JUNE 25th 2024 CURRENT AFFAIRS

1) ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅತುಲ್ ಕುಮಾರ್ ಚೌಧರಿ ಅವರು ನೇಮಕಗೊಂಡಿದ್ದಾರೆ
Atul Kumar Chaudhary has been appointed as the Secretary of Telecom Regulatory Authority

June 25th 2024 Current Affairs

ಅತುಲ್ ಕುಮಾರ್ ಚೌಧರಿ ಅವರನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅವರನ್ನು ಸರ್ಕಾರವು ಜೂನ್ 20 ಗುರುವಾರದಂದು ನೇಮಕ ಮಾಡಲಾಯಿತು. ಮೊದಲು ಈ ಸ್ಥಾನಕ್ಕೆ ವಿ ರಘುನಂದನ್ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೇ 31ರಂದು ವಿ ರಘುನಂದನ್ ಅವರು ನಿವೃತ್ತರಾದ ಮೇಲೆ ಅತುಲ್ ಕುಮಾರ್ ಚೌಧರಿ ಈ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಅವರು ತಮ್ಮ ಉನ್ನತ ಅನುಭವ ಮತ್ತು ಮಾರ್ಗದರ್ಶನದ ಮೂಲಕ ಪ್ರಾಧಿಕಾರವನ್ನು ಮುಂದುವರೆಸುವ ನಿರೀಕ್ಷೆಯಿದೆ. ಚೌಧರಿ ಅವರು ಈ ಸ್ಥಾನದಲ್ಲಿ ಕಳೆದುಹೋದ ಕಾರ್ಯದರ್ಶಿ ಸ್ಥಾನವನ್ನು ಭರಿಸುತ್ತಿದ್ದಾರೆ ಮತ್ತು ಭಾರತದ ಟೆಲಿಕಾಂ ವಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದ್ದಾರೆ.1989ರ ಬ್ಯಾಚ್ ನವರಾದಂತಹ ಅತುಲ ಕುಮಾರ್ ಚೌದರಿ ಅವರು ಭಾರತೀಯ ಟೆಲಿಕಾಂ ಸೇವೆ ಐಟಿಎಸ್ ಅಧಿಕಾರಿಯಾಗಿದ್ದಾರೆ ಮತ್ತು ಪ್ರಸ್ತುತ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ (ಡಿಡಿಜಿ) ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವಿ. ರಘುನಂದನ್ ಅವರು ಮೇ 31 ರಂದು ನಿವೃತ್ತಿ ಹೊಂದಿದರು, ಮತ್ತು ಅವರ ನಿವೃತ್ತಿಯನ್ನು TRAI ಮೇ 15 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿತು. ಅವರ ನಂತರ, ಅತುಲ್ ಕುಮಾರ್ ಚೌಧರಿ ಅವರನ್ನು ಜೂನ್ 20 ರಂದು ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.ಅತುಲ್ ಕುಮಾರ್ ಚೌಧರಿ ಅವರು ದೂರಸಂಪರ್ಕ ಇಲಾಖೆಯಲ್ಲಿ (DoT) ಉಪ ಮಹಾನಿರ್ದೇಶಕರಾಗಿ (DDG) ಕಾರ್ಯನಿರ್ವಹಿಸಿದರು. 2021ರಲ್ಲಿ ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಲ್ಲಿ ಉಪ ಮಹಾನಿರ್ದೇಶಕರ (DDG) ಸ್ಥಾನವನ್ನು ಹೊಂದಿದ್ದರು.ಚೌಧರಿ ಅವರು ಐಐಟಿ ರೂರ್ಕಿಯಿಂದ ಪದವಿ ಪಡೆದಿದ್ದಾರೆ ಮತ್ತು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಐಐಪಿಎ) ನಿಂದ ಸಾರ್ವಜನಿಕ ನೀತಿ ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.

June 25th 2024 Current Affairs : Atul Kumar Choudhary has been appointed as Secretary of Telecom Regulatory Authority (TRAI) by the government on Thursday, June 20. Earlier this post was held by V Raghunandan as Secretary. Atul Kumar Chaudhary has taken over the post after the retirement of V Raghunandan on May 31. He is expected to continue the authority through his superior experience and guidance. Choudhary fills the vacant post of Secretary and will contribute significantly to the development of India’s telecom sector. Atula Kumar Choudhary, a 1989 batch Navara, is an Indian Telecom Service ITS officer and is currently working as Deputy Director at Unique Identification Authority of India (DDG).V. Raghunandan retired on May 31, and his retirement was officially announced by TRAI at a public meeting on May 15. After him, Atul Kumar Chaudhary was appointed as the new Secretary on June 20. Atul Kumar Chaudhary served as Deputy Director General (DDG) in the Department of Telecommunications (DoT). He held the post of Deputy Director General (DDG) at Unique Identification Authority of India (UIDAI) in 2021. Chaudhary is a graduate of IIT Roorkee and holds a Post Graduate Diploma in Public Policy and Administration from Indian Institute of Public Administration (IIPA), Delhi.

2) ಆಂಧ್ರಪ್ರದೇಶದ ನೂತನ ಸ್ಪೀಕರ್ ಆಗಿ ಸಿ.ಅಯ್ಯನ್ನಪತ್ರುಡು ಅವರು ಅವಿರೋಧವಾಗಿ ನೇಮಕಗೊಂಡಿದ್ದಾರೆ
C. Ayyannapatrudu has been appointed unopposed as the new Speaker of Andhra Pradesh

June 25th 2024 Current Affairs

ನೂತನ ಆಂಧ್ರಪ್ರದೇಶದ ವಿಧಾನಸಭಾ ಸ್ಪೀಕರ್ ಆಗಿ ನರಸಿಪಟ್ಟಣಂ ಶಾಸಕ ಸಿ.ಅಯ್ಯನ್ನಪತ್ರುಡು ಅವರು ಜೂನ್ 22ರಂದು (ಶನಿವಾರ)ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪಿಪಿಕೆ ರಾಮಾಚಾರ್ಯುಲು ಅವರು ಹೇಳುವ ಪ್ರಕಾರ ಶಾಸಕರ ಸಭಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವ ಸ್ಪರ್ದಿಯು ಕೂಡ ಭಾಗವಹಿಸಿರಲಿಲ್ಲ ಹೀಗಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಸಿ.ಅಯ್ಯನ್ನಪತ್ರುಡು ಅವರು ಅವಿರೋಧವಾಗಿ ಆಯ್ಕೆಯಾಗಿ ಸ್ಪೀಕರ್ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

June 25th 2024 Current Affairs : As the new Andhra Pradesh Assembly Speaker, Narasipatnam MLA C. Ayyannapatrudu has been elected unopposed as the Speaker of the Legislative Assembly on June 22 (Saturday). According to General Secretary of the Legislative Assembly PPK Ramacharyulu, there was no other contestant for the position of MLA Speaker, so C. Ayyannapatrudu of the Telugu Desam Party (TDP) has been elected unopposed. Speaker has taken over.

3) ಇಂಡಿಯಾ ಸ್ಪೇಸ್ ಕಾಂಗ್ರೆಸ್ ಜೂನ್ 26 ರಿಂದ ಆರಂಭ
India Space Congress starts from June 26

June 25th 2024 Current Affairs

‘ಇಂಡಿಯಾ ಸ್ಪೇಸ್ ಕಾಂಗ್ರೆಸ್’ (ISC) ಜೂನ್ 26 ರಿಂದ ಪ್ರಾರಂಭವಾಗಲಿದೆ, ಈ ಕಾರ್ಯಕ್ರಮವನ್ನು ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್-ಇಂಡಿಯಾ ಆಯೋಜಿಸುತ್ತಿದೆ. ಮೂರು ದಿನಗಳ ಈ ಮಹತ್ವದ ಕಾರ್ಯಕ್ರಮದಲ್ಲಿ ನೀತಿ ರೂಪಿಕರು, ವಿಜ್ಞಾನಿಗಳು, ಉದ್ಯಮಿಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ. ಇಂಡಿಯಾ ಸ್ಪೇಸ್ ಕಾಂಗ್ರೆಸ್ ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಮತ್ತು ನವೀನತೆಯನ್ನು ಉತ್ತೇಜಿಸಲು ಮುಖ್ಯ ವೇದಿಕೆಯಾಗಲಿದೆ.ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್ ಇಂಡಿಯಾ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮದ ಥೀಮ್ ‘ಬ್ರಿಡ್ಜಿಂಗ್ ಬೌಂಡರೀಸ್, ಟ್ರಾನ್ಸ್‌ಫಾರ್ಮಿಂಗ್ ಟುಮಾರೊ’ ಆಗಿದೆ. ಜೂನ್ 26 ರಿಂದ 28 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತ 800 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಮಿತಿಗಳನ್ನು ದಾಟಿ, ಬಾಹ್ಯಾಕಾಶ ಕ್ಷೇತ್ರದ ಭವಿಷ್ಯವನ್ನು ರೂಪಿಸಲು ಮತ್ತು ನವೀನತೆಯನ್ನು ಉತ್ತೇಜಿಸಲು ಆಯೋಜಿಸಲಾಗಿದೆ. ಹಲವಾರು ತಜ್ಞರು, ವಿಜ್ಞಾನಿಗಳು, ಮತ್ತು ಉದ್ಯಮಿಗಳು ಈ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.’ಇಂಡಿಯಾ ಸ್ಪೇಸ್ ಕಾಂಗ್ರೆಸ್’ ಜೂನ್ 26 ರಿಂದ (ಬುಧವಾರ) ಆರಂಭವಾಗಲಿದೆ. ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಭಾರತದ ಬಾಹ್ಯಾಕಾಶ ನಿಯಂತ್ರಕ ಇನ್-ಸ್ಪೇಸ್ ಮುಖ್ಯಸ್ಥ ಪವನ್ ಕುಮಾರ್ ಗೋಯೆಂಕಾ, ಇಟಲಿ ಮತ್ತು ಆಸ್ಟ್ರೇಲಿಯಾ ನಿರ್ವಾಹಕರು ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಆಯೋಜನೆಯಲ್ಲಿ ಬಾಹ್ಯಾಕಾಶ ವ್ಯವಸ್ಥೆಗಳ ಬಗ್ಗೆ ಅನೇಕ ವಿಷಯಗಳ ಚರ್ಚೆ ನಡೆಯುತ್ತಿದೆ ಮತ್ತು ಭಾರತೀಯ ಸಾಂಸ್ಕೃತಿಯ ಮುಖ್ಯ ಅಂಶಗಳನ್ನು ಪ್ರಮುಖಗೊಳಿಸಲು ನಿರೀಕ್ಷೆಯಿದೆ.

June 25th 2024 Current Affairs : The ‘India Space Congress’ (ISC) will start from June 26, an event organized by the Satcom Industry Association-India. Policymakers, scientists, entrepreneurs and experts will participate in this important three-day event. The India Space Congress will be the premier platform to promote the development and innovation of India’s space sector. The theme of the three-day event organized by the Satcom Industry Association India is ‘Bridging Boundaries, Transforming Tomorrow’. More than 800 people from around the world are expected to participate in the event, which will be held from June 26 to 28. The program is designed to cross cultural and scientific boundaries, shape the future of space and promote innovation. Several experts, scientists, and entrepreneurs will participate in this forum. ‘India Space Congress’ will start from June 26 (Wednesday). ISRO Chairman S. Somnath, India’s space regulator In-Space chief Pawan Kumar Goenka, Italian and Australian administrators are participating in the meeting. The program discusses many topics related to space systems and is expected to highlight key aspects of Indian culture.

Follow Karunadu Today for more Daily Current Affairs.

Click here to Join Our Whatsapp Group