ಭೂಮಿಯ ಮೇಲೆ ಇನ್ನೂ ಕಣ್ಣಿಗೆ ಕಾಣದ ಹಾಗು ಅರ್ಥವಾಗದ ಎಷ್ಟೋ ವಿಸ್ಮಯಗಳಿವೆ. ಮನುಷ್ಯನು ಎಷ್ಟೇ ಬುದ್ದಿಶಾಲಿಯಾದರೂ ಕೆಲವೊಂದು ರಹಸ್ಯಗಳನ್ನು ಬೇದಿಸಲು ಅವನಿಂದ ಸಾಧ್ಯವಾಗುತ್ತಿಲ್ಲ. ಇಂತಹ ರಹಸ್ಯಗಳಲ್ಲಿ “ಬರ್ಮೋಡಾ ಟ್ರಯಾಂಗಲ್” ರಹಸ್ಯವು ಕೂಡ ಒಂದು. ಈ ಸ್ಥಳವು ಎಷ್ಟೋ ಪ್ರಾಣಗಳನ್ನು ತೆಗೆದುಕೊಂಡಿದೆ. ಎಷ್ಟೋ ಜನರು ಈ ಸ್ಥಳದ ರಹಸ್ಯ ಬೇದಿಸಲು ಹೋಗಿ ಮರಳಿ ಬಂದೇ ಇಲ್ಲ. ಅಂತಹದು ಏನಿದೆ ಈ ಸ್ಥಳದಲ್ಲಿ ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.


ಬರ್ಮೋಡಾ ಟ್ರಯಾಂಗಲ್ ಅನ್ನು “ಡೆವಿಲ್ಸ್ ಟ್ರಯಾಂಗಲ್” ಹಾಗು “ಹರಿಕೇನ್ ಅಲ್ಲೆಯ್” ಎಂದು ಕೂಡ ಕರೆಯುತ್ತಾರೆ. ಇದು ಪಶ್ಚಿಮ ಭಾಗದ ಉತ್ತರ ಅಟ್ಲಾಂಟಿಕ್ ಸಮುದ್ರ ಭಾಗದಲ್ಲಿ ಬರುತ್ತದೆ. ಈ ಸ್ಥಳ ಫ್ಲೋರಿಡಾ, ಪ್ಯೂರಿಟಾ ರಿಕೋ ಹಾಗೂ ಬರ್ಮೋಡಾ ಜಾಗಗಳನ್ನು ಟ್ರಯಾಂಗಲ್ ಮಾದರಿಯಲ್ಲಿ ಸೇರಿಸುವದರಿಂದ ಇದನ್ನು ಬರ್ಮೋಡಾ ಟ್ರಯಾಂಗಲ್ ಎಂದು ಕರೆಯುತ್ತಾರೆ. ಇದುವರೆಗೆ ಆ ಟ್ರಯಾಂಗಲ್-ನಲ್ಲಿ ನಡೆದಿರುವ ಘಟನೆಗಳ ಬಗ್ಗೆ ಯಾರಿಗೂ ಸಹ ನಿಜವಾದ ಮಾಹಿತಿ ದೊರಕಿಲ್ಲ. ಏಕೆಂದರೆ ಆ ಜಾಗದಲ್ಲಿ ಎಷ್ಟೋ ಹಡಗುಗಳು, ವಿಮಾನಗಳು ಕಣ್ಮರೆಯಾಗಿವೆ. ಇದುವರೆಗೂ ಅದಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ಮೊದಲ ಬಾರಿ 1881 ರಲ್ಲಿ ನ್ಯೂಯೋರ್ಕ್-ನಿಂದ ಹೊರಟ್ಟಿದ್ದ ಒಂದು ಹಡಗು ಆ ಬರ್ಮೋಡಾ ಟ್ರಯಾಂಗಲ್-ನಲ್ಲಿ ಕಣ್ಮರೆ ಆಯಿತು. ಅದರಲ್ಲಿ ಇದ್ದ ಸಿಬ್ಬಂದಿಗಳು ವಿದಿವಶರಾದರು. ನಂತರ ಮಾರ್ಚ್ 4, 1918 ರಲ್ಲಿ ಅಮೇರಿಕಾದ ಕೊಲೀಯರ್ ಸೈಕ್ಲೋಪ್ಸ್ ಎಂಬ ಹಡಗಿನ ತುಂಬ ಮ್ಯಾಗನೀಸ್ ಅಧಿರನ್ನು ರವಾನೆ ಮಾಡಲಾಗುತ್ತಿತ್ತು. ಅದ್ದರಲ್ಲಿ 309 ಸಿಬ್ಬಂಧಿಗಳು ಹಾಗು ಕ್ಯಾಪ್ಟನ್ ಬಾರ್ಬಡೋಸ್ ಐಲ್ಯಾಂಡ್ ಅನ್ನು ಬಿಟ್ಟು ಕೆಲವೇ ಗಂಟೆಯಲ್ಲಿ ಬರ್ಮೋಡಾ ಟ್ರಯಾಂಗಲ್ ಕ್ರಮಿಸುತ್ತದೆ ನಂತರ ರೇಡಾರ್ ಸಂಪರ್ಕ ಕಡಿತಗೊಂಡ ಕೊಲೀಯರ್ ಸೈಕ್ಲೋಪ್ಸ್ ಯಾವುದೇ ಕಾರಣ ತಿಳಿಯದೆ ಕಣ್ಮರೆ ಆಗುತ್ತದೆ. ಅದೇ ರೀತಿ 1912 ರಲ್ಲಿ “ಕ್ಯಾರಲ್ ಏ ಡೀರಿಂಗ್” ಎಂಬ ಹಡಗು ಕೂಡ ಕಣ್ಮರೆಯಾಗುತ್ತದೆ. ಅದನ್ನು ಹುಡುಕಲು ಯಾರೂ ಕೂಡ ಸಾಹಸ ಮಾಡುವುದಿಲ್ಲ. ಇದಕ್ಕೆ ಕಾರಣ ಏನೆಂದು ಕೂಡ ತಿಳಿದು ಬಂದಿಲ್ಲ.

ಡಿಸೆಂಬರ್ 5, 1945 ನಲ್ಲಿ ಫ್ಲೈಟ್ 19 ಎಂಬ 5 ಟ್ರೇನಿಂಗ್ ವಿಮಾನಗಳು ಮೊದಲ ಬಾರಿ ವಿಮಾನಗಳನ್ನು ಪರೀಕ್ಷಿಸಲು ಹಾರುತ್ತವೆ. ಆದರೆ ವಿಮಾನಗಳು ಬರ್ಮೊಡಾ ಟ್ರಯಾಂಗಲ್ ಕ್ರಮಿಸುತ್ತಿದ್ದಂತೆ ರೇಡಾರಿನ ಸಂಪರ್ಕ ಹಾಗು ಎಲ್ಲ ಸಂಪರ್ಕಗಳು ಕಡಿತಗೊಳುತ್ತದೆ. ಆ ನಂತರ 5 ವಿಮಾನಗಳು ಕೂಡ ಕಣ್ಮರೆಯಾಗುತ್ತದೆ, ಅದರಲ್ಲಿ ಯಾವ ಒಬ್ಬ ವ್ಯಕ್ತಿಯು ಕೂಡ ಬದುಕುಳಿಯುವುದಿಲ್ಲ. ಆ ವಿಮಾನಗಳನ್ನು ಹುಡುಕಲು ಹೋದ ಸ್ಟಾರ್ ಟೈಗರ್ ಹಾಗು ಸ್ಟಾರ್ ಯೆರಿಎಲ್ ಎಂಬ ಎರಡು ಯುದ್ದ ವಿಮಾನಗಳು ಕೂಡ ಯಾವುದೇ ಕಾರಣ ತಿಳಿಯದೇ ಕಣ್ಮರೆಯಾಗುತ್ತದೆ.
ಡಿಸೆಂಬರ್ 28 1948 ರಲ್ಲಿ “ದೌಗ್ಲ್ಸಸ್ ಡಿ.ಸಿ-3” ವಿಮಾನವು ಸ್ಯಾನ್ ಜುಹನ್-ನಿಂದ ಹೊರಟಿತು, ಅದರಲ್ಲಿ 32 ಪ್ರಯಾಣಿಕರು ಕೂಡ ಇದ್ದರು. ಈ ವಿಮಾನವು ಕೂಡ ಬರ್ಮೋಡಾ ಟ್ರಯಾಂಗಲ್-ನಲ್ಲಿ ಕಣ್ಮರೆಯಾಯಿತು.

ಇಷ್ಟು ವಿಮಾನಗಳು, ಹಡಗುಗಳು ಕಣ್ಮರೆಯಾದರೂ ಅದಕ್ಕೆ ಕಾರಣ ತಿಳುದು ಬರಲಿಲ್ಲ. ಕೆಲವು ಪತ್ರಿಕೆಗಳಲ್ಲಿ ಭೂತಗಳ ಕಾರಣ ಎಂದು ಪ್ರಕಟಿಸಿದರೆ ಇನ್ನು ಕೆಲವು ಪತ್ರಿಕೆಗಳಲ್ಲಿ ಬೇರೆ ಗ್ರಹದ ಜೀವಿಗಳು ವಾಸಿಸುತ್ತಿವೆ ಎಂದು ಪ್ರಕಟಿಸದರು. ಇಲ್ಲಿಯವರೆಗೂ ಇದರ ಬಗ್ಗೆ ಖಚಿತ ಮಾಹಿತಿ ಸಿಗದೆ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

Follow Karunadu Today for more Interesting Facts & Stories. 

Click here to Join Our Whatsapp Group