ನಮಗೆಲ್ಲ ಒಂದಲ್ಲ ಒಂದು ಬಾರಿಯಾದರು ನಾವು ಹಿಂದಿನ ಜನ್ಮದಲ್ಲಿ ಏನಾಗಿದ್ದೆವು ಎಂದು ತಿಳಿಯುವ ಕುತೂಹಲ ನಮ್ಮ ತಲೆಯಲ್ಲಿ ಮೂಡಿರುತ್ತದೆ. ಕೆಲವೊಮ್ಮೆ ಈ ಪುನರ್ಜನ್ಮವೆಲ್ಲ ಸುಳ್ಳು ಎಂದು ಕೂಡ ಅನ್ನಿಸಿರುತ್ತದೆ. ನೀವು ಸಹಜವಾಗಿ ಜನರ ಬಾಯಲ್ಲಿ “ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ನೋ ಈ ಜನ್ಮದಲ್ಲಿ ಅನುಭವಿಸುತ್ತ ಇರುವೆ” ಎಂದು ಹೇಳುವ ಮಾತನ್ನು ಅನೇಕ ಬಾರಿ ಕೇಳಿರುತ್ತೀರ. ನಮ್ಮ ಪುರಾಣಗಳ ಪ್ರಕಾರ ಮನುಷ್ಯನಿಗೆ 7 ಜನ್ಮಗಳು ಇವೆ, ಕೇವಲ ಮನುಷ್ಯನಿಗೆ ಮಾತ್ರವಲ್ಲದೆ ದೇವರಿಗೂ ಕೂಡ ಇದೆ. ಇದಕ್ಕೆ ಪುರಾವೆ ಎಂದರೆ ತ್ರೇತಾಯುಗದಲ್ಲಿ ರಾಮನಾಗಿ ಹುಟ್ಟಿ ಬಂದ ವಿಷ್ಣುವು ದ್ವಾಪರಯುಗದಲ್ಲಿ ಕೃಷ್ಣನಾಗಿ ಹುಟ್ಟಿ ಬಂದ. ಇದೇ ತರಹ ಮನುಷ್ಯನು ಕೂಡ ಒಮ್ಮೆ ಸತ್ತರೆ ಅವನ ಆತ್ಮವು ಬೇರೆ ದೇಹದಲ್ಲಿ ಸೇರಿಕೊಂಡು ಪುನರ್ಜನ್ಮ ತಾಳುತ್ತಾನೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ ಹಿಂದಿನ ಜನ್ಮದಲ್ಲಿ ನಾವು ಏನಾಗಿದ್ದೆವು ಎಂದು ನೆನಪು ಇರುವುದಿಲ್ಲ. ನೀವು ಒಂದು ಗಮನಿಸಿರಬಹುದು ನಾವು ಯಾವುದಾದರು ಸ್ಥಳಗಳಿಗೆ ಭೇಟಿ ನೀಡಿದಾಗ ಈ ಸ್ಥಳಕ್ಕೆ ಇದಕ್ಕೂ ಮೊದಲು ಯಾವಾಗಲೋ ಬಂದಿದ್ದೆ ಎಂದು ಅದೆಷ್ಟೋ ಬಾರಿ ಅನ್ನಿಸಿರುತ್ತದೆ. ಇಂತಹ ಘಟನೆಗಳು ಪ್ರಪಂಚದಲ್ಲಿ ಅದೆಷ್ಟೋ ಜನರ ಜೀವನದಲ್ಲಿ ನಡೆದಿವೆ. ಆದರೆ ಪ್ರಪಂಚದಲ್ಲಿ ಕೆಲವು ಜನರಿದ್ದು ಅವರಿಗೆ ತಮ್ಮ ಪೂರ್ವ ಜನ್ಮದ ನೆನಪು ಮಾತ್ರ ಇರುವುದಲ್ಲದೆ ಹಿಂದಿನ ಜನ್ಮದಲ್ಲಿ ಅದೇನು ಆಗಿದ್ದರು ಮತ್ತು ಎಲ್ಲಿದ್ದರು ಎನ್ನುವ ವಿಷಯವು ಕೂಡ ಸರಿಯಾಗಿ ನೆನಪಿದೆ. ಬನ್ನಿ ಇಂದು ನಿಮಗೆ ಆ ವಿಚಿತ್ರವಾದ ವ್ಯಕ್ತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ.

1. ಶಾಂತಿ ದೇವಿ


1926ರಲ್ಲಿ ದೆಹಲಿಯಲ್ಲಿ ಪುನರ್ಜನ್ಮ ಪಡೆದು ಜನಿಸಿದ ಮೇಲೆ ಈಕೆಯು ತನ್ನ ತಂದೆ ತಾಯಿಗೆ ತನ್ನ ಹಿಂದಿನ ಜನ್ಮದ ಬಗ್ಗೆ ಹೇಳತೊಡಗಿದಳು. ತಾನು ಮಥುರದಲ್ಲಿ “ಕೇದಾರ್ ನಾಥ್” ಎನ್ನುವ ವ್ಯಕ್ತಿಗೆ ಹೆಂಡತಿಯಾಗಿದ್ದೆ ಎಂದು ಇವಳು ಹೇಳುವುದನ್ನು ಕೇಳಿ ಮೊದ ಮೊದಲು ಈಕೆಯ ಪೋಷಕರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಆರನೆಯ ವರ್ಷದವಳಿದ್ದಾಗ ಅದೊಂದು ದಿನ ಮಥುರದಲ್ಲಿ ತಾನಿದ್ದ ಜಾಗಕ್ಕೆ ಮನೆಯಲ್ಲಿ ಹೇಳದೆ ಹೊರಟು ಹೋಗಿದ್ದಳು. ಈಕೆಯನ್ನು ಹುಡುಕುತ್ತ ಬಂದ ಪೋಷಕರು ಮಥುರದಲ್ಲಿ ಈಕೆಯನ್ನು ಕಂಡಮೇಲೆ ತಮ್ಮ ಮಗಳು ಹೇಳಿದ್ದು ನಿಜವೆಂದು ಅರಿವಾಯಿತು. ಇದು ದೇಶದಲ್ಲೆಲ್ಲ ಸುದ್ದಿಯಾಗಿ ಮಹಾತ್ಮ ಗಾಂಧೀಜಿ ಅವರಿಗೂ ಕೂಡ ಈ ಸುದ್ದಿ ಮುಟ್ಟಿತ್ತು. ಹಿಂದಿನ ಜನ್ಮದಲ್ಲಿ ಈ ಬಾಲಕಿಯ ಗಂಡನಾಗಿದ್ದ “ಕೇದಾರ್ ನಾಥ್” ಕೂಡ ಇನ್ನೂ ಜೀವಂತವಾಗಿದ್ದನು. ಆತನು ಕೂಡ ಈ ಪುಟ್ಟ ಬಾಲಕಿ ಹೇಳಿದ ಎಲ್ಲಾ ಮಾತುಗಳು ನಿಜವೆಂದು ಒಪ್ಪಿಕೊಂಡು ತನ್ನ ಮಗುವಿಗೆ ಜನ್ಮ ನೀಡುವ ವೇಳೆ ತನ್ನ ಹೆಂಡತಿ ತೀರಿಕೊಂಡಿದ್ದಳು ಎನ್ನುವ ಸತ್ಯವನ್ನು ಬಹಿರಂಗಪಡಿಸಿದ್ದನು.

2. ಕ್ಯಾಮೆರಾನ್ ಮಕೌಲಿ – Cameron MaCauley


ಸ್ಕಾಟ್ಲ್ಯಾಂಡ್ ದೇಶದ ಗ್ಲಾಸ್ಗೋ ನಗರದ ಈ ಬಾಲಕನಿಗೆ ಎರಡನೆಯ ವರ್ಷದಲ್ಲಿದ್ದಾಗ ತನ್ನ ಹಿಂದಿನ ಜನ್ಮದ ನೆನಪು ಬರತೊಡಗಿತು. ತಾನು ಹಿಂದಿನ ಜನ್ಮದಲ್ಲಿ ಬರ್ರಾ ದ್ವೀಪದಲ್ಲಿ ವಾಸಾವಾಗಿದ್ದೆ ಎಂದು ತನ್ನ ಪೋಷಕರ ಹತ್ತಿರ ಅನೇಕ ಬಾರಿ ಹೇಳತೊಡಗಿದ. ಮೊದ ಮೊದಲು ಈತನ ಮಾತನ್ನು ನಿರ್ಲಕ್ಷಿಸುತ್ತಿದ್ದ ಪೋಷಕರು ದಿನಗಳು ಕಳೆದಂತೆ ಈತನಲ್ಲಿ ಆಗುತ್ತಿದ್ದ ಬದಲಾವಣೆ ಕಂಡು ನಂಬತೊಡಗಿದರು. ಅದೊಂದು ದಿನ ಹಿಂದಿನ ಜನ್ಮದಲ್ಲಿ ತಾನು ಇದ್ದ ಮನೆಯ ಚಿತ್ರ ಮತ್ತು ತಾನು ಸಾಕಿದ್ದ ನಾಯಿಯ ಚಿತ್ರವನ್ನು ಈ ಬಾಲಕನು ಒಂದು ಹಾಳೆಯಲ್ಲಿ ಬಿಡಿಸಿ ಪೋಷಕರಿಗೆ ನೀಡಿದನು. ಆಗ ಅದರ ಆಧಾರದ ಮೇಲೆ ಬರ್ರಾ ದ್ವೀಪಕ್ಕೆ ಹೋದಾಗ ಹಾಳೆಯಲ್ಲಿ ಇದ್ದ ಚಿತ್ರದ ಹಾಗೆಯೇ ಅಲ್ಲಿ ಮನೆ ಹಾಗು ನಾಯಿ ಇರುವುದನ್ನು ಕಂಡು ಪೋಷಕರು ಆಶ್ಚರ್ಯ ಪಟ್ಟಿದ್ದರು.

3. ಚನೈ ಚೂಮಲೈವಾಂಗ್ – Chanai Choomalaiwong


ಥೈಲ್ಯಾಂಡ್ ದೇಶದ ಈ ಬಾಲಕನಿಗೆ 3 ವರ್ಷದವನಿದ್ದಾಗ ಹಿಂದಿನ ಜನ್ಮದ ನೆನಪು ಬರತೊಡಗಿತು. ತನ್ನ ಪೋಷಕರಿಗೆ ತಾನು ಹಿಂದಿನ ಜನ್ಮದಲ್ಲಿ ಶಿಕ್ಷಕನಾಗಿದ್ದೆ, ನನ್ನ ಹೆಸರು “Bua kai” ಆಗಿತ್ತು, ಅದೊಂದು ದಿನ ಮನೆಯಿಂದ ಶಾಲೆಗೆ ಹೋಗುತ್ತಿರುವಾಗ ನನ್ನ ತಲೆಗೆ ಹಿಂದಿನಿಂದ ಯಾರೋ ಶೂಟ್ ಮಾಡಿ ಸಾಯಿಸಿದರು ಎಂದು ಹೇಳಿದ. ಇದನ್ನು ಖಾತ್ರಿಪಡಿಸಿಕೊಳ್ಳಲು ಈತನು ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗಿ ವಿಚಾರಿಸಿದರೆ ಇದು ಸತ್ಯ ಎಂದು ತಿಳಿಯಿತು. ಅಚ್ಚರಿಯ ಸಂಗತಿ ಏನೆಂದರೆ ಹಿಂದಿನ ಜನ್ಮದಲ್ಲಿ ಗುಂಡು ತಗುಲಿದ್ದ ಜಾಗದಲ್ಲಿಯೇ ಈ ಜನ್ಮದಲ್ಲಿ “ಮಚ್ಚೆ(Birth mark)” ಮೂಡಿತ್ತು.

4. ಜೇಮ್ಸ್ ಲೈನಿಂಗರ್ – James Leininger


ಈ ಬಾಲಕನು ಹಿಂದಿನ ಜನ್ಮದಲ್ಲಿ ಅಮೇರಿಕಾದ ವಾಯು ದಳದಲ್ಲಿ ಪೈಲಟ್ ಆಗಿದ್ದನು. ಇದನ್ನು ಕುದ್ದು ಈತನೇ ತನ್ನ ಪೋಷಕರಿಗೆ ಅನೇಕ ಬಾರಿ ಹೇಳಿದ್ದನು. ರಾತ್ರಿ ಹೊತ್ತು ಮಲಗಿದ್ದಾಗ ಒಮ್ಮೆಲೆ ಎದ್ದು ನನ್ನ ವಿಮಾನವನ್ನು ಅವರು ಶೂಟ್ ಮಾಡಿಬಿಟ್ಟರು ಎಂದು ಕಿರುಚಾಡುತ್ತಿದ್ದನು. ಆ ವಿಮಾನವು ಎಲ್ಲಿ ದಾಳಿಗೊಳಗಾಗಿ ಬಿದ್ದಿತ್ತು ಎನ್ನುವ ಮಾಹಿತಿಯನ್ನು ಕೂಡ ಈ ಹುಡುಗನು ಸರಿಯಾಗಿ ಹೇಳುತ್ತಿದ್ದ. ಕೊನೆಗೆ ಒಂದು ದಿನ ಈತನ ಪೋಷಕರು ಅಮೇರಿಕದ ವಾಯು ದಳವನ್ನು ಭೇಟಿಯಾಗಿ ಈ ಸುದ್ದಿ ತಿಳಿಸಿದಾಗ 1945ರಲ್ಲಿ ಎರಡನೆಯ ಪ್ರಪಂಚ ಯುದ್ದ ನಡೆಯುವ ವೇಳೆ ಈ ಘಟನೆ ನಡೆದಿದ್ದನ್ನು ಖಾತ್ರಿ ಪಡಿಸಿದರು. ಇದನ್ನು ಕೇಳಿ ಎಲ್ಲರು ಅಚ್ಚರಿ ಪಟ್ಟರು.

5. ಸ್ಯಾಮ್ ಟೈಲರ್ – Sam Taylor


ಈ ವ್ಯಕ್ತಿಯು ಹುಟ್ಟುವುದಕ್ಕಿಂತ 18 ತಿಂಗಳು ಮೊದಲು ಈತನ ಅಜ್ಜನು ತೀರಿಕೊಂಡಿದ್ದನು. 18 ತಿಂಗಳುಗಳು ಆದ ಮೇಲೆ ಸತ್ತಿರುವ ಅಜ್ಜನೆ ಈತನಾಗಿ ತನ್ನ ಮಗನಿಗೆ ಹುಟ್ಟಿ ಬಂದಿದ್ದನು. ಇದನ್ನು ಮೊದ ಮೊದಲು ಈ ಬಾಲಕನ ಅಪ್ಪ ನಂಬಲಿಲ್ಲ ಆದರೆ ದಿನಗಳು ಕಳೆದಂತೆ ಈ ಬಾಲಕನು ತನ್ನ ಅಪ್ಪನ ಬಗ್ಗೆ ಎಲ್ಲಾ ಹೇಳುತ್ತಾ ಹೋದ. ಇದನ್ನು ಕೇಳಿ ಸತ್ತಿರುವ ನನ್ನ ತಂದೆಯು ನನ್ನ ಮಗನಾಗಿ ಹುಟ್ಟಿ ಬಂದಿದ್ದಾನೆ ಎಂದು ತಿಳಿದು ಸಾಕಷ್ಟು ಖುಷಿ ಪಟ್ಟನು.

6. ಹನಾನ್ ಮೊನ್ಸೂರ್ – Hanan Monsur


ಈಕೆಯು 1930ರಲ್ಲಿ ಹೃದಯ ಕಾಯಿಲೆಯಿಂದ ಅಸುನೀಗಿದ್ದಳು. ಸಾಯುವ ವೇಳೆಯಲ್ಲಿ ತನ್ನನ್ನು ಕಾಪಾಡುವಂತೆ “ಲೈಲ” ಎನ್ನುವ ಡಾಕ್ಟರ್ ಗೆ ಕರೆ ಮಾಡಲು ಪ್ರಯತ್ನ ಪಟ್ಟಿದ್ದಳು. 18 ದಿನಗಳ ನಂತರ ಬೇರೆ ದಂಪತಿಗಳಿಗೆ ಜನಿಸಿದ ಈಕೆಗೆ “Suzanne Ghanem” ಎಂದು ಹೆಸರಿಡಲಾಗಿತ್ತು. ತಾನು 3 ವರ್ಷದವಳಿದ್ದಾಗ ಟೆಲಿಫೋನ್ ಬಳಸಿ ಕೈಗೆ ಸಿಕ್ಕ ಸಂಖ್ಯೆ ಒತ್ತಿ “ಲೈಲಾ” ಎಂದು ಫೋನಿನಲ್ಲಿ ಮಾತನಾಡುತ್ತಿದ್ದಳು. ಇದನ್ನು ಅನೇಕ ಬಾರಿ ಗಮನಿಸಿದ ಈಕೆಯ ಪೋಷಕರು ಕೊನೆಗೆ ಇದರ ಬಗ್ಗೆ ತಿಳಿಯಲು ಮನೋಶಾಸ್ತ್ರಜ್ಞರ ಸಹಾಯ ತೆಗೆದುಕೊಂಡರು. ಆಗ ಹಿಂದಿನ ಜನ್ಮದ ರಹಸ್ಯ ಬಿಚ್ಚಿಟ್ಟ Suzanne Ghanem ಮಾತನ್ನು ಕೇಳಿ ಎಲ್ಲರು ಆಶ್ಚರ್ಯ ಪಟ್ಟರು.
ಇದೇ ತರಹ ಪ್ರಪಂಚದಲ್ಲಿ ಅನೇಕ ಜನರಿದ್ದು ಅವರಿಗೆ ತಮ್ಮ ಪೂರ್ವ ಜನ್ಮದ ನೆನಪಿದೆ. ವಿಜ್ಞಾನ ಅದೆಷ್ಟೇ ಮುಂದುವರೆದರು ಕೂಡ ಈ ರೀತಿಯ ವಿಚಿತ್ರ ಸಂಗತಿಗಳಿಗೆ ಮಾತ್ರ ಉತ್ತರ ಕಂಡುಹಿಡಿಯಲು ಸಾದ್ಯವಾಗಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group