
JULY 4th 2024 CURRENT AFFAIRS
1) ಉತ್ತರ ಪ್ರದೇಶದಲ್ಲಿ 116 ಮಂದಿ ಸಾವು
116 people died in Uttar Pradesh

ಅತ್ಯಂತ ದುಃಖದ ಸಂಗತಿ ಏನೆಂದರೆ ಜುಲೈ 2 ರಂದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರಾಯಿ ಗ್ರಾಮದಲ್ಲಿ ಆಯೋಜಿಸಲಾದ ಧಾರ್ಮಿಕ ಸತ್ಸಂಗದಲ್ಲಿ ಸಂಭವಿಸಿದ ಭೀಕರ ದಟ್ಟಣೆಯಲ್ಲಿ ಕನಿಷ್ಠ 116 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿನ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳು ಮತ್ತು ಹೊರನಾಡಿನ ರಾಜ್ಯಗಳಿಂದ ಸಹ ಭಕ್ತರು ಈ ಧಾರ್ಮಿಕ ಸತ್ಸಂಗಕ್ಕಾಗಿ ಆಗಮಿಸಿದ್ದರು.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.ಈ ಘಟನೆ ಜನಸಂದಣಿ ನಿಯಂತ್ರಣದ ಅಭಾವ ಮತ್ತು ಅಗತ್ಯ ಸಿದ್ಧತೆಗಳ ಕೊರತೆಯಿಂದ ಉಂಟಾದ ಬಿಕ್ಕಟ್ಟಿನ ಉಲ್ಲೇಖವಾಗಿದೆ. ಸರ್ಕಾರವು ಈ ರೀತಿಯ ದುರ್ಘಟನೆಗಳ ತಡೆಗಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚನೆಗಳು ಹಾಗೂ ಗಾಯಗೊಂಡವರಿಗೆ ಶೀಘ್ರ ಗುಣಮುಖರಾಗಲೆಂದು ಹಾರೈಸುವೆವು.
July 4th 2024 Current Affairs : The saddest thing is that at least 116 people died and many others were injured in a horrific stampede on July 2 during a religious satsang organized at Phulrai village in Uttar Pradesh’s Hatras district. Women and children are among the dead. Devotees from different districts of Uttar Pradesh and even foreign states had come for this religious satsang. The police have taken up the investigation of the case and registered an FIR against the organizers of the event. More than one lakh people participated in this event. The incident was caused by lack of crowd control and lack of necessary preparations. A reference to the crisis. The government needs to take more measures to prevent such mishaps. Condolences to the families of the deceased and a speedy recovery to the injured.
2)ಅಗ್ರಸ್ಥಾನಕ್ಕೆ ಹಾರಿದ ಹಾರ್ದಿಕ ಪಾಂಡ್ಯ T20 ರ್ಯಾಂಕಿಂಗ್ ಪ್ರಕಟ
Hardika Pandya jumped to the top T20 ranking announced

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಹೊಸ ಟಿ20 ಅಂತಾರಾಷ್ಟ್ರೀಯ ರ್ಯಾಂಕಿಂಗ್ಗಳನ್ನು (ICC T20I Rankings) ಪ್ರಕಟಿಸಿದೆ.ಟಿ20 ವಿಶ್ವಕಪ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚಿ ತಂಡವನ್ನು ಚಾಂಪಿಯನ್ ಆಗಲು ಮಹತ್ವದ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.ಈ ಬಾರಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಇಂಗ್ಲೆಂಡ್ನ ಅಡಿಲ್ ರಶೀದ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.ಹಾರ್ದಿಕ್, ಶ್ರೀಲಂಕಾ ಟಿ20 ನಾಯಕ ವನಿಂದು ಹಸರೆಂಗಾ ಅವರೊಂದಿಗೆ ನಂ.1 ಆಲ್ರೌಂಡರ್ ಸ್ಥಾನವನ್ನು ಹಂಚಿಕೊಂಡಿದ್ದಾರೆ.ಟಿ20 ವಿಶ್ವಕಪ್ ಫೈನಲ್ನಲ್ಲಿ 17ನೇ ಓವರ್ ಬೌಲಿಂಗ್ ಮಾಡಿದ್ದ ಹಾರ್ದಿಕ್, 27 ಬಾಲ್ಗಳಲ್ಲಿ 5 ಸಿಕ್ಸರ್ ಮತ್ತು 2 ಫೋರ್ ಸಹಾಯದಿಂದ 52 ರನ್ ಗಳಿಸಿದರು.ಫೈನಲ್ನ ನಿರ್ಣಾಯಕ ಹಂತದಲ್ಲಿ ದಕ್ಷಿಣ ಆಫ್ರಿಕಾದ ಹೈನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್ಗಳನ್ನು ತೆಗೆಯುವ ಮೂಲಕ ಹಾರ್ದಿಕ್ ಪಂದ್ಯ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.ಭಾರತದ ಎಡಗೈ ಆಲ್ರೌಂಡರ್ ಅಕ್ಸರ್ ಪಟೇಲ್ ಏಳು ಸ್ಥಾನಗಳ ಜಿಗಿತವನ್ನು ಕಂಡು 12ನೇ ಸ್ಥಾನಕ್ಕೆ ಬಂದಿದ್ದಾರೆ.ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 12ನೇ ಸ್ಥಾನಕ್ಕೇರಿದ್ದಾರೆ. ಇದು 2020 ನಂತರ ಅವರ ಅತ್ಯುತ್ತಮ ಸಾಧನೆ. ಅವರು ಟಿ20 ವಿಶ್ವಕಪ್ ಟೂರ್ನಮೆಂಟ್ನಲ್ಲಿ 15 ವಿಕೆಟ್ಗಳನ್ನು ಪಡೆದಿದ್ದರು.
July 4th 2024 Current Affairs : The International Cricket Council (ICC) has announced the new T20 International Rankings (ICC T20I Rankings).Hardik Pandya, who played an important role in batting and bowling in the T20 World Cup to win the Minchi team, has been ranked No.1 in the all-rounder ranking.This time Australia’s Travis Head tops the list of T20 batsmen, England’s Adil Rashid tops the list of bowlers.Hardik shares the No.1 all-rounder position with Sri Lankan T20 captain Wanindu Hasarenga.Hardik, who bowled the 17th over in the T20 World Cup final, scored 52 runs in 27 balls with the help of 5 sixes and 2 fours.Hardik was instrumental in winning the match as he took the wickets of South Africa’s Heinrich Klaasen and David Miller at the crucial stage of the final.India’s left-arm all-rounder Axar Patel has jumped seven places to the 12th position.Jasprit Bumrah is ranked 12th in the bowling category. This is his best performance since 2020. He took 15 wickets in the T20 World Cup tournament.
3) ವಿಶ್ವ ಸುಂದರಿ ಕಿರೀಟವನ್ನು ಮೂಡಿಗೆರೆಸಿಕೊಂಡಿರುವ ಕರ್ನಾಟಕ ಮೂಲದ ಶೃತಿ ಹೆಗಡೆ
Karnataka native Shruti Hegde crowned Miss World

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಮುಂಡಿಗೆಸರ ಸ್ಥಳೀಯರಾದ ಶೃತಿ ಹೆಗಡೆಯವರು ಅಮೆರಿಕದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಆಫ್ ಮತ್ತು ಮಿಸ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡಿರುವ ಶ್ರುತಿ ಹೆಗಡೆಯವರು. ಜೂನ್ 6ರಿಂದ 10ರ ವರೆಗೆ ಅಮೆರಿಕದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಶ್ರುತಿ ಹೆಗಡೆಯವರು 40 ದೇಶಗಳಿಂದ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಷ್ಟೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವಯಕ್ತಿಕ ಸಂದರ್ಶನ ಸೇರಿ ಹಲವು ಸುತ್ತುಗಳು ನಡೆದಿತ್ತು ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ ಗೆಲವು ಸಾಧಿಸಿದ್ದಾರೆ.ಹುಬ್ಬಳ್ಳಿಯಲ್ಲಿ ವೈದಕೀಯ ಪೂರೈಸಿರುವ ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಂ. ಡಿ ಅಧ್ಯಯನ ನಡೆಸುತ್ತಿದ್ದಾರೆ.
July 4th 2024 Current Affairs : Shruti Hegade, a native of Mundigesar, Shirasi Taluk, Uttara Kannada District, Karnataka, has emerged as the winner of the Miss World pageant held in America. Shruti Hegade, who won the title of Miss Karnataka runner-off and Miss South India in 2018. Shruti Hegde, who represented India in the Miss Universe pageant held in America from June 6 to 10, won the Miss Universe crown by defeating the contestants from 40 countries. There were many rounds including national dress, swimming dress, question and answer, and personal interview. M. in Tumkur with a desire to become a dermatologist. D is studying.
Follow Karunadu Today for more Daily Current Affairs.
Click here to Join Our Whatsapp Group