
ಮನುಷ್ಯನು ಅದೆಷ್ಟೇ ಬುದ್ದಿವಂತನಾಗಿರಬಹುದು, ವಿಜ್ಞಾನ ಅದೆಷ್ಟೇ ಮುಂದುವರೆದಿರಬಹುದು ಆದರೆ ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರ ಅವನಿಂದ ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಈ ಜಗತ್ತಿನಲ್ಲಿ ಈ ರೀತಿ ಕಂಡು ಹಿಡಿಯಲು ಸಾಧ್ಯವಾಗದ ಅನೇಕ ರಹಸ್ಯಗಳಿದ್ದು ಅವುಗಳನ್ನು ಭೇದಿಸಲು ಹೋದವರು ಜೀವಂತವಾಗಿ ಮರಳಿ ಬಂದಿಲ್ಲ. ಇಂದು ನಿಮಗೆ ಈ ರೀತಿಯಾದ ಅಚ್ಚರಿ ತುಂಬಿಕೊಂಡಿರುವ ಪ್ರಪಂಚದ ಕೆಲವು ನಿಗೂಡವನ್ನು ನಿಮಗೆ ತಿಳಿಸುತ್ತೇವೆ. ಬಾಗಿಲುಗಳ ಹಿಂದೆ ಅಡಗಿರುವ ಆ ನಿಗೂಡತೆಯನ್ನು ಪತ್ತೆ ಮಾಡಲು ಇದುವರೆಗು ಯಾರಿಂದಲೂ ಸಾಧ್ಯವಾಗಿಲ್ಲ. ಅವುಗಳನ್ನು ತೆರೆಯಲು ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ಸಾಧ್ಯವಾಗುತ್ತಿಲ್ಲ. ಬನ್ನಿ ಇಂದು ನಿಮಗೆ ಆ ರಹಸ್ಯಮಯ ಬಾಗಿಲುಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.
1) ಅನಂತ ಪದ್ಮನಾಭ ದೇವಸ್ಥಾನ

ಕೇರಳದ ತಿರುವನಂತಪುರಂನಲ್ಲಿ ಇರುವ “ಅನಂತ ಪದ್ಮನಾಥ ದೇವಸ್ಥಾನದಲ್ಲಿ” 6 ನಿಗೂಡ ಬಾಗಿಲುಗಳಿದ್ದು ಅದನ್ನು ತೆರೆಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿರಲಿಲ್ಲ. 6 ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಸ್ಥಾನವನ್ನು ರಾಜ ಮನೆತನ ನೋಡಿಕೊಳ್ಳುತ್ತಿದ್ದು ಈ ದೇವಸ್ಥಾನದ ಒಳಗೆ ಹಿಂದೂ ಸಂಪ್ರದಾಯದ ಪ್ರಕಾರ ಬಟ್ಟೆ ತೊಟ್ಟವರಿಗೆ ಮಾತ್ರ ಪ್ರವೇಶವಿದೆ. ಆ 6 ನಿಗೂಡ ಬಾಗಿಲುಗಳನ್ನು ತೆರೆಯಲು 2011 ರಲ್ಲಿ ಸುಪ್ರೀಂ ಕೋರ್ಟ್ ಆಜ್ಞೆ ನೀಡಿತ್ತು. ಆದರೆ ಆರರಲ್ಲಿ ಐದು ಬಾಗಿಲುಗಳನ್ನು ತೆರೆಯಲು ಮಾತ್ರ ಸಾಧ್ಯವಾಗಿದ್ದು ಇನ್ನೊಂದು ಬಾಗಿಲನ್ನು ತೆರೆಯಲು ಸಾಧ್ಯವಾಗಿಲ್ಲ. ಐದು ಬಾಗಿಲುಗಳನ್ನು ತೆರೆದಾಗ 1 ಟ್ರಿಲಿಯನ್ ಡಾಲರ್ ಬೆಲೆಬಾಳುವಷ್ಟು ವಜ್ರ, ಬಂಗಾರ , ಬೆಳ್ಳಿ ಸಿಕ್ಕಿದ್ದು ಇದರಿಂದ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವಸ್ಥಾನ ಇದಾಗಿದೆ. ತೆರೆಯದೆ ಉಳಿದಿರುವ ಬಾಗಿಲಿಗೆ “ವಾಲ್ಟ್ ಬಿ” ಎಂದು ಹೆಸರಿಟ್ಟಿದ್ದು ಅದನ್ನು ತೆರೆಯಲು ಗರುಡ ಮಂತ್ರ ಜಪಿಸಿ ನಾನಾ ಹೋಮಗಳನ್ನು ಮಾಡಬೇಕಿದೆ. ಆದರೆ ಆ ಮಂತ್ರವನ್ನು ಅರಿತ ಯಾವೊಬ್ಬ ಸ್ವಾಮಿಗಳು ಕೂಡ ಜೀವಂತವಾಗಿಲ್ಲ. ಅಕಸ್ಮಾತ್ ಮನುಷ್ಯನ ತಂತ್ರಜ್ಞಾನ ಬಳಸಿ ತೆರೆಯಲು ಪ್ರಯತ್ನ ಪಟ್ಟರೆ ಸಂಪೂರ್ಣ ದೇಶಕ್ಕೆ ದೊಡ್ಡ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಬಾಗಿಲನ್ನು ತೆರೆಯಲು ಪ್ರಯತ್ನ ಪಟ್ಟ ಸ್ವಾಮೀಜಿಗಳು ಹೇಳಿರುವರು. ಆದ್ದರಿಂದ ಈ ಬಾಗಿಲನ್ನು ತೆರೆಯದೆ ಹಾಗೆಯೇ ಬಿಡಲಾಗಿದೆ.
2) ಫೇರ್ಮ್ಯಾನ್ ಬನ್ಫ್ ಸ್ಪ್ರಿಂಗ್ಸ್ ಹೋಟೆಲ್ – Fairmont Banff Springs Hotel

ಕೆನೆಡಾ ದೇಶದಲ್ಲಿರುವ ಈ ಹೋಟೆಲ್ ನಲ್ಲಿ ಒಂದು ಕೋಣೆ ಇತ್ತು. ಅದರ ಸಂಖ್ಯೆ “873”.ಇದನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದಕ್ಕೆ ಕಾರಣ ಅದರ ಒಳಗೆ ಭೂತವಿದೆ ಎಂದು. 130 ವರ್ಷಗಳ ಇತಿಹಾಸ ಹೊಂದಿರುವ ಈ ಹೋಟೆಲ್ ನಲ್ಲಿ 1920 ರಂದು ಒಂದು ಘಟನೆ ನಡೆದಿತ್ತು. ಈ ಹೋಟೆಲ್ಲಿನಲ್ಲಿ ಮದುವೆ ಆಗಲೆಂದು ತನ್ನ ಹುಡುಗನ ಜೊತೆಗೆ ಬಂದಿದ್ದ ಒಂದು ಹುಡುಗಿಯು ಆಕಸ್ಮಿಕವಾಗಿ ಮೆಟ್ಟಿಲುಗಳನ್ನು ಇಳಿಯುವ ವೇಳೆಯಲ್ಲಿ ಜಾರಿ ಬಿದ್ದು ಸತ್ತು ಹೋಗಿದ್ದಳು. ಅವಳು “873” ಸಂಖ್ಯೆಯ ಕೋಣೆಯಲ್ಲಿ ತಂಗಿದ್ದಳು. ಅಂದಿನಿಂದ ಆ ಕೋಣೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಆರಂಭವಾಯಿತು. ಈ ಕೋಣೆಯ ಒಳಗೆ ತಂಗಲು ಬಂದಿದ್ದ ಅದೆಷ್ಟೋ ಜನರು ಜೀವಂತವಾಗಿ ಹೊರ ಹೋಗುತ್ತಿರಲಿಲ್ಲ. ಕೋಣೆಯ ಗೋಡೆಗಳ ಮೇಲೆ ರಕ್ತದ ಗುರುತುಗಳು ಕಾಣುತ್ತಿದ್ದವು. ಇದರಿಂದ ಈ ಕೋಣೆಯನ್ನು ಸಂಪೂರ್ಣವಾಗಿ ಮುಚ್ಚಲು ಹೋಟೆಲ್ ಮಾಲೀಕನು ತೀರ್ಮಾನಿಸಿದ. ಅದಕ್ಕಾಗಿ ಈ ಕೋಣೆಯನ್ನು ಮುಚ್ಚಿದ್ದು ಇದುವರೆಗೂ ಮರಳಿ ತೆರೆದಿಲ್ಲ.
3) ತಾಜ್ ಮಹಲ್ – Taj Mahal

ಪ್ರಪಂಚದಲ್ಲಿರುವ ಅದ್ಬುತಗಳಲ್ಲಿ ಒಂದಾಗಿರುವ “ತಾಜ್ ಮಹಲ್” ನೋಡಲು ಬಲು ಸುಂದರವಾಗಿದೆ ಎಂದು ನಮಗೆಲ್ಲ ಗೊತ್ತಿರುವ ವಿಚಾರ. ತನ್ನ ಮೂರನೆಯ ಹೆಂಡತಿಯಾದ “ಮಮ್ತಾಜ್” ಗಾಗಿ ಶಾಜಾನ್ ಇದನ್ನು ನಿರ್ಮಿಸಿದ್ದು ಇದನ್ನು ನಿರ್ಮಾಣ ಮಾಡಲು ಬರೋಬ್ಬರಿ 22 ವರ್ಷಗಳು ಬೇಕಾಗಿತ್ತು. ಇದರ ಒಳಗೆ ಸಂಪೂರ್ಣವಾಗಿ ಇಟ್ಟಿಗೆ ಇಟ್ಟು ಮುಚ್ಚಿರುವ ಬಾಗಿಲುಗಳಿದ್ದು ಅದರ ಹಿಂದೆ ಏನಿದೆ ಎನ್ನುವ ವಿಚಾರವನ್ನು ಮಾತ್ರ ಇದುವರೆಗು ಯಾರೂ ಪತ್ತೆ ಹಚ್ಚಿಲ್ಲ. ಭಾರತ ಸರ್ಕಾರವು ಕೂಡ ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಬೇಡವೆಂದು ಈ ವಿಷಯವನ್ನು ಗುಟ್ಟಾಗಿ ಇಟ್ಟಿದೆ. ಕೆಲವರು ಹೇಳುವ ಪ್ರಕಾರ ಈ ಬಾಗಿಲುಗಳ ಹಿಂದೆ ಸತ್ತಿರುವ ಮಮ್ತಾಜ್ ಸಮಾಧಿಯಿದೆ ಎಂದು ನಂಬಿದ್ದಾರೆ. ಇನ್ನು ಕೆಲವರು ಈ ಸ್ಥಳದಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು ಅದು ಯಾರಿಗೂ ತಿಳಿಯಬಾರದು ಎಂದು ಅದನ್ನು ಸಂಪೂರ್ಣವಾಗಿ ಈ ರೀತಿ ಮುಚ್ಚಲಾಗಿದೆ ಎಂದು ನಂಬಿದ್ದಾರೆ. ಅದೇನೇ ಹೇಳಿ ಇದರ ಹಿಂದಿರುವ ರಹಸ್ಯವನ್ನು ಪತ್ತೆ ಹಚ್ಚಲು ಮಾತ್ರ ಇಲ್ಲಿಯವರೆಗು ಸಾಧ್ಯವಾಗಿಲ್ಲ.
4) ಕಿನ್ ಶಿ ಹುಯಂಗ್ ಸಮಾಧಿ – Qin Shi Huang tomb

ಚೀನಾದ ಮೊಟ್ಟ ಮೊದಲ ಚಕ್ರವರ್ತಿಯಾದ “ಕಿನ್ ಶಿ ಹುಯಂಗ್” ಸಮಾಧಿಯ ಹಿಂದೆ ಕಂಡು ಹಿಡಿಯಲು ಸಾಧ್ಯವಾಗದ ರಹಸ್ಯ ಅಡಗಿದೆ. ಬರೋಬ್ಬರಿ 2200 ವರ್ಷಗಳ ಹಿಂದೆ ಚೀನಾವನ್ನು ಆಳುತ್ತಿದ್ದ ಈ ಚಕ್ರವರ್ತಿಯು ತಾನು ಸತ್ತ ಮೇಲೆ ತನ್ನ ಸಮಾಧಿ ಹೇಗಿರಬೇಕು ಎಂದು ಮೊದಲೇ ತೀರ್ಮಾನಿಸಿದ್ದನಂತೆ. ಈತನ ಸಮಾದಿಯನ್ನು ನಿರ್ಮಿಸಲು ಬರೋಬ್ಬರಿ 38 ವರ್ಷಗಳು ಬೇಕಾಯಿತು. ಇದರ ಬಗ್ಗೆ ಸಂಪೂರ್ಣ ಮಾಹಿತಿಯು “ರೆಕಾರ್ಡ್ಸ್ ಆಫ್ ದಿ ಗ್ರ್ಯಾಂಡ್ ಹಿಸ್ಟೋರಿಯನ್” ಎನ್ನುವ ಪುಸ್ತಕದಲ್ಲಿದೆ. ಈ ಸಮಾದಿಯ ಒಳಗೆ ತಾನು ಆಳುತ್ತಿದ್ದ ಸಂಪೂರ್ಣ ರಾಜ್ಯವನ್ನೇ ಮರುನಿರ್ಮಾಣ ಮಾಡಿದ್ದು ತಾನು ಸತ್ತ ಮೇಲೆ ತನ್ನ ಜೊತೆಗೆ ತನ್ನ ಸಾಮ್ರಾಜ್ಯ ಹಾಗು ಅಲ್ಲಿರುವ ಪ್ರತಿ ಒಬ್ಬ ವ್ಯಕ್ತಿಯು ಕೂಡ ತನ್ನ ಸಮಾದಿಯ ಒಳಗೆ ಇರಬೇಕು ಎಂದು ಸಾಯುವ ಮುನ್ನವೇ ಈ ಚಕ್ರವರ್ತಿ ಆಜ್ಞೆ ಮಾಡಿದ್ದನಂತೆ. ಅದರಂತೆಯೇ ಈ ಸಮಾದಿಯ ಒಳಗೆ ಹುಡುಕುತ್ತಾ ಹೋದಂತೆಲ್ಲ ಒಬ್ಬೊಬ್ಬರ ಹೆಣಗಳು ಸಿಗುತ್ತಲೇ ಇವೆ. ಈ ಸಮಾದಿಯ ಮೇಲೆ ಮರಗಳು ಬೆಳೆದುಕೊಂಡಿದ್ದು ದೊಡ್ಡ ಪರ್ವತವಾಗಿ ಬದಲಾಗಿದೆ. 1974 ರಲ್ಲಿ ಒಬ್ಬ ರೈತನು ತನ್ನ ಹೊಲಕ್ಕೆ ನೀರು ಬೇಕೆಂದು ಈ ಪರ್ವತದ ಹತ್ತಿರ ಭಾವಿ ತೋಡುತ್ತಿರುವಾಗ ಆಕಸ್ಮಿಕವಾಗಿ ಈ ಬೃಹತ್ ಸಮಾಧಿ ಸಿಕ್ಕಿತು. ಅಂದಿನಿಂದ ಇಲ್ಲಿಯವರೆಗೂ ಚೀನಾದ ಅನೇಕ ಪುರಾತತ್ವಶಾಸ್ತ್ರಜ್ಞರು ಇದರ ಬಗ್ಗೆ ಅಧ್ಯಯನ ಮಾಡುತ್ತಲೇ ಇರುವರು ಆದರೆ ಇಲ್ಲಿಯವರೆಗೂ ಆ ಚಕ್ರವರ್ತಿ ಇರುವ ಪ್ರಮುಖ ಸಮಾದಿಯ ಕೋಣೆಯ ಬಾಗಿಲ ಹತ್ತಿರ ಹೋಗಲು ಸಾಧ್ಯವಾಗಿಲ್ಲ. ಆ ಸಮಾಧಿಯ ಬಾಗಿಲಿನ ಹತ್ತಿರ ಹೋದರು ಕೂಡ ಅದನ್ನು ತೆರೆಯಲು ನಮ್ಮ ಭೂಮಿಯಲ್ಲಿ ಯಾವ ತಂತ್ರಜ್ಞಾನವು ಇಲ್ಲ ಆದ್ದರಿಂದ ಅದನ್ನು ತೆರೆಯಲು ಕಷ್ಟ ಪಟ್ಟು ಅನಾಹುತ ಸೃಷ್ಟಿಸಿಕೊಳ್ಳುವ ಬದಲು ಸುಮ್ಮನಿರುವುದು ಒಳ್ಳೆಯದು ಎಂದು ಚೀನಾ ಸರ್ಕಾರ ನಿರ್ಧರಿಸಿದೆ. ಅಕಸ್ಮಾತ್ ಆ ಚಕ್ರವರ್ತಿ ಇರುವ ಸಮಾಧಿಯ ಕೋಣೆಯ ಬಾಗಿಲನ್ನು ತೆರೆದರೆ ಸಂಪೂರ್ಣ ವಿಶ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೆಲವರು ನಂಬಿದ್ದಾರೆ.
5) ಸ್ಪಿಂಕ್ಸ್ ಆಫ್ ಗಿಜ– Great sphinx of giza
ಈಜಿಪ್ಟ್ ದೇಶದಲ್ಲಿ ಇರುವ ಪಿರಾಮಿಡ್ ಗಳು ಪ್ರಪಂಚದ ಅದ್ಬುತಗಳಲ್ಲಿ ಒಂದಾಗಿವೆ.ಇವುಗಳನ್ನು ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನರು ಹೋಗುತ್ತಾರೆ. ಈ ಬೃಹತ್ ಪಿರಾಮಿಡ್ ಗಳನ್ನು ನಿರ್ಮಿಸಲು ಆಗಿನ ಕಾಲದಲ್ಲಿ ಮನುಷ್ಯರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದು ಕೆಲವರು ನಂಬಿದ್ದರೆ ಇನ್ನೂ ಕೆಲವರು ಇದನ್ನು ಅನ್ಯ ಗ್ರಹದ ಜೀವಿಗಳು ನಿರ್ಮಿಸಿವೆ ಎಂದು ನಂಬಿದ್ದಾರೆ. ಇನ್ನು ಈ ಪಿರಾಮಿಡ್ ಗಳ ಮುಂದೆ ಒಂದು ಬೃಹತ್ ಪ್ರತಿಮೆಯಿದ್ದು ಅದು ನೋಡಲು ಸಿಂಹದ ದೇಹ ಹಾಗು ಮನುಷ್ಯನ ಮುಖವನ್ನು ಹೊಂದಿದೆ. ಅದರ ಹೆಸರು “ಸ್ಪಿಂಕ್ಸ್”. ಈ ಪ್ರತಿಮೆಯ ಒಳಗೆ ಕೆಲವು ರಹಸ್ಯಮಯ ಬಾಗಿಲುಗಳಿದ್ದು ಅವುಗಳನ್ನು ತೆರೆಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಮನುಷ್ಯನ ಬಳಿ ಇರುವ ತಂತ್ರಜ್ಞಾನವನ್ನು ಬಳಸಿ ಈ ಬಾಗಿಲುಗಳನ್ನು ತೆರೆಯಲು ಇದುವರೆಗೂ ಸಾಧ್ಯವಾಗಿಲ್ಲ. ಕೆಲವರು ಹೇಳುವ ಪ್ರಕಾರ ಈ ಬಾಗಿಲುಗಳ ಹಿಂದೆ ಮತ್ತೊಂದು ಬ್ರಹ್ಮಾಂಡಕ್ಕೆ ಹೋಗುವ ದಾರಿಯಿದೆಯಂತೆ.ಆದರೆ ಇದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.
ಇದೇ ತರಹ ಪ್ರಪಂಚದಲ್ಲಿ ಅನೇಕ ರಹಸ್ಯಗಳಿದ್ದು ಅವುಗಳ ಬಗ್ಗೆ ಪತ್ತೆ ಹಚ್ಚುತ್ತ ಹೋದಂತೆಲ್ಲ ನಿಗೂಡತೆಯು ಹೆಚ್ಚಾಗುತ್ತ ಹೋಗುತ್ತದೆ. ನಾವು ತಂತ್ರಜ್ಞಾನದಲ್ಲಿ ಅದೆಷ್ಟೇ ಮುಂದುವರೆದರು ಕೂಡ ಈ ತರಹದ ಕೆಲವು ರಹಸ್ಯಗಳನ್ನು ಭೇದಿಸುವಲ್ಲಿ ನಾವು ವಿಪಲರಾಗಿದ್ದೇವೆ. ಇದರಿಂದ ನಮಗೆ ತಿಳಿಯುವುದೇನೆಂದರೆ ಕೆಲವು ರಹಸ್ಯಗಳನ್ನು ಭೇದಿಸಲು ಹರಸಾಹಸ ಪಡುವ ಬದಲು ಸುಮ್ಮನಿರುವುದೇ ಒಳಿತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.
Follow Karunadu Today for more Interesting Facts & Stories.
Click here to Join Our Whatsapp Group