ನಮಗೆಲ್ಲ ತಿಳಿದ ಹಾಗೆ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ಮೇಲೆ ರೋಬೋಟ್ ಗಳದ್ದೆ ಕಾರುಬಾರು ನಡೆಯಲಿದೆ. ಮನುಷ್ಯನು ಮಾಡುವ ಕೆಲಸಗಳಿಗೆ ಸಹಾಯವಾಗಲಿ ಎಂದು ನಿರ್ಮಿಸಲಾದ ಈ ರೋಬೋಟ್ ಗಳು ವರ್ಷದಿಂದ ವರ್ಷಕ್ಕೆ ಮನುಷ್ಯರು ಮಾಡುವ ಕೆಲಸವನ್ನೆ ಕಿತ್ತುಕೊಳ್ಳುತ್ತಿವೆ. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನು ಮಾಡುವ ಈ ರೋಬೋಟ್ ಗಳನ್ನು ಪ್ರತಿಯೊಂದು ಕೆಲಸಕ್ಕೂ ಬಳಸಿಕೊಳ್ಳಲಾಗುತ್ತಿದ್ದು ಮನುಷ್ಯನಿಗೆ ಸಾಕಷ್ಟು ಸಹಾಯ ಮಾಡುತ್ತಿವೆ. ಆದರೆ ಈ ರೋಬೋಟ್ ಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಇದ್ದ ರಾಜರುಗಳು ಬಳಸುತ್ತಿದ್ದರು ಎಂದು ನಿಮಗೆ ನಾನು ಹೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ ಅಲ್ಲವೆ? ಹೌದು, ಈ ರೋಬೋಟ್ ತಂತ್ರಜ್ಞಾನವನ್ನು ಪ್ರಾಚೀನ ಭಾರತದಲ್ಲಿಯೇ ಬಳಸಲಾಗುತ್ತಿತ್ತು ಎಂದು ಅನೇಕ ಧಾಖಲೆಗಳು ಹೇಳುತ್ತವೆ. ಇಂದು ನಿಮಗೆ ಪ್ರಾಚೀನ ಭಾರತದಲ್ಲಿ ಬಳಸಲಾಗುತ್ತಿದ್ದ ರೋಬೋಟ್ ಗಳ ಬಗ್ಗೆ ತಿಳಿಸಿಕೊಡುತ್ತ ಆ ರೋಬೋಟ್ ಗಳನ್ನು ಪ್ರಾಚೀನ ಭಾರತದ ರಾಜರುಗಳು ಯಾವ ಕೆಲಸಗಳಿಗೆ ಬಳಸುತ್ತಿದ್ದರು ಮತ್ತು ಅವುಗಳನ್ನು ಸೃಷ್ಟಿಸಲು ಬೇಕಾದ ತಂತ್ರಜ್ಞಾನವು ಅವರುಗಳಿಗೆ ಎಲ್ಲಿಂದ ದೊರಕಿತು ಎನ್ನುವ ಸಂಗತಿಯನ್ನು ವಿವರಿಸುತ್ತೇವೆ.

ಇಲ್ಲಿಯವರೆಗು ಸಿಕ್ಕಿರುವ ಅನೇಕ ಧಾಖಲೆಗಳನ್ನು ಪರಿಶೀಲಿಸಿದ ಮೇಲೆ ನಮಗೆ ತಿಳಿದುಬಂದ ಸಂಗತಿ ಏನೆಂದರೆ ಸಾವಿರಾರು ವರ್ಷಗಳ ಹಿಂದೆ ಈ ನಮ್ಮ ದೇಶದಲ್ಲಿ ಇದ್ದ ತಂತ್ರಜ್ಞಾನದ ಮುಂದೆ ಈಗಿರುವ ಆಧುನಿಕ ತಂತ್ರಜ್ಞಾನವು ಏನೂ ಅಲ್ಲ ಎನ್ನುವುದು. ಇದಕ್ಕೆ ಉತ್ತಮ ಉದಾಹರಣೆಯೊಂದಿಗೆ ನಿಮಗೆ ಹೇಳುವುದಾದರೆ ಮಹಾರಾಷ್ಟ್ರದ ಎಲ್ಲೋರದಲ್ಲಿರುವ ಕೈಲಾಸ ದೇವಸ್ಥಾನವಾಗಿರಬಹುದು, ದೆಹಲಿಯಲ್ಲಿರುವ ಉಕ್ಕಿನ ಕಂಬವಾಗಿರಬಹುದು(Iron pillar) ಅಥವ ಹಂಪಿಯಲ್ಲಿರುವ ಕಲ್ಲಿನ ತೇರಾಗಿರಬಹುದು. ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ದೇಶದಲ್ಲಿದ್ದು ಅವುಗಳನ್ನು ನೋಡುತ್ತಿದ್ದರೆ ಇವುಗಳನ್ನು ಮನುಷ್ಯರು ನಿರ್ಮಿಸಲು ಸಾಧ್ಯವೇ ಇಲ್ಲ ಎನ್ನುವ ರೀತಿ ಇದೆ.

ಇಂದಿನಿಂದ 1000 ವರ್ಷಗಳ ಹಿಂದಿನ ಬಗ್ಗೆ ಮಾತನಾಡುತ್ತ ಹೋದರೆ, ಅಂದರೆ ರಾಜ ಭೋಜ್ ಆಳ್ವಿಕೆ ನಡೆಸುತ್ತಿದ್ದ ಸಮಯದ ಕುರಿತು. ಈ ಮಹಾನ್ ರಾಜನ ಆಳ್ವಿಕೆಯ ಸಮಯದಲ್ಲಿ ವಿಜ್ಞಾನ ಎನ್ನುವುದನ್ನು ಸಾಕಷ್ಟು ಬಳಸಿಕೊಳ್ಳಲಾಗಿತ್ತು. ಈ ಮಹಾನ್ ರಾಜನ ಆಳ್ವಿಕೆಯ ಸಮಯದಲ್ಲಿ ಹೇಗೆ ವಿಮಾನಗಳನ್ನು ಬಳಸಲಾಗುತ್ತಿತ್ತು ಮತ್ತು ಆ ವಿಮಾನಗಳ ವಿಶೇಷತೆ ಏನಿತ್ತು ಎಂದು ತಾನೇ ಖುದ್ದಾಗಿ ಬರೆದಿರುವ “ಸಮರಾಂಗಣ್ ಸೂತ್ರದಾರ್” ಎನ್ನುವ ಪುಸ್ತಕದಲ್ಲಿ ವಿವರಿಸಲಾಗಿದೆ. ಇದೇ ತರಹ ರೋಬೋಟ್ ಗಳನ್ನು ಹೇಗೆ ಸೃಷ್ಟಿಸಬಹುದು ಮತ್ತು ಶತ್ರುಗಳಿಂದ ಕಾಪಾಡಿಕೊಳ್ಳುವಂತಹ ಅತ್ಯಾದುನಿಕ ತಂತ್ರಜ್ಞಾನ ಹೊಂದಿರುವಂತಹ ನಗರಗಳನ್ನು ಮತ್ತು ಕೋಟೆಗಳನ್ನು ಹೇಗೆ ನಿರ್ಮಾಣ ಮಾಡಬಹುದು ಎನ್ನುವುದನ್ನು ಕೂಡ ರಾಜ ಭೋಜ್ ಈ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕವನ್ನು ಓದುತ್ತ ಹೋದರೆ ಹೇಗೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬರುತ್ತದೆ.

ಅಂದಹಾಗೆ ರಾಜ ಭೋಜ್ ಗೆ ಈ ತಂತ್ರಜ್ಞಾನದ ಕುರಿತು ಹೇಗೆ ತಿಳಿದುಬಂದಿತು ಎನ್ನುವ ಪ್ರಶ್ನೆ ನಿಮಗೆ ಈಗಾಗಲೆ ಮೂಡಿರುತ್ತದೆ. ಇದಕ್ಕೆ ಉತ್ತರ ವೇದಗಳು. ಹೌದು, ವೇದಗಳ ಸಂಪೂರ್ಣ ಅಧ್ಯಯನ ಮಾಡುತ್ತ ಹೋದ ರಾಜ ಭೋಜ್ ಗೆ ಅದರಲ್ಲಿ ಅಡಗಿರುವ ಅನೇಕ ತಂತ್ರಜ್ಞಾನದ ಕುರಿತಾದ ರಹಸ್ಯಗಳನ್ನು ಪತ್ತೆ ಮಾಡಿ ಅವುಗಳನ್ನು ತನ್ನ ಸಾಮ್ರಾಜ್ಯದ ರಕ್ಷಣೆಗಾಗೆಂದು ಬಳಸಿಕೊಳ್ಳಲು ಶುರು ಮಾಡಿದ. ಕೇವಲ ಸಾಮ್ರಾಜ್ಯದ ರಕ್ಷಣೆಗೆ ಮಾತ್ರವಲ್ಲದೆ ತನ್ನ ಸಾಮ್ರಾಜ್ಯದಲ್ಲಿ ಸಂಗೀತ ವಾಧ್ಯಗಳನ್ನು ನುಡಿಸುವ ಸಲುವಾಗಿ, ಕೋಟೆಯ ರಕ್ಷಣೆಗಾಗಿ ಹಾಗು ಇನ್ನು ಅನೇಕ ಕೆಲಸಗಳಿಗಾಗಿ ರಾಜ ಭೋಜ್ ರೋಬೋಟ್ ಗಳನ್ನು ಬಳಸುತ್ತಿದ್ದ ಎಂದು “ಸಮರಾಂಗಣ್ ಸೂತ್ರದಾರ್” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕೇವಲ ರೋಬೋಟ್ ಗಳು ಮಾತ್ರವಲ್ಲದೆ ಲಘು ಮತ್ತು ಅಲಘು ಎನ್ನುವ ಎರಡು ರೀತಿಯ ವಿಮಾನಗಳ ಕುರಿತು ಕೂಡ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಲಘು ವಿಮಾನಗಳು ಪಕ್ಷಿಯ ರೀತಿ ಇದ್ದು ಇವುಗಳು ಹಾರಲು ಮರ್ಕ್ಯುರಿ ತರಹದ “ರಸ್ ರಾಜ್” ಎನ್ನುವ ಇಂಧನವನ್ನು ಬಳಸಲಾಗುತ್ತಿತ್ತು. ಇನ್ನು ಅಲಘು ವಿಮಾನವು ಗುಡಿಯ ಗೋಪುರದ ಹಾಗೆ ಇದ್ದು ಅವುಗಳು ಒಮ್ಮೆ ಆಕಾಶದ ಕಡೆಗೆ ಹಾರಿದರೆ ಸಾಕು ಸಾಕಷ್ಟು ಶಬ್ದ ಮಾಡುತ್ತಿದ್ದವಂತೆ, ಆ ಶಬ್ದವನ್ನು ಕೇಳಿ ಆನೆಗಳು ಬೆಚ್ಚಿ ಬಿದ್ದು ಓಡುತ್ತಿದ್ದವಂತೆ.

ಇದೇ ರೀತಿ ಅನೇಕ ತಂತ್ರಜ್ಞಾನದ ಕುರಿತು “ರಾಜ ಭೋಜ್” ತನ್ನ ಆಳ್ವಿಕೆಯ ಸಮಯದಲ್ಲಿ ಉಪಯೋಗಿಸುತ್ತಿದ್ದ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅದೇನೇ ಹೇಳಿ ನಮ್ಮ ವೇದಗಳಲ್ಲಿ ಈ ರೀತಿಯ ಅದೆಷ್ಟೋ ರಹಸ್ಯಗಳು ಅಡಗಿದ್ದು ಅವುಗಳನ್ನು ಭೇದಿಸಿದರೆ ರಾಜಾ ಭೋಜ್ ತರಹ ನಮ್ಮ ದೇಶವನ್ನು ತಂತ್ರಜ್ಞಾನದಲ್ಲಿ ತುಂಬಾ ಆಧುನಿಕತೆಗೆ ತೆಗೆದುಕೊಂಡು ಹೋಗಬಹುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group