
JUNE 15th 2024 CURRENT AFFAIRS
1) ಜೂನ್ 15: ವಿಶ್ವ ಗಾಳಿ ದಿನ
June 15: World Wind Day

ಪ್ರತಿಯೊಬ್ಬರ ಬದುಕಿನಲ್ಲಿ ಗಾಳಿಯು ಮಹತ್ವದ ಪಾತ್ರ ವಹಿಸುತ್ತಿದೆ. ಗಾಳಿ, ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ಪ್ರಪಂಚದ ಪರಿಸರದ ಸಮತೋಲನವನ್ನು ನಿರ್ವಹಿಸಲು ಮುಖ್ಯವಾಗಿದೆ. ವಿಶ್ವ ಗಾಳಿಯ ದಿನವು ಪ್ರತಿವರ್ಷ ಜೂನ್ 15ರಂದು ಆಚರಿಸಲಾಗುತ್ತದೆ. ಈ ದಿನದ ಪ್ರಮುಖ ಉದ್ದೇಶವೇನೆಂದರೆ ಗಾಳಿಯ ಮಹತ್ವವನ್ನು ಅರಿತುಕೊಳ್ಳುವುದು ಮತ್ತು ಗಾಳಿಯ ಶಕ್ತಿಯನ್ನು ಪರಿಪೂರ್ಣವಾಗಿ ಬಳಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು. ಗಾಳಿಯ ಶಕ್ತಿಯು ನವೀನ ಉರ್ಜಾ ಮೂಲಗಳಲ್ಲಿ ಒಂದಾಗಿದೆ, ಇದು ಶುದ್ಧ ಮತ್ತು ಪರಿಸರ ಸ್ನೇಹಿಯಾಗಿದ್ದು, ನಿರಂತರವಾಗಿ ಲಭ್ಯವಿರುವ ಶಕ್ತಿಯಾಗಿಯೂ ಪರಿಗಣಿಸಬಹುದು. ವಾತಾವರಣದಲ್ಲಿ ಗಾಳಿಯ ಚಲನೆಗಳಿಂದ ಉತ್ಪತ್ತಿಯಾಗುವ ಶಕ್ತಿಯನ್ನು ನಾವು ಹಲವು ರೀತಿಗಳಲ್ಲಿ ಉಪಯೋಗಿಸಬಹುದು. ಈ ದಿನದ ಆಚರಣೆಯಲ್ಲಿ ಗಾಳಿಯ ಶಕ್ತಿಯ ಬಳಕೆ, ಅದರ ಪ್ರಯೋಜನಗಳು, ಮತ್ತು ಪರಿಸರದಲ್ಲಿ ಹಸಿರು ಶಕ್ತಿಯ ಮಹತ್ವವನ್ನು ಜನರಿಗೆ ತಿಳಿಸುವ ವಿವಿಧ ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು ನಡೆಸಲಾಗುತ್ತವೆ. ಈ ಹಬ್ಬದ ಮೂಲಕ, ಗಾಳಿಯ ಶಕ್ತಿಯ ಬಗ್ಗೆ ಅರಿವು ಮೂಡಿಸಿ, ಅದರ ಸದುಪಯೋಗವನ್ನು ಪರಿಗಣಿಸಿ, ನಾವೆಲ್ಲರೂ ಹಸಿರು ಪ್ರಪಂಚದ ಕಡೆ ಹೆಜ್ಜೆಯಿಡೋಣ.2024 ರ ಜಾಗತಿಕ ಪವನ (ಗಾಳಿ) ದಿನದ ಘೋಷವಾಕ್ಯ: ಈ ವರ್ಷ, ಜಾಗತಿಕ ಪವನ ದಿನವು ಗಾಳಿ ಶಕ್ತಿಯ ಮಹತ್ವವನ್ನು ವಿವರಿಸುತ್ತದೆ. ಇದು ಪರಿಸರ ಸ್ನೇಹಿ ಮತ್ತು ಪುನರ್ವಿನಿಯೋಗ ಶಕ್ತಿಯ ಮೂಲವಾಗಿದೆ. ಗಾಳಿ ಶಕ್ತಿಯು ಹಸಿರುಬವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಗಾಳಿಯ ಶಕ್ತಿ ಬಳಸುವುದರಿಂದ ಹಾನಿಕರ ಕಲ್ಲಿದ್ದಲು ಮತ್ತು ಇಂಧನದ ಬಳಕೆಯನ್ನು ಕಡಿಮೆ ಮಾಡಬಹುದು. ಗಾಳಿ ಶಕ್ತಿಯು ಸ್ವಚ್ಛ ಹಾಗೂ ನವೀನ ಶಕ್ತಿ ಬಳಕೆಗಾಗಿ ಪ್ರೇರಣೆಯಾಗುತ್ತದೆ. ಈ ದಿನದ ಆಚರಣೆಯು ಪವನ ಶಕ್ತಿಯ ಬಗ್ಗೆ ಜನರಿಗೆ ಅರಿವು ಮೂಡಿಸಿ, ಪರಿಸರದ ಸಂರಕ್ಷಣೆಯಲ್ಲಿ ನಾವು ಎಲ್ಲರೂ ಪಾತ್ರವಹಿಸೋಣ ಎಂಬ ಸಂದೇಶವನ್ನು ನೀಡುತ್ತದೆ.ಯುರೋಪಿಯನ್ ಎನರ್ಜಿ ಅಸೋಸಿಯೇಷನ್ (ಇಡಬ್ಲ್ಯುಇಎ) ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ (ಜಿಡಬ್ಲ್ಯೂಇಸಿ) ಈ ದಿನವನ್ನು ಆಯೋಜಿಸಿವೆ. ಜಾಗತಿಕ ಪವನ ದಿನವು ಗಾಳಿ ಶಕ್ತಿಯ ಪ್ರಾಮುಖ್ಯತೆಯನ್ನು ಹಿರಿಮಾಡಲು ಮತ್ತು ನವೀನ ಶಕ್ತಿಯ ಉಪಯೋಗವನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ. ಇಡಬ್ಲ್ಯುಇಎ ಮತ್ತು ಜಿಡಬ್ಲ್ಯೂಇಸಿ ಸಂಸ್ಥೆಗಳು ಗಾಳಿ ಶಕ್ತಿಯ ಬಗ್ಗೆ ಜಾಗೃತಿಯನ್ನು ಸೃಷ್ಟಿಸಲು, ಅದರ ಪ್ರಯೋಜನಗಳನ್ನು ವಿವರಿಸಲು ಮತ್ತು ಶುದ್ಧ, ನವೀನ ಶಕ್ತಿಯ ಮೂಲಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಮಾಹಿತಿ ಅಭಿಯಾನಗಳನ್ನು ಹಮ್ಮಿಕೊಂಡಿವೆ. ಈ ದಿನದ ಮೂಲಕ, ಗಾಳಿ ಶಕ್ತಿಯ ಮಹತ್ವ, ಅದರ ಪರಿಸರ ಸ್ನೇಹಿ ಗುಣಗಳು ಮತ್ತು ಜಾಗತಿಕ ಇಂಧನ ಬದಲಾವಣೆಯ ಅಗತ್ಯತೆಯನ್ನು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
June 15th 2024 Current Affairs : Air plays an important role in everyone’s life. Air is an integral part of our daily life and important for maintaining the world’s ecological balance. World Wind Day is celebrated on June 15 every year. The main objective of this day is to realize the importance of wind and create awareness among the people to make perfect use of wind energy. Wind energy is one of the innovative energy sources, which is clean and environmentally friendly and can also be considered as continuously available energy. We can use the energy generated by wind movements in the atmosphere in many ways. Various programs and lectures are held to inform people about the use of wind energy, its benefits, and the importance of green energy in the environment in celebration of this day. Through this festival, let us all take a step towards a greener world by creating awareness about wind energy and consider its utilization. Slogan for Global Wind (Wind) Day 2024: This year, Global Wind Day will highlight the importance of wind energy. It is environment friendly and renewable energy source. Wind energy can help build greenery. Using wind power can reduce harmful coal and fuel consumption. Wind energy is an inspiration for clean and innovative energy use. The day is celebrated to raise awareness about wind energy and give a message that we should all play a role in protecting the environment. The day is organized by the European Energy Association (EWEA) and the Global Wind Energy Council (GWEC). Global Wind Day is intended to highlight the importance of wind energy and promote the use of innovative energy. IWAA and GWEC organize various programs, workshops and information campaigns to create awareness about wind energy, explain its benefits and promote clean, innovative energy sources. Through this day, people are being made aware of the importance of wind energy, its eco-friendly qualities and the need for a global energy transition.
2) ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಅವರು ನೇಮಕಗೊಂಡಿದ್ದಾರೆ.
Pawan Kalyan has been appointed as the Deputy Chief Minister of Andhra Pradesh.

ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ಪ್ರಖ್ಯಾತ ಚಿತ್ರತಾರೆಯಾದ ಪವನ್ ಕಲ್ಯಾಣ್, ತಮ್ಮ ರಾಜಕೀಯ ಜೀವನದಲ್ಲಿ ಮಹತ್ವದ ಹಂತವನ್ನೆತ್ತರಿಸಿದ್ದಾರೆ. ಅವರ ನೇಮಕವು ರಾಜ್ಯದ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶದ ಆಡಳಿತದಲ್ಲಿ ವಿಶೇಷ ಸ್ಥಾನಮಾನ ಪಡೆಯಲಿದೆ. ಪವನ್ ಕಲ್ಯಾಣ್ ಅವರ ನೇಮಕದ ನಂತರ, ಅಭಿವೃದ್ಧಿ, ಜನಸೇವಾ ಯೋಜನೆಗಳು, ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ನೂತನ ಹಾದಿಗಳನ್ನು ಹುಡುಕುವ ನಿರೀಕ್ಷೆಯಿದೆ.ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ನಟ-ರಾಜಕಾರಣಿಯಾಗಿ ಜನಪ್ರಿಯರಾಗಿರುವ ಪವನ್ ಕಲ್ಯಾಣ್ ಅವರಿಗೆ ಪ್ರಮುಖವಾದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಪರಿಸರ, ಅರಣ್ಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳು ನೀಡಲ್ಪಟ್ಟಿವೆ. ಈ ನಿರ್ಧಾರವು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಪವನ್ ಕಲ್ಯಾಣ್ ಅವರ ಮುಖ್ಯಸ್ಥತ್ವದಲ್ಲಿ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.25 ಸದಸ್ಯರ ಸಚಿವ ಸಂಪುಟದಲ್ಲಿ, ಪವನ್ ಕಲ್ಯಾಣ್ ಅವರ ನೇತೃತ್ವದ ಜನಸೇನಾ ಪಕ್ಷದಿಂದ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯಿಂದ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ನಿರ್ಣಯವು ರಾಜ್ಯದ ನವೀಕರಣದ ದಿಕ್ಕಿನಲ್ಲಿ ಹೊಸ ಹೊಣೆ ತೆಗೆಯುವುದು ಮತ್ತು ಸಾರ್ವಜನಿಕ ಸೇವೆಗಳ ಬೆಳವಣಿಗೆಗೆ ಪ್ರಥಮ ಹೆಜ್ಜೆಯಾಗಿದೆ.ರಾಜ್ಯದಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಏ ಕೂಟವು ಗೆಲುವುಸಾಧಿಸಿದೇ ವಿಧಾನಸಭಾ ಚುನಾವಣೆಗಳಲ್ಲಿ 175 ಸ್ಥಾನಗಳಲ್ಲಿ 164 ಸ್ಥಾನ ಗೆದ್ದರೆ ಮತ್ತು 25 ಲೋಕಸಭಾ ಸ್ಥಾನಗಳ ಪೈಕಿ 21 ಸ್ಥಾನ ಗೆದ್ದಿತ್ತು.2013 ರಿಂದ ಪವನ್ ಕಲ್ಯಾಣ್ ಅವರು ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ಅವರು ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಮತ್ತು ಇತರ ಪುರಸ್ಕಾರಗಳನ್ನೂ ಸ್ವೀಕರಿಸಿದ್ದಾರೆ. ಅವರು SIIMA ಪ್ರಶಸ್ತಿಯನ್ನೂ ಪಡೆದಿದ್ದಾರೆ, ಈ ಪ್ರಶಸ್ತಿಗಳು ಅವರ ಕಲಾತ್ಮಕ ಯೋಗ್ಯತೆಯನ್ನು ಮತ್ತು ಅವರ ಚಿರಂತನ ಅಭಿಮಾನಿಗಳ ಬದುಕನ್ನು ಸಾರುತ್ತವೆ.
June 15th 2024 Current Affairs: Pawan Kalyan has been appointed as the Deputy Chief Minister of Andhra Pradesh. Pawan Kalyan, the founder of the Jana Sena Party and famous film star, has reached a milestone in his political career. His appointment is a major development in the politics of the state and will gain a special status in Andhra Pradesh administration in the near future. After Pawan Kalyan’s appointment, he is expected to find new avenues in development, public service projects, and solving public problems. Andhra Pradesh Chief Minister Chandrababu Naidu has allocated portfolios to cabinet ministers. Popular actor-politician Pawan Kalyan has been given the important portfolios of Panchayat Raj and Rural Development, Environment, Forests and Science and Technology. This decision is expected to give a new direction to the state’s rural development and environmental protection under the leadership of Pawan Kalyan. In the 25-member cabinet, three candidates from the Pawan Kalyan-led Jana Sena Party and one from the BJP took oath as ministers. This resolution is the first step towards the renewal of the state and the development of public services. The NDA won the Lok Sabha and Assembly elections in the state, winning 164 of the 175 assembly seats and 21 of the 25 Lok Sabha seats. Since 2013, Pawan Kalyan has been on Forbes India’s Celebrity 100 list. Appeared several times. Pawan Kalyan has also received Filmfare Award South and other awards. He is also a recipient of the SIIMA Award, which signifies his artistic prowess and the life of his eternal fan base.
3) ಟೆಕ್ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಟೆಕ್ ಕಂಪನಿ ಯಾಗಿ ಆ್ಯಪಲ್ ಕಂಪೆನಿಯು ಸ್ಥಾನ ಪಡೆದುಕೊಂಡಿದೆ.
In the tech industry, Apple has overtaken Microsoft as the number one tech company in the world.

ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲನೇ ಸ್ಥಾನಕ್ಕೆ ಪೈಪೋಟಿ ಜೋರಾಗುತ್ತಿದ್ದಂತೆ ಆ್ಯಪಲ್ ಕಂಪನಿಯು ಮತ್ತೊಮ್ಮೆ ವಿಶ್ವದ ಅತ್ಯಂತ ಪ್ರಸಿದ್ಧ ಕಂಪನಿಯಾಗಿ ಹೊರ ಹೊಮ್ಮಿದೆ. ಈ ಹಿಂದೆ ಮೈಕ್ರೋಸಾಫ್ಟ್ ಕಂಪನಿಯು ಮೊದಲನೇ ಸ್ಥಾನದಲ್ಲಿಯಿತ್ತು ಆದರೆ ಆ ಸ್ಥಾನದಲ್ಲಿ ಆ್ಯಪಲ್ ಕಂಪನಿ ಪಡೆದುಕೊಂಡಿದೆ.ಜಗತ್ತಿನ ಅತ್ಯಂತ ದುಬಾರಿ ಬೆಲೆ ಬಾಳುವ apple phone 2024 ರಲ್ಲಿ ಸತತ ಮೂರನೇ ವರ್ಷದ ಜಗತ್ತಿನ ಅತ್ಯಂತ Branded ಫೋನ್ ಆಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಶೇರುಮಾರುಕಟ್ಟೆಯಲ್ಲಿ ಇದರ ಸೇರು ಸರಿ ಸುಮಾರು 4% ರಷ್ಟು ಏರಿಕೆಯಾಗಿದ್ದು ದಾಖಲೆಯ ಪ್ರಮಾಣದಲ್ಲಿ $215.04 ಕ್ಕೆ ತಲುಪಿದೆ. ಆಪಲ್ ಕಂಪನಿಯು ಮಾರುಕಟ್ಟೆಯಲ್ಲಿ ಸರಿಸುಮಾರು 3.29 ಟ್ರಿಲಿಯನ್ ಡಾಲರ್ ಅಷ್ಟು ಮೌಲ್ಯವನ್ನು ಹೊಂದಿದೆ.BillGates ನ ಕಂಪನಿಆದಂತಹ ಮೈಕ್ರೋಸಾಫ್ಟ್ ನ ಮಾರುಕಟ್ಟೆಯ ಮೌಲ್ಯ 3.24 ಟ್ರಿಲಿಯನ್ ಡಾಲರ್ ಅಷ್ಟು ಆಗಿದೆ. ಐದು ತಿಂಗಳ ಹಿಂದೆ ಮೊದಲ ಬಾರಿಗೆ ಬ್ರಾಂಡೆಡ್ ಫೋನ್ ಆದಂತಹ Apple ಫೋನ್ ಕಂಪನಿಯು ಹಿಂದೆ ಉಳಿದಿತ್ತು. ಆ್ಯಪಲ್ ಷೇರುಗಳು ಈ ಹಿಂದೆ 7% ಗಿಂತ ಹೆಚ್ಚಿದ್ದವು. ಆದರೆ ಈ ಕಂಪನಿಯ ಫೋನ್ ಗಳು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ ಇದಕ್ಕೆ ಕಾರಣ ಹೊಸ ರೀತಿಯಲ್ಲಿ ಸಾಫ್ಟವೇರ್ ಮತ್ತು ವಿವಿಧ ರೀತಿಯ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ.2024 ರಲ್ಲಿ, ಆ್ಯಪಲ್ ಷೇರುಗಳು ಸುಮಾರು 12% ನಷ್ಟು ಏರಿಕೆ ಕಂಡಿವೆ, ಆದರೆ ಮೈಕ್ರೋಸಾಫ್ಟ್ ಮತ್ತು ಆಲ್ಫಾಬೆಟ್ ಕ್ರಮವಾಗಿ ಸರಿಸುಮಾರು 16% ಮತ್ತು 28% ನಷ್ಟು ಲಾಭವನ್ನು ಕಂಡಿವೆ. ಕಳೆದ ವಾರ ಆ್ಯಪಲ್ ನ ಮಾರುಕಟ್ಟೆ ಮೌಲ್ಯವನ್ನು ಸಂಕ್ಷಿಪ್ತವಾಗಿ ಹಿಂದಿಕ್ಕಿದ AI ಚಿಪ್ ಲೀಡರ್ ಎನ್‌ವಿಡಿಯಾ, ಈ ವರ್ಷ 154% ನಷ್ಟು ಏರಿಕೆಯಾಗಿದೆ, ಮಾರುಕಟ್ಟೆ ಮೌಲ್ಯವು ಕೊನೆಯದಾಗಿ $3.11 ಟ್ರಿಲಿಯನ್ ಎಂದು ವರದಿಯಾಗಿದೆ. ‘ಮ್ಯಾಗ್ನಿಫಿಸೆಂಟ್ ಸೆವೆನ್’ ಸ್ಟಾಕ್‌ಗಳಲ್ಲಿ, ಟೆಸ್ಲಾ ಮಾತ್ರ ಈ ವರ್ಷ ಆ್ಯಪಲ್ ಗಿಂತ ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿದೆ, ಸುಮಾರು 30% ಕುಸಿತದೊಂದಿಗೆ.
June 15th 2024 Current Affairs: Apple has once again emerged as the most famous company in the world as the competition for the first place in the technology sector is intensifying. Previously, Microsoft was on the first position but Apple has taken that position. The world’s most expensive apple phone has maintained its position as the world’s most branded phone in 2024 for the third year in a row. Its stock rose nearly 4% to a record high of $215.04. Apple company has a market value of approximately 3.29 trillion dollars. Bill Gates’s company Microsoft has a market value of 3.24 trillion dollars. Apple’s phone company was left behind when it first launched a branded phone five months ago. Apple shares were previously up more than 7%. But this company’s phones are the best-selling phones in the market these days because of the innovative software and various kinds of technology incorporated in them. In 2024, Apple’s shares have risen by around 12%, while Microsoft and Alphabet have seen gains of around 16% and 28% respectively. AI chip leader Nvidia, which briefly overtook Apple’s market cap last week, is up 154% this year, with a market value last reported at $3.11 trillion. Of the ‘Magnificent Seven’ stocks, only Tesla has performed worse than Apple this year, with a nearly 30% decline.
Follow Karunadu Today for more Daily Current Affairs.
Click here to Join Our Whatsapp Group