ಈ ಪ್ರಪಂಚ ನಡೆಯುತ್ತಿರುವುದು ಹಣದಿಂದ. ಹಣ ಎನ್ನುವುದು ಯಾರಿಗೆ ಬೇಡ ನೀವೇ ಹೇಳಿ, ಜೀವನದ ಅತ್ಯಮೂಲ್ಯ ಅಂಶವಾಗಿದೆ ಈ ಹಣ ಎನ್ನುವುದು. ನಾವೆಲ್ಲರೂ ನಮ್ಮ ಬಳಿ ಎಷ್ಟು ಹಣವಿರುತ್ತದೆ ಅದರ ಆದಾರದ ಮೇಲೆ ನಮ್ಮ ಜೀವನ ನಡೆಸಲು ಬೇಕಾಗಿರುವ ವಸ್ತುಗಳನ್ನು ಕೊಂಡುಕೊಳ್ಳುತ್ತೇವೆ. ಬಡವನಾದವನಂತು ಒಂದೊಂದು ರುಪಾಯಿಯನ್ನು ಖರ್ಚು ಮಾಡಲು ಸಹ ನೂರು ಬಾರಿ ಆಲೋಚಿಸುತ್ತಾನೆ. ಮದ್ಯಮ ವರ್ಗದ ಜನರು ತಮಗೆ ಬರುವ ಸಂಬಳದಲ್ಲೇ ಅಲ್ಪ ಸ್ವಲ್ಪ ಕೂಡಿಟ್ಟು ತಮಗೆ ಬೇಕಾಗಿರುವ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಇನ್ನು ಶ್ರೀಮಂತರಲ್ಲಿ ಎರಡು ರೀತಿಯವರಿದ್ದಾರೆ. ಕೋಟಿ ಹಣವಿದ್ದರೂ ಅನಾವಶ್ಯಕವಾಗಿ ಅದನ್ನು ಖರ್ಚು ಮಾಡದೆ ಇರುವವರು ಒಬ್ಬರಾದರೆ ಇನ್ನೊಬ್ಬರು ದುಂದುವೆಚ್ಚ ಮಾಡಿ ಹಣವನ್ನು ಖರ್ಚು ಮಾಡುವವರು. ಆದರೆ ಅದೆಷ್ಟೇ ದುಂದು ವೆಚ್ಚ ಮಾಡಿದರೂ ಕೆಲವೊಂದು ವಸ್ತುಗಳನ್ನು ಖರೀದಿಸುವ ಮುನ್ನ ಸಾವಿರ ಬಾರಿ ಆಲೋಚಿಸಬೇಕಾಗುತ್ತದೆ. ಇಲ್ಲಿ ನಾವು ನಿಮಗೆ ಕೆಲವು ವಸ್ತುಗಳ ಬಗ್ಗೆ ಹೇಳುತ್ತೇವೆ, ಅವುಗಳು ಪ್ರಪಂಚದಲ್ಲಿಯೇ ಬೆಲೆಬಾಳುವ ವಸ್ತುಗಳಾಗಿದ್ದು ಅವುಗಳನ್ನು ಕೊಂಡುಕೊಳ್ಳಲು ಕೇವಲ ಕುಭೇರನಾದವನಿಂದ ಮಾತ್ರ ಸಾಧ್ಯ.

1. ಡೋರ್ ಸ್ಟಾಪರ್ (Door Stopper)

ಮನೆಯಲ್ಲಿ ಇರುವ ಬಾಗಿಲುಗಳನ್ನು ತೆಗೆದಾಗ ಅವು ಮರಳಿ ಮುಚ್ಚಿಕೊಳ್ಳಬಾರದೆಂದು ಅದನ್ನು ತಡೆಯಲು ಬಳಸುವ ವಸ್ತುವೇ ಈ ಡೋರ್ ಸ್ಟಾಪರ್. ಎಲ್ಲರ ಮನೆಯಲ್ಲೂ ಇದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತರಹದ ಡೋರ್ ಸ್ಟಾಪರ್ ಗಳನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಇದನ್ನು ಕಟ್ಟಿಗೆ ಅಥವ ಕಬ್ಬಿಣದಿಂದ ಮಾಡಿರುತ್ತಾರೆ. ಆದರೆ ಇಲ್ಲೊಂದು ಡೋರ್ ಸ್ಟಾಪರ್ ಇದೆ ಇದನ್ನು ಕಾಂಕ್ರೀಟ್ ನಿಂದ ತಯಾರಿಸಿದ್ದು ಇದರ ಬೆಲೆ ಬರೋಬ್ಬರಿ 3500 ಡಾಲರ್, ಅಂದರೆ 2 ಲಕ್ಷದ 51 ಸಾವಿರ ರೂಪಾಯಿಗಳು. ಇಷ್ಟೊಂದು ಬೆಲೆ ಬಾಳುವ ಈ ಡೋರ್ ಸ್ಟಾಪರ್ ಅನ್ನು ಅದ್ಯಾರು ಕೊಂಡುಕೊಳ್ಳುತ್ತಾರೋ ಗೊತ್ತಿಲ್ಲ ಆದರೆ ಇದೇ ಹಣದಲ್ಲಿ ಅದೆಷ್ಟೋ ಮನೆಗಳಿಗೆ ಬಾಗಿಲುಗಳನ್ನು ಮಾಡಿಸಿಕೊಡಬಹುದು.

2. ಬೂಟಿನ ಲೇಸುಗಳು (Shoe laces)

ನಾವು ಹಾಕಿಕೊಳ್ಳುವ ಬೂಟುಗಳು ಬಿಗಿಯಾಗಿ ನಮ್ಮ ಕಾಲುಗಳಿಗೆ ಕೂಡಲೆಂದು ಬೂಟಿನ ಜೊತೆಗೆ ದಾರಗಳ ತರಹ ಇರುವ ಲೇಸುಗಳನ್ನು ಕಟ್ಟಿಕೊಳ್ಳುತ್ತೇವೆ. ಎಷ್ಟೇ ಆಗಲಿ ಕಾಲಿಗೆ ಕಟ್ಟಿಕೊಳ್ಳುವುದು ಅಲ್ಲವೇ ಇದನ್ನು ಯಾವುದರಿಂದ ಮಾಡಿದರೇನು ಅಂದುಕೊಳ್ಳಬೇಡಿ. ಇಲ್ಲೊಂದು ಕಂಪನಿ ಇದೆ ಅದರ ಹೆಸರು “ಮಿಸ್ಟರ್ ಕೆನೆಡಿ”, ಈ ಕಂಪನಿಯವರು 24 ಗ್ರಾಂ ಚಿನ್ನದಿಂದ ಇದನ್ನು ತಯಾರಿಸಿದ್ದು ಇದರ ಬೆಲೆ ಬರೋಬ್ಬರಿ 19 ಸಾವಿರ ಡಾಲರ್. ಅಂದರೆ 13 ಲಕ್ಷ ರೂಪಾಯಿಗಳು.

3. ಸೂಟ್ಕೇಸ್

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ನಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಾವು ಸೂಟ್ಕೇಸ್ ಗಳನ್ನು ಬಳಸುತ್ತೇವೆ. ನಮ್ಮ ಬಳಿ ಹೆಚ್ಚು ಹಣವಿದ್ದರೆ ಒಳ್ಳೆಯ ಗುಣಮಟ್ಟದ ಸೂಟ್ಕೇಸ್ ಅನ್ನು ಖರೀದಿಸುತ್ತೇವೆ. ಆದರೆ ಇಲ್ಲೊಂದು ಸೂಟ್ಕೇಸ್ ಇದೆ ಅದರ ಹೆಸರು “ಹರ್ಮ್ಸ್ ಒರಿಯನ್ ಸೂಟ್ಕೇಸ್”, ಇದರ ಬೆಲೆ ಬರೋಬ್ಬರಿ 10 ಸಾವಿರದ 300 ಡಾಲರ್. ಇದರ ವಿಶೇಷತೆ ಏನೆಂದರೆ ಇದರ ಒಳಗಡೆ ಸೆನ್ಸಾರ್ ಅಳವಡಿಸಿದ್ದು ಯಾರಾದರು ಇದನ್ನು ಕದ್ದರೆ ಅದನ್ನು ಕೂಡಲೇ ಪತ್ತೆ ಹಚ್ಚಬಹುದು.

4. ಛತ್ರಿ

ಮಳೆ ಬಂದಾಗ ಅಥವ ಬಿಸಿಲು ಜಾಸ್ತಿ ಇದ್ದಾಗ ನಾವು ಛತ್ರಿಯನ್ನು ಬಳಸುತ್ತೇವೆ. ಅಕಸ್ಮಾತ್ ಅದು ಹರಿದು ಹೋದರೆ ಒಳ್ಳೆಯ ಗುಣಮಟ್ಟದ ಛತ್ರಿಯನ್ನು ನಾವು ಖರೀದಿಸುತ್ತೇವೆ. ಆದರೆ ಆದುವು ಕೂಡ ಹರಿದು ಹೋದರೆ ನಮ್ಮ ಕರ್ಮ ಎಂದು ಬೈದುಕೊಂಡು ಸುಮ್ಮನಾಗುತ್ತೇವೆ. ಇಲ್ಲೊಂದು ಛತ್ರಿ ಇದ್ದು ಅದು ಹರಿಯುವುದಿಲ್ಲ ಹಾಗು ಮುರಿಯುವುದು ಇಲ್ಲ. ಏಕೆಂದರೆ ಅದನ್ನು ಮೊಸಳೆಯ ಚರ್ಮದಿಂದ ತಯಾರಿಸಿದ್ದಾರೆ. ಹೌದು ನಿಮಗೆ ಇದು ಆಶ್ಚರ್ಯವಾದರೂ ಸತ್ಯ. ಈ ಛತ್ರಿಯು ಇಂಗ್ಲೆಂಡಿನ ಲಂಡನ್ ನಗರದಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗುವುದಿಲ್ಲ. ಇದರ ಬೆಲೆಯು ಬರೋಬ್ಬರಿ 50 ಸಾವಿರ ಡಾಲರ್, ಅಂದರೆ 35 ಲಕ್ಷ ರೂಪಾಯಿಗಳು.

5. ಬರ್ಗರ್

ಇತ್ತೀಚಿನ ದಿನಗಳಲ್ಲಿ ಹೊಟ್ಟೆಗೆ ತಿನ್ನಲು ಅನ್ನವಿಲ್ಲದಿದ್ದರೂ ಬರ್ಗರ್ ಮಾತ್ರ ಬೇಕು ಅನ್ನುವ ಹಾಗಾಗಿದೆ. ಶ್ರೀಮಂತರ ಹಾಗು ಕೆಲವು ಮದ್ಯಮ ವರ್ಗದ ಜನರ ನೆಚ್ಚಿನ ಆಹಾರ ಇದಾಗಿದೆ. ಇದರ ಬೆಲೆ ನಮಗೆಲ್ಲ ತಿಳಿದಿರುವ ಹಾಗೆ 50 ರುಪಾಯಿ ಇಂದ ಪ್ರಾರಂಭವಾಗುತ್ತದೆ. ಆದರೆ ಇಲ್ಲೊಂದು ಬರ್ಗರ್ ಇದ್ದು ಅದನ್ನು ಒಬ್ಬ ವಿಜ್ಞಾನಿಯು ತನ್ನ ಲ್ಯಾಬೋರೇಟರಿಯಲ್ಲಿ ತಯಾರಿಸಿದ್ದು ಅದರ ಬೆಲೆ ಬರೋಬ್ಬರಿ ಎರಡು ಕೋಟಿ. ಇಷ್ಟೊಂದು ದುಡ್ಡು ಕೊಟ್ಟು ತಿನ್ನುವ ಬದಲು ರಾಗಿ ಮುದ್ದೆ ಅಥವ ಜೋಳದ ರೊಟ್ಟಿ ತಿಂದರೆ ಸಾಕು ಆರೋಗ್ಯವಾಗಿರಬಹುದು ಅಲ್ಲವೆ?

6. ಬೆಡ್

ನಾವೆಲ್ಲರು ಮಲಗಲು ಬಳಸುವ ವಸ್ತು ಇದು. ಬಡವರಿಗೆ ಮಲಗಲು ಚಾಪೆಯೇ ಒಂದು ಒಳ್ಳೆಯ ಬೆಡ್ ಇದ್ದ ಹಾಗೆ. ಅದೆಷ್ಟೇ ಬಡವನಾದರೂ ಕನಿಷ್ಠಪಕ್ಷ 300 ರುಪಾಯಿಗಳನ್ನು ಕೊಟ್ಟು ಒಂದು ಬೆಡ್ ತರುತ್ತಾರೆ. ಆದರೆ ಇಲ್ಲೊಂದು ಬೆಡ್ ಇದೆ ಅದರ ಮೇಲೆ ಕೇವಲ ಕುಬೇರನ ವರದಾನ ಪಡೆದವರು ಮಾತ್ರ ಮಲಗಲು ಯೋಗ್ಯರು. ಹೌದು, ಈ ಬೆಡ್ ಅನ್ನು ಚಿನ್ನದಿಂದ ತಯಾರಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 6.3 ಬಿಲಿಯನ್ ಡಾಲರ್ಸ್.

7. ಮೊಬೈಲ್

ನಮಗೆಲ್ಲ ತಿಳಿದಿರುವ ಹಾಗೆ ಪ್ರಪಂಚದಲ್ಲಿ ಐಫೋನ್ ಮೊಬೈಲ್ಗಳು ಬಹು ಬೇಡಿಕೆಯ ಮೊಬೈಲ್ ಹಾಗು ದುಬಾರಿಯಾದದ್ದು. ಇಲ್ಲೊಂದು ಕಂಪನಿ ಇದೆ ಅದರ ಹೆಸರು “ಫಾಲ್ಕನ್”. ಈ ಕಂಪನಿಯವರು ಚಿನ್ನದ ಐಫೋನ್ ತಯಾರಿಸಿದ್ದು ಅದರ ಬೆಲೆ 48 ಮಿಲಿಯನ್ ಡಾಲರ್.

8. ಹುಯಿಯ ಪಕ್ಷಿಯ ರೆಕ್ಕೆ(huia bird feather)

ನಮಗೆಲ್ಲ ತಿಳಿದಿರುವ ಹಾಗೆ ನವಿಲುಗೆರೆಯು ನೋಡಲು ತುಂಬಾ ಸುಂದರವಾಗಿರುತ್ತವೆ. ಒಂದು ನವಿಲುಗೆರೆ ಸಿಕ್ಕರೆ ಸಾಕು ಸಂತೋಷದಿಂದ ಮನೆಗೆ ತಂದು ಅದನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲೊಂದು ಪಕ್ಷಿಯ ರೆಕ್ಕೆಯಿದ್ದು ಅದರ ಬೆಲೆ ಬರೋಬ್ಬರಿ 5400 ಡಾಲರ್, ಅಂದರೆ 3 ಲಕ್ಷದ 89 ಸಾವಿರದ 917 ರೂಪಾಯಿಗಳು. ಇಷ್ಟೊಂದು ಬೆಲೆ ತೆತ್ತು ಅದನ್ನು ತಂದು ಮನೆಯಲ್ಲಿ ಇಡುವ ಜನರೂ ಇರುವರು ಅಂದರೆ ನಂಬಲು ಅಸಾದ್ಯ ಅಲ್ಲವೆ?

9. ಕ್ರಿಸ್ಟಲ್ ಪಿಯಾನೋ (crystal piano)

ಪಿಯಾನೋ ಒಂದು ಸುಂದರವಾದ ಸಂಗೀತ ವಾದ್ಯ. ಇದನ್ನು ನುಡಿಸುತ್ತಿದ್ದರೆ ಅದರಿಂದ ಬರುವ ಸಂಗೀತವು ನಮ್ಮ ಮೈ ಮರೆಸುತ್ತದೆ. ಇಲ್ಲೊಂದು ಪಿಯಾನೋ ಇದ್ದು ಅದರ ಬೆಲೆ ಬರೋಬ್ಬರಿ 3.2 ಮಿಲಿಯನ್ ಡಾಲರ್. ಇದನ್ನು ಈಜಿಪ್ಟ್ ದೇಶದಲ್ಲಿ ನಡೆದ ಒಲಂಪಿಕ್ ಆಟದಲ್ಲಿ ನುಡಿಸಲು ಬಳಸಿದ್ದರಂತೆ.

10. ಕೈ ಗಡಿಯಾರ (watch)

ಸಮಯವನ್ನು ನೋಡಲು ನಾವೆಲ್ಲರೂ ನಮ್ಮ ಕೈಗೆ ಗಡಿಯಾರವನ್ನು ಕಟ್ಟಿಕೊಳ್ಳುತ್ತೇವೆ. ಕೆಲವರು ಶೋಕಿ ಮಾಡಲೆಂದೇ ದುಬಾರಿ ಗಡಿಯಾರವನ್ನು ಕಟ್ಟಿಕೊಂಡು ಎಲ್ಲರಿಗೂ ತೋರಿಸುತ್ತಾರೆ. ಆದರೆ ಅದೆಷ್ಟೇ ಶೋಕಿವಂತರು ಆದರೂ ಈ ಗಡಿಯಾರವನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಹೌದು, ಇಲ್ಲೊಂದು ಕೈ ಗಡಿಯಾರವಿದೆ. “ಚೋಪಾರ್ಡ್” ಎನ್ನುವ ಕಂಪನಿಯು 201 ಕ್ಯಾರೆಟ್ ನಿಂದ ತಯಾರಿಸಿದ ಈ ಗಡಿಯಾರದ ಬೆಲೆ ಬರೋಬ್ಬರಿ 25 ಮಿಲಿಯನ್ ಡಾಲರ್.

ಮನುಷ್ಯನ ಬಳಿ ಹೆಚ್ಚು ಹಣವಿದ್ದರೆ ಈ ತರಹದ ವಸ್ತುಗಳನ್ನು ತಯಾರಿಸಿ ಮಾರುತ್ತಾನೆ. ಅದೆಷ್ಟೇ ದುಬಾರಿಯ ವಸ್ತುಗಳು ನಮ್ಮ ಬಳಿ ಇದ್ದರೇನು ಒಳ್ಳೆಯ ಗುಣ ಹಾಗು ಸತ್ತ ಮೇಲೆ ಹೊತ್ತುಕೊಂಡು ಹೋಗಲು 4 ಜನರು ಇಲ್ಲದಿದ್ದರೆ ಬದುಕಿದ್ದು ವ್ಯರ್ಥ. ಇರುವ ಹಣವನ್ನು ಈ ತರಹದ ವಸ್ತುಗಳನ್ನು ಕೊಂಡುಕೊಳ್ಳಲು ಬಳಸದೆ ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡಿದರೆ ಜನರನ್ನಾದರು ಗಳಿಸಬಹುದು ಅಲ್ಲವೆ?

Follow Karunadu Today for more Interesting Facts & Stories. 

Click here to Join Our Whatsapp Group