"ಪ್ರೀತಿಯ ಕಥೆಗಳು"

love stories

ಆಗ ತಾನೆ ಪಿಯು ವಿದ್ಯಾಭ್ಯಾಸವನ್ನು ಮುಗಿಸಿ ಡಿಗ್ರಿ ಗೆ ಕಾಲಿಟ್ಟಿರುವ ಸಮಯ, ಆ ಕ್ಷಣದಿಂದ ನಮ್ಮ ಮನಸ್ಸಿನಲ್ಲಿ ಹೊಸ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿತ್ತು. ಮೊದಲನೆಯ ದಿನ ಕಾಲೇಜಿಗೆ ಹೋಗುವ ಸಂತೋಷ ಅದಕ್ಕಾಗಿ ಬೇಗನೆ ಎದ್ದು ದೈನಂದಿನದ ಕಾರ್ಯಕ್ರಮವನ್ನು ಮುಗಿಸಿಕೊಂಡು ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಿ ಅಮ್ಮ ಮಾಡಿರುವಂತಹ ತಿಂಡಿಯನ್ನು ತಿಂದು ಕಾಲೇಜಿಗೆ ಹೊರಟೆ.ಹೋಗುವ ಮಾರ್ಗ ಮಧ್ಯೆಯಲ್ಲಿ ಹೊಸ ಸ್ನೇಹಿತರ ಪರಿಚಯವಾಯಿತು ಅವರೊಂದಿಗೆ ಮಾತನಾಡುತ್ತ ಹೋದಂತೆ ಕಾಲೇಜು ಬಂದಿದ್ದು ಗೊತ್ತಾಗಲೇ ಇಲ್ಲ . ನೇರವಾಗಿ ನಾವು ನಮ್ಮ ಕ್ಲಾಸ್ ರೂಮಿಗೆ ಹೋಗಿ ನಾವು ಕುಳಿತುಕೊಳ್ಳುವ ಜಾಗವನ್ನು ಹುಡುಕಿಕೊಂಡು ಅಲ್ಲಿ ಕುಳಿತುಕೊಂಡೆವು. ಕಾಲೇಜಿನ ಗಂಟೆ ಹೊಡೆಯುವ ಮೂಲಕ ಕ್ಲಾಸ್ ಗಳು ಶುರುವಾದವು.

love stories

ಕ್ಲಾಸ್ ರೂಮಿಗೆ ಬಂದಂತಹ ಗುರುಗಳು ತಮ್ಮ ಹೆಸರಿನ ಮೂಲಕ ಪರಿಚಯ ಮಾಡಿಕೊಂಡರು ಮತ್ತು ವಿದ್ಯಾರ್ಥಿಗಳಿಗೆ ನೀವು ನಿಮ್ಮ ಪರಿಚಯವನ್ನು ಪ್ರತಿಯೊಬ್ಬರಿಗೂ ಕೇಳುವ ಹಾಗೆ ಮಾಡಿಕೊಳ್ಳಿ ಎಂದು ಹೇಳಿದರು. ಗುರುಗಳ ಮಾತಿನ ಪ್ರಕಾರ ವಿದ್ಯಾರ್ಥಿಗಳು ಒಬ್ಬರಾಗಿ ತಮ್ಮ ಪರಿಚಯವನ್ನು ಮಾಡಿಕೊಂಡರು. ಅದೇ ರೀತಿ ನಾನು ಕೂಡ ನನ್ನ ಹೆಸರಿನ ಮೂಲಕ ನನ್ನ ಪರಿಚಯವನ್ನು ಮಾಡಿಕೊಂಡೆ. ತದನಂತರ ನನ್ನ ಪಕ್ಕದಲ್ಲಿ ಕುಳಿತುಕೊಂಡಿರುವಂತಹ ಸುಂದರವಾದ ಹುಡುಗಿ ಅವಳು ತನ್ನ ಪರಿಚಯ ಮಾಡಿಕೊಂಡಳು ಅವಳ ಹೆಸರು ಸೌಂದರ್ಯ ಹೆಸರಿನ ರೀತಿಯೇ ಮುದ್ದಾಗಿ ಸೌಂದರ್ಯವತಿಯಾಗಿದ್ದಳು. ಪ್ರತಿಯೊಬ್ಬರು ತಮ್ಮ ಪರಿಚಯವನ್ನು ಮಾಡಿಕೊಂಡರು ತದನಂತರ ಗುರುಗಳು ಪಾಠವನ್ನು ಸುರು ಮಾಡಿದರು. ನಾವುಗಳು ಗುರುಗಳ ಪಾಠವನ್ನು ಶಿಸ್ತಿನಿಂದ ಕೆಳ ತೊಡಗಿದೆವು ಅಷ್ಟೊತ್ತಿಗೆ ಕಾಲೇಜಿನ ಗಂಟೆಯೂ ಕೂಡ ಬಾರಿಸಿತು. ಗುರುಗಳು ತಮ್ಮ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋರಾಡಿದರು.

love stories

ಇದೇ ರೀತಿ ಪ್ರತಿದಿನವೂ ಕೂಡ ನಡೆಯತೊಡಗಿತು. ಆದರೆ ಒಂದು ದಿನ ಕ್ಲಾಸುಗಳು ನಡೆಯುವ ಸಮಯದಲ್ಲಿ ಕಾಲೇಜಿನ ಪ್ಯೂನ್ ಆದಂತಹ ರಾಮಣ್ಣ ಅವರು ಪ್ರಿನ್ಸಿಪಲ್ ಹೇಳಿರುವ ಒಂದು ವಿಷಯವನ್ನು ಸಂತೋಷವಾಗಿ ಗುರುಗಳ ಮುಖಾಂತರ ನಮಗೆ ತಿಳಿಸಿದರು. ಅದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಸಂತೋಷಗೊಂಡರು. ಅದು ಏನು ಅಂದರೆ ಕಾಲೇಜು ಸ್ಥಾಪನೆಗೊಂಡು ಸರಿ ಸುಮಾರು ಐವತ್ತು ವರ್ಷಗಳನ್ನು ಪೂರ್ಣಗೊಂಡಿದೆ, ಅದಕ್ಕಾಗಿ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಾರಾದರೂ ಭಾಗವಹಿಸಲು ಇಷ್ಟಪಡುವ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನ ನೋಂದಾಯಿಸಬೇಕೆಂದು ತಿಳಿಸಿದರು. ಕಾಲೇಜಿನ ಕಾರ್ಯಕ್ರಮದಲ್ಲಿ ನಾವುಗಳು ಕೂಡ ಭಾಗವಹಿಸಬೇಕೆಂದು ಅಂದುಕೊಂಡು ನಾವು ನಮ್ಮ ಸ್ನೇಹಿತರು ನಮ್ಮ ಹೆಸರುಗಳನ್ನು ನೋಂದಾಯಿಸಿದೆವು ಅದೇ ರೀತಿ ಅವಳು ಕೂಡ ತನ್ನ ಹೆಸರನ್ನು ನೋಂದಾಯಿಸಿದಳು.

love stories

ಇದರಿಂದ ನನಗಾದ ಸಂತೋಷ ಅಷ್ಟಿಷ್ಟಲ್ಲ. ವಿವಿಧ ರೀತಿಯ ಮನೋರಂಜನೆ ಕಾರ್ಯಕ್ರಮಗಳಿದ್ದವು ಅದರಲ್ಲಿ ನಮ್ಮನ್ನ ಕಾಮಿಡಿ ಡ್ರಾಮಾಗಳಲ್ಲಿ ಆಯ್ಕೆ ಮಾಡಿಕೊಂಡರು. ಆಯ್ಕೆಯಾದ ನಾವುಗಳು ಪ್ರತಿದಿನ ಕಾಲೇಜು ಮುಗಿದ ನಂತರ ಕಾಲೇಜಿನ ಆಡಿಟೋರಿಯಂ ನಲ್ಲಿ ನಾವೆಲ್ಲ ಸೇರಿ ಪ್ರಾಕ್ಟೀಸ್ ಮಾಡಲು ಶುರು ಮಾಡಿದವು ಅಲ್ಲಿಂದ ನಮ್ಮಿಬ್ಬರ ಪರಿಚಯ ಶುರುವಾಯಿತು. ಪ್ರಾಕ್ಟೀಸ್ ಮುಗಿದ ನಂತರ ಸ್ನೇಹಿತರು ಒಟ್ಟಾಗಿ ಕೂಡಿ ಜೊತೆಯಲ್ಲಿ ಊಟ ಮಾಡುತ್ತಿದ್ದೆವು ಮತ್ತು ತರ್ಲೆ ತಮಾಷೆಗಳನ್ನು ಮಾಡಿ ಕಾಲ ಕಳೆಯುತ್ತಿದ್ದೆವು. ದಿನ ಕಳೆದಂತೆ ನಮ್ಮಿಬ್ಬರ ಮಧ್ಯೆ ಅಪಾರವಾದ ಪರಿಚಯವಾಯಿತು ಪರಿಚಯ ಸ್ನೇಹವಾಯಿತು ಸ್ನೇಹ ಪ್ರೀತಿಯಾಗಲು ಬಹಳ ದಿನಗಳು ಬೇಕಾಗಿರಲಿಲ್ಲ. ಒಂದು ದಿನ ನನ್ನ ಸ್ನೇಹಿತನಾದ ರಾಹುಲ್ ಕಡೆಯಿಂದ ನನ್ನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡ ಅವಳು ನನಗೆ ಮೆಸೇಜ್ ಮಾಡಲು ಶುರುಮಾಡಿದಳು, ನಾನು ಕೂಡ ಅವಳ ಜೊತೆ ಸಲುಗೆಯಿಂದ ಮಾತನಾಡಲು ಶುರು ಮಾಡಿದೆ.

love stories

ದಿನಗಳು ಕಳೆದಂತೆ ನಮ್ಮಿಬ್ಬರ ಮಧ್ಯೆ ಅಗಾಧವಾದ ಪ್ರೀತಿ ವಿಶ್ವಾಸ ಗೌರವ ಮತ್ತು ಪ್ರೀತಿಯಲ್ಲಿ ಸಣ್ಣ ಪುಟ್ಟ ಜಗಳವೂ ಕೂಡ ಶುರುವಾಯಿತು. ಕೆಲವೊಮ್ಮೆ ಅ ಜಗಳವೂ ಅತಿರೇಕಕ್ಕೆ ಹೋಗಿ ನಮ್ಮಿಬ್ಬರ ಮಧ್ಯೆ ಮನಸ್ತಾಪಗಳು ಶುರುವಾದವು.ಅದರು ಕೂಡ ಅವಳೇ ಬೇಕು ಎನ್ನುವ ಹಠ ಅವಳಿಗೂ ಕೂಡ ನಾನೇ ಬೇಕು ಎನ್ನುವ ಪ್ರೀತಿಯ ಬಯಕೆ. ನಮ್ಮಿಬ್ಬರ ಮಧ್ಯೆ ಎಷ್ಟೇ ಕೋಪ ತಾಪಗಳು ಇದ್ದರೂ ಕೂಡ ಈ ಪ್ರೀತಿಯ ಮುಂದೆ ಶೂನ್ಯವಾಗಿ ಕಾಣುತ್ತದೆ. ಈಗ ಅವಳು ನನ್ನ ಜೊತೆ ಇಲ್ಲದಿದ್ದರೂ ಕೂಡ ನನ್ನ ಪ್ರೀತಿ ಅವಳ ಜೊತೆ ಸದಾ ಕಾಲ ಇರುತ್ತದೆ.

ಅಮರವಾಗಿ ಇರುವ ಪ್ರೀತಿ ನಮ್ಮದಲ್ಲ ಅಮರತ್ವದ ಪ್ರೀತಿ ನಮ್ಮದು. "ಕಾಣುವ ಪ್ರೀತಿಗಿಂತ ಕಾಯುವ ಪ್ರೀತಿಯೇ ದೊಡ್ಡದು"

For more Stories follow Karunadu Today

Click here to Join Our Whatsapp Group