ಶ್ರೀಕೃಷ್ಣದೇವರಾಯ ಸರ್ವಧರ್ಮ ರಕ್ಷಕ. ಎಲ್ಲ ‘ಧರ್ಮ, ಜಾತಿ, ಭಾಷೆಗಳನ್ನು ಗೌರವಿಸುತ್ತಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ಕಡಿರಾಂಪುರದಲ್ಲಿ ದರ್ಗಾ ಮತ್ತು ಸಮಾಧಿಗಳಿವೆ. ಈತನ ಸೈನ್ಯದಲ್ಲಿ ಮುಸ್ಲಿಮರ ಒಂದು ತುಕಡಿಯೇ ಇತ್ತಂತೆ | ಸಾವಿರಾರು ಕುದುರೆ ಸವಾರರು ಮುಸ್ಲಿಮರೇ ಆಗಿದ್ದರು. ಅವರು ಯಾವುದೇ ಪೂರ್ವಗ್ರಹ ವಿಲ್ಲದೆ ಶ್ರೀಕೃಷ್ಣದೇವರಾಯನ ಜೊತೆಗೂಡಿ, ಆತನ ಪರ ಹಾಗೂ ಮುಸ್ಲಿಂ ರಾಜರ ವಿರುದ್ಧ ಹೋರಾಡಿದ್ದರು. ಶ್ರೀಕೃಷ್ಣದೇವರಾಯ ಬೀದರ್‌ನ ಅಮೀರ್ ಬಾರಿದ್ ಜೊತೆ ಉತ್ತಮ ಸ್ನೇಹ-ಸಂಬಂಧ ಹೊಂದಿದ್ದ ಅವನು ಹಿಂದೂ ಸಂಸ್ಕೃತಿಯ ರಕ್ಷಕನಾಗಿದ್ದ ಎಂಬುದು ನಿಜ, ಆದರೆ ಅವನು ಬೇರಾವ ಧರ್ಮವನ್ನು ವಿರೋಧಿಸುತ್ತಿರಲಿಲ್ಲ. ವಿಜಯನಗರ ದಲ್ಲಿ ಮುಸ್ಲಿಂರಿಗೆಂದೇ ಪ್ರತ್ಯೇಕ ವಾಸದ ಮನೆಗಳಿದ್ದವು. ಬೇರೆ ಮುಸ್ಲಿಂ ರಾಜ್ಯಗಳಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಅವನು ಆಶ್ರಯ ನೀಡಿದ್ದ. ವಿಜಯನಗರದಲ್ಲಿ ಮಸೀದಿ ಗಳನ್ನು ಕಟ್ಟಲು ಅವನ ಕಾಲದಲ್ಲಿ ಅವಕಾಶ ನೀಡಲಾಗಿತ್ತುಇಷ್ಟಾದರೂ ತನ್ನ ಆಡಳಿತ ಕಾಲದಲ್ಲಿ ಅವನು ಕೆಲವು ಮುಸ್ಲಿಂ ರಾಜ್ಯಗಳ ವಿರುದ್ಧ ಯುದ್ಧ ಮಾಡಲೇಬೇಕಾಯಿತು. ಅದಕ್ಕೆ ಕಾರಣ ವೈಯಕ್ತಿಕ ಭಿನ್ನಾಭಿಪ್ರಾಯ ಎಂದು ಇತಿಹಾಸಕಾರರು ತಿಳಿಸುತ್ತಾರೆ.

ಕಳಿಂಗ ದಂಡಯಾತ್ರೆ ಮುಗಿದ ನಂತರ ಕೆಲವು ವರ್ಷಗಳ ಕಾಲ ಶ್ರೀಕೃಷ್ಣದೇವರಾಯ ಸಾಹಿತ್ಯ, ಸಂಗೀತ ಮುಂತಾದ ಹವ್ಯಾಸಗಳಲ್ಲಿ ತೊಡಗಿದ್ದ. ಈ ಸಮಯದಲ್ಲಿ ರಾಯಚೂರು, ದೋಆಬ್ ಗಳನ್ನು ಪುನು ಖಾನನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಅವನ ಮನಸ್ಸು ಬಯಸುತ್ತಿತ್ತು. ಅದಕ್ಕಾಗಿ ಅವನು ಹೋರಾಟಕ್ಕೆ ಸಜ್ಜಾದ. ಶ್ರೀಕೃಷ್ಣದೇವರಾಯ ಕಳಿಂಗ ಯುದ್ಧದಲ್ಲಿ ತೊಡಗಿದ್ದಾಗ ಬಿಜಾಪುರದ ಇಸ್ಮಾಯಿಲ್ ತೊಡಗಿದರೊಳಗೆ ನುಗ್ಗಿ, ರಾಯಚೂರು ಮತ್ತು ಮುದ್ದಲ್ ಆಕ್ರಮಿಸಿದ್ದ ಶ್ರೀಕೃಷ್ಣದೇವರಾಯ ಮತ್ತು ಇಸ್ಮಾಯಿಲ್ ಆದಿಲ್ ಖಾನರ ನಡುವೆ ಇದ್ದ ಹಗೆತನಕ್ಕೆ ಒಂದು ಬಲವಾದ ಕಾರಣವೂ ಇತ್ತು. ಗೋವೆಯಲ್ಲಿ ಉತ್ತಮ ಜಾತಿ ಕುದುರೆಗಳನ್ನು ಕೊಳ್ಳಲು ರಾಯನು ತನ್ನ ಅಧಿಕಾರಿ ಸಿದ್ದಿ ಮೆರ್ಕ‌್ರನನ್ನು ಹಣಕೊಟ್ಟು ಕಳುಹಿಸಿದ್ದನು. ಆದರೆ ಮೆರ್ಕರ್ ಹಣಸಹಿತ ಆದಿಲ್ ಖಾನನ ರಾಜ್ಯಕ್ಕೆ ಪಲಾಯನಮಾಡಿದ್ದನು. ಹಣಸಮೇತ ರಾಜದ್ರೋಹಿಯನ್ನು ಒಪ್ಪಿಸಬೇಕೆಂದು ಶ್ರೀಕೃಷ್ಣದೇವರಾಯ ಆದಿಲ್ ಖಾನನನ್ನು ಒತ್ತಾಯಪಡಿಸಿದ್ದನು. ಆದರೆ ಖಾನ್‌ನಿಂದ ರಾಯನಿಗೆ ಯಾವುದೇ ರೀತಿಯ ಸಹಕಾರ ಸಿಗಲಿಲ್ಲ. ಇದರಿಂದ ಸಿಟ್ಟುಗೊಂಡ ರಾಯ ಖಾನ್ ವಿರುದ್ಧ ಸಿಡಿದು ನಿಂತ. ಆದಿಲ್ ಖಾನನ ವಿಶ್ವಾಸಘಾತಕತನದ ಬಗ್ಗೆ ಇತರ ಸುಲ್ತಾನರಿಗೆ ತಿಳಿವಳಿಕೆ ಕೊಟ್ಟ ರಾಯನು ತನ್ನ ದಂಡಯಾತ್ರೆಯನ್ನು ಕೈಗೊಂಡನು.

ವಿಜಯನಗರದ ಭಾರಿ ಸೈನ್ಯವು ಮುನ್ನಡೆದು ದೋಆಬ್ ಅನ್ನು ಪ್ರವೇಶಿಸಿ ರಾಯಚೂರಿನ ಸಮೀಪದಲ್ಲಿ ಬೀಡುಬಿಟ್ಟಿತು. ಅಲ್ಲಿ ಶ್ರೀಕೃಷ್ಣದೇವರಾಯನು ಮುಂದಿನ ಯುದ್ಧ ತಂತ್ರಗಳ ಬಗ್ಗೆ ಯೋಜನೆ ಹಾಕಿಕೊಂಡನು. ರಾಯಚೂರು ದುರ್ಗವು ಎರಡು ನದಿಗಳ ಸಂಗಮ ಸ್ಥಳದಲ್ಲಿದ್ದು ಎತ್ತರದ ಕೋಟೆಗೋಡೆಗಳಿಂದಲೂ ಉತ್ತರ ಮತ್ತು ದಕ್ಷಿಣದಲ್ಲಿ ಹೆಬ್ಬಂಡೆಗಳಿಂದಲೂ ರಕ್ಷಣೆ ಪಡೆದಿತ್ತು. ಗೋಪುರಗಳನ್ನು ಹೊಂದಿದ್ದ ಮತ್ತು ಅಗಾಧವಾಗಿ ಕಟ್ಟಲ್ಪಟ್ಟಿದ್ದ ಮೂರು ಸುತ್ತಿನ ಕೋಟೆಗಳನ್ನು ಆ ದುರ್ಗವು ಪಡೆದಿತ್ತು. ಮರ್ಗದ ಒಳಭಾಗದಲ್ಲಿ ಅನೇಕ ಸರೋವರ ಮತ್ತು ಬಾವಿಗಳಿದ್ದವು. ಶ್ರೀಕೃಷ್ಣದೇವರಾಯ ಇವೆಲ್ಲದರ ಬಗ್ಗೆ ಮಾಹಿತಿ ಪಡೆದಿದ್ದ ರಾಯನ ಸೇನೆಗಳು ಧೈರ್ಯವಾಗಿ ನುಗ್ಗಿ ದುರ್ಗಕ್ಕೆ ಮುತ್ತಿಗೆ ಹಾಕಿದವು. ಎಂದಿನಂತೆ ಶ್ರೀಕೃಷ್ಣದೇವರಾಯನು ಮುತ್ತಿಗೆಯನ್ನು ಮುಂದುವರೆಸಲು ಒಂದು ಬಲಿಷ್ಠ ಪಡೆಯನ್ನು ಹಿಂದೆ ಬಿಟ್ಟು ಶತ್ರುವಿನತ್ತ ಮುನ್ನಡೆದನು. ಭೀಕರ ಯುದ್ಧ ನಡೆಯಿತು. ಎರಡೂ ಕಡೆ ಸಾಕಷ್ಟು ಸಾವು-ನೋವು ಸಂಭವಿಸಿತು. ಸಮಯ ಕಳೆದಂತೆ ಶ್ರೀಕೃಷ್ಣದೇವರಾಯನ ಕಡೆ ವಿಜಯಲಕ್ಷ್ಮಿ ನಗೆಬೀರತೊಡಗಿದಳು. ಆದಿಲ್ ಖಾನ್ ಆನೆಯೊಂದನ್ನೇರಿ ತಲೆತಪ್ಪಿಸಿಕೊಂಡನು. ರಾಯನ ವಿಜಯವು ಸಂಪೂರ್ಣಗೊಂಡಿತ್ತು. ಶತ್ರುಗಳ ಪಾಳ್ಯದಲ್ಲಿದ್ದ ಕುದುರೆ ಫಿರಂಗಿಗಳನ್ನು ಶ್ರೀಕೃಷ್ಣದೇವರಾಯ ವಶಪಡಿಸಿಕೊಂಡನು. ಇದನ್ನು ‘ಗೊಟ್ಟೂರು ಯುದ್ಧ’ ಎಂದು ಕರೆಯಲಾಗಿದೆ.

ಈ ಯುದ್ಧದಲ್ಲಿ ಜಯಗಳಿಸಿದ ಶ್ರೀಕೃಷ್ಣದೇವರಾಯ ನಂತರ ರಾಯಚೂರು ಮುತ್ತಿಗೆಯನ್ನು ತೀವ್ರಗೊಳಿಸಿದನು. ವಿಜಯನಗರ ಸೈನ್ಯವು ದುರ್ಗದ ಅತ್ಯಂತ ಹೊರಗಿನ ಕೋಟೆ ಗೋಡೆಯನ್ನು ಹಾರೆಗಳಿಂದಲೂ, ಪಿಕಾಸಿಗಳಿಂದಲೂ ಛಿದ್ರಗೊಳಿಸಿ ಅಂತಿಮವಾಗಿ ಅದರ ಪ್ರವೇಶದ್ವಾರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ದುರ್ಗದ ಜನರು ಶರಣಾದರು. ಶ್ರೀಕೃಷ್ಣದೇವರಾಯನು ಅವರಿಗೆ ಕ್ಷಮಾದಾನ ನೀಡಿ ಅಲ್ಲಿ ಶಾಂತಿ ಸ್ಥಾಪಿಸಿದನು.

ಇತ್ತ ಅದಿಲ್ ಖಾನನು ರಾಯಚೂರನ್ನು ಮರಳಿ ಪಡೆಯಲು ಮತ್ತು ಗೊಬ್ಬರು ಕದನದಲ್ಲಿ ಆತನಿಗಾದ ನಷ್ಟಗಳನ್ನು ತುಂಬಿಕೊಳ್ಳಲು ಸಂಧಾನಕ್ಕೆ ಪ್ರಯತ್ನಿಸಿದನು. ಹಿಂದೂ ಮತ್ತು ಮುಸ್ಲಿಂ ರಾಜರು ಪರಸ್ಪರ ಭೇಟಿಯಾಗಿ ಇರುವ ಸಮಸ್ಯೆಗಳನ್ನೆಲ್ಲ ಕುಳಿತು ಚರ್ಚಿಸಿ ತೀಮಾನಕ್ಕೆ ಬರಬೇಕೆಂದು ಉಭಯತ್ರರಿಂದಲೂ ಒಪ್ಪಿಗೆಯಾಯಿತು. ಆದರೆ ವಿಜಯನಗರ ಪ್ರವೇಶಿಸಲು ಆದಿಲ್ ಖಾನನಿಗೆ ಭಯ. ಅಂತಿಮವಾಗಿ ಶ್ರೀಕೃಷ್ಣದೇವರಾಯನಿಗೆ ಹೆದರಿದ ಖಾನ್ ತಲೆ ತಪ್ಪಿಸಿಕೊಂಡನು. ಆ ಬಳಿಕ ಶ್ರೀಕೃಷ್ಣದೇವರಾಯನು ಗುಲ್ಬರ್ಗಕ್ಕೆ ಸಾಗಿ ಆ ಪಟ್ಟಣವನ್ನು ವಶಪಡಿಸಿಕೊಂಡನು. ಹೀಗೆ ಸಾಳುವ ನರಸಿಂಹನ ಅಪೇಕ್ಷೆಯನ್ನು ಅವನು ಪೂರ್ಣಗೊಳಿಸಿದನು.

Follow Karunadu Today for more Spiritual Stories.

Click here to Join Our Whatsapp Group