ಮಹಾಭಾರತ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖಿತವಾದ ಶ್ರೀ ಕೃಷ್ಣನೊಂದಿಗೆ ನಂಟು ಹೊಂದಿದ್ದ ವಾಸುಕಿ ಎಂಬ ದೈತ್ಯ ಹಾವು ಕಲ್ಪನೆಯಲ್ಲ. ದೈತ್ಯಾಕಾರದ ವಾಸುಕಿ ಎಂಬ ಹಾವು ಭಾರತದಲ್ಲಿತ್ತು ಎಂಬುದಕ್ಕೆ ವಿಜ್ಞಾನಿಗಳು ಅದರ ಕುರುವುಗಳನ್ನ ಪತ್ತೆ ಹಚ್ಚಿದ್ದಾರೆ. ಪಶ್ಚಿಮ ಭಾರತದಲ್ಲಿ ಈ ಹಾವು ಇತ್ತು ಅನ್ನೋದಕ್ಕೆ ಅದರ ಪಳೆಯುಳಿಕೆಗಳನ್ನು ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಪತ್ತೆ ಮಾಡಿದ್ದಾರೆ.

ಅಚ್ಚರಿಯ ವಿಷಯ ಏನೆಂದರೆ ಸುಮಾರು 4.7 ಕೋಟಿ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಸಿಕ್ಕಿರುವಂತಹ ಭಾರತದಲ್ಲಿ ಅತಿ ದೊಡ್ಡ ಹಾವಿನ ಪಳೆಯುಳಿಕೆ ಇದಾಗಿದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಈ ಹಾವು ಸರಿಸುಮಾರು 1000 ಕೆಜಿ ತೂಕ ಹಾಗೂ 40ರಿಂದ 50 ಆಡಿ ಅಷ್ಟು ದೊಡ್ಡದಾಗಿರಬಹುದು ಎಂದು ರೂರ್ಕಿ ಐಐಟಿ ಪ್ರಾಧ್ಯಾಪಕರಾದ ದೇಬಜಿತ್‌ ದತ್ತ ಸೈಂಟಿಫಿಕ್‌ ರಿಪೋರ್ಟ್‌ ನಿಯತಕಾಲಿಕೆಗೆ ಬರೆದಿರುವ ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.

ಸರಿಸುಮಾರು 40ರಿಂದ 50 ಅಡಿಗಳಷ್ಟು ದೊಡ್ಡದಾಗಿರುವ ಈ ಹಾವಿಗೆ ದೇಬಜಿತ್‌ ದತ್ತಾ ಪುರಾಣಗಳಲ್ಲಿ ಹಾವಿನ ರಾಜ ಎಂದೇ ನಂಬಲಾಗಿರುವ ವಾಸುಕಿ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಇಲ್ಲಿಯವರೆಗೆ ಸಿಕ್ಕಂತಹ ಅತಿ ದೊಡ್ಡ ಹಾವುಗಳ ಪೈಕಿ ಕೊಲಂಬಿಯಾದಲ್ಲಿ ಇದ್ದಂತಹ ಹಾವು ಸರಿಸುಮಾರು 6 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದು 43 ಅಡಿಗಳಷ್ಟು ದೊಡ್ಡದಾಗಿದ್ದು ಇದನ್ನು ಟಿಟನೋಬೋವಾ ಎಂದು ಕರೆಯಲ್ಪಡುತ್ತಿದ್ದರು ಹಾಗೂ ಹಾವುಗಳ ಪೈಕಿ ಇದೆ ಅತ್ಯಂತ ದೊಡ್ಡ ಹಾವು ಎಂದು ಪರಿಗಣಿಸಲಾಗಿತ್ತು. 

Follow Karunadu Today for more Spiritual Information’s like this

Click here to Join Our Whatsapp Group