ಭಾರತೀಯ ರೈಲ್ವೇ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.ಹುದ್ದೆಯ ವಿವರ ಹೀಗಿದೆ ಟೆಕ್ನಿಷಿಯನ್ ಗ್ರೇಡ್-1 ಮತ್ತು ಟೆಕ್ನಿಷಿಯನ್ ಗ್ರೇಡ್-3 ಸೇರಿದಂತೆ ಒಟ್ಟು 14,298 ಹುದ್ದೆಗಳು ಖಾಲಿ ಇವೆ ಹಾಗೂ ಬೆಂಗಳೂರು ವಲಯದಲ್ಲಿ ಒಟ್ಟು 337 ಹುದ್ದೆಗಳು ಖಾಲಿಯಿವೆ.

ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿದೆ:

ಒಟ್ಟು ಹುದ್ದೆಗಳು : 14,298
ಕೆಲಸ ಮಾಡುವ ಸ್ಥಳ : ಭಾರತದಾದ್ಯಂತ

ಆಯ್ಕೆ ಮಾಡುವ ಸ್ಥಳ : ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಹತೆ : ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಯು ಇಂಜಿನಿಯರಿಂಗ್, ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಹೊಂದಿರಬೇಕು. ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು.

ವಯೋಮಿತಿ : ಅಭ್ಯರ್ಥಿಯ ವಯೋಮಿತಿ ಹುದ್ದೆಯ ಅಧಿಸೂಚನೆ ಪ್ರಕಾರ

  • ಟೆಕ್ನಿಷಿಯನ್ ಗ್ರೇಡ್-1 : 18 ರಿಂದ 36
  • ಟೆಕ್ನಿಷಿಯನ್ ಗ್ರೇಡ್-3 : 18 ರಿಂದ 33

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯ ಮಾಸಿಕ ವೇತನ

  • ಟೆಕ್ನಿಷಿಯನ್ ಗ್ರೇಡ್-1 : 29200
  • ಟೆಕ್ನಿಷಿಯನ್ ಗ್ರೇಡ್-3 : 19900

Follow Karunadu Today for more Govt jobs like this

Click here to Join Our Whatsapp Group