
ನಮಗೆಲ್ಲ ತಿಳಿದಿರುವ ಹಾಗೆ ರಾಜರ ಕಾಲದಲ್ಲಿ ರಾಜರುಗಳು ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳಲೆಂದು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಆ ಕೋಟೆಯನ್ನು ದಾಟಿ ಬರಲು ಶತ್ರುಗಳು ಹರಸಾಹಸ ಪಡಬೇಕಿತ್ತು. ಹಾಗಂತ ಆ ಕೋಟೆಗಳನ್ನು ದಾಟಿ ಬರಲು ಸಾಧ್ಯವೇ ಇಲ್ಲ ಎಂದರ್ಥವಲ್ಲ, ಬೃಹತ್ ಕೋಟೆಗಳನ್ನು ಒಡೆದು ಒಳ ನುಗ್ಗಿ ಸಾಮ್ರಾಜ್ಯವನ್ನು ಹಾಳುಮಾಡಿರುವ ಉದಾಹರಣೆಗಳು ಇತಿಹಾಸದಲ್ಲಿವೆ. ಹೀಗೆ ಅನೇಕ ಯುದ್ದಗಳಲ್ಲಿ ಅದೆಷ್ಟೋ ಸುಂದರವಾದ ಕೋಟೆಗಳು ಹಾಳಾಗಿವೆ. ಅವುಗಳು ಈಗಲೂ ಇದ್ದಿದ್ದರೆ ಜಗತ್ತಿನಲ್ಲಿ ಪ್ರಸಿದ್ದ ಪ್ರವಾಸಿ ತಾಣಗಳಾಗುತ್ತಿದ್ದವು. ಆದರೆ ಜಗತ್ತಿನಲ್ಲಿ ಕೆಲ ಸುಂದರ ಕೋಟೆಗಳು ಈಗಲೂ ಇದ್ದು ಶತ್ರುಗಳ ಕೈಗೆ ಸಿಕ್ಕು ಹಾಳಾಗದೆ ಇನ್ನೂ ಜೀವಂತವಾಗಿವೆ. ಅವುಗಳನ್ನು ನೋಡಲೆಂದು ಅನೇಕ ಪ್ರವಾಸಿಗರು ಪ್ರಪಂಚದೆಲ್ಲೆಡೆಯಿಂದ ಹೋಗುತ್ತಾರೆ. ಇಂದು ನಿಮಗೆ ಆ ಬೃಹತ್ ಕೋಟೆಗಳ ಬಗ್ಗೆ ತಿಳಿಸಿಕೊಡುತ್ತೇವೆ.
1) Hohensalzburg – ಹೋಎನ್ಸಲ್ಜ್ಬರ್ಗ್

ಮದ್ಯ ಯುರೋಪ್ ಖಂಡದಲ್ಲಿರುವ ಆಸ್ಟ್ರೀಯ ದೇಶದ ಪ್ರಸಿದ್ದ ನಗರಗಳಲ್ಲಿ ಒಂದಾದ ಸಲ್ಜ್ಬರ್ಗ್ ನಗರದಲ್ಲಿರುವ ಈ ಬೃಹತ್ ಕೋಟೆಯನ್ನು 1077 ರಲ್ಲಿ “ಗೆಭರ್ಡ್ ವಾನ್ ಹೆಲ್ಫೆನ್ಸ್ಟೈನ್” ರಾಜನ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಭೂಮಿಯಿಂದ 506 ಮೀಟರ್ ಎತ್ತರದಲ್ಲಿ ಇರುವ ಈ ಕೋಟೆಯು 250 ಮೀಟರ್ ಉದ್ದ ಹಾಗು 150 ಮೀಟರ್ ಎತ್ತರವಿದ್ದು 54,523 ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿದೆ. ಮೊದಲನೆಯ ಮತ್ತು ಎರಡನೆಯ ಪ್ರಪಂಚ ಯುದ್ದ ನಡೆಯುವ ವೇಳೆ ಈ ಕೋಟೆಯನ್ನು ಸೆರೆಮನೆಯನ್ನಾಗಿ ಪರಿವರ್ತಿಸಲಾಗಿತ್ತು. ಇಟಲಿ ದೇಶದ ಖೈದಿಗಳನ್ನು ಮತ್ತು ಜರ್ಮನಿಯ ನಾಜಿ ಖೈದಿಗಳನ್ನು ಇಲ್ಲಿ ಸೆರೆಯಿಡಲಾಗುತ್ತಿತ್ತು. ಈಗಲೂ ಕೂಡ ಯುರೋಪ್ ಖಂಡದಲ್ಲಿ ಇರುವ ಅನೇಕ ಸುಂದರವಾದ ಕೋಟೆಗಳಲ್ಲಿ ಇದು ಕೂಡ ಒಂದಾಗಿದೆ.
2) Windsor – ವಿಂಡ್ಸರ್

ಇಂಗ್ಲೆಂಡ್ ದೇಶದ ವಿಂಡ್ಸರ್ ಎನ್ನುವ ಸ್ಥಳದಲ್ಲಿ ಇರುವ ಈ ಕೋಟೆಯನ್ನು 11 ನೆಯ ಶತಮಾನದಲ್ಲಿ “ಹೆನ್ರಿ-1” ರಾಜನ ಕಾಲಾವಧಿಯಲ್ಲಿ ನಿರ್ಮಿಸಲಾಯಿತು, ಬರೋಬ್ಬರಿ 54,835 ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಕೋಟೆಯು ಇಂಗ್ಲೆಂಡ್ ನಲ್ಲಿ ಇರುವ ಅತ್ಯಂತ ದೊಡ್ಡ ಕೋಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಈಗಲೂ ಕೂಡ “ಎಲಿಜೆಬತ್ ರಾಣಿ -2” ಈ ಕೋಟೆಯಲ್ಲಿ ಕೆಲ ಕಾಲ ಸಮಯವನ್ನು ಕಳೆಯುತ್ತಿರುತ್ತಾಳೆ.
3) Prague Castle– ಪರ್ಗ್ವೆ ಕೋಟೆ

ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಕೋಟೆಗಳಲ್ಲಿ ಒಂದಾಗಿರುವ ಪರ್ಗ್ವೆ ಕೋಟೆಯು ಬರೋಬ್ಬರಿ 70 ಸಾವಿರ ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿದೆ. ಜೆಕ್ ಗಣರಾಜ್ಯದಲ್ಲಿ ಇರುವ ಈ ಕೋಟೆಯು ಈಗ ಆ ದೇಶದ ಆದ್ಯಕ್ಷರ ಅಧಿಕೃತ ಕಚೇರಿಯಾಗಿ ಮಾರ್ಪಟ್ಟಿದೆ. 570 ಮೀಟರ್ ಉದ್ದ ಮತ್ತು 130 ಮೀಟರ್ ಅಗಲ ಇರುವ ಈ ಕೋಟೆಯು ಗಿನ್ನಿಸ್ ದಾಖಲೆಯ ಪ್ರಕಾರ ಪ್ರಪಂಚದ ಅತ್ಯಂತ ದೊಡ್ಡ ಕೋಟೆಯಾಗಿದೆ.ಎಂಟನೆಯ ಶತಮಾನದಲ್ಲಿ ನಿರ್ಮಾಣವಾದ ಈ ವಿಶಾಲವಾದ ಕೋಟೆಯನ್ನು ನೋಡಲು ವರ್ಷಕ್ಕೆ 20 ಲಕ್ಷ ಜನ ಪ್ರಪಂಚದ ಮೂಲೆ ಮೂಲೆಯಿಂದ ಬರುತ್ತಾರೆ.
4) Mehrangarh – ಮೇಹ್ರಂಗರ್ ಕೋಟೆ

ರಾಜಸ್ಥಾನದ ಜೋದ್ಪುರ್ ನಗರದಲ್ಲಿರುವ ಈ ಕೋಟೆಯು ಭಾರತದಲ್ಲಿಯೇ ಅತ್ಯಂತ ದೊಡ್ಡ ಕೋಟೆ. ಜೋದ್ಪುರ್ ನಗರದಲ್ಲಿರುವ “ಭಕೂರ್ಚೀರಿಯ” ಎನ್ನುವ ಬೆಟ್ಟದ ಮೇಲೆ ಇರುವ ಈ ಕೋಟೆಯು ಬರೋಬ್ಬರಿ 81,227 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ. 1459 ರಾಜ “ರಾವ್ ಜೋಧ” ಇದನ್ನು ನಿರ್ಮಿಸಿದ್ದು ಇಂದು ಈ ಕೋಟೆಯನ್ನು ಒಂದು ಸುಂದರ ಮ್ಯೂಸಿಯಂ ಅನ್ನಾಗಿ ಪರಿವರ್ತಿಸಲಾಗಿದೆ. ಆ ಮ್ಯೂಸಿಯಂ ಒಳಗಡೆ ರಾಜರ ಕಾಲದಲ್ಲಿ ಬಳಸುತ್ತಿದ್ದ ಅನೇಕ ಆಯುಧ, ಶಸ್ತ್ರಾಸ್ತ್ರಗಳು, ರಾಜರು ತೊಡುತ್ತಿದ್ದ ಸಮವಸ್ತ್ರಗಳು ಹಾಗು ವರ್ಣಚಿತ್ರಗಗಳನ್ನು ಇಡಲಾಗಿದ್ದು ಅದನ್ನು ನೋಡಲು ಅನೇಕ ಪ್ರವಾಸಿಗರು ಪ್ರತಿನಿತ್ಯ ಬರುತ್ತಿರುತ್ತಾರೆ.
5) Malbork – ಮಲ್ಬೋರ್ಕ್ ಕೋಟೆ

ಪೊಲ್ಯಾಂಡ್ ದೇಶದ “ಮಲ್ಬೋರ್ಕ್” ನಗರದಲ್ಲಿರುವ ಈ ಕೋಟೆಯು ಬರೋಬ್ಬರಿ 1,43,591 ಚದುರ ಕಿಲೋಮೀಟರ್ ಜಾಗದಷ್ಟು ವಿಸ್ತಾರವಾಗಿದ್ದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಕೋಟೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 13 ನೆಯ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆಯು ಎರಡನೆಯ ಪ್ರಪಂಚ ಯುದ್ಧ ನಡೆಯುವ ವೇಳೆಯಲ್ಲಿ ಪೊಲ್ಯಾಂಡ್ ದೇಶದ ಶತ್ರುಗಳಿಂದ ದಾಳಿಗೊಳಗಾಗಿ ಕೊಂಚ ನಾಶವಾಗಿತ್ತು. ಆದರೆ ಯುದ್ದ ನಿಂತ ನಂತರದಿಂದ ಇಲ್ಲಿಯವರೆಗು ಅಲ್ಲಿನ ಸರ್ಕಾರ ನಾಶವಾಗಿರುವ ಈ ಸುಂದರ ಕೋಟೆಯ ಕೆಲ ಭಾಗಗಳನ್ನು ಸರಿಪಡಿಸುತ್ತಲೆ ಇದೆ.
Follow Karunadu Today for more Interesting Facts & Stories.
Click here to Join Our Whatsapp Group