2013ರ ಅಕ್ಟೋಬರ್ 11 ರಂದು ಬಿಡುಗಡೆಯಾದ “GRAVITY” ಸಿನಿಮಾವು ಪ್ರಪಂಚ ಕಂಡ ಅತ್ಯದ್ಬುತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು “AlfansoCuaron” ನಿರ್ದೇಶಿಸಿದ್ದು ಬರೋಬ್ಬರಿ 7 ಆಸ್ಕರ್ ಪ್ರಶಸ್ತಿಯನ್ನು ಇದು ಪಡೆದುಕೊಂಡಿದೆ. ಮುಂಬರುವ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಎದುರಿಸಬಹುದಾದಂತಹ ತೊಂದರೆಯ ಕುರಿತು ತೆಗೆದಿರುವ ಈ ಸಿನಿಮಾವನ್ನು ಎಷ್ಟು ಬಾರಿ ನೋಡಿದರು ಕೂಡ ಮತ್ತೆ ಮತ್ತೆ ನೋಡಬೇಕು ಎಂದೆನಿಸುತ್ತದೆ.

ಭೂಮಿಯಿಂದ 600 ಕಿಲೋಮೀಟರ್ ಮೇಲೆ ಇರುವ “ಹಬಲ್ ಟೆಲಿಸ್ಕೋಪ್” ಅನ್ನು “Ryan stone”, “Matt Kowalski” ಮತ್ತು “shariff dasari” ಎನ್ನುವ ನಾಸಾದ ಮೂವರು ಗಗನಯಾತ್ರಿಗಳು ಸರ್ವಿಸ್ ಮಾಡಲು ತೆರೆಳಿರುತ್ತಾರೆ. ಅಲ್ಲಿ ಉಷ್ಣಾಂಶವು ಕೆಲವೊಮ್ಮೆ 258 ಡಿಗ್ರೀ ಸೆಲ್ಸಿಯಸ್ ಇದ್ದರೆ ಒಮ್ಮೆಲೆ -148 ಡಿಗ್ರೀ ಸೆಲ್ಸಿಯಸ್ ಆಗುತ್ತಿರುತ್ತದೆ. “ಹಬಲ್ ಟೆಲಿಸ್ಕೋಪ್” ಅನ್ನು ಸರ್ವಿಸ್ ಮಾಡುವ ವೇಳೆ ಈ ಮೂವರಲ್ಲಿ ಕಮ್ಯಾಂಡರ್ ಆಗಿರುವ “Matt Kowalski” ಸ್ಪೇಸ್ ವಾಲ್ಕ್ ಮಾಡುತ್ತಿರುತ್ತಾರೆ. ಸ್ಪೇಸ್ ವಾಲ್ಕ್ ಅಂದರೆ ಅಂತರಿಕ್ಷದಲ್ಲಿ ನಡೆದಾಡುವುದು. ಈ ರೀತಿ ನಡೆದಾಡಲು “Space tethers” ಗಳ ಸಹಾಯ ತುಂಬಾ ಅವಶ್ಯಕವಾಗಿರುತ್ತದೆ. ಈ ರೀತಿ ಸ್ಪೇಸ್ ವಾಲ್ಕ್ ಮಾಡುತ್ತ ಟೆಲಿಸ್ಕೋಪ್ ಅನ್ನು ಸರ್ವಿಸ್ ಮಾಡುತ್ತಿರುವ ವೇಳೆಯಲ್ಲಿ ಭೂಮಿಯ ಮೇಲೆ ಇರುವ ನಾಸಾದ HOUSTON Mission Control Room ನಿಂದ ಒಂದು ಎಚ್ಚರಿಕೆಯ ಸಂದೇಶ ಬರುತ್ತದೆ. ಅದೇನೆಂದರೆ ರಷ್ಯಾದ ಒಂದು ಮಿಸೈಲ್ ಬಾಹ್ಯಾಕಾಶದಲ್ಲಿ ಇರುವ ಉಪಗ್ರಹದ ಜೊತೆಗೆ ಡಿಕ್ಕಿ ಹೊಡೆದಿದ್ದು ಆ ಉಪಗ್ರಹವು ತುಂಡು ತುಂಡಾಗಿ debris ಗಳಾಗಿ ಮಾರ್ಪಟ್ಟಿದ್ದು ಆ ಉಪಗ್ರಹಗಳ ತುಂಡುಗಳು ನಿಮ್ಮ ಕಡೆಗೆ ವೇಗವಾಗಿ ಬರುತ್ತಿದೆ ಅವುಗಳಿಂದ ನಿಮಗೆ ತೊಂದರೆ ಇದೆ ಆದ್ದರಿಂದ ಬೇಗನೆ ಮರಳಿ ಭೂಮಿಗೆ ಬನ್ನಿ ಎಂದು.

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group