
ನಮಗೆಲ್ಲ ತಿಳಿದ ಹಾಗೆ ನಮ್ಮ ಈ ಭೂಮಿಯ ಮೇಲೆ ಅನೇಕ ಕಟ್ಟಡ ಮತ್ತು ಪ್ರತಿಮೆಗಳಿವೆ. ಅದರಲ್ಲಿ ಕೆಲವುಗಳನ್ನು ನೋಡುತ್ತಿದ್ದರೆ ಅದನ್ನು ನಿಜವಾಗಿಯೂ ಮನುಷ್ಯನು ನಿರ್ಮಿಸಿದ್ದಾನೆಯೇ ಅಥವ ಬೇರೆ ಗ್ರಹದ ಜೀವಿಗಳು ನಿರ್ಮಿಸುವರೆ ಎನ್ನುವ ಸಂಶಯ ಬರುತ್ತದೆ ಅಷ್ಟೊಂದು ಬೃಹತ್ ಆಕಾರದಲ್ಲಿ ಅವುಗಳಿವೆ. ಇದಕ್ಕೆ ಉತ್ತಮ ಉದಾಹರಣೆ ಈಜಿಪ್ಟ್ ದೇಶದಲ್ಲಿರುವ “ಪಿರಾಮಿಡ್ಸ್” ಗಳು. 147 ಮೀಟರ್ ಎತ್ತರವಿರುವ ಈ ಪಿರಾಮಿಡ್ಸ್ ಗಳು ಮನುಷ್ಯನು ನಿರ್ಮಾಣ ಮಾಡಿರುವ ಅತ್ಯಂತ ಎತ್ತರದ ಕಟ್ಟಡ ಎನ್ನುವ ಹೆಗ್ಗಳಿಕೆಗೆ 4000 ವರ್ಷಗಳ ಕಾಲ ಪಾತ್ರವಾಗಿತ್ತು. ಆದರೆ ಕೊನೆಗೆ ಇದರ ದಾಖಲೆಯನ್ನು ಮುರಿಯುವ ಸಲುವಾಗಿಯೇ 1311 ರಲ್ಲಿ 159.7 ಮೀಟರ್ ಎತ್ತರದ “ಲಿಂಕನ್ ಕ್ಯಾತೆಡ್ರಲ್” ಚರ್ಚ್ ಅನ್ನು ಇಂಗ್ಲೆಂಡಿನಲ್ಲಿ ನಿರ್ಮಿಸಲಾಯಿತು.

ಹೀಗೆ ಒಬ್ಬರಿಗಿಂತ ಒಬ್ಬರು ಎತ್ತರದ ಕಟ್ಟಡ ಅಥವ ಪ್ರತಿಮೆಗಳನ್ನು ನಿರ್ಮಿಸಿ ವಿಶ್ವಧಾಖಲೆ ಮಾಡಬೇಕು ಎನ್ನುವ ಆಸೆಯಿಂದ ಆರಂಭವಾದ ಸ್ಪರ್ಧೆ ಈಗಲೂ ಕೂಡ ನಿಂತಿಲ್ಲ. ಅವರಿಗಿಂತ ನಾನೇನು ಕಮ್ಮಿ ಎಂದು ತೋರಿಸಿಕೊಳ್ಳುವ ಸಲುವಾಗಿ ಸಾಕಷ್ಟು ಹಣ ಖರ್ಚು ಮಾಡಿ ಪ್ರಪಂಚದಲ್ಲಿರುವ ಅನೇಕ ಇಂಜೀನೀಯರ್ಸ್ ಗಳನ್ನು ಕರೆತಂದು ಅತ್ಯಂತ ಎತ್ತರದ ಕಟ್ಟಡ ಅಥವ ಪ್ರತಿಮೆಯನ್ನು ಅನೇಕ ದೇಶಗಳು ನಿರ್ಮಾಣ ಮಾಡುತ್ತಿವೆ. ಆದರೆ ಪ್ರತಿ ಬಾರಿ ಈ ಎತ್ತರದ ಕಟ್ಟಡ ಅಥವ ಪ್ರತಿಮೆಗಳನ್ನು ನೋಡಿದಾಗ ನಾಮಗೊಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದೇನೆಂದರೆ ಹೀಗೆ ಒಬ್ಬರಿಗಿಂತ ಒಬ್ಬರು ಅತ್ಯಂತ ಎತ್ತರದ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರಲ್ಲ ಹೀಗೆ ನಿರ್ಮಾಣ ಮಾಡುತ್ತ ಹೋದರೆ ಭೂಮಿಯಿಂದ ಗರಿಷ್ಠ ಅದೆಷ್ಟು ಎತ್ತರದವರೆಗು ಮನುಷ್ಯನು ಕಟ್ಟಡವನ್ನು ನಿರ್ಮಾಣ ಮಾಡಬಲ್ಲ? ಬನ್ನಿ ಪ್ರಪಂಚದಲ್ಲಿರುವ ಅತ್ಯಂತ ಎತ್ತರದ ಕಟ್ಟಡ ಅಥವ ಪ್ರತಿಮೆಗಳ ಕುರಿತು ನಿಮಗೆ ತಿಳಿಸಿಕೊಡುತ್ತ ಅದೆಷ್ಟು ಗರಿಷ್ಟಮಟ್ಟದವರೆಗು ಮನುಷ್ಯನು ಇವುಗಳನ್ನು ನಿರ್ಮಿಸಬಲ್ಲ ಶಕ್ತಿಯನ್ನು ಹೊಂದಿದ್ದಾನೆ ಎಂದು ವಿವರಿಸುತ್ತೇವೆ.

ನಿಮಗೆ ಮೊದಲೇ ಹೇಳಿದ ಹಾಗೆ 4000 ವರ್ಷಗಳ ಕಾಲ ಭೂಮಿಯ ಮೇಲೆ ಅತ್ಯಂತ ಎತ್ತರದ ಮಾನವ ನಿರ್ಮಿತ ಕಟ್ಟಡವೆಂದು ಹೆಸರುವಾಸಿಯಾಗಿದ್ದು ಈಜಿಪ್ಟಿನ “ಪಿರಾಮಿಡ್” ಗಳು. ಇದರ ದಾಖಲೆಯನ್ನು ಮುರಿಯಲೆಂದು ಭೂಮಿಯ ಬೇರೆ ಬೇರೆ ಸ್ಥಳಗಳಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸುತ್ತ ಹೋಗಲಾಯಿತು. ಅವುಗಳಲ್ಲಿ “ವಾಷಿಂಗ್ಟನ್ ಮಾನುಮೆಂಟ್” ಕೂಡ ಒಂದು, ಇದು 169 ಮೀಟರ್ ಎತ್ತರವಿದೆ. ಇದನ್ನು 1884 ರಲ್ಲಿ ಅಮೇರಿಕದ ರಾಜಧಾನಿಯಾಗಿರುವ ವಾಷಿಂಗ್ಟನ್ ನಗರದಲ್ಲಿ ಅಮೇರಿಕದ ಮೊಟ್ಟ ಮೊದಲ ಅಧ್ಯಕ್ಷ್ಯರಾದ ಜಾರ್ಜ್ ವಾಷಿಂಗ್ಟನ್ ಅವರ ನೆನಪಿಗಾಗಿ ನಿರ್ಮಿಸಲಾಯಿತು.
ಇದರ ನಂತರ 1889 ರಲ್ಲಿ 324 ಮೀಟರ್ ಎತ್ತರವಿರುವ “ಐಫಲ್ ಟವರ್” ಅನ್ನು ಪ್ಯಾರಿಸ್ ನಲ್ಲಿ ನಿರ್ಮಿಸಲಾಯಿತು. ಇದು ಫ್ರಾನ್ಸ್ ದೇಶದ ಸಂಕೇತವಾಗಿ ವಿಶ್ವವಿಖ್ಯಾತವಾಗಿದ್ದು ಪ್ರಪಂಚದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ.
ಇನ್ನು ದುಬೈ ನಲ್ಲಿ ಇರುವ 830 ಮೀಟರ್ ಎತ್ತರದ “ಬುರ್ಜ್ ಕಲೀಫ” ಕಟ್ಟಡವು ಸದ್ಯಕ್ಕೆ ಭೂಮಿಯ ಮೇಲೆ ಮನುಷ್ಯನು ನಿರ್ಮಿಸಲಾಗಿರುವ ಅತ್ಯಂತ ಎತ್ತರದ ಕಟ್ಟಡವಾಗಿದೆ.ಈ ಕಟ್ಟಡ ಅದೆಷ್ಟು ಎತ್ತರವಿದೆಯೆಂದರೆ ಅಕಸ್ಮಾತ್ ಈ ಕಟ್ಟಡದ ಮೆಲಿಂಡ ನೀವು ಜಿಗಿದರೆ ಭೂಮಿಯನ್ನು ತಲುಪಲು 20 ಸೆಕೆಂಡ್ ಗಳು ಬೇಕಾಗುತ್ತವೆ.
ಇನ್ನು ನಮ್ಮ ದೇಶವು ಕೂಡ ಅತ್ಯಂತ ಎತ್ತರದ ಸ್ಮಾರಕವಾದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 182 ಮೀಟರ್ ಎತ್ತರವಿರುವ ಏಕತಾ ಪ್ರತಿಮೆಯನ್ನು ನಿರ್ಮಿಸುವ ಮೂಲಕ ತಾವು ಕೂಡ ಪ್ರಪಂಚದಲ್ಲಿ ಇರುವ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದನ್ನು ಹೊಂದಿದ್ದೇವೆ ಎಂದು ಜಗತ್ತಿಗೆ ತೋರಿಸಿಕೊಟ್ಟರು.
ಹೀಗೆ ಪಟ್ಟಿ ಮಾಡುತ್ತಾ ಹೋದಂತೆಲ್ಲ ಜಗತ್ತಿನೆಲ್ಲೆಡೆ ಅತ್ಯಂತ ಎತ್ತರದ ಕಟ್ಟಡ ಅಥವ ಪ್ರತಿಮೆಗಳು ಸಿಗುತ್ತವೆ.ಈಗ ನಿಮಗೆ ಹಾಗಾದರೆ ಮನುಷ್ಯನು ತನ್ನ ಬುದ್ದಿಶಕ್ತಿ ಬಳಸಿಕೊಂಡು ಭೂಮಿಯಿಂದ ಅದೆಷ್ಟು ಎತ್ತರದವರೆಗು ಕಟ್ಟಡ ಪ್ರತಿಮೆ ಅಥವ ಮತ್ತಿನ್ನೇನೋ ಒಂದನ್ನು ನಿರ್ಮಿಸಬಹುದು ಎನ್ನುವ ವಿಚಾರವನ್ನು ತಿಳಿಸಿಕೊಡುತ್ತೇವೆ.

ನೀವು ಜಪಾನ್ ರಾಜಧಾನಿ ಟೋಕಿಯೊ ಹೆಸರು ಕೇಳಿದ್ದೀರಿ, ಈ ನಗರದಲ್ಲಿ ಒಂದು ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆಯಿದ್ದು ಆ ಕಟ್ಟಡದ ಎತ್ತರವು ಈಗಿರುವ ಪ್ರಪಂಚದ ಎತ್ತರದ ಕಟ್ಟಡವಾದ ಬುರ್ಜ್ ಕಲೀಫಾಗಿಂತ ನೂರಾರು ಪಟ್ಟು ಹೆಚ್ಚಿರಲಿದೆ. ಹೌದು, ಆ ಕಟ್ಟಡವು ಬರೋಬ್ಬರಿ 4 ಕಿಲೋಮೀಟರ್ ಎತ್ತರವಿರುತ್ತದೆ. ಆ ಕಟ್ಟಡದ ಹೆಸರು “ಎಕ್ಸ್-ಸೀಡ್ 4000”. ಇನ್ನು ಈ ಕಟ್ಟಡದ ಬುನಾದಿಯೇ ಬರೋಬ್ಬರಿ 6 ಕಿಲೋಮೀಟರ್ ಇರಲಿದ್ದು ಈ ಸಂಪೂರ್ಣ ಕಟ್ಟಡದಲ್ಲಿ 1 ಲಕ್ಷ ಜನರು ವಾಸಿಸಬಹುದಾಗಿದೆ.

ಇನ್ನು ನಮಗೆಲ್ಲ ತಿಳಿದ ಹಾಗೆ ಮನುಷ್ಯನು ಸಾಕಷ್ಟು ಹಣವನ್ನು ಖರ್ಚು ಮಾಡಿ ರಾಕೆಟ್ ಗಳನ್ನು ಸಿದ್ದಗೊಳಿಸಿ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳಿಸುತ್ತಾನೆ. ಆದರೆ ಪ್ರತಿ ಬಾರಿ ಹೀಗೆ ರಾಕೆಟ್ ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು “ಸ್ಪೇಸ್ ಎಲಿವೇಟರ್” ಅನ್ನು ನಿರ್ಮಿಸುವ ಯೋಜನೆಯನ್ನು ಜಗತ್ತಿನಲ್ಲಿರುವ ಅನೇಕ ವಿಜ್ಞಾನಿಗಳು ಈಗಾಗಲೇ ಹೊಂದಿದ್ದಾರೆ. ಇದನ್ನು ನಿರ್ಮಿಸಲೆಂದೆ ವಿಶೇಷವಾದ “ಕಾರ್ಬನ್ ನ್ಯಾನೋ ಟೂಬ್” ಪೈಪ್, “ಬೋರಾನ್ ನೈಟ್ರೈಡ್ ನ್ಯಾನೋಟೂಬ್” ಮತ್ತು ಡೈಮಂಡ್ ನ್ಯಾನೋತ್ರೆಡ್ಸ್ ಗಳನ್ನು ಸಿದ್ದಗೊಳಿಸಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವುಗಳು ಭೂಮಿಯಿಂದ ನೇರವಾಗಿ ಬಾಹ್ಯಾಕಾಶಕ್ಕೆ ಹೋಗುವಂತಹ ಎಲಿವೇಟರ್ ಗಳನ್ನು ನೋಡಬಹುದಾಗಿದೆ.
ಇದರಿಂದ ನಮಗೆ ತಿಳಿಯುವುದೇನೆಂದರೆ ಮನುಷ್ಯನು ಯಾವುದೇ ಮಿತಿ ಇಲ್ಲದೆ ಸಾಕಷ್ಟು ಎತ್ತರದವರೆಗು ಕಟ್ಟಡಗಳನ್ನು, ಪ್ರತಿಮೆಗಳನ್ನು ಅಥವ ತನ್ನ ಅವಶ್ಯಕತೆಗೆ ತಕ್ಕಂತೆ ಮತ್ತೊಂದನ್ನು ನಿರ್ಮಾಣ ಮಾಡುವಷ್ಟು ಶಕ್ತಿ ಹೊಂದಿದ್ದಾನೆ. ಈಗಿರುವ ಅತ್ಯಂತ ಎತ್ತರದ ಕಟ್ಟಡ ಅಥವ ಪ್ರತಿಮೆಗಳನ್ನು ನೋಡಿಯೇ ಆಶ್ಚರ್ಯ ಪಡುವ ನಾವುಗಳು ಇನ್ನು ಈ “ಎಕ್ಸ್-ಸೀಡ್ 4000 ಕಟ್ಟಡ ಮತ್ತು ಸ್ಪೇಸ್ ಎಲಿವೇಟರ್ ನಿರ್ಮಾಣವಾದ ಮೇಲೆ ಅದನ್ನು ನೋಡಿ ಇನ್ನೆಷ್ಟು ಅಚ್ಚರಿ ಪಡಬಹುದು ಎಂದು ಒಮ್ಮೆ ನೀವೇ ಯೋಚಿಸಿ.
Follow Karunadu Today for more Interesting Facts & Stories.
Click here to Join Our Whatsapp Group