
ಪುಸ್ತಕಗಳನ್ನು ಓದುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ನೀವೇ ಹೇಳಿ. ಒಂದೊಂದು ಪುಸ್ತಕದಿಂದಲು ನಮಗೆ ಜ್ಞಾನ ಸಂಪಾದನೆ ಆಗುತ್ತ ಹೋಗುತ್ತದೆ. ಆದರೆ ಜಗತ್ತಿನಲ್ಲಿ ಕೆಲವು ಪುಸ್ತಕಗಳಿದ್ದು ಅವುಗಳಿಂದ ಜ್ಞಾನ ಸಂಪಾದನೆ ಆಗುವುದು ಇರಲಿ, ಅವುಗಳ ಒಳಗೆ ಏನಿದೆ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಅಷ್ಟೊಂದು ರಹಸ್ಯಮಯವಾಗಿವೆ ಆ ಪುಸ್ತಕಗಳು. ಜಗತ್ತಿನಲ್ಲಿರುವ ಅನೇಕ ಬುದ್ದಿಜೀವಿಗಳು ಕೂಡ ಆ ಪುಸ್ತಕಗಳ ಒಳಗೆ ಇರುವ ರಹಸ್ಯವನ್ನು ಪತ್ತೆ ಮಾಡಲು ಕಷ್ಟಪಡುತ್ತಿದ್ದಾರೆ. ಬನ್ನಿ ಇಂದು ಅಂತಹ ರಹಸ್ಯಮಯ ಪುಸ್ತಕಗಳ ಕುರಿತು ತಿಳಿದುಕೊಳ್ಳೋಣ.
1.ವೊಯ್ನಿಚ್ ಮ್ಯಾನುಸ್ಕ್ರಿಪ್ಟ್ – VOYNICH MANUSCRIPT
ಜಗತ್ತಿನಲ್ಲಿ ಅತಿ ಹೆಚ್ಚು ರಹಸ್ಯಮಯವಾಗಿರುವ ಈ ಪುಸ್ತಕವು 15ನೆಯ ಶತಮಾನದ್ದು ಎಂದು ತಿಳಿದುಬಂದಿದೆ. ಆದರೆ ಇದನ್ನು ಯಾರು ಬರೆದಿದ್ದಾರೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಈ ರಹಸ್ಯಮಯ ಪುಸ್ತಕದ ತುಂಬೆಲ್ಲ ವಿಚಿತ್ರವಾದ ಚಿತ್ರಗಳಿದ್ದು ಇದರ ಕೆಲವು ಹಾಳೆಗಳು ಕಾಣೆಯಾಗಿವೆ. 15ನೆಯ ಶತಮಾನದಲ್ಲಿಇಟಲಿಯಲ್ಲಿ ಬಳಸಲಾಗುತ್ತಿದ್ದ ಬಾಷೆ ಇದರಲ್ಲಿದ್ದು 1935 ರಿಂದ ಇದುವರೆಗು ಜಗತ್ತಿನ ಅನೇಕ ಬುದ್ದಿಜೀವಿಗಳು ಇದರ ಅಧ್ಯಯನ ಮಾಡಿದ್ದಾರೆ. ಆದರೆ ಯಾರಿಂದಲೂ ಕೂಡ ಇವುಗಳ ಒಳಗಿರುವ ರಹಸ್ಯ ಮಾತ್ರ ಭೇದಿಸಲು ಸಾಧ್ಯವಾಗಿಲ್ಲ. ಇನ್ನು ಈ ಪುಸ್ತಕದಲ್ಲಿರುವ ಒಂದೊಂದು ಅಕ್ಷರವನ್ನು ಬರೆಯಲು ವಿಶೇಷವಾದ ಇಂಕ್ ಬಳಸಲಾಗಿದೆ ಎಂದು ತಿಳಿದುಬಂದಿದ್ದು ಅನೇಕ ವರ್ಷಗಳಿಂದ ಇದರ ಒಳಗಿರುವ ರಹಸ್ಯವು ರಹಸ್ಯವಾಗಿಯೇ ಉಳಿದುಕೊಂಡಿದೆ.
ಇಂತಹ ಅದೆಷ್ಟೋ ಪುಸ್ತಕಗಳು ಜಗತ್ತಿನ ಅನೇಕ ದೇಶಗಳಲ್ಲಿ ಇದ್ದು ಕೆಲವು ಪುಸ್ತಕಗಳ ಕುರಿತು ಆ ದೇಶಗಳ ಸರ್ಕಾರಗಳು ರಹಸ್ಯವಾಗಿ ಇಟ್ಟಿವೆ. ಇನ್ನು ಈ ಪುಸ್ತಕಗಳಲ್ಲಿ ಯಾವ ಪುಸ್ತಕದ ಕುರಿತು
2) ದಿ ಬುಕ್ ಆಫ್ ಸೋಯಾಗ (THE BOOK OF SOYGA)
ಇದನ್ನು Aldaraia ಎಂದು ಕೂಡ ಕರೆಯಲಾಗುತ್ತದೆ. ಈ ಪುಸ್ತಕವನ್ನು John Dee ಎನ್ನುವ ಇಂಗ್ಲೆಂಡಿನ ವ್ಯಕ್ತಿಯು ತನ್ನ ಗ್ರಂಥಾಲಯದಲ್ಲಿ ಇಟ್ಟುಕೊಂಡಿದ್ದನು. ಆತನ ಮರಣದ ಬಳಿಕ 500 ವರ್ಷಗಳ ಕಾಲ ಈ ಪುಸ್ತಕವು ಆ ಗ್ರಂಥಾಲಯದಿಂದ ಮಾಯವಾಗಿತ್ತು. ಆದರೆ 1994 ರಲ್ಲಿ ಮರಳಿ ಇದು British libraryಯಲ್ಲಿ ಕಾಣಿಸಿಕೊಂಡಿತು. ಈ ಪುಸ್ತಕದ ಒಳಗೆ ಜಾದು, ಮಾಟ ಮಂತ್ರ, ಪ್ರೇತಾತ್ಮ ಹಾಗು ನಕ್ಷತ್ರಗಳ ಕುರಿತ ರಹಸ್ಯ ಅಡಗಿದೆ. ಆದರೂ ಕೂಡ ಇದರ ಒಳಗಿರುವ ರಹಸ್ಯಗಳನ್ನು ಪತ್ತೆ ಹಚ್ಚುವಲ್ಲಿ ಬುದ್ದಿಜೀವಿಗಳು ಯಶಸ್ವಿಯಾಗಿದ್ದಾರೆ. ಆದರೆ ಈ ಪುಸ್ತಕದ ಕೆಲವು ಹಾಳೆಗಳನ್ನು ಮಾತ್ರ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಸಂಪೂರ್ಣ ಪುಸ್ತಕವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಉಳಿದ ಹಾಳೆಗಳ ಒಳಗಿರುವ ರಹಸ್ಯಗಳನ್ನು ತಿಳಿಯಬೇಕು. ಅದನ್ನು ಯಾರು ತಿಳಿದುಕೊಳ್ಳುತ್ತಾರೆ ಅವರಿಂದ ಮಾತ್ರ ಈ ರಹಸ್ಯಮಯ ಪುಸ್ತಕದ ಅರ್ಥ ಮಾಡಿಕೊಳ್ಳಲು ಸಾಧ್ಯ.
interesting ಅನ್ನಿಸಿತು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ
3. ಕೋಡೆಕ್ಸ್ ಸೆರಾಫಿನಿಯಸ್ (THE CODEX SERAPHINIANUS)
ಈ ಪುಸ್ತಕವು ರಹಸ್ಯಮಯ ಪುಸ್ತಕ ಏಕೆಂದರೆ ಅದರ ಒಳಗೆ ಬರೆದಿರುವುದನ್ನು ಅರ್ಥ ಮಾಡಿಕೊಳ್ಳುವುದು ನಮ್ಮಿಂದ ಸಾಧ್ಯವಿಲ್ಲ. ಅದರ ಜೊತೆಗೆ ಅದನ್ನು ಬರೆದಿದ್ದು ಯಾರು ಎಂದು ಕೂಡ ತಿಳಿದಿಲ್ಲ. ಆದರೆ ಈ CODEX SERAPHINIANUS ಪುಸ್ತಕವು ರಹಸ್ಯಮಯ ಏಕೆಂದರೆ ಇದರ ಒಳಗೆ ಚಿತ್ರ ವಿಚಿತ್ರವಾದ ಆಕಾರದ ಫೋಟೋಗಳಿದ್ದು ಅದನ್ನು ನೋಡುತ್ತಿದ್ದರೆ ಈ ಪುಸ್ತಕವು ಬೇರೆ ಗ್ರಹದಲ್ಲಿ ಬರೆದ ಹಾಗೆ ಕಾಣುತ್ತದೆ. ಈ ಪುಸ್ತಕವನ್ನು “Luigi Serafini” ಎನ್ನುವ ವ್ಯಕ್ತಿ ಬರೆದಿದ್ದಾನೆ. ಈತನೊಬ್ಬ architect ಆಗಿದ್ದನು. ಇದೇನು ಪ್ರಾಚೀನ ಪುಸ್ತಕವಲ್ಲ. ಇದನ್ನು 1980 ರಲ್ಲಿ ಬರೆಯಲಾಗಿದೆ. ಇದು ಅಮೆಜಾನ್ ಆನ್ಲೈನ್ ಶಾಪಿಂಗ್ ನಲ್ಲಿ ಕೂಡ ಲಭ್ಯವಿದ್ದು ನೀವು ಕೂಡ ಖರೀದಿಸಬಹುದು. ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ.
4. ರೋಹಾಂಕ್ ಕೋಡೆಕ್ಸ್ (THE ROHONC CODEX)
ಹಂಗೇರಿಯ ದೇಶದಲ್ಲಿ Gusztáv Batthyány ಎನ್ನುವ ರಾಜನಿದ್ದ. ಆತನು 1838 ರಲ್ಲಿ Hungerian Academy of Sciences ಗೆ ಒಂದು ಗ್ರಂಥಾಲಯವನ್ನು ಧಾನವನ್ನಾಗಿ ನೀಡಿದ. ಆ ಗ್ರಂಥಾಲಯದಲ್ಲಿ ಸಿಕ್ಕ ಈ ಪುಸ್ತಕವು ಓದಲು ಅಥವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಬಾಷೆಯಲ್ಲಿದೆ. ಇದರ ಒಳಗೆ ಇರುವಂತಹ ಒಂದೊಂದು ಚಿತ್ರವು ವಿಚಿತ್ರವಾಗಿದ್ದು ಜಗತ್ತಿನ ಅನೇಕ ಬುದ್ದಿಜೀವಿಗಳು ಈ ಪುಸ್ತಕದಲ್ಲಿ ಇರುವುದನ್ನು ತಿಳಿದುಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಈ ಪುಸ್ತಕದ ಕುರಿತ ಮತ್ತೊಂದು ಸಂಗತಿ ಏನೆಂದರೆ ಇದನ್ನು ಯಾರು ಬರೆದಿದ್ದಾರೆ ಎನ್ನುವುದು ಮಾತ್ರ ಇದುವರೆಗೂ ತಿಳಿದಿಲ್ಲ. ಇನ್ನು ಈ ಪುಸ್ತಕದ ಒಳಗೆ ಹೇಗೆ ಬರೆಯಲಾಗಿದೆಯೆಂದರೆ ಅದನ್ನು ಅರ್ಥ ಮಾಡಿಕೊಳ್ಳಲು ಕೆಳಗಿಂದ ಮೇಲೆ ಓದಬೇಕೋ ಅಥವ ಮೇಲಿಂದ ಕೆಳಗೆ ಓದಬೇಕೋ ಎನ್ನುವುದು ತಿಳಿದಿಲ್ಲ. ಈ ಪುಸ್ತಕದ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡಿರುವ ಅದೆಷ್ಟೋ ಬುದ್ದಿ ಜೀವಿಗಳು ಇದರ ಒಳಗಿರುವ ರಹಸ್ಯವನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ.
Follow Karunadu Today for more Interesting Facts & Stories.
Click here to Join Our Whatsapp Group