"ಅಧ್ಯಾತ್ಮಿಕ ಮಾಹಿತಿ"

ಆರತಿ ಪ್ರತಿಯೊಬ್ಬರಿಗೂ ತಿಳಿದ ಹಾಗೆ ಈ ಮಂಗಳಾರತಿಯನ್ನು ದೇವಸ್ಥಾನಗಳಲ್ಲಿ ಅಥವಾ ಮನೆಗಳಲ್ಲಿ ಪೂಜೆ ಪುನಸ್ಕಾರ ನಡೆಯುವ ಸಮಯದಲ್ಲಿ ಈ ಮಂಗಳಾರತಿಯನ್ನು ಶಾಂತಿಯ ಸ್ವರೂಪವಾಗಿ ದೇವರಿಗೆ ಆರತಿಯನ್ನ ಮಾಡುತ್ತಾರೆ. ತದನಂತರ ಆರತಿಯನ್ನು ಭಕ್ತಿಯಿಂದ ಕೈಗಳಿಂದ ತೆಗೆದುಕೊಂಡು ತಲೆಯ ಮೇಲೆ ಮತ್ತು ಕಣ್ಣಿಗೆ ಒತ್ತಿಕೊಳ್ಳುವುದು ಸಾಮಾನ್ಯ. ಆದರೆ ಈ ಆರತಿಯನ್ನು ಯಾವ ರೀತಿಯಲ್ಲಿ ಸ್ವೀಕಾರ ಮಾಡಬೇಕೆಂದು ಬಹುತೇಕರಿಗೆ ತಿಳಿದಿಲ್ಲ.

ಹಿಂದೂ ಶಾಸ್ತ್ರದ ಪ್ರಕಾರ ಆರತಿಯನ್ನು ಎರಡು ಕೈಗಳಿಂದ ತೆಗೆದುಕೊಳ್ಳುವುದು ತಪ್ಪು ಎಂದು ಹೇಳುತ್ತದೆ. ಸ್ಕಂದ ಪುರಾಣಗಳಲ್ಲಿ ಉಲ್ಲೇಖ ಮಾಡಿದಂತೆ ಹಾಗೂ ವರಹ ದೇವರು ತಿಳಿಸಿರುವ ಪ್ರಕಾರ ಮಂಗಳಾರತಿಯನ್ನು ಒಂದೇ ಕೈಗಳಿಂದ ತೆಗೆದುಕೊಳ್ಳುವುದು ಶ್ರೇಷ್ಠ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಪುರಾಣದಲ್ಲಿ ಒಂದು ಶ್ಲೋಕವು ಕೂಡ ಇದೆ ಅದೇನೆಂದರೆ:

ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||

ಇದರ ಅರ್ಥ ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.

ಹಾಗಿದ್ದರೆ ಆರತಿಯನ್ನು ತೆಗೆದುಕೊಳ್ಳುವ ಸರಿಯಾದ ಕ್ರಮವು ಯಾವುದು ಎನ್ನುವ ಪ್ರಶ್ನೆ ನಿಮಗೆಲ್ಲ ಕಾಡುತ್ತಿರುತ್ತದೆ.
ಹೌದು ಮಂಗಳಾರತಿಯನ್ನು ಬಲಗೈಯಿಂದ ಶಾಂತವಾಗಿ ಉರಿಯುವ ದೀಪದ ಮೇಲಿನಿಂದ ತೆಗೆದು ಕೊಂಡು ಮೊದಲು ಅದನ್ನು ತೆಲೆಯ ಮೇಲೆ ಸ್ಪರ್ಶಿಸಿ ನಂತರ ಹೃದಯ ಭಾಗಕ್ಕೆ ಆಮೇಲೆ ನಾಭಿಯ ಎಡ ಭಾಗದಲ್ಲಿ ಮಂಗಳಾರತಿಯನ್ನು ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರ ಹಿಂದೆಯೂ ಕೂಡ ಒಂದು ಆಧ್ಯಾತ್ಮಿಕ ಅರ್ಥವಿದೆ ಶಿರದಲ್ಲಿರುವ ಅಮೃತವನ್ನು ಹೃದಯಕ್ಕೆ ತಂದು ಹೃದಯದಲ್ಲಿರುವ ಅಗ್ನಿಯನ್ನು ನಾಭಿಯ ಎಡ ಭಾಗದಲ್ಲಿ ಇರುವ ಪಾಪ ಪುರುಷನಲ್ಲಿ ಸುಡಬೇಕು ಎನ್ನುವುದು. ಆ ರೀತಿ ಮಾಡಿದರೆ ನಮ್ಮ ದೇಹವು ಕೂಡ ಸುದ್ದಿಯಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಆಗಲಿ ಅಥವಾ ದೇವಸ್ಥಾನದಲ್ಲಾಗಲಿ ಮಂಗಳಾರತಿಯನ್ನು ಮಾಡುವಾಗ ಓಂ ಆಕಾರ ಬರುವ ರೀತಿಯಲ್ಲಿ ನಮ್ಮ ಕೈಯನ್ನ ತಿರುಗಿಸಬೇಕು. ಹಾಗೆ ಆರತಿಯನ್ನು ನಮ್ಮ ಎಡಭಾಗದಿಂದ ಶುರುಮಾಡಿ ಬಲಭಾಗದ ವರೆಗೆ ತರಬೇಕು. ಮೊದಲು ದೇವರ ಪಾದಗಳಿಗೆ ನಾಲ್ಕು ಬಾರಿ ಆರನೇಯನ್ನ ಮಾಡಬೇಕು ನಂತರ ನಾಭಿಯ ಬಳಿ ಎರಡು ಬಾರಿ ಆರತಿಯನ್ನು ಮಾಡಬೇಕು ತದನಂತರ ಮುಖದ ಬಳಿ ಒಂದು ಬಾರಿ ಆರತಿಯನ್ನು ಮಾಡಬೇಕು ಆನಂತರ ಮೂರ್ತಿಯ ಬಳಿ 7 ಬಾರಿ ಮಂಗಳಾರತಿಯನ್ನು ವೃತ್ತಾಕಾರದಲ್ಲಿ ಆರತಿಯನ್ನು ಬೆಳಗಬೇಕು. ಇದೆಲ್ಲ ಆದ ನಂತರ ಆರತಿಯ ತಟ್ಟೆಯ ನಾಲ್ಕು ಕಡೆ ನೀರನ್ನು ಪ್ರೋಕ್ಷಿಸಬೇಕು ಇದು ಎಲ್ಲ ಆದ ನಂತರವೇ ಅರತಿಯು ಶಾಂತವಾಗುತ್ತದೆ.

ಮಂಗಳಾರತಿಯನ್ನು ಮಾಡುವ ಸಮಯದಲ್ಲಿ ಆರತಿಯನ್ನು ನಾವು ನೋಡುವುದರಿಂದ ಏಕಾಗ್ರತೆ ಸಿದ್ಧಿಸುವುದಲ್ಲದೆ ನಮ್ಮ ಬಲ ಅಂಗೈಯಿಂದ ಆರತಿಯ ಶಾಖವು ಬಡಿವ ತನಕ ಹಿಡಿದರೆ ಅದು ಅಂಗೈ ಮೂಲಕ ಪ್ರವೇಶವಾಗಿ ನರವ್ಯೂಹವು ಹೆಚ್ಚು ಕ್ರಿಯಾಶೀಲವಾಗುತ್ತದೆ. ದಂಡ ಪುರಾಣಗಳ ಪ್ರಕಾರ ಆರತಿಗೆ ಮಹತ್ವವಾದ ಸ್ಥಾನಮಾನವಿದೆ. ಪೂಜೆ ಹೋಮ ಹವನಗಳಲ್ಲಿ ಕೊನೆಯಲ್ಲಿ ಮಾಡುವ ದೀಪದ ಆರತಿಯು ಒಂದು ಶಾಂತಿಯ ಸಂಕೇತವಾಗಿರುತ್ತದೆ. ಆರತಿ ಮಾಡುವಾಗ ಎಷ್ಟು ಶ್ರದ್ಧಾಭಕ್ತಿಯಿಂದ ಮಾಡುತ್ತೇವೋ ಅಷ್ಟೇ ಪ್ರತಿಫಲ ನಮಗೆ ದೊರಕುತ್ತದೆ ಆ ಸಮಯದಲ್ಲಿ ನಮ್ಮನ್ನು ಆವರಿಸುತ್ತದೆ. ಪೂಜೆ ಪುನಸ್ಕಾರ ಮಾಡುವ ಸಮಯದಲ್ಲಿ ಭಗವಂತನ ಶಕ್ತಿ ಅಪಾರವಾಗಿರುತ್ತದೆ ಆ ಸಂದರ್ಭದಲ್ಲಿ ಮಂಗಳಾರತಿಯನ್ನು ಭಗವಂತನಿಗೆ ಸಮರ್ಪಿಸಿದರೆ ಆಗ ಭಗವಂತನ ಶಕ್ತಿಯು ಕೂಡ ಹೆಚ್ಚು ವೃದ್ಧಿಯಾಗುತ್ತದೆ. ಯಾವುದೇ ರೀತಿಯ ಪೂಜೆ ಪುನಸ್ಕಾರ ವಿಧಿ ವಿಧಾನಗಳು ತಿಳಿಯದಿದ್ದರೂ ಕೂಡ ಆರತಿಯನ್ನ ಶ್ರದ್ದೆಯಿಂದ ಭಕ್ತಿಯಿಂದ ಮಾಡಿದರೆ ದೇವರು ಪ್ರಸನ್ನನಾಗಿ ಆ ಪೂಜೆಯ ಅರ್ಪನೆಯನ್ನು ಸ್ವೀಕರಿಸುತ್ತಾನೆ ಎಂದು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

Follow Karunadu Today for more Spiritual information.

Click here to Join Our Whatsapp Group