“ಸ್ಟೀಫನ್ ಹಾಕಿಂಗ್”, ಜಗತ್ತು ಕಂಡ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ತಮ್ಮ ಸಂಪೂರ್ಣ ಜೀವನವನ್ನು ವಿಜ್ಞಾನದ ಅನೇಕ ಸಂಶೋದನೆಗಳಿಗೆಂದೆ ಮೀಸಲಿಟ್ಟಿದ್ದ ಇವರು ಅನೇಕ ನಿಗೂಡ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಬಾಹ್ಯಾಕಾಶದಲ್ಲಿರುವ ಬ್ಲ್ಯಾಕ್ ಹೋಲ್ ಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ 40 ವರ್ಷಗಳ ಕಾಲ ಶ್ರಮ ಪಟ್ಟಿದ್ದರು. ಅಂಗವೈಪಲ್ಯ ಇವರನ್ನು ಕಾಡುತ್ತಿದ್ದರು ಕೂಡ ಅದನ್ನು ಲೆಕ್ಕಿಸದೆ ಜಗತ್ತಿಗೆ ಸಹಾಯವಾಗುವ ಹಾಗೆ ಅನೇಕ ಸಂಶೋಧನೆಗಳನ್ನು ಮಾಡಿದ್ದರು. ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಜಗತ್ತಿನಲ್ಲಿ ಅನೇಕ ಬದಲಾವಣೆಯಾಗುತ್ತಿವೆ. ಕೆಲವು ಉತ್ತಮ ಬದಲಾವಣೆಯಾದರೆ ಇನ್ನು ಕೆಲವು ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುವ ಬದಲಾವಣೆಯಾಗಿವೆ. ಆ ಕೆಟ್ಟ ಬದಲಾವಣೆಯಲ್ಲಿ ಕೆಲವು ಜಗತ್ತನ್ನು ಮುಂದಿನ ದಿನಗಳಲ್ಲಿ ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವವು ಆಗಿವೆ. ಉದಾಹರಣೆಗೆ ಜಗತ್ತಿನ ಅನೇಕ ದೇಶಗಳು “ಪರಮಾಣು ಬಾಂಬ್” ಗಳನ್ನು ಹೊಂದಿರುವುದು, ಮರಗಳನ್ನು ಕಡಿದುಹಾಕುವುದರಿಂದ ಜಾಗತಿಕ ತಾಪಮಾನ ಏರುತ್ತಿರುವುದು, ಮನುಷ್ಯಕುಲಕ್ಕೆ ಮಾರಕವಾಗುವ ತಂತ್ರಜ್ಞಾನ ಬರುತ್ತಿರುವುದು, ಹೀಗೆ ಹಲವಾರು ಬದಲಾವಣೆಗಳಿವೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಾಕಿಂಗ್ ಅವರು ಭೂಮಿಯ ಅಂತ್ಯವು ಹೇಗೆ ಆಗುತ್ತದೆ ಎಂದು “ನವೆಂಬರ್ 14, 2016” ರಂದು ಲಂಡನ್ ನಲ್ಲಿ ವಿದ್ಯಾರ್ಥಿಗಳ ಜೊತೆಗೆ ನಡೆದ ಸಂವಾದದಲ್ಲಿ “ಭವಿಷ್ಯವಾಣಿ” ನುಡಿದಿದ್ದಾರೆ. ಅವರ ಪ್ರಕಾರ ಮನುಷ್ಯನಿಗೆ ಇನ್ನು ಉಳಿದಿರುವುದು 1000 ವರ್ಷಗಳು ಮಾತ್ರ. ಅದಾದ ನಂತರ ಭೂಮಿಯ ಮೇಲೆ ಮನುಷ್ಯನು ಇರುವುದಿಲ್ಲ. ಇದಕ್ಕೆ ಕಾರಣಗಳನ್ನು ಕೂಡ ಅವರು ನೀಡಿದ್ದು ಇಂದು ನಿಮಗೆ ಆ ಕಾರಣಗಳನ್ನು ತಿಳಿಸುತ್ತೇವೆ. ಅವರು ನುಡಿದಿರುವ ಭವಿಷ್ಯವಾಣಿ ಕೇಳುತ್ತಿದ್ದರೆ ಅದು ನೂರಕ್ಕೆ ನೂರರಷ್ಟು ಸತ್ಯ ಎಂದು ಅನ್ನಿಸುತ್ತದೆ. ಬನ್ನಿ ಇಂದು ನಿಮಗೆ ಹಾಕಿಂಗ್ ಅವರ ಆ ಭವಿಷ್ಯವಾಣಿ ತಿಳಿಸಿಕೊಡುತ್ತೇವೆ.

1) ಪರಮಾಣು ಯುದ್ದ

ಹಾಕಿಂಗ್ ಅವರ ಮೊದಲ ಭವಿಷ್ಯವಾಣಿ “ಪರಮಾಣು ಯುದ್ದ”. ಜಗತ್ತಿನ ಅನೇಕ ದೇಶಗಳ ಬಳಿ “ಪರಮಾಣು ಬಾಂಬ್” ಗಳು ಇದ್ದು ಇಂದು ಅವುಗಳನ್ನು ತಮ್ಮ ರಕ್ಷಣೆಗೆ ಎಂದು ಅನೇಕ ದೇಶಗಳು ಬಳಸುತ್ತಿವೆ. ಆದರೆ ಯಾವ ದಿನ ಆ ಅಪಾಯಕಾರಿ “ಪರಮಾಣು ಬಾಂಬ್” ಗಳನ್ನು “ದಾಳಿ” ಮಾಡಲೆಂದು ಎಲ್ಲಾ ದೇಶಗಳು ಬಳಸಲು ಶುರು ಮಾಡುತ್ತವೆ ಅಂದೆ ಈ ಭೂಮಿಯ ಸರ್ವನಾಶ ಖಚಿತ ಎಂದು ಹಾಕಿಂಗ್ ನುಡಿದಿದ್ದಾರೆ.

2) ಜಾಗತಿಕ ತಾಪಮಾನ ಏರಿಕೆ

ಹಾಕಿಂಗ್ ಅವರ ಎರಡನೆಯ ಭವಿಷ್ಯವಾಣಿ “ಜಾಗತಿಕ ತಾಪಮಾನ ಏರಿಕೆ”. ಅಬಿವೃದ್ದಿ ಎನ್ನುವ ಹೆಸರಿನಲ್ಲಿ ಮನುಷ್ಯನು ಪ್ರಕೃತಿಯನ್ನು ನಾಶ ಮಾಡುತ್ತಿರುವುದು ಜಗತ್ತಿನ್ನೆಲ್ಲೆಡೆ ನಡೆಯುತ್ತಿದೆ. ಒಂದು ಮರವನ್ನು ಬೆಳೆಸಲು 15 ವರ್ಷಗಳೇ ಬೇಕು ಎಂದು ತಿಳಿದಿದ್ದರು ಕೂಡ ಮನುಷ್ಯನು ಅದನ್ನು ಲೆಕ್ಕಿಸದೆ ಪ್ರಕೃತಿಯನ್ನು ನಾಶ ಮಾಡುವಲ್ಲಿ ನಿರತನಾಗಿದ್ದಾನೆ. ಇದು ಹೀಗೆ ಮುಂದುವರೆದರೆ ಭೂಮಿಯ ತಾಪಮಾನ ಹೆಚ್ಚಾಗಿ ಅಂಟಾರ್ಟಿಕಾದಲ್ಲಿ ಇರುವ ಮಂಜು ಗಡ್ಡೆಗಳು ಕರಗಿ ಸಮುದ್ರದ ನೀರಿನ ಮಟ್ಟ ಏರುತ್ತದೆ. ನಂತರ ಮನುಷ್ಯನಿಗೆ ವಾಸಿಸಲು ಜಾಗವಿಲ್ಲದೆ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳಬೇಕಾಗುತ್ತದೆ ಎಂದು ಹಾಕಿಂಗ್ ಅವರು ಎಚ್ಚರಿಸಿದ್ದಾರೆ. ವಿಪರ್ಯಾಸವೆಂದರೆ ಇದರ ಬಗ್ಗೆ ಮನುಷ್ಯನು ಹೆಚ್ಚು ತಲೆ ಕೆಡಿಸಿಕೊಳ್ಳದೆ ಪ್ರಕೃತಿಯನ್ನು ವಿನಾಶ ಮಾಡುವಲ್ಲಿ ನಿರತನಾಗಿದ್ದಾನೆ.

3) ಅನ್ಯಗ್ರಹದ ಜೀವಿಗಳಿಂದ ದಾಳಿ

ಹಾಕಿಂಗ್ ಅವರ ಮೂರನೆಯ ಭವಿಷ್ಯವಾಣಿ “ಅನ್ಯಗ್ರಹದ ಜೀವಿಗಳಿಂದ ದಾಳಿ”. ಹೌದು ಇದು ನಿಮಗೆ ಅಚ್ಚರಿ ಎನಿಸಿದರು ಕೂಡ ಸತ್ಯ. ಈ ನಮ್ಮ ಬ್ರಹ್ಮಾಂಡವು ಅದೆಷ್ಟು ದೊಡ್ಡದಿದೆ ಎಂದು ಊಹಿಸಲು ಕೂಡ ಸಾಡ್ಯವಿಲ್ಲ. ನಮ್ಮ ಆಕಾಶಗಂಗೆಯ ಹಾಗೆ ಬಿಲಿಯನ್ ಆಕಾಶಗಂಗೆಗಳು ಈ ಬ್ರಹ್ಮಾಂಡದಲ್ಲಿವೆ. ಇಷ್ಟು ದೊಡ್ಡ ಬ್ರಹ್ಮಾಂಡದಲ್ಲಿ ಯಾವುದಾದರು ಒಂದು ಮೂಲೆಯಲ್ಲಿ ನಮ್ಮ ಹಾಗೆ ಜೀವಿಗಳು ಇರುವರೆ ಎಂದು ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಪತ್ತೆ ಹಚ್ಚುತ್ತಿದ್ದಾರೆ. ಹಾಕಿಂಗ್ ಅವರು ಹೇಳುವ ಪ್ರಕಾರ ಹೇಗೆ ನಾವು ಬೇರೆ ಗ್ರಹದಲ್ಲಿ ಜೀವಿಗಳನ್ನು ಹುಡುಕುತ್ತಿದ್ದೇವೆ ಹಾಗೆಯೇ ಅನ್ಯ ಗ್ರಹದ ಜೀವಿಗಳು ಕೂಡ ಮತ್ತೊಂದು ಗ್ರಹದಲ್ಲಿ ಅವುಗಳ ಹಾಗೆ ಜೀವಿಗಳು ಇರುವವೇ ಎಂದು ಹುಡುಕುತ್ತಿರಬಹುದು. ಒಂದಲ್ಲ ಒಂದು ದಿನ ಅವುಗಳು ನಮ್ಮ ಭೂಮಿಯನ್ನು ತಲುಪಲಿದ್ದು ಅವುಗಳು ಸ್ನೇಹ ಜೀವಿಗಳಾಗಿದ್ದಾರೆ ನಮಗೆ ಒಳಿತು ಅಕಸ್ಮಾತ್ ಅವುಗಳು ನಮಗಿಂತ ಬುದ್ದಿಶಾಲಿ’ಯಾಗಿದ್ದು ನಮ್ಮ ಮೇಲೆ ದಬ್ಬಾಳಿಕೆ ನಡೆಸುವ ಉದ್ದೇಶದಿಂದ ದಾಳಿ ಮಾಡತೊಡಗಿದರೆ ಕಂಡಿತ ನಮಗೆ ಉಳಿಗಾಲವಿಲ್ಲ. ಇನ್ನೂ ಕೆಲವೇ ವರ್ಷಗಳಲ್ಲಿ ಇದು ನಡೆಯುತ್ತದೆ ಎಂದು ಹಾಕಿಂಗ್ ಅವರು ಹೇಳಿದ್ದಾರೆ.

4) ಆರ್ಟಿಫೀಸಿಯಲ್ ತಂತ್ರಜ್ಞಾನ

ಹಾಕಿಂಗ್ ಅವರ ನಾಲ್ಕನೆಯ ಭವಿಷ್ಯವಾಣಿ “Artificial Intelligence”. ಮನುಷ್ಯನು ತನಗೆ ಸಹಾಯವಾಗಲೆಂದು “AI ರೋಬೋಟ್” ಗಳನ್ನು ಸಿದ್ದಗೊಳಿಸಿದ್ದಾನೆ.ಆದರೆ ಹಾಕಿಂಗ್ ಅವರು ಹೇಳುವ ಪ್ರಕಾರ ಮುಂದಿನ 100 ವರ್ಷಗಳಲ್ಲಿ ಮನುಷ್ಯನು ಮಾಡುತ್ತಿರುವ ಕೆಲಸಗಳನ್ನು ರೋಬೋಟ್ಗಳೆ ಮಾಡಲಿದ್ದು ಇದರಿಂದ ಭೂಮಿಯ ಮೇಲೆ ಮನುಷ್ಯ ಮತ್ತು ರೋಬೋಟ್ ಗಳ ಮದ್ಯೆ ದೊಡ್ಡ ಕದನವೆ ನಡೆಯಲಿದೆ. ತಾನು ಸೃಷ್ಟಿ ಮಾಡಿದ ರೋಬೋಟ್ ಗಳೆ ತನ್ನ ಎದುರಿಗೆ ನಿಲ್ಲಲಿದ್ದು ಇದರಿಂದ ಮನುಷ್ಯನು ತನ್ನ ಅಂತ್ಯವನ್ನು ಕಾಣಲಿದ್ದಾನೆ ಎಂದು ಹಾಕಿಂಗ್ ಅವರು ಭವಿಷ್ಯವಾಣಿ ನುಡಿದಿದ್ದಾರೆ. ಆದ್ದರಿಂದ “AI robot” ಗಳ ಬಳಕೆಯನ್ನು ಮಿತಿಯಾಗಿ ಇಟ್ಟರೆ ಒಳ್ಳೆಯದು ಎಂದು ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದಾರೆ.

5) ಜೀನ್ ಎಡಿಟಿಂಗ್

ಹಾಕಿಂಗ್ ಅವರ ಐದನೆಯ ಭವಿಷ್ಯವಾಣಿ “ಜೀನ್ ಎಡಿಟಿಂಗ್”. ಇತ್ತೀಚೆಗೆ ಚೀನಾ ದೇಶದಲ್ಲಿ ಮನುಷ್ಯನ ದೇಹದ ಒಳಗೆ ಇರುವ “ಜೀನ್ಸ್” ಗಳನ್ನು ಮಾರ್ಪಾಡಿಸಿ ತಮಗೆ ಬೇಕಾದ ತರಹದ ಮಗುವನ್ನು ಹುಟ್ಟಿಸಿದ್ದಾರೆ. ಇದೆ ತರಹ ಹಲವಾರು ದೇಶದ ವಿಜ್ಞಾನಿಗಳು genetic engineering ಹೆಸರಲ್ಲಿ ತಮಗೆ ಬೇಕಾದ ತರಹದ ಮನುಷ್ಯರನ್ನು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ಮನುಷ್ಯರಲ್ಲದೆ ಪ್ರಾಣಿಗಳ ಮೇಲೆ ಕೂಡ ತಮ್ಮ ಪ್ರಯೋಗದ ಮೂಲಕ gene editing ಮಾಡಿ ತಮಗಿಷ್ಟ ಬಂದಂತಹ ಪ್ರಾಣಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದು ಮುಂದೊಂದು ದಿನ ಅಪಾಯದ ಗಡಿ ಮುಟ್ಟಲಿದ್ದು ಅನೇಕ ದೇಶಗಳು ಇದನ್ನು ಯುದ್ದಕ್ಕು ಬಳಸಕೊಳ್ಳಬಹುದು. ಇದರಿಂದ ಮನುಷ್ಯನ ಸರ್ವನಾಶ ಕಂಡಿತ ಎಂದು ಹಾಕಿಂಗ್ ಅವರು ಭವಿಷ್ಯವಾಣಿ ನುಡಿದು ಎಚ್ಚರಿಕೆ ನೀಡಿದ್ದಾರೆ.

6) ಕ್ಷುದ್ರಗ್ರಹದ ದಾಳಿ

ಹಾಕಿಂಗ್ ಅವರ ಆರನೆಯ ಭವಿಷ್ಯವಾಣಿ “ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸುವುದು”. ನಮಗೆಲ್ಲ ತಿಳಿದ ಹಾಗೆ ಭೂಮಿಯ ಮೇಲೆ ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಡೈನೋಸಾರ್ ಗಳು ಮತ್ತು ಅನೇಕ ಜೀವಿಗಳು ವಾಸವಾಗಿದ್ದವು. ಆದರೆ ಒಮ್ಮೆಲೇ ಆ ಎಲ್ಲ ಜೀವಿಗಳು ಭೂಮಿಯಿಂದ ನಶಿಸಿ ಹೋದವು. ಇದಕ್ಕೆ ಕಾರಣ ಭೂಮಿಗೆ ಬಂದು ಅಪ್ಪಳಿಸಿದ ಬೃಹತ್ “ಕ್ಷುದ್ರ ಗ್ರಹ”. ಹಾಕಿಂಗ್ ಅವರ ಪ್ರಕಾರ ಬಾಹ್ಯಾಕಾಶದಲ್ಲಿ ಭೂಮಿಯನ್ನೇ ನಾಶ ಮಾಡುವ ಕೆಲವು ಕ್ಷುದ್ರ ಗ್ರಹಗಳು ತೇಲುತ್ತಿದ್ದು ಮುಂದೊಂದು ದಿನ ಖಂಡಿತ ಯಾವುದಾದರು ಒಂದು ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸಲಿದೆ. ಇದರಿಂದ ಭೂಮಿಯ ಕೆಲವು ಭಾಗ ಅಥವ ಸಂಪೂರ್ಣ ಭೂಮಿಯೇ ನಾಶವಾಗಬಹುದು ಎಂದು ಅವರು ಭವಿಷ್ಯವಾಣಿ ನುಡಿದ್ದಾರೆ.

Follow Karunadu Today for more Interesting Facts & Stories. 

Click here to Join Our Whatsapp Group