2018 ರ ನವೆಂಬರ್ 29 ರಂದು ಬಿಡುಗಡೆಯಾದ “Posession of Hannah grace” ಸಿನಿಮಾವು ಒಂದು ಅದ್ಬುತ ಹಾರರ್ ಸಿನಿಮ. “Diederik Van Rooijen” ನಿರ್ದೇಶನದ ಈ ಸಿನಿಮಾವು ಪ್ರಪಂಚದೆಲ್ಲೆಡೆ ಬಿಡುಗಡೆಯಾಗಿ ಗಳಿಸಿದ್ದು 4.3 ಕೋಟಿ ಅಮೆರಿಕನ್ ಡಾಲರ್. ಈ ಚಿತ್ರದ ಪ್ರಮುಖ ಪಾತ್ರದಲ್ಲಿ Shay Mitchell ಮತ್ತು Kirby Johnson ಇದ್ದು ನೋಡುವವರ ಎದೆಯಲ್ಲಿ ಸಾಕಷ್ಟು ಭಯ ಮೂಡಿಸುತ್ತದೆ.

ಸಿನಿಮಾದ ಆರಂಭದಲ್ಲಿ Hannah ಎನ್ನುವ 15 ವರ್ಷದ ಹುಡುಗಿಯ ಮೈಯಲ್ಲಿ ಒಂದು “demon” ಬಂದಿರುವುದನ್ನು ನಾವು ನೋಡಬಹುದು. ಈ ಹುಡುಗಿಯ ಮೈಯಲ್ಲಿ ಬಂದಿರುವ ಆ “demon” ಅನ್ನು ಬಿಡಿಸುವ ಸಲುವಾಗಿ ಆಕೆಯ ತಂದೆಯು ಚರ್ಚಿನ ಪಾದ್ರಿಗಳಿಗೆ ಸಾಕಷ್ಟು ವಿನಂತಿ ಮಾಡಿಕೊಂಡು ಹೇಗಾದರು ತನ್ನ ಮಗಳನ್ನು ಉಳಿಸಿಕೊಡಿ ಎಂದು ಬೇಡಿಕೊಂಡಿರುತ್ತಾನೆ. ಆದ್ದರಿಂದ ಆಕೆಯನ್ನು ಒಂದು ಮಂಚಕ್ಕೆ ಕಟ್ಟಿಹಾಕಿ ಆಕೆಯ ಮೇಲೆ ಪಾದ್ರಿಗಳು possession ಮಾಡುತ್ತಿರುತ್ತಿರುತ್ತಾರೆ. ಈ possession  ಎನ್ನುವುದು ಕ್ರಿಶ್ಚಿಯನ್  ಧರ್ಮದಲ್ಲಿ ಮೈಯಲ್ಲಿ ಹೊಕ್ಕಿರುವ ದೆವ್ವಗಳನ್ನು ಬಿಡಿಸುವ ವಿಧಾನವಾಗಿದೆ. ಆದರೆ ಈ possession   ಕ್ರಿಯೆ ಮಾಡುತ್ತಿರುವ ವೇಳೆಯಲ್ಲಿ ಪಾದ್ರಿಯನ್ನು Hannah ಮೈಯಲ್ಲಿ ಹೊಕ್ಕಿರುವ demon ಕೊಲ್ಲುತ್ತದೆ. ನಂತರ ಆ ಪಾದ್ರಿಯ ಜೊತೆಗಿರುವ ಅಸಿಸ್ಟೆಂಟ್ ಅನ್ನು ಕೂಡ ಕೊಲ್ಲಲು ಪ್ರಯತ್ನ ಮಾಡುತ್ತದೆ. ಆದರೆ ಇದನ್ನು ಕಂಡ Hannah ತಂದೆಯು ಇನ್ನು ನನ್ನ ಮಗಳನ್ನು ಈ demon ಬಿಟ್ಟು ಹೋಗುವುದಿಲ್ಲ ಎಂದು ಅರಿತು ಮಂಚದ ಮೇಲಿದ್ದ ತಲೆ ದಿಂಬಿನಿಂದ Hannah ಮುಕವನ್ನು ಮುಚ್ಚಿ ಉಸಿರುಗಟ್ಟಿಸಿ ಸಾಯಿಸಿಬಿಡುತ್ತಾನೆ.

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group