ಒಂದೂರಿನಲ್ಲಿ ಒಂದು ಬಡ ಕುಟುಂಬವಿತ್ತು , ಆ ಕುಟುಂಬದಲ್ಲಿ ತಂದೆ , ತಾಯಿ ಮತ್ತು ಮೂರು ಜನ ಮಕ್ಕಳು ಇದ್ದರು. ತಂದೆ ಯಾವಾಗಲೂ ಅನಾರೋಗ್ಯದಿಂದ ಇರುತ್ತಿದ್ದನು, ಹೀಗೆ ಅನಾರೋಗ್ಯದಿಂದ ಆತ ಒಂದು ದಿನ ಸಾಯುತ್ತಾನೆ, ಇದನ್ನು ನೋಡಿ ಅಕ್ಕಪಕ್ಕದವರು 2 ದಿನಗಳವರೆಗೆ ಊಟ ಕೊಡುತ್ತಾರೆ, 2 ದಿನದ ನಂತರ ಇವರು ಮತ್ತೆ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ.

ತಾಯಿ ಮೂರ್ನಾಲ್ಕು ದಿನಗಳವರೆಗೆ ಎಲ್ಲಿಂದಲೋ ಸುಧಾರಿಸಿ ಮಕ್ಕಳಿಗೆ ಊಟ ನೀಡುತ್ತಾಳೆ. ಆದರೆ ಇದು ಬಹಳ ದಿನಗಳವರೆಗೆ ನಡೆಯಲಿಲ್ಲ, ಕೊನೆಗೆ ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 9 ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ.

ಒಂದು ದಿನ 6 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ.” ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ ” ಎಂದು. ಆಗ ತಾಯಿ ದುಃಖದಲ್ಲಿ ಯಾಕೆ ಹೀಗೆ ಕೇಳುತ್ತಿರುವೆ ಎಂದು ಆ ಮಗುವನ್ನು ಕೇಳುತ್ತಾಳೆ, ಆ 6 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿ ತಾಯಿಗೆ ತಡೆಯಲಾರದಷ್ಟು ದುಃಖ ಬರುತ್ತದೆ.

ಆ ಮಗುವಿನ ಉತ್ತರ ಹೀಗಿರುತ್ತದೆ “ಅಮ್ಮಾ, ಅಪ್ಪ ಸತ್ತಾಗ ಅಕ್ಕ ಪಕ್ಕದ ಮನೆಯವರು ನಮಗೆ ಎರಡು ದಿನ ಊಟ ನೀಡಿದ್ದರು ಹಾಗೆಯೇ ಅಣ್ಣನು ಸತ್ತರೆ ನಮಗೆ ಮತ್ತೆ ಊಟ ಸಿಗುತ್ತದೆ ಆಗ ನಾವೆಲ್ಲರೂ ಹೊಟ್ಟೆ ತುಂಬಾ ಊಟ ಮಾಡಬಹುದು ಅಲ್ಲವೆ” ಎಂದಳು. ಅಷ್ಟರ ಮಟ್ಟಿಗೆ ಆ ಮಗು ಹಸಿವಿನಿಂದ ಬಳಲಿತ್ತು.

ಸ್ನೇಹಿತರೆ ನೀವು ನಿತ್ಯ ಹಾಳು ಮಾಡುವ ಅಥವಾ ಹೊರಗೆ ಎಸೆಯುವ, ಹೋಟೆಲ್ ನಲ್ಲಿ ಹೆಚ್ಚಾಗಿ ಆರ್ಡರ್ ಮಾಡಿ ಉಳಿಸುವ ಆಹಾರದ ಮೇಲೆ ಇವರ ಹಕ್ಕು ಇರುತ್ತದೆ. ದಯವಿಟ್ಟು ಆಹಾರವನ್ನು ಹಾಳು ಮಾಡುವ ಅಥವಾ ಉಳಿಸಿ ಬಿಸಾಡುವ ಮುನ್ನ ಇದನ್ನು ಒಂದು ಬಾರಿ ಯೋಚಿಸಿ. ನೀವು ಆಹಾರಕ್ಕೆ ಬೆಲೆ ನೀಡಿ ತಿನ್ನುತ್ತಿರಬಹುದು, ಹಣ ನಿಮ್ಮದೇ ಹೊರತು ಉತ್ಪನ್ನಗಳು ನಿಮ್ಮದಲ್ಲ, ಯಾರೇ ಎಷ್ಟೇ ಶ್ರೀಮಂತರಾಗಲಿ, ಕಡು ಬಡವರಾಗಲಿ ಹಸಿದಾಗ ಅನ್ನವನ್ನೇ ತಿನ್ನುತ್ತಾರೆ ಹೊರತು ಹಣವನ್ನಲ್ಲಾ, ಯೋಚಿಸಿ ಬದಲಾಗಿ.

For more Stories follow Karunadu Today

Click here to Join Our Whatsapp Group