ಬ್ರಹ್ಮರ್ಷಿ ವಿಶ್ವಾಮಿತ್ರರನ್ನು ದಶರಥ ಮಹಾರಾಜನು ಭಕ್ತಿ-ಗೌರವಗಳಿಂದ ಸ್ವಾಗತಿಸಿದ ಉತ್ತಮವಾದ ಆಸನವನ್ನು ನೀಡಿ ಉಪಚಾರ ಮಾಡಿದ. ‘ಮಹರ್ಷಿಗಳೇ! ನಿಮ್ಮ ಆಗಮನದಿಂದ ನಾವು ಪುನೀತರಾದೆವು” ಎಂದು ಅಂತಃಕರಣ ಪೂರ್ವಕವಾಗಿ ಹೇಳಿದ ದಶರಥನ ವಿನಯವನ್ನು ಕಂಡು ವಿಶ್ವಾಮಿತ್ರರಿಗೆ ತುಂಬ ಸಂತೋಷವಾಯಿತು. ಅವರು ರಾಜ್ಯದ ಎಲ್ಲರ ಕುಶಲವನ್ನೂ ವಿಚಾರಿಸಿದರು. ”ನಿನ್ನ ರಾಜ್ಯ ಸುಭಿಕ್ಷ ವಾಗಿದೆಯೇ ? ಪ್ರಜೆಗಳು ಸುಖವಾಗಿದ್ದಾರೆಯೇ?” ಎಂದು ಕೇಳಿದರು. ದಶರಥನು ಕೈಮುಗಿದುಕೊಂಡು ”ಮಹರ್ಷಿಗಳೇ! ನಿಮ್ಮ ಆಶೀರ್ವಾದದಿಂದ ದೇಶ ಸುಭಿಕ್ಷ ವಾಗಿದೆ. ಪ್ರಜೆಗಳು ಧರ್ಮದಿಂದಿದ್ದಾರೆ. ಶತ್ರುಗಳ ಪೀಡೆ ಇಲ್ಲದೆ ಎಲ್ಲರೂ ಸುಖದಿಂದ ಇದ್ದೇವೆ. ತಾವು ಬಂದುದು ನಮಗೆ ತುಂಬ ಸಂಭ್ರಮವಾಗಿದೆ. ಪೂಜ್ಯರಾದ ತಾವು ಯಾವುದಾದರೂ ಕಾರ್ಯದ ಮೇಲೆ ಬಂದಿದ್ದರೆ ದಯವಿಟ್ಟು ತಿಳಿಸಬೇಕು. ಅದು ಎಷ್ಟೇ ದೊಡ್ಡ ಕೆಲಸವಾಗಿದ್ದರೂ ಅದನ್ನು ನಡೆಸಿಕೊಡುವ ಹೊಣೆ ನನ್ನದು” ಎಂದ. ದಶರಥನ ಮಾತುಗಳನ್ನು ಕೇಳಿ ವಿಶ್ವಾಮಿತ್ರರಿಗೆ ಬಹಳ ಹರ್ಷವಾಯಿತು. ಅವರು ದಶರಥನಿಂದ ಒಂದು ರೀತಿಯ ಸಹಾಯ ಅಪೇಕ್ಷಿಸಿಯೇ ಬಂದಿದ್ದರು. ಅವರು ದಶರಥನನ್ನು ಕುರಿತು “ಮಹಾರಾಜ ! ನಿನ್ನ ಮಾತಿನಿಂದ ನನಗೆ ತುಂಬ ಆನಂದವಾಗಿದೆ. ಸಾನು ಇಪ್ಪಿಗೆ ಒಂದು ಹಿರಿಯ ಉದ್ದೇಶದಿಂದ ಬಂದಿದೇವೆ. ಅದನ್ನು ‘ನೀನು ಈಡೇರಿಸಬೇಕೆಂದು ನನ್ನ ಅಪೇಕ್ಷೆ.

ದಶರಥ ಮಹಾರಾಜ ! ನಾನು ಒಂದು ದೊಡ್ಡ ಉಜ್ಯವನ್ನು ಪ್ರಾರಂಬಿಸಿದ್ದೇನೆ. ಆದರೆ ಅದನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಸಲ ಮಖ್ಯವರಾಡು ನಾಗಲೂ, ಮಾರೀಚಿ ಮತ್ತು ಸುಬಾಹು ಎಂಬ ಇಬ್ಬರು ರಾಕ್ಷಸರು ಲಕ್ಕಿ-ಮಾಂಸಗಳನ್ನು ತಂದು ಯಜ್ಞಕುಂಡದ ಮೇಲೆ ಸುರಿದುಬಿಡುತ್ತಾರೆ. ಹೀಗಾಗಿ ಯಜ್ಞ ಅಪವಿತ್ರಗೊಂಡು ನನ್ನ ಪರಿಶ್ರಮ ವ್ಯರ್ಥವಾಗುತ್ತಿದೆ. ನಾನೇನೋ ಮಾರೀಚಿ ಮತ್ತು ಸುಭಾಮಗಳಿಗೆ ಶಾಪ ಕೊಟ್ಟು ಅವರ ತೊಂದರೆಯನ್ನು ನಿವಾರಿಸಿಕೊಳ್ಳಬಹುದಿತ್ತು ಆದರೆ ನಾನು ಯಾಗ ದೀಕ್ಷೆಯಲ್ಲಿರುವುದರಿಂದ ಶಾಪ ಕೊಡುವ ಹಾಗಿಲ್ಲ ಆದ್ದರಿಂದ ನಿನ್ನ ಬಳಿ ನನ್ನದೊಂದು ಕೋರಿಕೆ ಇದೆ. ನೀನು ದೊಡ್ಡ ಮನಸ್ಸು ಮಾಡಿ ನನ್ನ ಜೊತೆಯಲ್ಲಿ ನಿನ್ನ ಮಗ ರಾಮನನ್ನು ಕಳುಹಿಸಿಕೊಡು. ಅವನು ಈ ರಾಕ್ಷಸರನ್ನು ಕೊಂದು ನನ್ನ ಯಾಗ ಮುಂದುವರಿಯಲು ಸಹಾಯ ಮಾಡುತ್ತಾನೆ. ಸಣ್ಣ ವಯಸ್ಸಿನಪಸಾದ ರಾಮನು ರಾಕ್ಷಸರನ್ನು ಕೊಲ್ಲಬಲ್ಲನೇ ಎಂಬ ಅನುಮಾನ ನಿನಗೆ ಬೇಡ ರಾಮನು ಮಹಾ ಪರಾಕ್ರಮಿ. ಈ ರಾಕ್ಷಸರನ್ನು ಕೊಲ್ಲಲು ಆವನೊಬ್ಬನೇ ಸಮರ್ಥ ಆದರಿಂದ ಏನೂ ಚಿಂತಿಸದೆ ರಾಮನನ್ನು ನನ್ನ ಜೊತೆ ಕಳುಹಿಸಿಕೊಡು” ಎಂದರು.

ವಿಶ್ವಾಮಿತ್ರರ ಪ್ರಾರ್ಥನೆಯನ್ನು ಕೇಳಿ ದಶರಥನಿಗೆ ಬಹಳ ಚಿಂತೆಯಾಯಿತು. ರಾಮ ಅವನ ಮುದ್ದಿನ ಮಗ. ಅವನ ಕಣ್ಮಣಿ. ರಾಮನನ್ನು ನೋಡಿ ದಶರಥ ತನ್ನ ಮುಪ್ಪು ಮರೆಯುತ್ತಿದ್ದ ರಾಮನನ್ನು ಬಿಟ್ಟಿರಲು ಅವನಿಗೆ ಸಾಧ್ಯವೇ ಆಗುತ್ತಿರಲಿಲ್ಲ. ದಶರಥನ ದೃಷ್ಟಿಯಲ್ಲಿ ರಾಮ ಇನ್ನೂ ಒಂದು ಮಗು. ‘ಅವನನ್ನು ವಿಶ್ವಾಮಿತ್ರರ ಜೊತೆ ಕಳುಹಿಸಬೇಕು; ಅದೂ ರಾಕ್ಷಸರನ್ನು ಕೊಲ್ಲುವ ಸಲುವಾಗಿ’ ಎಂಬ ವಿಚಾರದಿಂದಲೇ ದಶರಥನ ಮೈ ಗಡಗಡ ನಡುಗಿತು.

ಅವನು ಕೈ ಮುಗಿದುಕೊಂಡು “ಮಹರ್ಷಿಗಳೇ ! ರಾಮ ಇನ್ನೂ ಚಿಕ್ಕವನು. ಆರಮನೆಯನ್ನು ಬಿಟ್ಟು ಅವನೆಂದಿಗೂ ಹೊರಗೆ ಹೋಗಿಲ್ಲ ಅಂತಹವನು ಕಾಡಿನಲ್ಲಿ ಹೇಗೆ ತಾನೇ ಓಡಾಡಬಲ್ಸ್ ಹಸುಳೆಯಾದ ಅವನು ಕ್ರೂರ ರಾಕ್ಷಸರೊಡನೆ ಹೇಗೆ ಹೋರಾಡಬಲ್ಲ ? ಆದ್ದರಿಂದ ಅವನನ್ನು ನಿಮ್ಮೊಡನೆ ಕಳುಹಿಸಿಯೂ ಉಪಯೋಗವಿಲ್ಲ. ಅವನ ಬದಲು ನಾನೇ ನಿಮ್ಮೊಡನೆ ಬರುತ್ತೇನೆ ರಾಕ್ಷಸರನ್ನು ಸದೆಬಡಿಯುತ್ತೇನೆ ನಿಮ್ಮ ಯಜ್ಞ ನಿರ್ವಿಘ್ನವಾಗಿ ನಡೆಯುವಂತೆ ಮಾಡುತ್ತೇನೆ” ಎಂದನು.

ದಶರಥನ ಪ್ರಾರ್ಥನೆಗೆ ವಿಶ್ವಮಿತ್ರರು ಒಪ್ಪಲಿಲ್ಲ. “ನಿನಗೆ ರಾಮನ ಪರಾಕ್ರಮ ತಿಳಿಯದು. ಆದ್ದರಿಂದ ಹೀಗೆ ಮಾತನಾಡುತ್ತಿದ್ದೀಯೆ ರಾಮನ ಬಗ್ಗೆ ನೀನು ಚಿಂತಿಸುವ ಅಗತ್ಯವೇ ಇಲ್ಲ. ರಾಮನನ್ನು ನನ್ನ ಜೊತೆ ಕಳುಹಿಸಿಕೊಡು. ರಾಕ್ಷಸರನ್ನು ಕೊಂದ ಕೀರ್ತಿ ಅವನಿಗೆ ಲಭಿಸುವಂತೆ ಮಾಡು” ಎಂದರು. ಆದರೂ ದಶರಥನಿಗೆ ಧೈರ್ಯ ಬರಲಿಲ್ಲ. ಅವನು ”ಮಹರ್ಷಿಗಳೇ ! ನನ್ನನ್ನು ಕ್ರಮಿಸಿ. ರಾಮನನ್ನು ನಿಮ್ಮ ಜೊತೆ ಕಳುಹಿಸುವುದು ಬಿಟ್ಟು ಬೇರೆ ಏನು ಬೇಕಾದರೂ ಕೇಳಿ. ಮಾಡಿಕೊಡುತ್ತೇನೆ. ಆದರೆ ರಾಮನನ್ನು ಮಾತ್ರ ಕಳುಹಿಸಲಾರೆ” ಎಂದುಬಿಟ್ಟ.

ವಿಶ್ವಾಮಿತ್ರರಿಗೆ ಅಸಾಧ್ಯ ಕೋಪ ಬಂತು. ಅವರು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ‘ಮಹಾರಾಜ ! ಹೇಳಿದ ಕೆಲಸ ಮಾಡಿಕೊಡುತ್ತೇನೆ ಎಂದು ಮಾತುಕೊಟ್ಟು ಈಗ ಕುಂಟು ನೆಪಗಳನ್ನು ಒಡ್ಡುತ್ತಿದ್ದೀಯೆ. ಇದು ಸರಿಯಲ್ಲ ಆಡಿದ ಮಾತಿಗೆ ತಪ್ಪಿದವ ಎಂಬ ಅಪಕೀರ್ತಿ ಪಡೆಯಬೇಡ” ಎಂದು ಗರ್ಜಿಸಿದರು. 

ಕಥೆ ಮುಂದುವರೆಯುವುದು…

Follow Karunadu Today for more Spiritual Stories.

Click here to Join Our Whatsapp Group