
1) ವಿಷಪೂರಿತ ವಸ್ತುಗಳಿಂದ ತುಂಬಿದ ದ್ವೀಪ ಮನುಷ್ಯನ ನಿರ್ಲಕ್ಷ್ಯದ ಪರಿಣಾಮವಾಗಿ ಭಯಾನಕ ಸತ್ಯವಾಗಿ ಹೊರಹೊಮ್ಮುತ್ತಿದೆ ಮನುಷ್ಯನು ಪ್ರಕೃತಿಯನ್ನು ವಿವಿಧ ರೀತಿಯಲ್ಲಿ ನಾಶ ಮಾಡುತ್ತಿದ್ದಾನೆ. ಆದರೆ ಅದರಲ್ಲಿ ಪ್ರಮುಖವಾಗಿ ತಾನು ಕಂಡುಹಿಡಿದ ಪ್ಲಾಸ್ಟಿಕ್ ನಿಂದ ಹೆಚ್ಚು ನಾಶ ಮಾಡುತ್ತಿದ್ದಾನೆ. ಮರಳಿ ಬಳಸಲಾಗದಂತಹ ಈ ಪ್ಲಾಸ್ಟಿಕ್ ಅನ್ನು ಉಪಯೋಗಿಸಿದ ಮೇಲೆ ಎಲ್ಲೆಂದರಲ್ಲಿ ಬಿಸಾಕುವ ಮನುಷ್ಯನು ಅದರಿಂದ ಪ್ರಕೃತಿಗೆ ಅದೆಷ್ಟು ತೊಂದರೆಯಾಗುತ್ತಿದೆ ಎಂದು ಸ್ವಲ್ಪವೂ ಯೋಚಿಸುತ್ತಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಪ್ರಪಂಚದಲ್ಲಿ ಪ್ರತಿ ವರ್ಷ ಬರೋಬ್ಬರಿ 14 ಬಿಲಿಯನ್ ಪೌಂಡ್ಸ್ ಗಳಷ್ಟು ಕಸವನ್ನು ಸಮುದ್ರಕ್ಕೆ ಹಾಕಲಾಗುತ್ತಿದೆ. ಈ ರೀತಿ ಹಾಕಿದ ಪ್ಲಾಸ್ಟಿಕ್ ಕಸವು ಸಮುದ್ರದಲ್ಲಿ ಇರುವ ಜೀವಿಗಳಿಗೆ ಸಾಕಷ್ಟು ತೊಂದರೆಯನ್ನು ಸೃಷ್ಟಿಸುತ್ತಿದೆ. ಇನ್ನು ಸಮುದ್ರಕ್ಕೆ ಹಾಕಿದ ಈ ರೀತಿಯ ಕಸವು ಒಂದು ದ್ವೀಪವನ್ನೇ ಸೃಷ್ಟಿಸಿದ್ದು ಈ ಸಂಗತಿಯಲ್ಲಿ ನಿಮಗೆ ಅದರ ಬಗ್ಗೆ ತಿಳಿಸುತ್ತೇನೆ ಕೇಳಿ. ಏಷ್ಯಾ, ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕದ ಕೆಲ ದೇಶಗಳಲ್ಲಿ ಇರುವ ಜನರು ಸಮುದ್ರಕ್ಕೆ ಅದೆಷ್ಟು ಕಸವನ್ನು ಎಸೆದಿದ್ದಾರೆಂದರೆ ಅವರುಗಳು ಎಸೆದಿರುವ ಆ ಕಸಗಳಿಂದ ಪೆಸಿಫಿಕ್ ಮಹಾಸಾಗರದಲ್ಲಿ ಒಂದು ವಿಷಪೂರಿತ ವಸ್ತುಗಳಿಂದ ತುಂಬಿದ ದ್ವೀಪ ನಿರ್ಮಾಣವಾಗಿದೆ. ಬರೋಬ್ಬರಿ 1.6 ಮಿಲಿಯನ್ ಚದುರ ಕಿಲೋಮೀಟರ್ ನಷ್ಟು ವಿಸ್ತಾರವಾಗಿರುವ ಈ ದ್ವೀಪದಲ್ಲಿ ಸಂಪೂರ್ಣವಾಗಿ ಕಸದ ರಾಶಿಯೇ ತುಂಬಿಕೊಂಡಿದೆ. ಅದಕ್ಕೆ “Great Pacific garbage patch” ಎಂದು ಹೆಸರಿಡಲಾಗಿದ್ದು ಇದರಲ್ಲಿ ಅನೇಕ ವಿಷಪೂರಿತ ಪ್ಲಾಸ್ಟಿಕ್ ಗಳು ಕೂಡ ಇವೆ. ಈ ಕಸದ ದ್ವೀಪವು ಸಾವಿರಾರು ವರ್ಷಗಳ ಕಾಲ ಇರಲಿದ್ದು ಸಮುದ್ರದಲ್ಲಿ ಇರುವ ಅನೇಕ ಜೀವಿಗಳ ಪ್ರಾಣವನ್ನು ಇದು ತೆಗೆದುಕೊಳ್ಳಲಿದೆ. ಇದನ್ನು ಕಂಡ ನೆಥರ್ಲ್ಯಾಂಡ್ಸ್ ದೇಶದ ಪ್ರಸಿದ್ದ ಎಂಜಿನೀಯರ್ ಆಗಿರುವ “Boyan Slat” ಅವರು ಈ ಕಸವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ “SYSTEM 001” ಎನ್ನುವ ಬೃಹತ್ ಮಶೀನ್ ಬಳಸಿಕೊಂಡು ಸ್ವಚ್ಛತ ಕಾರ್ಯವನ್ನು ನಡೆಸುತ್ತಿದ್ದಾರೆ. ಆದರೆ ಇದು ಆದೇಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ನಾವುಗಳು ಕಾದುನೋಡಬೇಕಿದೆ.
2) ಪ್ರತಿ ದಿನ ಪ್ರಪಂಚದೆಲ್ಲೆಡೆ ಕನಿಷ್ಟಪಕ್ಷ 80 ಲಕ್ಷ ಬಾರಿ ಸಿಡಿಲು ಬಡಿಯುತ್ತದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ರೀತಿ ಬಡಿಯುವ ಸಿಡಿಲುಗಳಲ್ಲಿ ಕೆಲವು ಸಿಡಿಲುಗಳು ಅನೇಕ ಅನಾಹುತಗಳನ್ನು ಸೃಷ್ಟಿ ಮಾಡುತ್ತದೆ. ಒಂದೇ ಒಂದು ಸಿಡಿಲಿನಲ್ಲಿ ಬರೋಬ್ಬರಿ 10 ಬಿಲಿಯನ್ ವ್ಯಾಟ್ಸ್ ಶಕ್ತಿ ಇರುತ್ತದೆ. ಇಷ್ಟೊಂದು ಶಕ್ತಿ ಹೊಂದಿರುವ ಸಿಡಿಲುಗಳು ಅಕಸ್ಮಾತ್ ಮನುಷ್ಯನಿಗೆ ಬಡಿದರೆ ಏನಾಗುತ್ತದೆ ಗೊತ್ತೆ? ಸಹಜವಾಗಿ ಇದರಿಂದ ಸಾಯುವವರೆ ಜಾಸ್ತಿ. ಆದರೆ ಕೆಲವರು ಸಿಡಿಲು ಬಡಿದರು ಕೂಡ ಪ್ರಾಣ ಕಳೆದುಕೊಳ್ಳುವುದಿಲ್ಲ. ಅಂತಹ ಉದಾಹರಣೆಗಳು ಕೂಡ ಜಗತ್ತಿನಲ್ಲಿವೆ. ಆದರೆ ಅವರಿಗೆ ಸಿಡಿಲಿನ ಶಕ್ತಿಯಿಂದ ದೃಷ್ಟಿ ಹೋಗಿರುತ್ತದೆ. ಮತ್ತೆ ಕೆಲವರಿಗೆ ನೆನಪಿನ ಶಕ್ತಿ ಹೋಗಿರುತ್ತದೆ. ಕೆಲವರಂತು ಕೋಮಾ ಹಂತಕ್ಕೆ ಹೋಗಿರುತ್ತಾರೆ. ಹೀಗೆ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಅವರುಗಳು ಎದುರಿಸುತ್ತಾರೆ.
3) ಪುರುಷರು ತಮ್ಮ ಗಡ್ಡವನ್ನು ತೆಗೆಯಲು ಇತ್ತೀಚೆಗೆ ವಿವಿಧ ರೀತಿಯ Razor blades ಮತ್ತು Trimmers ಗಳನ್ನು ಬಳಸುತ್ತಿದ್ದಾರೆ. ಆದರೆ ಕೆಲವರು ಇನ್ನು Gillete ಕಂಪನಿಯ ಹಳೆಯ Razor blades ಗಳನ್ನು ಬಳಸುತ್ತಿದ್ದಾರೆ. ಅಕಸ್ಮಾತ್ ನೀವು ಈ ಹಳೆಯ blades ಗಳನ್ನು ಬಳಸಿದ್ದರೆ ಅದರ ಆಕಾರವನ್ನು ಖಂಡಿತವಾಗಿ ಗಮನಿಸಿರುತ್ತೀರಿ. ಆದರೆ ಈ ರೀತಿಯ ಆಕಾರ ಏಕೆ ಹೊಂದಿದೆ ಎಂದು ಎಂದಾದರು ಯೋಚಿಸಿದ್ದೀರ? ಈ ಸಂಗತಿಯಲ್ಲಿ ನಿಮಗೆ ಉತ್ತರ ಹೇಳುತ್ತೇನೆ ಕೇಳಿ. blades ಗಳನ್ನು ಪ್ರಪಂಚದಲ್ಲಿ ಮೊಟ್ಟ ಮೊದಲು ಉತ್ಪಾದನೆ ಮಾಡಲು ಶುರು ಮಾಡಿದ್ದು “Gillete” ಕಂಪನಿ. Blades ಗಳ ಜೊತೆಗೆ Razor ಗಳನ್ನು ಕೂಡ ಉತ್ಪಾದನೆ ಮಾಡುತ್ತಿರುವ ಈ ಕಂಪನಿಯು ಮೊದ ಮೊದಲು ತಾನು ತಯಾರಿಸುವ blades ಗಳು Razor ಗಳಲ್ಲಿ ಸರಿಯಾಗಿ ಕೂಡಲಿ ಎನ್ನುವ ಕಾರಣಕ್ಕೆ screws ಗಳನ್ನು ಬಳಸುವ ಹಾಗೆ ತಯಾರಿಸುತ್ತಿತ್ತು. ಆದರೆ ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು. ಆದ ಕಾರಣ blades ಗಳ ಮಧ್ಯ ಭಾಗದಲ್ಲಿ ಈ ರೀತಿಯ ಆಕಾರ ರಚಿಸಲಾಯಿತು. ಇದರಿಂದ blades ಗಳು razor ನಲ್ಲಿ ಸರಿಯಾಗಿ ಕೂಡತೊಡಗಿದವು.
4) ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಅನೇಕ ಎತ್ತರದ ಪ್ರತಿಮೆಗಳಿವೆ. ಅದರಲ್ಲಿ ಮೊದಲ ಸ್ಥಾನದಲ್ಲಿ ಇರುವುದು ನಮ್ಮ ದೇಶದಲ್ಲಿರುವ “ಸರ್ದಾರ್ ವಲ್ಲಭಾಯಿ ಪಟೇಲ್” ಅವರ “ಏಕತಾ ಪ್ರತಿಮೆ”. ಇದನ್ನು ಹೇಗೆ ನಿರ್ಮಿಸಲಾಯಿತು ಮತ್ತು ಎಷ್ಟು ಹಣ ಖರ್ಚು ಮಾಡಿದ್ದಾರೆಂದು ನಮಗೆ ತಿಳಿದೇ ಇದೆ. ಆದರೆ ಇದೇ ರೀತಿ ಅಮೇರಿಕಾದಲ್ಲೂ ಎತ್ತರದ ಪ್ರತಿಮೆಯಿದೆ. ಅದನ್ನೇ “Statue of Liberty” ಎಂದು ಕರೆಯುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೆ. ಆದರೆ ಎಂದಾದರು ಇದನ್ನು ಹೇಗೆ ನಿರ್ಮಿಸಲಾಯಿತು ಎಂದು ಯೋಚಿಸಿದ್ದೀರ? ಈ ಸಂಗತಿಯಲ್ಲಿ ಅದನ್ನು ವಿವರಿಸುತ್ತೇನೆ ಕೇಳಿ. Statue of liberty ಯನ್ನು ಫ್ರಾನ್ಸ್ ದೇಶವು ಅಮೆರಿಕಾಕ್ಕೆ ಕೊಡುಗೆಯನ್ನಾಗಿ ನೀಡಿದೆ. ಆ ಎರಡು ದೇಶಗಳ ಸ್ನೇಹದ ಗುರುತಿಗಾಗಿ ಇದನ್ನು ನೀಡಲಾಯಿತು. ಇದನ್ನು ನಿರ್ಮಿಸುವ ಸಲುವಾಗಿ ಫ್ರೆಂಚ್ ರಾಜಕೀಯ ತಜ್ಞ “Edouard Rene De Laboulaye” ಅವರು ಫ್ರಾನ್ಸ್ ದೇಶದ ಜನರಿಂದ ಹಣ ಸಂಗ್ರಹಿಸಿ ಪ್ರಸಿದ್ದ “ಐಫಲ್ ಟವರ್” ನಿರ್ಮಿಸಿದ “Gustave Eiffel” ಅವರ ಸಹಾಯದಿಂದ ಇದನ್ನು ನಿರ್ಮಿಸಿದರು. ನಂತರ ಹಡಗಿನ ಮೂಲಕ ಇದರ ಒಂದೊಂದೇ ಭಾಗವನ್ನು ಅಮೆರಿಕಕ್ಕೆ ಕಳುಹಿಸಲಾಯಿತು. ಲಿಬರ್ಟಿ ದ್ವೀಪದ ಮೇಲೆ ಇದನ್ನು ಇಟ್ಟ ಅಮೇರಿಕವು ತನ್ನ ಮತ್ತು ಫ್ರಾನ್ಸ್ ದೇಶದ ಸ್ನೇಹವನ್ನು ಹಾಗು ನ್ಯಾಯ ಮತ್ತು ಸ್ವತಂತ್ರದ ಗುರುತಾಗಿ ಜಗತ್ತಿಗೆ ತೋರಿಸಿತು.
5) ಸಹಜವಾಗಿ ತಂದೆಯಾದವನು ತನ್ನ ಮಕ್ಕಳನ್ನು ತುಂಬಾ ಪ್ರೀತಿ ಮಾಡುತ್ತಾನೆ. ತನಗೆ ಎಷ್ಟೇ ಕಷ್ಟವಿದ್ದರು ಕೂಡ ಅವರುಗಳು ಕೇಳಿದ್ದನ್ನು ಕೊಡಿಸಿ ಮುದ್ದಾಗಿ ಬೆಳೆಸುವ ತಂದೆಯು ಪ್ರಪಂಚದಲ್ಲಿ ಇರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತಂದೆಯಿದ್ದು ತನ್ನ ಮಗನಿಗಾಗಿ ಪ್ರಪಂಚದಲ್ಲಿ ಯಾವ ತಂದೆಯೂ ಮಾಡಲಾಗದಂತಹ ಕೆಲಸವನ್ನು ಮಾಡಿದ್ದಾನೆ. ಆತನ ಹೆಸರು “ಪಬೊಲ ಎಸ್ಕೋಬಾರ್”. ಈತನು ಪ್ರಪಂಚ ಕಂಡ ಅತ್ಯಂತ ಶ್ರೀಮಂತ ಕ್ರಿಮಿನಲ್. ಸಾಯುವ ವೇಳೆ ಈತನ ಬಳಿಯಿದ್ದ ಒಟ್ಟು ಆಸ್ತಿಯು ಬರೋಬ್ಬರಿ 12700 ಕೋಟಿ. ಡ್ರಗ್ಸ್ ಸರಭರಾಜು ಮಾಡುವುದರಲ್ಲಿ ಪ್ರಪಂಚಕ್ಕೆ ಪ್ರಸಿದ್ದಿಯಾಗಿದ್ದ ಈತನು ಅದರಿಂದ ಸಾಕಷ್ಟು ಹಣಗಳಿಸುತ್ತಿದ್ದ. ಈತನ ಬಳಿ ಅದೆಷ್ಟು ಹಣವಿತ್ತೆಂದರೆ ತನ್ನ ಬಳಿಯಿರುವ ಹಣವನ್ನು ಎಣಿಸಲಾಗದೆ ಗೋದಾಮಿನಲ್ಲಿ ಅದನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದ. ಅದರಲ್ಲಿ ಎಷ್ಟೋ ನೋಟುಗಳನ್ನು ಇಲಿಗಳು ತಿನ್ನುತ್ತಿದ್ದವು. ಅಷ್ಟೇ ಅಲ್ಲದೆ ಕೇವಲ ಹಣಕ್ಕೆ ಹಾಕುವ rubber band ಅನ್ನು ಖರೀದಿಸಲು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ಈತ ಖರ್ಚು ಮಾಡುತ್ತಿದ್ದ. ಅಷ್ಟೊಂದು ಶ್ರೀಮಂತ ಕ್ರಿಮಿನಲ್ ಈತನಾಗಿದ್ದ. ಅದೊಂದು ದಿನ ಪೊಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದಾಗ ಅವರ ಕಣ್ಣು ತಪ್ಪಿಸಿ ತನ್ನ ಮಗನೊಂದಿಗೆ ಒಂದು ಮನೆಯಲ್ಲಿ ಅಡವಿಕುಳಿತಿದ್ದ. ಹೊರಗಡೆ ಸಾಕಷ್ಟು ಮಂಜು ಬೀಳುತ್ತಿದ್ದ ಕಾರಣ ಆ ಮನೆಯು ಸಾಕಷ್ಟು ತಂಪಿನಿಂದ ಕೂಡಿತ್ತು. ಇದರಿಂದ ಆತನ ಮಗನು ಚಳಿಯಿಂದ ನಡುಗಲು ಶುರು ಮಾಡಿದ್ದ. ಇದನ್ನು ಕಂಡು ಹೇಗಾದರು ಮಾಡಿ ತನ್ನ ಮಗನನ್ನು ಚಳಿಯಿಂದ ಕಾಪಾಡಬೇಕೆಂದು ತನ್ನ ಬಳಿಯಿದ್ದ ಕೋಟ್ಯಾಂತರ ರೂಪಾಯಿ ಹಣದ ನೋಟುಗಳಿಗೆ ಬೆಂಕಿ ಹಚ್ಚಲು ಶುರು ಮಾಡಿದನು. ಹೀಗೆ ರಾತ್ರಿಯೆಲ್ಲ ತನ್ನ ಬಳಿಯಿದ್ದ ಎಲ್ಲಾ ಹಣವನ್ನು ಬೆಂಕಿಗೆ ಹಾಕಿ ಮಗನನ್ನು ಚಳಿಯಿಂದ ಕಾಪಾಡಿದ್ದನು. ಅದೇನೇ ಹೇಳಿ ತಾನು ಅದೆಷ್ಟೇ ಕೆಟ್ಟವನಾಗಿದ್ದರು ಕೂಡ ತನ್ನ ಮಗನಿಗಾಗಿ ಕೋಟಿ ಕೋಟಿ ಹಣವನ್ನು ಸುಟ್ಟ ಈತನ ಪ್ರೀತಿಯನ್ನು ಮೆಚ್ಚಲೇಬೇಕು.