
ನಮಗೆಲ್ಲ ಗೊತ್ತಿರುವ ಹಾಗೆ ಮನುಷ್ಯನು ತನ್ನ ದುರಾಸೆಯಿಂದ ಅದೆಷ್ಟೋ ಪ್ರಾಣಿಗಳನ್ನು ಬೇಟೆ ಆಡಿದ್ದಾನೆ. ತಾನು ಶೂರನೆಂದು ತೋರಿಸಿಕೊಳ್ಳಲು ಹಾಗು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ತನ್ನ ಅಧಿಕಾರ ಚಲಾಯಿಸಲು ಪ್ರಾಣಿಗಳ ಬೇಟೆ ಆಡುವ ಈ ಮನುಷ್ಯನ ಕೈಗೆ ಸಿಕ್ಕು ಅದೆಷ್ಟೋ ಪ್ರಾಣಿಗಳು ಇಂದು ಈ ಭೂಮಿಯಿಂದಲೇ ಅವನತಿಯಾಗಿವೆ. ನಮಗೆಲ್ಲ ಗೊತ್ತಿರುವ ಹಾಗೆ ಅದೆಷ್ಟೋ ಮಿಲಿಯನ್ ವರ್ಷಗಳ ಹಿಂದೆ ಡೈನೋಸಾರ್ ಹಾಗು ದೊಡ್ಡ ದೊಡ್ಡ ಜೀವಿಗಳು ಈ ಭೂಮಿಯ ಮೇಲೆ ಇದ್ದವು. ಆದರೆ ಭೂಮಿಗೆ ಬಂದು ಅಪ್ಪಳಿಸಿದ ಕ್ಷುದ್ರ ಗ್ರಹದಿಂದ ಅವೆಲ್ಲವೂ ಕೂಡ ಸತ್ತು ಹೋದವು. ಅಂದರೆ ಮನುಷ್ಯನು ಈ ಭೂಮಿಗೆ ಬರುವ ಮೊದಲೇ ಅನೇಕ ಪ್ರಾಣಿಗಳು ಅವನತಿಗೊಂಡಿವೆ. ಕೇವಲ ಮನುಷ್ಯನೊಬ್ಬನೇ ಅಲ್ಲದೆ ಪ್ರಕೃತಿಯು ಕೂಡ ಅನೇಕ ಪ್ರಾಣಿಗಳ ಅವನತಿಗೆ ಕಾರಣವಾಗಿದೆ. ಅದೇನೇ ಹೇಳಿ ಬುದ್ದಿ ಇಲ್ಲದ ಮುಗ್ದ ಪ್ರಾಣಿಗಳು ಮನುಷ್ಯ ಹಾಗು ಪ್ರಕೃತಿಯ ಕೈಗೆ ಸಿಕ್ಕು ಅವನತಿಯಾಗಿರುವುದು ಮಾತ್ರ ದುರಾದೃಷ್ಟದ ಸಂಗತಿ. ಇಂದು ನಿಮಗೆ ಈ ರೀತಿಯಾಗಿ ಮನುಷ್ಯ ಮತ್ತು ಪ್ರಕೃತಿಯ ಕೈಗೆ ಸಿಕ್ಕು ಕಳೆದ 100 ವರ್ಷದಲ್ಲಿ ಅವನತಿಯಾದ ಕೆಲವು ಪ್ರಾಣಿಗಳ ಕುರಿತು ತಿಳಿಸುತ್ತೇವೆ ಮುಂದೆ ಓದಿ.
1) ಬ್ಯುಬಲ್ ಹರ್ಟೆಬೀಸ್ಟ್ – Bubal hartebeest
ಆಫ್ರಿಕಾದ ಸಹರಾ ಮರುಭೂಮಿಯ ಉತ್ತರ ಭಾಗದಲ್ಲಿ ಕಾಣಸಿಗುತ್ತಿದ್ದ ಈ ಪ್ರಾಣಿಯ ಕುತ್ತಿಗೆಯು 43 ಇಂಚು ಉದ್ದವಿರುತ್ತಿತ್ತು ಹಾಗು ಇದರ ಕೊಂಬು ಸರಿಯಾಗಿ “U” ಆಕಾರದಲ್ಲಿ ಇರುತ್ತಿತ್ತು. ಇದರ ಜಾತಿಗೆ ಸೇರಿದ “ಕೆಂಪು ಹರ್ಟೆಬೀಸ್ಟ್” ಮತ್ತು “Linchensteins ಹರ್ಟೆಬೀಸ್ಟ್” ಮಾತ್ರ ಈಗಲೂ ದಕ್ಷಿಣ ಆಫ್ರಿಕಾದ ಭಾಗದಲ್ಲಿ ಕಾಣಸಿಗುತ್ತವೆ. ಸಾರಂಗದ ತರಹ ಇದ್ದ ಈ ಪ್ರಾಣಿಗಳನ್ನು ಭೇಟೆ ಆಡುವುದರ ಮೂಲಕ ಈ ಪ್ರಾಣಿಗಳ ಅವನತಿಗೆ ಕಾರಣನಾದ ಕ್ರೂರ ಮನುಷ್ಯನು. ಈ ಜಾತಿಯ ಪ್ರಾಣಿಯು ಕೊನೆಯ ಬಾರಿ 1945 ರಲ್ಲಿ ಕಾಣಿಸಿಕೊಂಡಿದ್ದವು ಅದರ ನಂತರ ಎಲ್ಲೂ ಕಾಣಿಸಿಕೊಂಡಿಲ್ಲ.
2) ತಸ್ಮೇನಿಯನ್ ಟೈಗರ್ – Tasmanian tiger
1930 ಕ್ಕಿಂತ ಮೊದಲು ಆಸ್ಟ್ರೇಲಿಯಾದಲ್ಲಿ ಈ ಪ್ರಾಣಿಯು ಎಲ್ಲೆಡೆ ಕಾಣಸಿಗುತ್ತಿದ್ದವು. ಆದರೆ ಆಹಾರ ಹುಡುಕಿಕೊಂಡು ಊರಿನ ಕಡೆ ಬಂದು ಅನೇಕ ಬೀದಿ ನಾಯಿಗಳ ಹಾಗು ಮನುಷ್ಯರ ಮೇಲೆ ದಾಳಿ ಮಾಡತೊಡಗಿದಾಗ ಅಲ್ಲಿನ ಜನರು ಇವುಗಳ ಬೇಟೆ ಆಡಲು ಶುರು ಮಾಡಿದರು. ಕೆಲವು ಪ್ರಾಣಿಗಳನ್ನು ಹಿಡಿದು zooನಲ್ಲಿ ಕೂಡ ಹಾಕಿದ್ದರು. ಆದರೆ ಅತಿಯಾಗಿ ಬೇಟೆ ಆಡುವುದರಿಂದ ಕೊನೆಗೆ ಈ ಪ್ರಾಣಿಯ ಸಂತತಿಯನ್ನು ನಾಶ ಮಾಡಿಬಿಟ್ಟರು. ಹುಲಿಯ ಹಾಗೆ ಪಟ್ಟಿಗಳನ್ನು ಹೊಂದಿದ್ದ ಈ ಪ್ರಾಣಿ ತೋಳದ ಹಾಗೆ ಆಡುತ್ತಿತ್ತು.
3) ಪಶ್ಹಿಮ ಆಫ್ರಿಕಾದ ಕಪ್ಪು ಖಡ್ಗಮೃಗ – West african black rhinoceros
ಮಧ್ಯ ಅಮೇರಿಕ ಭಾಗದಲ್ಲಿ ಇರುವ “ಕ್ಯಾಮೆರೋನ್” ದೇಶದಲ್ಲಿ ಕಾಣಸಿಗುತ್ತಿದ್ದ ಈ ಪ್ರಾಣಿಯನ್ನು ಅಕ್ರಮವಾಗಿ ಬೇಟೆ ಆಡುವುದರೊಂದಿಗೆ ಅವುಗಳ ಸಂತತಿಯನ್ನು ನಾಶ ಮಾಡಲಾಯಿತು. 2011 ರಲ್ಲಿ ಇವುಗಳ ಸಂತತಿ ಸಂಪೂರ್ಣವಾಗಿ ನಶಿಸಿ ಹೋಗಿದೆ ಎಂದು ತಿಳಿದುಬಂತು. “3 – 3.75” ಮೀಟರ್ ಉದ್ದವಿರುತ್ತಿದ್ದ ಈ ಪ್ರಾಣಿಗೆ ಎರಡು ಕೊಂಬುಗಳಿದ್ದವು. ದೊಡ್ಡ ಕೊಂಬು 0.5 – 1.4 ಮೀಟರ್ ವರೆಗು ಇದ್ದರೆ ಚಿಕ್ಕಕೊಂಬು 2 – 55 ಸೆಂಟಿಮೀಟರ್ ಉದ್ದದವರೆಗು ಬೆಳೆಯುತ್ತಿತ್ತು. ಮರದ ಎಲೆಗಳನ್ನು ತಿಂದು ಬದುಕುತ್ತಿದ್ದ ಈ ಪ್ರಾಣಿಯು ಬೆಳೆಗ್ಗೆ ಮತ್ತು ಸಂಜೆ ಮಾತ್ರ ಆಹಾರ ಹುಡುಕಿಕೊಂಡು ಹೋಗುತ್ತಿತ್ತು. ಮಧ್ಯಾನ್ಹದ ವೇಳೆಯಲ್ಲಿ ಹೊರಗಡೆ ಬರದೆ ನಿದ್ದೆ ಮಾಡುತ್ತಿತ್ತು. ಈ ಪ್ರಾಣಿಯ ಕೊಂಬಿನಲ್ಲಿ ಕೆಲವು ರೋಗಗಳಿಗೆ ಬೇಕಾಗಿರುವ ಔಷದಿಗಳಿವೆ ಎಂದು ನಂಬಿದ್ದ ಜನರು ಇದನ್ನು ಬೇಟೆ ಆಡುತ್ತಿದ್ದರು. ಆದರೆ ಇದಕ್ಕೆ ವೈಜ್ಞ್ಯಾನಿಕವಾಗಿ ಯಾವುದೇ ಪುರಾವೆ ಇಲ್ಲ. ಈ ರೀತಿಯಾದ ಮೂಡ ನಂಬಿಕೆಯಿಂದ ಇವುಗಳ ಬೇಟೆ ನಿರಂತರವಾಗಿ ನಡೆದು ಇಂದು ಅವುಗಳ ಸಂತತಿಯೇ ನಾಶವಾಗಿದೆ.
4) ಜಾವನ್ ಟೈಗರ್ – Javan tiger
ಇಂಡೋನೇಷಿಯಾದ ಜಾವ ದ್ವೀಪದಲ್ಲಿ ಕಾಣಸಿಗುತ್ತಿದ್ದ ಈ ಹುಲಿಯು ಬೆಂಗಾಲ್ ಟೈಗರ್ ಜಾತಿಯ ಹುಲಿಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದವು, ಇವುಗಳ ಮೂಗು ಸ್ವಲ್ಪ ಉದ್ದವಿರುತ್ತಿತ್ತು. ಗಂಡು ಹುಲಿಯ ದೇಹವು 248 ಸೆಂಟಿಮೀಟರ್ ಉದ್ದ ಹಾಗು 100 ರಿಂದ 141 ಕೆಜಿ ತೂಕದವರೆಗು ಇರುತ್ತಿದ್ದವು. ಇನ್ನು ಹೆಣ್ಣು ಜಾವನ್ ಟೈಗರ್ ಗಂಡು ಹುಲಿಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತಿದ್ದವು ಹಾಗು ಅವುಗಳ ತೂಕ 75 ರಿಂದ 115 ಕೆಜಿ ಇರುತ್ತಿತ್ತು. 1970 ರ ನಂತರ ಜಾವಾ ದ್ವೀಪದ ಮೇಲೆ ಮನುಷ್ಯರ ಜನಸಂಖ್ಯೆ ಹೆಚ್ಚಾಗತೊಡಗಿತು. ಇದರಿಂದ ದ್ವೀಪದ ಮೇಲೆ ಇರುವ ಕಾಡನ್ನು ಕಡಿದು ಹಾಕಲು ಶುರು ಮಾಡಿದರು. ಆಗ ಆಹಾರ ಹುಡುಕಿಕೊಂಡು ಊರಿನ ಕಡೆಗೆ ಬರುತ್ತಿದ್ದ ಹುಲಿಗಳನ್ನು ಬೇಟೆ ಆಡಲು ಶುರು ಮಾಡಿದ ಅಲ್ಲಿನ ಜನರು ಕೊನೆಗೆ ಇವುಗಳ ಸಂತತಿಯನ್ನೇ ನಾಶ ಮಾಡಿಬಿಟ್ಟರು.
5) ಕೆರೆಬಿಯನ್ ಮಾಂಕ್ ಸೀಲ್
ಕೆರೆಬಿಯನ್ ಸಮುದ್ರದಲ್ಲಿ ವಾಸವಿರುತ್ತಿದ್ದ ಈ ಪ್ರಾಣಿಗೆ ಮನುಷ್ಯ ಮತ್ತು ಶಾರ್ಕ್ ಮೀನುಗಳಿಂದ ಸದಾ ಕಾಲ ಅಪಾಯ ಬರುತ್ತಲೇ ಇತ್ತು. ಇವುಗಳನ್ನು ಅಕ್ರಮವಾಗಿ ಬೇಟೆ ಆಡಿ ತಿನ್ನುತ್ತಿದ್ದರಿಂದ ಕಾಲ ಕಳೆದಂತೆ ಇವುಗಳ ಸಂತತಿ ವಿನಾಶದ ಹಾದಿ ತಲುಪಿತು. ಕೊನೆಯ ಬಾರಿ ಈ ಪ್ರಾಣಿ 1950 ರಲ್ಲಿ ಕಾಣಿಸಿಕೊಂಡಿತ್ತು. ಅದಾದ ನಂತರ ಇವುಗಳ ಸುಳಿವು ಎಲ್ಲಿಯೂ ಕಂಡಿಲ್ಲ.
6) ಟಕೋಪ ಪಪ್ ಮೀನು – Tecopa pupfish
ನಾರ್ತ್ ಅಮೇರಿಕ ಭಾಗದಲ್ಲಿ ಕಾಣಸಿಗುತ್ತಿದ್ದ ಈ ಮೀನು ಹೆಚ್ಚು ಉಷ್ಣಾಂಶ ಇದ್ದರೂ ಬದುಕುವ ಸಾಮರ್ಥ್ಯ ಹೊಂದಿತ್ತು. ಕೇವಲ 2.5 ರಿಂದ 4 ಸೆಂಟಿಮೀಟರ್ ಉದ್ದವಿದ್ದ ಈ ಮೀನು ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಇದ್ದರೂ ಬದುಕಿ ಉಳಿಯುತ್ತಿತ್ತು. ಆದರೆ 1950 ಮತ್ತು 1960 ರ ಮಧ್ಯೆ ಆದ ಹವಾಮಾನ ಬದಲಾವಣೆಯಿಂದ ಉಷ್ಣಾಂಶ ಹೆಚ್ಚಾಗಿ ಈ ಮೀನುಗಳ ಸಂತತಿ ವಿನಾಶದ ಹಂತ ತಲುಪಿತು. ಕೇವಲ 10 ವರ್ಷಗಳಲ್ಲಿ ಎಲ್ಲಾ ಮೀನುಗಳು ಸತ್ತು ಹೋಗಲು ಶುರು ಮಾಡಿದವು.
7) ಕ್ವಾಗ – Quagga
257 ಸೆಂಟಿಮೀಟರ್ ಉದ್ದ ಹಾಗು 135 ಸೆಂಟಿಮೀಟರ್ ಎತ್ತರವಿದ್ದ ಈ ಪ್ರಾಣಿಯು ಜೇಬ್ರಾ ತರಹ ಇತ್ತು. ದಕ್ಷಿಣ ಆಫ್ರಿಕ ಭಾಗದಲ್ಲಿ ಕಾಣಸಿಗುತ್ತಿದ್ದ ಈ ಪ್ರಾಣಿಯ ಮೈ ಮೇಲೆ ಜೇಬ್ರಾ ತರಹ ಪಟ್ಟಿಗಳಿದ್ದವು. ಡಚ್ಚರು ಆಫ್ರಿಕಾದ ಮೇಲೆ ದಾಳಿ ಮಾಡಿ ಆಕ್ರಮಣ ಮಾಡಿಕೊಂಡಿದ್ದಾಗ ಇವುಗಳ ಬೇಟೆ ಆಡತೊಡಗಿದ್ದರು. ಕೆಲವು ಪ್ರಾಣಿಗಳನ್ನು ಯುರೋಪ್ ದೇಶದ zoo ಗಳಿಗೆ ಸಾಗಿಸಲಾಯಿತು. ಆದರೆ ಅಲ್ಲಿಯ ವಾತಾವರಣಕ್ಕೆ ಹೆಚ್ಚು ದಿನ ಬದುಕದೆ ಸತ್ತು ಹೋದವು. ಇದರಿಂದ ಕಾಲ ಕಳೆದಂತೆ ಇವುಗಳ ಸಂತತಿಯನ್ನು ಕೂಡ ಮನುಷ್ಯನು ನಾಶ ಮಾಡಿದ.
8) ಪ್ಯಾಸೆನ್ಜರ್ ಪಾರಿವಾಳ – passenger pigeon
ಈ ಸುಂದರವಾದ ಪಾರಿವಾಳಗಳನ್ನು ಮೊದಲ ಹಾಗು ಎರಡನೆಯ ಪ್ರಪಂಚ ಯುದ್ದದ ವೇಳೆಯಲ್ಲಿ ಮಾರಣಹೋಮ ಮಾಡಿ ಸಾಯಿಸಲಾಯಿತು. ಇದಕ್ಕೆ ಕಾರಣ ಪಾರಿವಾಳಗಳ ಮೂಲಕ ಶತ್ರುಗಳು ಸಂದೇಶ ರವಾನೆ ಮಾಡುತ್ತಾರೆ ಎಂದು ತಿಳಿದು ಯುದ್ದದಲ್ಲಿ ಪಾಲ್ಗೊಂಡಿದ್ದ ಅನೇಕ ದೇಶಗಳು ಅವುಗಳನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಶುರು ಮಾಡಿದ್ದರು. ಇದರಿಂದ ಬಿಲಿಯನ್ ಗಟ್ಟಲೆ ಇದ್ದ ಈ ಪಾರಿವಾಳಗಳು ನೋಡ ನೋಡುತ್ತಿದ್ದಂತೆ ನೂರಕ್ಕೆ ಇಳಿದು ಕೊನೆಗೆ ಸಂಪೂರ್ಣ ವಿನಾಶವಾದವು.
9) ನಾರ್ತರ್ನ್ ಬಿಳಿ ಖಡ್ಗಮೃಗ – northern white rhino
ಸಾವಿರಾರು ವರ್ಷಗಳಿಂದ ಉಗಾಂಡ, ಸುಡಾನ್ ದೇಶಗಳಲ್ಲಿ ಕಾಣಸಿಗುತ್ತಿದ್ದ ಈ ಸುಂದರ ಪ್ರಾಣಿಯು ಬೇಟೆಗಾರರ ಕೈಗೆ ಸಿಕ್ಕು ಅವನತಿಗೊಂಡವು. ಇವುಗಳ ಕೊಂಬಿನ ಆಸೆಗಾಗಿ ಬೇಟೆ ಆಡುತ್ತಿದ್ದ ಬೇಟೆಗಾರರು 500 ಸಂಖ್ಯೆಯಿಂದ 15 ಕ್ಕೆ ತಂದಿಟ್ಟಿದ್ದರು. ಕೊನೆಗೆ ಇವುಗಳನ್ನು ರಕ್ಷಿಸಬೇಕೆಂದು ಜೆಕ್ ಗಣರಾಜ್ಯದ zoo ನಲ್ಲಿ ಎರಡು ಹೆಣ್ಣು ನಾರ್ತರ್ನ್ ಬಿಳಿ ಖಡ್ಗಮೃಗವನ್ನು ಸಾಕಿದ್ದರು. ಆದರೆ ಉಸಿರಾಟದ ತೊಂದರೆಯಿಂದ ಅವುಗಳು ಕೂಡ ಮಾರ್ಚ್ 19, 2018 ರಂದು ಸತ್ತು ಹೋದವು.
ಇದೇ ತರಹ ಇನ್ನು ಅನೇಕ ಪ್ರಾಣಿ ಹಾಗು ಪಕ್ಷಿಗಳ ಸಂತತಿಯು ಮನುಷ್ಯನ ಕೈಗೆ ಸಿಕ್ಕು ಹಾಗು ಹವಾಮಾನದ ವೈಪರಿತ್ಯದಿಂದಾಗಿ ಸತ್ತು ಹೋಗಿವೆ. ಮಾತು ಬರದ ಈ ಪ್ರಾಣಿಗಳ ಮೇಲೆ ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ಆಗುತ್ತಲೇ ಇದೆ. ಹೇಗೆ ಈ ಪ್ರಾಣಿಗಳನ್ನು ಫೋಟೋಗಳಲ್ಲಿ ನೋಡುತ್ತಿದ್ದೇವೆ ಹಾಗೆಯೇ ಇನ್ನು ಅನೇಕ ಪ್ರಾಣಿಗಳನ್ನು ನಮ್ಮ ಮುಂದಿನ ಪೀಳಿಗೆಯ ಜನರು ಕೇವಲ ಫೋಟೋ ಹಾಗು ವಿಡಿಯೋಗಳಲ್ಲಿ ನೋಡುತ್ತಾರೆ. ಎಲ್ಲಿಯವರೆಗೂ ಈ ಮನುಷ್ಯ ಎನ್ನುವ ಕ್ರೂರ ಪ್ರಾಣಿ ಈ ಭೂಮಿಯ ಮೇಲೆ ಇರುತ್ತಾನೆ ಅಲ್ಲಿಯವರೆಗೂ ಬೇರೆ ಮುಗ್ದ ಪ್ರಾಣಿಗಳಿಗೆ ಉಳಿಗಾಲವಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
Follow Karunadu Today for more Interesting Facts & Stories.
Click here to Join Our Whatsapp Group