾರವಾಗುತ್ತದೆ. ಇದರಿಂದ ಕತ್ತಲೆಯಿಂದ ತುಂಬಿಕೊಂಡಿದ್ದ ಬ್ರಹ್ಮಾಂಡ ಮತ್ತೆ ಬೆಳಕಿನಿಂದ ಆವೃತಗೊಳ್ಳುವುದು.

ಈ ದೇವಸ್ಥಾನದಲ್ಲಿ ಇರುವ ಶಿವನ ಲಿಂಗದ ದರ್ಶನ ಮಾಡಲು ಒಳ ಹೋಗುತ್ತಿದ್ದಂತೆ ಉಷ್ಣವು ಹೆಚ್ಚಾಗುತ್ತ ಹೋಗುತ್ತದೆ. ಈ ಅನುಭವವು ಅಲ್ಲಿಗೆ ಹೋಗುವ ಪ್ರತಿಯೊಬ್ಬ ಭಕ್ತಾದಿಗೆ ಆಗುತ್ತದೆ. ಮಳೆಗಾಲ, ಬೇಸಿಗೆಕಾಲ ಅಥವ ಚಳಿಗಾಲ ಯಾವುದೇ ಕಾಲದಲ್ಲಿ ಹೋದರೂ ಕೂಡ ಆ ಲಿಂಗದ ಹತ್ತಿರ ಹೋಗುತ್ತಿದ್ದಂತೆ ನಿಮ್ಮ ದೇಹದ ಉಷ್ಣಾಂಶವು ಹೆಚ್ಚಾಗುತ್ತದೆ. ಅದೆಷ್ಟೋ ಬಾರಿ ಅಲ್ಲಿಗೆ ಬರುವ ಭಕ್ತರಿಗೆ ಉಷ್ಣಾಂಶ ತಡೆದುಕೊಳ್ಳಲು ಆಗುವುದಿಲ್ಲವೆಂದು ದೇವಸ್ಥಾನದ ಕಮಿಟಿಯು ಲಿಂಗದ ಬಳಿ “AC” ಇಡಲು ಪ್ರಯತ್ನ ಪಟ್ಟರು. ಆದರೂ ಅಲ್ಲಿನ ತಾಪಮಾನ ಮಾತ್ರ ಕಡಿಮೆ ಆಗಿಲ್ಲ.

ಆಧುನಿಕ ವಿಜ್ಞಾನದ ಪ್ರಕಾರ ಈ ಲಿಂಗವನ್ನು “Tesla coil” ಎಂದು ಕರೆಯುತ್ತಾರೆ. ಈ tesla coil ಅನ್ನು ಪ್ರಪಂಚ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ “ನಿಕೋಲಾಸ್ ಟೆಸ್ಲಾ” ಅವರು ಕಂಡು ಹಿಡಿದಿದ್ದಾರೆ. ಕೇವಲ ಗಾಳಿಯ ಮೂಲಕ ಬೆಳಕು ಉತ್ಪತ್ತಿ ಮಾಡುವ ಶಕ್ತಿ ಈ “Tesla coil” ಗಿದೆ. ಉದಾಹರಣೆಗೆ ಈ coil ಹತ್ತಿರ ಒಂದು ಬಲ್ಬ್ ಅನ್ನು ಹಿಡಿದರೆ ಗಾಳಿಯ ಮೂಲಕ ಬಲ್ಬ್ ನಲ್ಲಿ ಬೆಳಕು ಉತ್ಪತ್ತಿಯಾಗುತ್ತದೆ. ಇದೇ ರೀತಿಯಲ್ಲಿ ಈ ಶಿವನ ಲಿಂಗವು ಕೂಡ ಕಾರ್ಯವಹಿಸುತ್ತಿದೆ. ಕೆಲವರು ಹೇಳುವ ಪ್ರಕಾರ ನಿಕೋಲಾಸ್ ಟೆಸ್ಲಾ ಅವರಿಗೆ “ಟೆಸ್ಲಾ ಕಾಯಿಲ್” ಕಂಡು ಹಿಡಿಯಲು ಈ ಶಿವ ಲಿಂಗವು ಸ್ಪೂರ್ತಿಯಾಗಿತ್ತಂತೆ.

ಅದೇನೇ ಹೇಳಿ ಜಗತ್ತಿನ ಅನೇಕ ಅನ್ವೇಷಣೆಗಳಿಗೆ ನಮ್ಮ ದೇಶವು ಸ್ಪೂರ್ತಿಯಾಗಿರುವ ವಿಚಾರವನ್ನು ಪ್ರತಿ ಬಾರಿ ಕೇಳಿದಾಗ ತುಂಬಾ ಆನಂದವಾಗುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ .

Follow Karunadu Today for more Interesting Facts & Stories. 

Click here to Join Our Whatsapp Group