
"ಅಧ್ಯಾತ್ಮಿಕ ಮಾಹಿತಿ"
ಈ ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ಮಾನವ ಜೀವ ಯಾವುದಾದರೂ ಇದ್ದರೆ ಅದು ಹೆಣ್ಣು ಮಾತ್ರ ಹೆಣ್ಣನ್ನ ತಾಯಿಯಾಗಿ,ಮಡದಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ, ಸಹೋದರಿಯಾಗಿ ಇನ್ನು ಬೇರೆ ಬೇರೆ ರೂಪದಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಕಾಣಿಸಿಕೊಳ್ಳುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿ ಕೆಲವೊಂದು ಪಾತ್ರವೂ ಎಷ್ಟು ಮುಖ್ಯವೋ ಅದೇ ರೀತಿ ಒಂದು ಹೆಣ್ಣಿನ ಪಾತ್ರವೂ ಕೂಡ ಅಷ್ಟೇ ಅಮೂಲ್ಯವಾಗಿರುತ್ತದೆ. ಎಲ್ಲಾ ಗುಣಗಳನ್ನು ಹೊಂದಿರುವಂತಹ ಹೆಣ್ಣು ನಮ್ಮ ಜೀವನದಲ್ಲಿ ಬರಬೇಕೆಂದರೆ ಅದಕ್ಕೆ ಅದೃಷ್ಟವಿರಬೇಕು.ಆದರೆ ಕೆಲವೊಬ್ಬರು ಹೆಣ್ಣನ್ನ ಅಮಾನುಷವಾಗಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಅಂತವರಿಂದ ಹೆಣ್ಣು ನಾನಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಇಷ್ಟವಿಲ್ಲದಿದ್ದರೂ ಕೂಡ ಮನೆಯವರ ಬಲವಂತಕ್ಕೆ ಮದುವೆಯಾಗುವುದು. ಪ್ರೀತಿ ಮಾಡಿದ ಹುಡುಗನಿಂದ ಮೋಸ ಹೋಗುವುದು. ಅನ್ಯ ವ್ಯಕ್ತಿಗಳಿಂದ ಕಷ್ಟಕ್ಕೆ ಸಿಲುಕಿಕೊಳ್ಳುವುದು. ಮದುವೆಯ ನಂತರ ಹೆಣ್ಣಿನ ಕಣ್ಣಲ್ಲಿ ಪ್ರತಿದಿನವೂ ಕೂಡ ಕಣ್ಣೀರು ಹಾಕಿಸುವುದು ಮತ್ತು ಒಬ್ಬರನ್ನ ನಂಬಿ ಅವರಿಂದ ಮೋಸ ಹೋಗಿ ಪ್ರತಿದಿನ ಕಣ್ಣೀರು ಹಾಕುವುದರಿಂದ ಸ್ತ್ರೀಯ ಶಾಪ ಮೋಸ ಮಾಡಿದ ವ್ಯಕ್ತಿಗೆ ತಟ್ಟುತ್ತದೆ.
ಹೆಣ್ಣಿನ ಕಣ್ಣೀರಿನ ಶಾಪಕ್ಕೆ ಒಳಗಾಗಿ ಅನುಭವಿಸಬೇಕಾಗಿರುವ ಸಮಸ್ಯೆಗಳು ಏನೆಲ್ಲ ಇರಬಹುದು ಗೊತ್ತಾ:
ಹೆಣ್ಣಿನ ಶಾಪವು ಒಂದು ಸರ್ಪಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ.ಹೇಗೆ ಸರ್ಪಕ್ಕೆ ತೊಂದರೆ ಕೊಟ್ಟು ಜೀವನಪೂರ್ತಿ ಸರ್ಪ ದೋಷಗಳಿಂದ ಸಮಸ್ಯೆಯನ್ನ ಎದುರಿಸುತ್ತೇವೋ ಅದೇ ರೀತಿ ಒಂದು ಹೆಣ್ಣಿನಿಂದ ಶಾಪಕ್ಕೆ ಒಳಪಟ್ಟ ವ್ಯಕ್ತಿ ಜೀವನದುದ್ದಕ್ಕೂ ಕಣ್ಣೀರುಡುವ ಪರಿಸ್ಥಿತಿ ಬರುತ್ತದೆ.ಹೆಣ್ಣಿನ ಶಾಪದಿಂದ ಆ ವ್ಯಕ್ತಿ ಯಾವುದೇ ಕೆಲಸ ಮಾಡಿದರು ಕೂಡ ಫಲ ಸಿಗುವುದಿಲ್ಲ ಮತ್ತು ಅದರಿಂದ ಯಾವುದೇ ರೀತಿಯ ಲಾಭವನ್ನು ಕೂಡ ಪಡೆಯುವುದಿಲ್ಲ ಅವನು ಮಾಡುವ ಯಾವ ಕೆಲಸವೂ ಕೂಡ ಸಂಪೂರ್ಣವಾಗುವುದಿಲ್ಲ ಮತ್ತು ಅವನಿಗೆ ಸಿಗಬೇಕಾಗಿರುವ ಗೌರವ, ಯಶಸ್ಸು ಅನ್ನುವುದು ಅವನಿಗೆ ದೊರಕುವುದಿಲ್ಲ. ಹಾಗೆ ಆರೋಗ್ಯದಲ್ಲಿ ವ್ಯತ್ಯಾಸ ಮತ್ತ ಜೀವನಪೂರ್ತಿ ಸಮಸ್ಯೆಗಳಿಂದಲೇ ಬದುಕಬೇಕಾಗಿರುತ್ತದೆ. ಒಂದು ಹೆಣ್ಣಿಗೆ ನೀಡಿರುವ ಸಮಸ್ಯೆಗಳಿಗಿಂತ ಎರಡು ಪಟ್ಟು ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ.ಹಾಗಾಗಿ ಯಾರು ಕೂಡ ಹೆಣ್ಣನ್ನು ನೋಯಿಸಬಾರದು. ತಾಯಿ, ಹೆಂಡತಿ, ಪ್ರೀತಿಸಿದ ಹುಡುಗಿ ಅಥವಾ ಸಹೋದರಿ ಇವರನ್ನು ನೋಯಿಸಿ ಕಣ್ಣೀರಾಕಿಸಬಾರದು. ಹೆಣ್ಣಿನ ಶಾಪಕ್ಕೆ ಗುರಿಯಾದರೆ ಆಕೆ ಕಾಲಿಗೆ ಬಿದ್ದು ಕ್ಷಮೆ ಕೇಳುವುದೇ ಒಂದೇ ಪರಿಹಾರ. ನಿಮ್ಮಿಂದ ನೋವಿಗೆ ಒಳಗಾದವರು ಖಂಡಿತ ನಿಮ್ಮಿಂದ ತುಂಬಾ ದೂರ ಹೋಗಿರುತ್ತಾರೆ. ಜೀವನದಲ್ಲಿ ನೀವು ಇದ್ಧ ಪರಿಸ್ಥಿತಿಯನ್ನು ಹಾಳು ಮಾಡಿಕೊಂಡು ತುಂಬಾ ಪಾತಾಳಕ್ಕೆ ಹೋಗುತ್ತಿದ್ದೇವೆ ಎಂದರೆ ಖಂಡಿತವಾಗಿ ಇದು ಯಾವ ಕಾರಣಕ್ಕೆ ಅನ್ನೋದು ನಿಮಗೆ ಅರಿವಾಗಿರುತ್ತದೆ.ಆಗ ಅವರ ಬಳಿಗೆ ಹೋಗಿ ಮನಸಾರೆ ಕ್ಷಮೆ ಕೇಳಿ ಸಾಧ್ಯವಾದರೆ ನಿಮ್ಮಿಂದ ಅವರಿಗಾಗಿರುವ ತೊಂದರೆಯನ್ನು ಸರಿ ಮಾಡಲು ಪ್ರಯತ್ನಿಸಿ. ಒಂದು ವೇಳೆ ಅವರು ಕ್ಷಮಿಸಿದರೆ ಮಾತ್ರ ನೀವು ಸ್ವಲ್ಪ ನೆಮ್ಮದಿಯನ್ನು ಕಾಣಬಹುದು ಇಲ್ಲವಾದಲ್ಲಿ ಜೀವನಪೂರ್ತಿ ದುಃ’ಖ ತಪ್ಪಿದ್ದಲ್ಲ. ಅದಕ್ಕೆ ಹೆಣ್ಣನ್ನು ದೈವ ಸ್ವರೂಪ ಎನ್ನುವುದು, ಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವತೆಗಳು ನೆಲೆಸುತ್ತಾರೆ. ದೇವರ ಆಶೀರ್ವಾದವೂ ದೊರೆಯುತ್ತದೆ. ಒಂದು ವೇಳೆ ವಿರುದ್ಧವಾಗಿ ನಡೆದುಕೊಂಡರೆ ಬದುಕು ನರಕವಾಗುವುದು ಕಟ್ಟಿಟ್ಟ ಬುತ್ತಿ.
Follow Karunadu Today for more Spiritual Information like this
Click here to Join Our Whatsapp Group