
"Govt jobs"
ಐಟಿಐ ಬಿಟೆಕ್ ಮತ್ತು ಬಿಇ ಪದವಿಯನ್ನು ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ ಹಾಗಾದರೆ ಇಲ್ಲಿದೆ ನಿಮಗೆ ಒಂದು ಗೋಲ್ಡನ್ ಅಪರ್ಚುನಿಟಿ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ಹುದ್ದೆಗಳ ವಿವರ:
- ಒಟ್ಟು ಹುದ್ದೆಗಳು 115
- ಅದರಲ್ಲಿ ಪ್ರಾಜೆಕ್ಟ್ ಇಂಜಿನಿಯರ್ 20 ಹುದ್ದೆಗಳು
- ಟೆಕ್ನಿಕಲ್ ಆಫೀಸರ್ 53 ಹುದ್ದೆಗಳು
- ಜೂನಿಯರ್ ಟೆಕ್ನಿಷಿಯನ್ 42 ಹುದ್ದೆಗಳು ಖಾಲಿ ಇವೆ
ವಯೋಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು ಹುದ್ದೆಗೆಅನುಗುಣವಾಗಿ ಇರಲಿದೆ:
- ಪ್ರಾಜೆಕ್ಟ್ ಇಂಜಿನಿಯರ್ ಗರಿಷ್ಠ 33 ವರ್ಷ
- ಟೆಕ್ನಿಕಲ್ ಆಫೀಸರ್ ಗರಿಷ್ಠ 33 ವರ್ಷ
- ಜೂನಿಯರ್ ಟೆಕ್ನಿಷಿಯನ್ ಗರಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಕಡ್ಡಾಯವಾಗಿ ಉದ್ಯೋಗದ ಅನುಭವ ಮತ್ತು ಸಂದರ್ಶನ ಮೂಲಕ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಈ ಹುದ್ದೆಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ:
ಪ್ರಾಜೆಕ್ಟ್ ಇಂಜಿನಿಯರ್ (ರೂ. 40,000 – 55,000), ತಾಂತ್ರಿಕ ಅಧಿಕಾರಿ (ರೂ. 25,000 – 31,000), ಮತ್ತು ಜೂನಿಯರ್ ತಂತ್ರಜ್ಞ (ರೂ. 22,412 – 27,258) ಸೇರಿದಂತೆ ವಿವಿಧ ಹುದ್ದೆಗಳಿಗೆ ಸಂಸ್ಥೆಯು ಸ್ಪರ್ಧಾತ್ಮಕ ಮಾಸಿಕ ವೇತನ ಶ್ರೇಣಿಯನ್ನು ನೀಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಪರಮಾಣು ವಿದ್ಯುತ್ ಸ್ಥಾವರಗಳಾದ ಜಾಮ್‌ನಗರ, ಕೈಗಾ ಮತ್ತು ಕೂಡಂಕುಳಂ, ಮುಂಬೈ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಸಂಶೋಧನಾ ಕೇಂದ್ರಗಳು ಮತ್ತು ಬ್ಯಾರಕ್‌ಪೋರ್, ಗೌರಿಬಿದನೂರು, ಮಂಗಳೂರು, ನವದೆಹಲಿ ಮತ್ತು ಇತರ ಸ್ಥಳಗಳು ಸೇರಿದಂತೆ ಭಾರತದಾದ್ಯಂತ ವಿವಿಧ ಸ್ಥಳಗಳಿಗೆ ಮುಂಗಡ ಪೋಸ್ಟಿಂಗ್ ಪಡೆಯುತ್ತಾರೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಕೆಳೆಗೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ….
Follow Karunadu Today for more Job updates like this
Click here to Join Our Whatsapp Group