ಗೊಂಬೆಗಳೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ. ಅದರಲ್ಲೂ ಚಿಕ್ಕ ಮಕ್ಕಳಿಗಂತು ಗೊಂಬೆಗಳೆಂದರೆ ಬಲು ಜೀವ. ಅವುಗಳು ಇದ್ದರೆ ಸಾಕು ಊಟ ನಿದ್ದೆ ಏನೂ ಬೇಡ, ಅವುಗಳ ಜೊತೆ ಆಟವಾಡುತ್ತ ಕಾಲ ಕಳೆಯುತ್ತಾರೆ. ಚಿಕ್ಕ ಮಕ್ಕಳಿಗೆ ಯಾರು ಸ್ನೇಹಿತರಾಗಿರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಅವರಿಗೆ ಗೊಂಬೆಗಳು ಮಾತ್ರ ತುಂಬಾ ಆತ್ಮೀಯ ಸ್ನೇಹಿತರಾಗಿರುತ್ತವೆ. ಗೊಂಬೆಗಳನ್ನು ತಬ್ಬಿಕೊಂಡು ಮುದ್ದಾಗಿ ಮಲಗುವ ಮಕ್ಕಳನ್ನು ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ಘಟನೆಗಳು ನಡೆದಿದ್ದು ಗೊಂಬೆಗಳಲ್ಲಿ ಪ್ರೇತಾತ್ಮಗಳು ಸೇರಿಕೊಂಡು ಅವುಗಳ ಜೊತೆಗಿರುವ ಮಕ್ಕಳು ಮತ್ತು ಆ ಮಗುವಿನ ಕುಟುಂಬಕ್ಕೆ ಕಂಟಕವಾಗಿವೆ. ಇಂದು ನಿಮಗೆ ಅಂತಹ 5 ಶಾಪಗ್ರಸ್ತ ಗೊಂಬೆಗಳ ಬಗ್ಗೆ ಮಾಹಿತಿ ನೀಡುತ್ತೇವೆ ಮುಂದೆ ಓದಿ.

1) ರಾಬರ್ಟ್ ಗೊಂಬೆ


ಈ ಗೊಂಬೆಯು ಅಮೇರಿಕದಲ್ಲಿರುವ ಫ್ಲೋರಿಡಾದ “Fort east museum” ನಲ್ಲಿ ಇದೆ. ಈ ಗೊಂಬೆಯು ಪ್ರಸಿದ್ದ ವರ್ಣಚಿತ್ರಕಾರ ಮತ್ತು ಲೇಖಕ “Robert Eugene otto” ಅವರ ಬಳಿ ಇತ್ತು. 1906ರಲ್ಲಿ ಈ ಗೊಂಬೆಯ ಮೇಲೆ “ಮಾಟ” ಮಾಡಿ ಅದನ್ನು ರಾಬರ್ಟ್ ಅವರಿಗೆ ನೀಡಲಾಗಿತ್ತು. ಈ ಗೊಂಬೆಯ ಜೊತೆ ರಾಬರ್ಟ್ ವಿಧ ವಿಧವಾದ ದ್ವನಿಯಲ್ಲಿ ಮಾತನಾಡುತ್ತಿದ್ದನ್ನು ಅನೇಕ ಬಾರಿ ರಾಬರ್ಟ್ ಅವರ ಪೋಷಕರು ಗಮನಿಸಿದ್ದರು. ರಾಬರ್ಟ್ ತನ್ನ ದ್ವನಿಯನ್ನು ಬದಲಿಸಿಕೊಂಡು ಗೊಂಬೆಯ ಜೊತೆ ಮಾತನಾಡುತ್ತಿದ್ದಾನೆ ಎಂದು ತಿಳಿದು ಮೊದಲಿಗೆ ಸುಮ್ಮನಾಗಿದ್ದರು ಆದರೆ ದಿನಗಳು ಕಳೆದಂತೆ ಅದು ರಾಬರ್ಟ್ ಅಲ್ಲ ಆ ಗೊಂಬೆಯೆ ಮಾತನಾಡುತ್ತಿದೆ ಎಂದು ಪತ್ತೆಹಚ್ಚಿದರು. ಇಷ್ಟೇ ಅಲ್ಲದೆ ರಾತ್ರಿ ರಾಬರ್ಟ್ ಮಲಗಿದ್ದ ಕೋಣೆಯಲ್ಲಿ ಇದ್ದಕ್ಕಿದಂತೆ ಖುರ್ಚಿಗಳು ತನ್ನಷ್ಟಕ್ಕೆ ತಾನೇ ಮುಂದೆ ಹೋಗುತ್ತಿದ್ದವು. ಇದರ ಬಗ್ಗೆ ಪೋಷಕರು ಯಾಕೆ ಈ ರೀತಿ ಮಾಡುತ್ತಿರುವೆ ಎಂದು ಕೇಳಿದಾಗ ಅದು ನಾನಲ್ಲ ಗೊಂಬೆ ಮಾಡಿದ್ದು ಎಂದು ರಾಬರ್ಟ್ ಹೇಳುತ್ತಿದ್ದ. ಅಕ್ಕ ಪಕ್ಕದ ಮನೆಯವರು ಕೂಡ ರಾಬರ್ಟ್ ಇದ್ದ ಕೋಣೆಯ ಕಿಟಕಿಯಿಂದ ಆ ಗೊಂಬೆಯು ಕದ್ದು ಹೊರಗಿನ ಜನರನ್ನು ನೋಡುತ್ತಿರುವ ದೃಶ್ಯವನ್ನು ಅದೆಷ್ಟೋ ಬಾರಿ ನೋಡಿದ್ದರು. ಹೀಗೆ ವಿಚಿತ್ರ ಘಟನೆಗಳು ನಡೆಯುತ್ತಾ ವರ್ಷಗಳು ಸಾಗಿದವು. 1974 ರಲ್ಲಿ ರಾಬರ್ಟ್ ತೀರಿಕೊಂಡರು, ಅಚ್ಚರಿ ಏನೆಂದರೆ ಅವನ ಕುತ್ತಿಗೆಯ ಭಾಗದಲ್ಲಿ ಈ ಗೊಂಬೆಯು ಕತ್ತು ಹಿಸುಕಿ ಸಾಯಿಸಿದ ಕಲೆ ಇದ್ದವು. ಇದಾದ ಮೇಲೆ ಆ ಗೊಂಬೆಯು ರಾಬರ್ಟ್ ಇದ್ದ ಕೋಣೆಯಲ್ಲಿ ಕೆಲವು ವರ್ಷಗಳ ಕಾಲ ಹಾಗೆಯೇ ಇತ್ತು. ರಾಬರ್ಟ್ ಇದ್ದ ಖಾಲಿ ಮನೆಗೆ ಹೊಸದಾಗಿ ಬಂದಿದ್ದ ಕುಟುಂಬದಲ್ಲಿ 10 ವರ್ಷದ ಬಾಲಕಿಗೆ ಈ ಗೊಂಬೆ ಸಿಕ್ಕಿತು. ಆ ಗೊಂಬೆಯು ಈ ಹುಡುಗಿಯನ್ನು ರಾತ್ರಿಯ ವೇಳೆ ಅದೆಷ್ಟೋ ಬಾರಿ ಕೊಲ್ಲಲು ಪ್ರಯತ್ನ ಪಟ್ಟಿತ್ತು. ಇದನ್ನು ಗಮನಿಸಿದ ಬಾಲಕಿಯ ಪೋಷಕರು ಅದನ್ನು ಮ್ಯೂಸಿಯಮ್ ಗೆ ನೀಡಿದರು. ಇಂದು ಫ್ಲೋರಿಡಾದ “Fort east museum” ನಲ್ಲಿ ಇರುವ ಈ ಗೊಂಬೆಯನ್ನು ನೋಡಲೆಂದೆ ಅನೇಕ ಜನರು ಬರುತ್ತಾರೆ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಈ ಗೊಂಬೆಯ ಜೊತೆ “ಸೆಲ್ಫಿ” ತೆಗೆದುಕೊಳ್ಳಬೇಕೆಂದರೆ ಅದರ ಅಪ್ಪಣೆ ಪಡೆಯಬೇಕು. ಆ ಶಾಪಗ್ರಸ್ತ ಗೊಂಬೆಗೆ ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳುವ ಇಷ್ಟವಿದ್ದರೆ ಒಂದು ಕಡೆ ತನ್ನ ಗೋಣನ್ನು ತಿರುಗಿಸುತ್ತದೆ. ಇಷ್ಟವಿಲ್ಲದಿದ್ದರೆ ಅದು ತಿರುಗಿಸುವುದಿಲ್ಲ. ಅಕಸ್ಮಾತ್ ಅದರ ಅಪ್ಪಣೆ ಇಲ್ಲದೆ ಫೋಟೋ ತೆಗೆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುವವರೆಗೂ ಅದು ಬಿಡುವುದಿಲ್ಲ. ಇದು ವಿಚಿತ್ರವಾದರು ಸತ್ಯ. ಅದೆಷ್ಟೋ ಜನರು ಇದರ ಅಪ್ಪಣೆ ಇಲ್ಲದೆ ಫೋಟೋ ತೆಗೆದುಕೊಂಡು ಹೋಗಿ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ಮ್ಯೂಸಿಯಮ್ ಗೆ ಪತ್ರ ಬರೆದಿರುವ ಉದಾಹರಣೆಗಳಿವೆ.

2) ಅನ್ನಾಬೆಲಾ ಗೊಂಬೆ


ಈ ಗೊಂಬೆಯ ಬಗ್ಗೆ ಖಂಡಿತವಾಗಿ ಕೇಳಿಯೇತಿರುತ್ತೀರ, ಏಕೆಂದರೆ ಈ ಗೊಂಬೆಯ ಬಗ್ಗೆ “conjuring ಮತ್ತು annebelle” ಎನ್ನುವ ಪ್ರಸಿದ್ದ ಹಾಲಿವುಡ್ ಸಿನೆಮಾಗಳನ್ನು ತೆಗೆದಿದ್ದಾರೆ. 1970 ರಲ್ಲಿ “donna” ಎನ್ನುವ ಹುಡುಗಿಗೆ ಅವಳ ತಾಯಿಯು ಈ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಳು. “ಡೊನಾ” ಒಬ್ಬ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಳು, ತನ್ನ ಸ್ನೇಹಿತೆಯಾದ “angie” ಜೊತೆಗೆ ಒಂದು ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದಳು. ದಿನಗಳು ಕಳೆದಂತೆ ತನ್ನ ತಾಯಿ ಕೊಟ್ಟಿದ್ದ ಗೊಂಬೆಯಲ್ಲಿ ವಿಚಿತ್ರ ಬದಲಾವಣೆಯನ್ನು ಡೊನಾ ಮತ್ತು ಅಂಜಿ ಗಮನಿಸತೊಡಗಿದರು. ತನ್ನಷ್ಟಕ್ಕೆ ತಾನು ಓಡಾಡುವುದು ಮತ್ತು ಕೆಲವೊಮ್ಮೆ ರೂಮಿನ ಗೋಡೆಯ ಮೇಲೆ ಚಿತ್ರ ಬಿಡಿಸುವುದು, ಹಾಳೆಗಳ ಮೇಲೆ “ನನ್ನನ್ನು ಕಾಪಾಡಿ, “LOU ಅನ್ನು ಕಾಪಾಡಿ” ಎಂದು ಬರೆಯುವುದು. ಹೀಗೆ ವಿಚಿತ್ರವಾದ ಘಟನೆಗಳು ನಡೆಯತೊಡಗಿದವು. ಕೆಲವೊಮ್ಮೆ ಡೊನಾ ಮತ್ತು ಅಂಜಿ ಕಾಲೇಜನ್ನು ಮುಗಿಸಿ ಮರಳಿ ಅಪಾರ್ಟ್ಮೆಂಟ್ ಗೆ ಬಂದು ನೋಡಿದರೆ ಆ ಗೊಂಬೆಯು ಖುರ್ಚಿಯ ಮೇಲೆ ಮತ್ತು ಸೋಫಾದ ಮೇಲೆ ತನ್ನಷ್ಟಕ್ಕೆ ತಾನು ಕುಳಿತಿರುವುದನ್ನು ಕಂಡು ಭಯಭೀತರಾದ ಇಬ್ಬರು “ಪ್ಯಾರಾನಾರ್ಮಲ್ ಸ್ಪೆಷಲಿಸ್ಟ್” ಅನ್ನು ಬೇಟಿ ಮಾಡಿ ತಮ್ಮ ತೊಂದರೆಯನ್ನು ಹೇಳಿಕೊಂಡರು. ಆಗ ಅವರಿದ್ದ ಮನೆಗೆ ಬಂದು ಗೊಂಬೆಯನ್ನು ವಿಚಾರಣೆ ಮಾಡಿದ ಮೇಲೆ ತನ್ನ ಹೆಸರು “ಅನ್ನಾಬೆಲಾ ಹಿಗ್ಗಿನ್ಸ್” ಕೆಲವು ವರ್ಷಗಳ ಹಿಂದೆ ಈ ಅಪಾರ್ಟ್ಮೆಂಟ್ ಕಟ್ಟುವ ಮೊದಲೇ ಇಲ್ಲೊಂದು ಮನೆಯಿತ್ತು ಆ ಮನೆಯಲ್ಲಿ ತಾನು ಸತ್ತಿರುವೆ ಎಂದು ಹೇಳಿತು. ಇದರ ಬಗ್ಗೆ ಅಪಾರ್ಟ್ಮೆಂಟ್ ಮಾಲೀಕನಿಗೆ ವಿಚಾರಿಸಿದಾಗ ಇದು ನಿಜ ಅಪಾರ್ಟ್ಮೆಂಟ್ ಕಟ್ಟುವ ವೇಳೆಯಲ್ಲಿ 7 ವರ್ಷದ ಒಬ್ಬ ಬಾಲಕಿಯ ಹೆಣವು ಸಿಕ್ಕಿತ್ತು ಎಂದು ಹೇಳಿದ. ಇದನ್ನು ಕೇಳಿದ ಡೊನಾ ಮತ್ತು ಅಂಜಿ ಆ ಪುಟ್ಟ ಬಾಲಕಿಯ ಆತ್ಮಕ್ಕೆ ಕರುಣೆ ತೋರಿಸಿ ಮನೆಗೆ ಬಂದಿದ್ದ “ಪ್ಯಾರಾನಾರ್ಮಲ್ ಸ್ಪೆಷಲಿಸ್ಟ್” ಗೆ ಆ ಬಾಲಕಿಯ ಆತ್ಮವು ಆ ಗೊಂಬೆಯಲ್ಲೇ ಇರಲಿ ಬಿಡಿ ಎಂದು ಹೇಳಿದರು. ಆದರೆ ಈ ಗೊಂಬೆಯಲ್ಲಿ ಕೇವಲ ಆ ಬಾಲಕಿಯ ಆತ್ಮವಿಲ್ಲ ಬೇರೆ ಏನೋ ಇದೆ ಎಂದು ಡೊನಾ ಮತ್ತು ಅಂಜಿಯ ಸ್ನೇಹಿತ “LOU” ಅರಿತಿದ್ದ. ಡೊನಾ ಮತ್ತು ಅಂಜಿ ಇದ್ದ ಪಕ್ಕದ ಮನೆಯಲ್ಲಿ ವಾಸವಿದ್ದ ಈತನಿಗೂ ಕೂಡ ಈ ಗೊಂಬೆಯು ಕಾಟ ಕೊಡಲು ಶುರು ಮಾಡಿತ್ತು. ಅದೆಷ್ಟೋ ಬಾರಿ ರಾತ್ರಿ ಮಲಗಿದ್ದಾಗ ತನ್ನ ಕಾಲನ್ನು ಯಾರೋ ಬಿಗಿಯಾಗಿ ಹಿಡಿದುಕೊಂಡು ಕುತ್ತಿಗೆ ಹಿಸುಕಿದ ಹಾಗೆ ಈತನಿಗೆ ಆಗುತ್ತಿತ್ತು. ಇದರ ಬಗ್ಗೆ ಡೊನಾ ಮತ್ತು ಅಂಜಿಗೆ ಹೇಳಿದಾಗ ಅವರು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅದೊಂದು ದಿನ “LOU” ಮೈ ಮೇಲೆ ಯಾರೋ ಜಿಗುರಿದ ಕಲೆಗಳು ಮೂಡಿದ್ದವು. ಇದನ್ನು ಕಂಡ ಮೇಲೆ ಡೊನಾ ಮತ್ತು ಅಂಜಿಗೆ ಇದು ಕೇವಲ ಬಾಲಕಿಯ ಆತ್ಮವಲ್ಲ ಇದರ ಒಳಗೆ ಬೇರೆ ಏನೋ ಇದೆ ಎಂದು ತಿಳಿಯಿತು. ಆಗ ಚರ್ಚಿನ ಪಾದ್ರಿಗೆ ಈ ವಿಷಯವನ್ನು ತಿಳಿಸಿದರು. ಆಗ ಗೊಂಬೆಯ ಮೇಲೆ ಯೇಸುವಿನ ಪವಿತ್ರ ನೀರನ್ನು ಸಿಡಿಸಿ ಅಂದಿನಿಂದ ಆ ಗೊಂಬೆಯನ್ನು ಅಮೇರಿಕಾದ ಕನೆಕ್ಟಿಕಟ್ ನಲ್ಲಿರುವ “The Warrens’ Occult Museum” ನಲ್ಲಿ ಒಂದು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿದೆ.

3) ಮ್ಯಾಂಡಿ ಗೊಂಬೆ


“Quesnel and District Museum” ನಲ್ಲಿರುವ ಈ ಗೊಂಬೆಯ ಒಳಗೆ ಒಬ್ಬ ಪುಟ್ಟ ಬಾಲಕಿಯ ಆತ್ಮವಿದೆ. ಒಬ್ಬ ವೃದ್ದೆಯು ಇದನ್ನು ಮೊದಲು ಪತ್ತೆ ಮಾಡಿ ನಂತರ ಅದನ್ನು 1991 ರಲ್ಲಿ ಮ್ಯೂಸಿಯಮ್ ಗೆ ನೀಡಿದ್ದಳು. ಈ ಗೊಂಬೆಯ ಒಳಗೆ ಆ ಬಾಲಕಿಯ ಆತ್ಮ ಹೇಗೆ ಸೇರಿತು ಎಂದು ತಿಳಿದುಕೊಳ್ಳಲು ನಿರ್ಧರಿಸಿದ ಮ್ಯೂಸಿಯಮ್ ನವರು ಆ ವೃದ್ದೆಯನ್ನು ಕೇಳಿದಾಗ ತಾನು ಇತ್ತೀಚೆಗೆ ಒಂದು ಮನೆಯನ್ನು ಖರೀದಿಸಿದೆ ಆ ಮನೆಯ “ಬೇಸ್ಮೆಂಟ್” ನಲ್ಲಿ ಪ್ರತಿ ದಿನ ಒಬ್ಬ ಹುಡುಗಿಯು ಆಳುವ ಶಬ್ದ ಕೇಳಿಸುತ್ತಿತ್ತು ಆದರೆ ಅಲ್ಲಿ ಹೋಗಿ ನೋಡಿದರೆ ಯಾರು ಕೂಡ ಇರುತ್ತಿರಲಿಲ್ಲ. ಇದೇ ತರಹ ಪ್ರತಿ ದಿನವೂ ಆಗುತ್ತಿತ್ತು. ದಿನಗಳು ಕಳೆದಂತೆ “ಬೇಸ್ಮೆಂಟ್” ನಲ್ಲಿ ಈ ಗೊಂಬೆ ನನಗೆ ಸಿಕ್ಕಿತು. ಅದನ್ನು ತಂದು ನನ್ನ ಕೋಣೆಯಲ್ಲಿ ಇಟ್ಟುಕೊಂಡೆ. ಆಗ ನನ್ನ ಕೋಣೆಯಲ್ಲಿ ವಿಚಿತ್ರವಾದ ಘಟನೆಗಳು ನಡೆಯತೊಡಗಿದವು . ನನಗೆ ಈ ಗೊಂಬೆಯ ಮೇಲೆ ಅನುಮಾನ ಬಂದು ಚರ್ಚಿನ ಪಾದ್ರಿಯನ್ನು ಭೇಟಿ ಮಾಡಿ ಈ ವಿಷಯ ತಿಳಿಸಿದೆ. ಆಗ ನನಗೆ ತಿಳಿದದ್ದು ಈ ಗೊಂಬೆಯ ಒಳಗೆ ಒಬ್ಬ ಬಾಲಕಿಯ ಆತ್ಮವಿದೆ ಎನ್ನುವುದು. ಅದಕ್ಕಾಗಿ ಇದನ್ನು ಮ್ಯೂಸಿಯಮ್ ಗೆ ನೀಡುತ್ತಿದ್ದೇನೆ ಎಂದು ಹೇಳಿದಳು. ವಿಚಿತ್ರವೆಂದರೆ ಈ ಬೊಂಬೆಯನ್ನು ನೀಡಿ ಹೋದ ಮೇಲೆ ಮ್ಯೂಸಿಯಮ್ ನಲ್ಲಿ ವಿಚಿತ್ರವಾದ ಘಟನೆಗಳು ನಡೆಯಲು ಶುರುವಾದವು. ಕೆಲವು ವಸ್ತುಗಳು ಇದ್ದಕ್ಕಿದ್ದಂತೆ ಮಾಯವಾಗುವುದು ಮತ್ತು ಎಲ್ಲೆಂದರಲ್ಲಿ ಚಿಲ್ಲಾ ಪಿಲ್ಲಿಯಾಗಿ ಬೀಳುವುದು. ಹೀಗೆ ಅನೇಕ ಘಟನೆಗಳು ನಡೆದವು.ಇದಷ್ಟೇ ಅಲ್ಲದೆ ಮ್ಯೂಸಿಯಮ್ ಅನ್ನು ರಜೆ ಮಾಡಿದ ದಿನವಂತು ಸಂಪೂರ್ಣ ಮ್ಯೂಸಿಯಮ್ ನಲ್ಲಿ ಎಲ್ಲಾ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದವು. ದಿನಗಳು ಕಳೆದಂತೆ ಮ್ಯೂಸಿಯಮ್ ನಲ್ಲಿ ಇರುವ ಕೆಲಸಗಾರರಿಗೆ ತಿಳಿದ ಸಂಗತಿ ಏನೆಂದರೆ ಈ ಕೆಲಸವನ್ನು ಮ್ಯಾಂಡಿ ಗೊಂಬೆ ಮಾಡುತ್ತಿದ್ದಾಳೆ ಎನ್ನುವುದು. ಆ ಗೊಂಬೆ ಜೊತೆಗೆ ಸದಾ ಒಬ್ಬರು ಇರಲೇಬೇಕು ಇಲ್ಲವಾದಲ್ಲಿ ಕೋಪದಿಂದ ಈ ರೀತಿ ಮಾಡುತ್ತಿದ್ದಳು. ಅಂದಿನಿಂದ ಈ ಗೊಂಬೆಯನ್ನು ನೋಡಿಕೊಳ್ಳಲೆಂದೇ ಒಬ್ಬರನ್ನು ನೇಮಕ ಮಾಡಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಗೊಂಬೆಯಲ್ಲಿರುವ ಆ ಬಾಲಕಿಯ ಆತ್ಮವು ಮಾತ್ರ ಇದುವರೆಗು ಯಾರಿಗೂ ತೊಂದರೆ ಮಾಡದೆ ಎಲ್ಲರ ಜೊತೆ ಸ್ನೇಹದಿಂದ ಇದೆ.

4) ಒಕಿಕು ಗೊಂಬೆ


ಈ ಗೊಂಬೆಯು ಜಪಾನಿನ “iwamizawa” ನಗರದ “mannenji” ದೇವಸ್ಥಾನದಲ್ಲಿದೆ. 1918 ರಲ್ಲಿ 17 ವರ್ಷದ “Ekichiki Suzuki” ಎನ್ನುವ ಹುಡುಗನು ತನ್ನ 2 ವರ್ಷದ ಪುಟ್ಟ ತಂಗಿಯಾದ “ಒಕಿಕು” ಗೆ ಉಡುಗೊರೆಯಾಗಿ ನೀಡಿದ್ದನು. ಆ ಪುಟ್ಟ ಬಾಲಕಿಯು ಆ ಗೊಂಬೆಯನ್ನು ತುಂಬಾ ಇಷ್ಟ ಪಟ್ಟಿದ್ದಳು. ಆದರೆ ಕೆಲವು ವರ್ಷಗಳ ನಂತರ ಅನಾರೋಗ್ಯೋದ ಕಾರಣದಿಂದ ಆ ಪುಟ್ಟ ಹುಡುಗಿಯು ಅಸುನೀಗಿದ್ದಳು. ಕೆಲವು ದಿನಗಳ ನಂತರ ಆ ಗೊಂಬೆಗೆ ಮನುಷ್ಯರ ಹಾಗೆ ತಲೆಯಲ್ಲಿ ಕೂದಲು ಬೆಳೆಯಲು ಶುರುವಾಗಿರುವುದನ್ನು ಆ ಬಾಲಕಿಯ ಪೋಷಕರು ಗಮನಿಸಿದರು. ಆಗ ತಮ್ಮ ಮಗಳ ಆತ್ಮ ಗೊಂಬೆಯ ಒಳಗೆ ಸೇರಿದೆ ಎಂದು ನಂಬಲು ಶುರು ಮಾಡಿದರು. ಇದನ್ನು ಖಾತ್ರಿಪಡಿಸಿಕೊಳ್ಳಲು ಬೆಳೆಯುತ್ತಿರುವ ಕೂದಲನ್ನು ಲ್ಯಾಬೊರೇಟರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅದು ಮೃತಪಟ್ಟ ಬಾಲಕಿಯ ಕೂದಲು ಎಂದು ಸಾಭೀತಾಯಿತು. 1938 ರಲ್ಲಿ ಆ ಗೊಂಬೆಯನ್ನು ““mannenji” ದೇವಸ್ಥಾನದಲ್ಲಿ” ಇಟ್ಟು ಶಾಶ್ವತವಾಗಿ ಬೇರೆ ಊರಿಗೆ ತೆರಳಿದ್ದಾರೆ. ಅಂದಿನಿಂದ ಆ ಗೊಂಬೆ ಆ ದೇವಸ್ಥಾನದಲ್ಲಿದ್ದು ದಿನೇ ದಿನೇ ಕೂದಲು ಬೆಳೆಯುತ್ತಲೇ ಇದೆ. ಈಗಲೂ ಕೂಡ ಅದನ್ನು ನೋಡಲೆಂದು ಸಾಕಷ್ಟು ಜನರು ಹೋಗುತ್ತಾರೆ. ಪ್ರತಿ ವರ್ಷ ಆ ಬಾಲಕಿಯ ನೆನಪಿಗಾಗಿ ಹೆಚ್ಚು ಬೆಳೆದಿರುವ ಕೂದಲನ್ನು ಕತ್ತರಿಸಿ ಹುಟ್ಟು ಹಬ್ಬ ಆಚರಿಸುತ್ತಾರೆ.

5) ಗೊಂಬೆಗಳ ದ್ವೀಪ

ಮೆಕ್ಸಿಕೋ ದೇಶದ “Xochimilco” ಬಳಿ ಇರುವ ಈ ದ್ವೀಪಕ್ಕೆ ನೀವು ಹೋದರೆ ಸಾಕು ಬರಿ ಗೊಂಬೆಗಳನ್ನೇ ಕಾಣುತ್ತೀರ. ಈ ದ್ವೀಪದಲ್ಲಿ ಇರುವ ಮರಗಳಿಗೆ ಗೊಂಬೆಗಳನ್ನು ನೇತುಹಾಕಲಾಗಿದೆ. ಎಲ್ಲಿ ನೋಡಿದರೂ ಕೂಡ ಗೊಂಬೆಗಳೆ ಕಾಣುವ ಈ ದ್ವೀಪದ ಕಥೆ ತುಂಬಾ ಭಯಾನಕವಾಗಿದೆ. ಈ ದ್ವೀಪವು “don Julian Santana” ಎನ್ನುವವರದ್ದಾಗಿತ್ತು. ಅದೊಂದು ದಿನ ಈ ದ್ವೀಪದ ಬಳಿ ಒಂದು ಬಾಲಕಿಯ ಹೆಣ ಅವರಿಗೆ ಸಿಕ್ಕಿತ್ತು. ಆ ಬಾಲಕಿಯ ಕೈಯಲ್ಲಿ ಒಂದು ಗೊಂಬೆ ಇರುವುದನ್ನು ಗಮನಿಸಿದ ಸಂತಾನ ಅದನ್ನು ತಮ್ಮ ಬಳಿ ಇಟ್ಟುಕೊಂಡು ಆ ಬಾಲಕಿಯ ದೇಹವನ್ನು ಪೊಲೀಸರಿಗೆ ಒಪ್ಪಿಸಿದ್ದರು. ಅಂದಿನಿಂದ ಪ್ರತಿ ದಿನ ಯಾವುದೋ ಒಂದು ಆತ್ಮ ಅವರನ್ನು ಹಿಂಬಾಲಿಸುತ್ತ ಇತ್ತು. ಇದರಿಂದ ಭಯಭೀತರಾದ ಸಂತಾನ ತಮ್ಮ ಪಕ್ಕದ ಮನೆಯಲ್ಲಿದ್ದ “Barrera” ಎನ್ನುವ ವ್ಯಕ್ತಿಗೆ ಈ ವಿಷಯದ ಬಗ್ಗೆ ಹೇಳಿದರು. ಆಗ ಬೈಬಲ್ ಸಹಾಯದಿಂದ “Barrera” ಆ ಆತ್ಮವನ್ನು ಸಂತಾನ ಅವರ ಬಳಿ ಬಾರದ ಹಾಗೆ ಮಾಡಲು ಪ್ರಯತ್ನ ಪಟ್ಟಿದ್ದರು. ಕೆಲವು ದಿನಗಳ ನಂತರ ಮತ್ತೆ ಆ ಆತ್ಮವು ಕಾಟ ಕೊಡಲು ಶುರು ಮಾಡಿತು. ಇದರಿಂದ ಹೆದರಿ ತಮ್ಮ ಬಳಿ ಇದ್ದ ಗೊಂಬೆಯನ್ನು ಆ ದ್ವೀಪದ ಒಂದು ಮರಕ್ಕೆ ಕಟ್ಟಿ ಹಾಕಿ ಬಂದರು. ಇಷ್ಟಾದರು ಕೂಡ ಆ ಆತ್ಮದ ಕಾಟ ಕಡಿಮೆ ಆಗಲಿಲ್ಲ. ಇದರಿಂದ ಮಾನಸಿಕವಾಗಿ ಹುಚ್ಚರಂತೆ ಆಗಿದ್ದ ಸಂತಾನ ಅವರು ಪ್ರತಿ ದಿನ ಒಂದು ಗೊಂಬೆಯನ್ನು ಆ ದ್ವೀಪಕ್ಕೆ ತೆಗೆದುಕೊಂಡು ಹೋಗಿ ಅಲ್ಲಿರುವ ಮರಗಳಿಗೆ ಮತ್ತು ಮನೆಗೆ ಎಲ್ಲೆಂದರಲ್ಲಿ ಕಟ್ಟಿ ಹಾಕಿ ಬರುತ್ತಿದ್ದರು. ಅದೇನೇ ಮಾಡಿದರು ಕೂಡ ಆತ್ಮದ ಕಾಟ ಕಡಿಮೆ ಆಗಲಿಲ್ಲ. ಕೊನೆಗೆ ಸಂತಾನ ಮತ್ತು ಅವರಿಗೆ ಸಹಾಯ ಮಾಡಿದ್ದ “Barrera” ಇಬ್ಬರು ಕೂಡ ಆ ಆತ್ಮದ ಕೈಗೆ ಸಿಕ್ಕು ಸತ್ತು ಹೋದರು. ವಿಚಿತ್ರವೆಂದರೆ ಇಬ್ಬರ ಮೃತ ದೇಹವು ದ್ವೀಪದಲ್ಲಿ ಸಿಕ್ಕಿದ್ದ ಬಾಲಕಿಯ ಮೃತ ದೇಹದ ಸ್ಥಳದಲ್ಲಿಯೇ ಸಿಕ್ಕಿತ್ತು. ಅಂದಿನಿಂದ ಆ ದ್ವೀಪವನ್ನು “ದೆವ್ವದ ದ್ವೀಪ” ಎಂದು ಕರೆಯಲಾಗುತ್ತಿದೆ. ಇದನ್ನು ನೋಡಲು ಅದೆಷ್ಟೋ ಜನರು ಹೋಗುತ್ತಾರೆ. ಅಲ್ಲಿಗೆ ಹೋಗಿರುವ ಅನೇಕ ಪ್ರವಾಸಿಗರಿಗು ಕೂಡ ಯಾರೋ ತಮ್ಮ ಕಿವಿಯ ಹತ್ತಿರ ಬಂದು ಏನನ್ನೋ ಮಾತನಾಡಿದ ಹಾಗೆ ಆಗುತ್ತಿರುವ ಅನುಭವ ಆಗಿರುವ ಉದಾಹರಣೆಗಳಿವೆ.


ನೋಡಿದಿರಲ್ಲ, ಪ್ರಪಂಚದಲ್ಲಿ ಇಂತಹ ಅನೇಕ ಅಚ್ಚರಿಯನ್ನು ಹೊತ್ತ ಗೊಂಬೆಗಳು ಸಾಕಷ್ಟು ಇದ್ದು ಅವುಗಳಿಂದ ತೊಂದರೆಗೆ ಒಳಗಾಗಿ ಕೊನೆಗೆ ಪ್ರಾಣವನ್ನೇ ಕಳೆದುಕೊಂಡ ಅನೇಕ ಜನರಿದ್ದಾರೆ. ಇತ್ತೀಚೆಗೆ ಪ್ರಸ್ಸಿದ್ದ “ebay” ಅಲ್ಲಿ ಮಾರಾಟಕ್ಕೆ ಇದ್ದ ಕೆಲ ಗೊಂಬೆಯನ್ನು ಖರೀದಿಸಿದ ಜನರು ಅವುಗಳಿಂದ ತೊಂದರೆಗೆ ಒಳಗಾಗಿ ಪ್ರಾಣ ಕಳೆದುಕೊಂಡ ಘಟನೆಗಳು ಕೂಡ ನಡೆದಿವೆ. ಇದೇ ಕಾರಣಕ್ಕೆ ಯಾವುದೇ ವಸ್ತುಗಳನ್ನು ಖರೀದಿಸುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಖರೀದಿಸಿ ಇಲ್ಲವಾದರೆ ತೊಂದರೆ ಕಟ್ಟಿಟ್ಟ ಬುತ್ತಿ.

Follow Karunadu Today for more Interesting Facts & Stories. 

Click here to Join Our Whatsapp Group