
ಬೆಂಗಳೂರು ನಗರ ಜಿಲ್ಲಾ ಪಂಚಾಯಿತೆಯ ಅಡಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿನಲ್ಲಿ ಜಿಲ್ಲಾ ಎಮ್‌ಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕ, ತಾಂತ್ರಿಕ ಸಹಾಯಕ (ರೆಶ್ಮೆ) ಮತ್ತು ತಾಂತ್ರಿಕ ಸಹಾಯಕ (ಅರಣ್ಯ) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಗಿಯುವ ಮುನ್ನ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ಸಂಖ್ಯೆ:5
ಅರ್ಜಿಯ ಪ್ರಾರಂಭ ದಿನಾಂಕ:12 ಜೂನ್ 2024
ಅರ್ಜಿಯ ಕೊನೆ ದಿನಾಂಕ: 2 ಜುಲೈ 2024
ಕೆಲಸದ ಸ್ಥಳ: ಬೆಂಗಳೂರು
ಆಯ್ಕೆ ವಿಧಾನ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಹುದ್ದೆಗಳ ವಿವರ:
ಜಿಲ್ಲಾ ಎಮ್‌ಐಎಸ್ ಸಂಯೋಜಕರು – 01
ತಾಂತ್ರಿಕ ಸಹಾಯಕ – 02
ತಾಂತ್ರಿಕ ಸಹಾಯಕ (ಅರಣ್ಯ)– 01
ತಾಂತ್ರಿಕ ಸಹಾಯಕ (ಕೃಷಿ) – 01
ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್,
ಬನಶಂಕರಿ ದೇವಸ್ಥಾನದ ಹತ್ತಿರ,
ಎಸ್. ಕರಿಯಪ್ಪ ರಸ್ತೆ,
ಬನಶಂಕರಿ, ಬೆಂಗಳೂರು 560070.
ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ BE/ B.Tech/ B.Sc/ MCA ಪದವಿ ಹೊಂದಿರಬೇಕು.
Computer ಜ್ಞಾನ ಹೊಂದಿರಬೇಕು. ವೃತ್ತಿಪರ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗರಿಷ್ಠ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿರಬಾರದು.
ವೇತನ ಶ್ರೇಣಿ:
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹುದ್ದೆಗಳ ಪ್ರಕಾರ ಕೆಳಗಿನ ತಿಂಗಳ ವೇತನ ನೀಡಲಾಗುತ್ತದೆ:
ಜಿಲ್ಲಾ ಎಮ್‌ಐಎಸ್ ಸಂಯೋಜಕರು – ₹34,000/-
ತಾಂತ್ರಿಕ ಸಹಾಯಕ- ₹26,000/-ತಾಂತ್ರಿಕ ಸಹಾಯಕ (ಅರಣ್ಯ) – ₹28,000/-
ತಾಂತ್ರಿಕ ಸಹಾಯಕ (ಕೃಷಿ) – ₹28,000/-
ಹೆಚ್ಚಿನ ಮಾಹಿತಿಗಾಗಿ:
ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಬಹುದು: [ಅಧಿಸೂಚನೆ]https://zpbengaluruurban.karnataka.gov.in
Follow Karunadu Today for more Jobs Related News
Click here to Join Our Whatsapp Group