ಭಾರತವು ಸಂಸ್ಕೃತಿ ಸಂಪ್ರದಾಯಕ್ಕೆ ಹೇಗೆ ಹೆಸರುವಾಸಿಯು ಅದೇ ರೀತಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇಡೀ ಪ್ರಪಂಚಕ್ಕೆ ಸ್ಪೂರ್ತಿದಾಯಕವಾಗಿದೆ. ಅಪಾರವಾದ ಭಗವಂತನ ಮೇಲೆ ಭಕ್ತಿ ಇಟ್ಟಿರುವ ಪುಣ್ಯಭೂಮಿಯಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಅಚ್ಚರಿ ಉಂಟುಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ. ಅದು ಪ್ರಭು ಶ್ರೀರಾಮಚಂದ್ರನ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಹಿಂದೂ ದೇವರುಗಳಲ್ಲಿ ಹಿಂದುತ್ವದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಕಾಣಿಸುತ್ತಿದೆ. 2010ರ ಬಳಿಕ ಹಲವಾರು ರೀತಿಯ ವಿಸ್ಮಯಗಳು ಕಂಡುಬರುತ್ತವೆ ಹೊಸ ಹೊಸ ಜಾಗಗಳಲ್ಲಿ ಪುರಾತನ ದೇವಸ್ಥಾನಗಳು ಮಂಟಪಗಳು ದೇವರ ವಿಗ್ರಹಗಳು ಹಾಗೂ ಶಾಸನಗಳು, ಮತ್ತು ಅಪಾರವಾದ ಸಂಪತ್ತು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಅಚ್ಚರಿ ಪಡುವಂತಹ ಘಟನೆಗಳಲ್ಲಿ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಕಾಣಿಸಿಕೊಂಡಿರುವ ಚಿನ್ನದ ವಿಷ್ಣುವಿನ ವಿಗ್ರಹ. ಈ ಚಿನ್ನದ ರೂಪದಲ್ಲಿರುವಂತಹ ವಿಷ್ಣುವಿನ ವಿಗ್ರಹ ಹೇಗೆ ಪತ್ತೆಯಾಯಿತು ಅನ್ನೋದನ್ನ ಈ ಅಚ್ಚರಿಯ ಕಥೆಯ ಮುಖಾಂತರ ತಿಳಿದುಕೊಂಡು ಬರೋಣ ಬನ್ನಿ.

ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಎಂಬ ಊರಿನಲ್ಲಿ ನೀರಿನ ಟ್ಯಾಂಕ್ ಅನ್ನು ಕಟ್ಟಿಸಲೆಂದು ಭೂಮಿಯನ್ನ ಆಗಿಯುತ್ತಿರುವಾಗ ಪ್ರಕಾಶಮಾನವಾಗಿ ಹೊಳೆಯುತ್ತಿರುವ ವಿಷ್ಣುವಿನ ವಿಗ್ರಹವು ಗೋಚರಿಸಿದೆ. ಈ ಸುದ್ದಿಯನ್ನು ಕೇಳಿದ ಊರಿನ ಜನರು ಅಚ್ಚರಿಪಟ್ಟಿದ್ದಾರೆ. ಇನ್ನು ಚಿನ್ನದ ವಿಷ್ಣುವಿನ ವಿಗ್ರಹವನ್ನು ಕಂಡು ದಿಗ್ಭ್ರಮೆ ಆದ ಜನರು ತಕ್ಷಣ ವಿಗ್ರಹ ಇರುವ ಜಾಗಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ಈಗ ಜಾಗದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬೇರೆ ಜಾಗದಲ್ಲಿ ನೀರಿನ ಟ್ಯಾಂಕನ್ನ ಕಟ್ಟಿಸಲು ಅನುಮತಿ ನೀಡಿದ್ದಾರೆ. ಇನ್ನು ಈ ವಿಷ್ಣುವಿನ ವಿಗ್ರಹವು ಯಾವ ಕಾಲದ್ದು ಎನ್ನುವುದು ತಿಳಿದುಬಂದಿಲ್ಲ, ಇದನ್ನು ಯಾವ ರಾಜರ ಕಾಲದಲ್ಲಿ ಪೂಜಿಸುತ್ತಿದ್ದರು? ಅಥವಾ ಇಲ್ಲಿ ಯಾವುದಾದರೂ ದೇಗುಲವಿತ್ತ? ಅಥವಾ ಯಾರಾದರೂ ಈ ವಿಗ್ರಹವನ್ನು ತೆಗೆದುಕೊಂಡು ಬಂದು ಇಲ್ಲಿ ಇಟ್ಟಿರಬಹುದು ಅನುವುದು ಇನ್ನಷ್ಟೇ ತಿಳಿಯಬೇಕಾಗಿದೆ. ಈ ವಿಷಯದ ಕುರಿತು ಪುರಾತತ್ವ ಇಲಾಖೆ ಕೂಡ ಸಂಶೋಧನೆಯನ್ನ ಮಾಡುತ್ತಿದೆ.

Follow Karunadu Today for more Spiritual Informations

Click here to Join Our Whatsapp Group