
ಮಹಾಮಹಿಮ ಪುರುಷರ ಹುಟ್ಟು ದೈವಸಂಭೂತವಾದದು
ಅಂತಹ ವ್ಯಕ್ತಿಗಳು ದೇವರ ಕೃಪೆಯಿಂದ ಭೂಮಿಗೆ ಬಂದವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಂಡು ಬಂದರು ತಮ್ಮದೇ ಆದ ವಿಶಿಷ್ಟ ರೂಪದಲ್ಲಿ ಜನತೆಯ ಮೂಡನಂಬಿಕೆ ಕಂದಾಚಾರಗಳನ್ನು ಕಿತ್ತೊಗೆದು ಜನರಲ್ಲಿ ಭಕ್ತಿ-ಭಾವನೆಯನ್ನು ಉಂಟು ಮಾಡಿ ಮಾನವ ಜನ್ಮ 84 ಕೋಟಿ ಜೀವರಾಶಿಗಳನ್ನು ಕಂಡುಬರುವಂತಹ ಸನ್ಮಾರ್ಗದಡೆಗೆ ಸಾಗಲು ಪವಾಡ-ಪುರುಷರ, ಮಹಾಮಹಿಮ ಪುರುಷರನ್ನು ಭಗವಂತ ಭೂಮಿಗೆ ಕಳುಹಿಸುತ್ತಾನೆ ಎಂದು ಪ್ರತೀತಿಯಿದೆ.
ಅಂತಹ ಪರಿಸರದಲ್ಲಿ ಕ್ರಿ.ಶ. 1422-24ರಲ್ಲಿ ವಿಜಯನಗರ ವಿಜಯ ದೇವರಾಯ ಮತ್ತು ಪ್ರೌಢದೇವರಾಯನ ನಂತರ ವಿಜಯನಗರದ 6ನೇ ದೊರೆಯಾಗಿ ಕ್ರಿ.ಶ. 1335 ರಲ್ಲಿ ಶ್ರೀದೇವರಾಯ ಆಳ್ವಿಕೆಗೆ ಮಾಡುತ್ತಿದ್ದ ಕಾಲದಲ್ಲಿ ಶ್ರೀ ಮಧ್ವಾಚಾರ್ಯರ ಉಗಮವಾಯಿತು. ಶ್ರೀ ಮಧ್ವಾಚಾರ್ಯರ ಅವರ ಮಾತಿನಂತೆ ರಾಜನು ಬೇಟೆಯಾಡುತ್ತ ದಟ್ಟ ಕಾಡಿನಲ್ಲಿ ಒಂದು ನಗರವನ್ನು ನಿರ್ಮಿಸಲು ಆಜ್ಞೆ ಮಾಡಿದಂತೆ ಶುಭ ಮಹೂರ್ತದಲ್ಲಿ ನಗರವನ್ನು ವಿಜಯ ದೇವರಾಯನು ನಿರ್ಮಿಸಿದನು.
ಹೀಗೆ ಪವಾಡ ಸದೃಶ್ಯದಂತೆ ಒಂದು ಉತ್ತಮ ನಗರವಾಗಿ ಮಾರ್ಪಟ್ಟು ವಿಜಯನಗರ ಮಹಾ ಸಾಮ್ರಾಜ್ಯ ಸ್ಥಾಪನೆಗೊಂಡಿತು. ವಿಜಯನಗರದ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠತ್ತಮ ಆಡಳಿತದಲ್ಲಿ ಮುನ್ನಡೆಸಿಕೊಂಡನು ಬಂದ ವಿಜಯನಗರ ದೇವರಾಯನ ಆಡಳಿತದಿಂದ ಉತ್ತರಾಧಿಕಾರಿ ಪಡೆದುಕೊಂಡ ಶ್ರೀ ಕೃಷ್ಣದೇವರಾಯನ ಆಳ್ವಿಕೆ ಒಳಪಟ್ಟಿತು.
ಈತನ ಆಡಳಿತದಲ್ಲಿ ಸಂಸ್ಕೃತಿ -ಕಲೆ-ಸಾಹಿತ್ಯ ಕ್ಷೇತ್ರಗಳು ಅಭಿವೃದ್ಧಿಗೊಂಡವು. ಅದು ಅಲ್ಲದೆ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿತು. ಅಂತಹ ದಿಟ್ಟ ನೇರ ಆಡಳಿತದ ವೈಖರಿ ಕೃಷ್ಣದೇವರಾಯನದಾಗಿತ್ತು. ಪ್ರಜೆಗಳನ್ನು ಬಹುವಾಗಿ ಪ್ರೀತಿಸುತ್ತಿದ್ದ ವಿಜಯನಗರ ಸಾಮ್ರಾಜ್ಯದ ಆಡಳಿತದ ವಜ್ರ ವೈಡೂರ್ಯಗಳನ್ನು ಮತ್ತು ರತ್ನಗಳನ್ನು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಸಂಪತ್ಭರಿತ ಆಡಳಿತವಾಗಿತ್ತು. ಪ್ರಜೆಗಳು ಸುಖ-ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದರು.

ಹೀಗೆ 15ನೇ ಶತಮಾನಗಳ ಹಿಂದಿನಿಂದಲೂ ರಾಜರಾಗಿ, ಯೋಧರಾಗಿ, ಪಾಳೇಗಾರರಾಗಿ ವಿಜಯನಗರ ಸಾಮ್ರಾಜ್ಯದ ಆಧಾರ ಸ್ತಂಭಗಳಾಗಿದ್ದರು. ಅಂತಹ ಸಮೃದ್ಧಿಯ ಸ್ಥಿತಿಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರ ಸ್ವಾಮಿನಿಷ್ಠರಾಗಿ ಪ್ರಾಮಾಣಿಕತೆಯಿಂದ ತಮ್ಮ ನಿಷ್ಠೆಯನ್ನು ವಿಜಯನಗರ ಸಾಮ್ರಾಜ್ಯಕ್ಕೆ ತೋರುತ್ತಿದ್ದರು. ಇಂತಹ ಪರಿಸರದಲ್ಲಿ ಬೀರಪ್ಪನಾಯಕನು ಒಬ್ಬನಾಗಿದ್ದನು. ಪಾಳೆಗಾರನಾಗಿ ಬೀರಪ್ಪ ನಾಯಕ ಕೃಷ್ಣದೇವರಾಯನ ಮಂಡಲೀಕನಾಗಿ ಧಾರವಾಡ ಹಾಗೂ ಶಿಗ್ಗಾವಿ ಪ್ರದೇಶಗಳ ನಾಯಕತ್ವವನ್ನು ವಹಿಸಿಕೊಂಡು ಬಹು ಗ್ರಾಮಗಳನ್ನು ಉಸ್ತುವಾರಿ ವಹಿಸಿಕೊಂಡು ವ್ಯಾಪಾರ -ವಹಿವಾಟು ಮಾಡುತ್ತಿದ್ದನು. ರೈತರಿಂದ ಕರ ವಸೂಲಿ ಇತ್ಯಾದಿ ವ್ಯವಹಾರಗಳನ್ನು ಚಾಚು ತಪ್ಪದೇ ನಿರ್ವಹಿಸುತ್ತಿದ್ದ.
ತನ್ನ ವ್ಯಾಪ್ತಿಯಲ್ಲಿ ದೊಡ್ಡ ಸೈನ್ಯವನ್ನು ಕಟ್ಟಿಕೊಂಡಿದ್ದರು. ಅತ್ಯಂತ ಸೌಂದರ್ಯ ಸಮೃದ್ಧಿಯ ದ್ಯೋತಕ ನಗರ ಬಂಕಾಪುರ ಬಳಿಯ ಗ್ರಾಮದಲ್ಲಿ ವಾಸಿಸಿ ಆಳ್ವಿಕೆ ನಿರ್ವಹಿಸುತ್ತಿದ್ದ ಶ್ರೀ ಕೃಷ್ಣದೇವರಾಯನ ಬಲಗೈ ಬಂಟನಾಗಿ ಅಪಾರ ಪ್ರಮಾಣದ ಆನೆ ಕುದುರೆ ಪದಾತಿ ಯೋಧರನ್ನು ಒಳಗೊಂಡಿದ್ದು, ಅವರ ಯುದ್ಧ ಹೋರಾಟಗಳಿಗೆಲ್ಲ ನೆರವಾಗುತ್ತಾ ಮಹಾದಂಡ ನಾಯಕನಾಗಿ ಸ್ವಾಮಿ ನಿಷ್ಠೆ ಪ್ರಜಾನಿಷ್ಠೆಗಳೊಂದಿಗೆ ವಿಜಯನಗರ ಅರಸರ ಪ್ರೀತಿ ವಿಶ್ವಾಸ ಗೌರವವನ್ನು ಪಡೆದುಕೊಂಡು ತನ್ನ ಪ್ರದೇಶವನ್ನಾ ಳುತ್ತಿದ್ದನು.

ಭೂಲೋಕದಲ್ಲಿ ಶ್ರೀ ರಾಮಾನುಜಾಚಾರ್ಯರ ಧರ್ಮ ಮತ್ತು ತತ್ವಗಳನ್ನು ಬಾಡ ಗ್ರಾಮದ ಬೀರಪ್ಪ ದಂಡನಾಯಕ
ಮತ್ತು ಮಹಾಸತಿ ಬಚ್ಚಮ್ಮ ರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೈಷ್ಣವ ತತ್ವ ಪ್ರಚಾರಕರಾದ ಶ್ರೀ ತಿರುಮಲೆ ತಾತಾಚಾರ್ಯ ಗುರುಗಳ ಮಾರ್ಗದರ್ಶನವನ್ನು ಪಡೆಯುತ್ತಾ ತಿರುಪತಿ ತಿಮ್ಮಪ್ಪನ ಭಕ್ತರಾಗಿ ಕಾಲ ನಂತರ ಬೀರಪ್ಪನಾಯಕ ಮತ್ತು ಸಾದ್ವಿ ಬಚ್ಚಮ್ಮ ರವರ ಅಂತರಂಗ ಬಹಿರಂಗ ಸುದ್ದಿಗೆ ಒಲಿದ ತಿರುಪತಿ ತಿಮ್ಮಪ್ಪ. ತಿಮ್ಮಪ್ಪನ ಆಶೀರ್ವಾದದಿಂದ ಗಂಡು ಮಗುವಿಗೆ ಜನ್ಮ ನೀಡಿದರು. 1508ರಲ್ಲಿ ಬಾಡ ಗ್ರಾಮದಲ್ಲಿ ಕನಕದಾಸರ ಜನನವಾಯಿತು. ಬೀರಪ್ಪ ದಂಡ ನಾಯಕ ಮತ್ತು ಮಹಾಸಾಬಿ ಬಚ್ಚಮ್ಮ ದೇವಿ ಉದರದಲ್ಲಿ ವಿಧಿ ಪೂರ್ವಕವಾಗಿ ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಉದಯಿಸಿದ ಶಿಶುವಿಗೆ ತಿಮ್ಮಪ್ಪನಂತೆ ನಾಮಕರಣ ಮಾಡಿ ಗುರುಗಳ ಸಾಧು ಸಜ್ಜನರ ಆಶೀರ್ವಾದದೊಂದಿಗೆ ಸುಮಂಗಲಿಯರು ಶಿಶುವನ್ನು ಎತ್ತಿ ಆಡಿಸಿ ಮುದ್ದಾಡಿ ಜೋಗುಳ ಹಾಡಿ ಹಾರೈಸಿದರು
ಪ್ರಜಾ ರಕ್ಷಣೆಯಲ್ಲಿ ನಿಜವಾದ ಸೇವೆಯನ್ನು ಗೈಯುವ ಪಾಳೆಗಾರ ಬೀರಪ್ಪನಾಯಕನ ಉಸ್ತುವಾರಿಯಲ್ಲಿ ಉತ್ತಮ ಪರಿಸರದಲ್ಲಿ ತಿಮ್ಮಪ್ಪ ಬಾಲಕ ತನ್ನ ತಂದೆಯಂತೆ ವಿವಿಧ ಕಲೆಗಳಲ್ಲಿ ತಾನು ಆಸಕ್ತನಾಗಿ ಅಭ್ಯಾಸಿಸಿದ.
ಎಲ್ಲಾ ಮಕ್ಕಳಂತೆ ಸಾಮಾನ್ಯರಂತೆ ಆಟಗಳನ್ನು ಆಡದೇ ದೈವ ಭಕ್ತ ಗುರುಹಿರಿಯರಲ್ಲಿ ಭಕ್ತಿ ,ವಿನಯಶೀಲತೆ, ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದನು. ತಿಮ್ಮಪ್ಪನ ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಬಾಲದಲ್ಲಿಯೇ ತಂದೆಯಂತೆ ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡನು. ತಂದೆಯಂತೆ ಮಗ ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ನಾಣ್ಣುಡಿಯಂತೆ ಮಹಾದಂಡ ನಾಯಕ ಬೀರಪ್ಪನು ತನ್ನ ಪುತ್ರನಿಗೆ ಆಟ ಪಾಠಗಳೊಂದಿಗೆ ಬೆಳೆಸಿದನು. ತಿಮ್ಮಪ್ಪನು ತಂದೆಯ ತರಾನೇ ಗುರುಕುಲದಲ್ಲಿ ಪಾಠ ಪ್ರವಚನಗಳು ಸಂಗೀತ ಸಾಹಿತ್ಯ ತತ್ವ ಜ್ಞಾನ ವ್ಯಾಕರಣ ಛಂದಸ್ಸು ಉಪನಿಷತ್ತುಗಳ ಇತರೆ ವೇದಸಾರಗಳ ಅಧ್ಯಯನ ನಂತರ ಕತ್ತಿವರಸೆ, ಕೋಲುವರಸೆ ಇತರೆ ವಿದ್ಯೆಗಳ ನಿರಂತರ ಅಭ್ಯಾಸ ಜೊತೆಗೆ ತಿಮ್ಮಪ್ಪನಿಗೆ ಕಾಡಿನಲ್ಲಿ ಬೇಟೆಯಾಡುವುದು ಸಾಹಸವೆನಿಸಿತ್ತು.
ಇವರ 15ರ ಪ್ರಾಯದಲ್ಲಿ ಜನರ ಪ್ರೀತಿ ವಿಶ್ವಾಸ ವಾತ್ಸಲ್ಯ ಕುರು ಹಿರಿಯರ ಆಶೀರ್ವಾದಗಳೊಂದಿಗೆ ತಂದೆಯ ತಾಯಿಯರ ದೈವಭಕ್ತಿ ಒಲವು ಗೆಲುವುಗಳೊಂದಿಗೆ ಉತ್ತಮವಾದ ಗುಣಲಕ್ಷಣಗಳನ್ನು ಹೊಂದಿದ್ದು; ಬೀರಪ್ಪ ದಂಡ ನಾಯಕನು ತನ್ನ ಏಕಮೇವ ಪುತ್ರ ತಿಮ್ಮಪ್ಪನನ್ನು ಮತ್ತೆ ಧರ್ಮ ಪತ್ನಿ ಬಚ್ಚಮ್ಮನನ್ನು ಬಿಟ್ಟು ಇಹಲೋಕದ ಋಣವನ್ನು ಕಳೆದು ಪರಲೋಕದ ಕಡೆಗೆ ನಡೆದಿದ್ದ ತಮ್ಮ ನಾಯಕನನ್ನು ಕಳೆದುಕೊಂಡ ಹಳ್ಳಿಯ ಜನರು ದುಃಖದ ಮಡುವಿನಲ್ಲಿ ಮುಳುಗಿದರು.
Follow Karunadu Today for more Spiritual Stories.
Click here to Join Our Whatsapp Group