
1) ನೀವು ವಿಶ್ವದ ಅತಿದೊಡ್ಡ ಗುಹೆ ಬಗ್ಗೆ ಕೇಳಿದ್ದೀರಾ? ವಿಯೆಟ್ನಾಮ್‌ನ HAN SON DOONG ಗುಹೆ ಪ್ರಪಂಚದ ಅತೀ ದೊಡ್ಡ ಮತ್ತು ಅದ್ಭುತ ಗುಹೆಯಾಗಿದೆ. ಈ ವಿಶ್ವದ ಅತಿದೊಡ್ಡ ಗುಹೆ ಸುಮಾರು 9 ಕಿಲೋಮೀಟರ್ ಉದ್ದ, 200 ಮೀಟರ್ ಅಗಲ ಮತ್ತು 150 ಮೀಟರ್ ಎತ್ತರ ಹೊಂದಿದ್ದು, ನೈಸರ್ಗಿಕ ವಿಸ್ಮಯವಾಗಿದೆ. 50 ಲಕ್ಷ ವರ್ಷಗಳಷ್ಟು ಹಳೆಯದಾದ ಈ ಗುಹೆಯೊಳಗೆ ನದಿಗಳು, ಕಾಡುಗಳು ಮತ್ತು ವಿಶಾಲವಾದ ಒಳಾಂಗಣವಿದೆ. ಇದರ ಅತಿ ದೊಡ್ಡ ವಿಸ್ತಾರಕ್ಕೆ BOEING 747 ವಿಮಾನವೂ ಹಾರಬಹುದಾದ ಗುಹೆ ಎಂಬ ಖ್ಯಾತಿ ದೊರಕಿದೆ. ಅದೆಷ್ಟು ದೊಡ್ಡದಿದೆಯೆಂದರೆ, ಎತ್ತರದ ಕಟ್ಟಡಗಳನ್ನು ಹಾಕಿದರೂ ಕಲ್ಲುಗಳಿಗೆ ತಾಕುವುದಿಲ್ಲ! ಇದು ನಿಸರ್ಗದ ಅತೀ ದೊಡ್ಡ ಅವಿಸ್ಮರಣೀಯ ಕೌತುಕ!
2) ನೀವು ಯಾವುದೇ ವಾಹನದ ಗಾಲಿಗಳನ್ನು ಗಮನಿಸಿರಬಹುದು. ಅವುಗಳು ಕಪ್ಪು ಬಣ್ಣದಲ್ಲಿಯೇ ಇರುತ್ತವೆ. ಆದರೆ ಎಂದಾದರು ಈ ಗಾಲಿಗಳೇಕೆ ಬೇರೆ ಬಣ್ಣದಲ್ಲಿ ಇರದೆ ಸದಾ ಕಪ್ಪು ಬಣ್ಣದಲ್ಲಿಯೇ ಇರುತ್ತವೆ ಎಂದು ಯೋಚಿಸಿದ್ದೀರ? ಅಕಸ್ಮಾತ್ ಆ ರೀತಿ ಯೋಚಿಸಿ ನಿಮಗೆ ಉತ್ತರ ಸಿಗದಿದ್ದರೆ ಈ ಸಂಗತಿಯಲ್ಲಿ ತಿಳಿಸುತ್ತೇನೆ ಕೇಳಿ. ನೈಸರ್ಗಿಕವಾಗಿ ರಬ್ಬರ್ ಬಿಳಿ ಬಣ್ಣದಲ್ಲಿಯೇ ಇರುತ್ತದೆ. ಆದರೆ ಗಾಲಿಗಳನ್ನು ತಯಾರಿಸುವ ವೇಳೆ ಅದರ ಶಕ್ತಿಯನ್ನು ವೃದ್ದಿಗೊಳಿಸುವ ನಿಟ್ಟಿನಲ್ಲಿ ರಬ್ಬರ್ ಜೊತೆಗೆ “carbon black” ಅನ್ನು ಮಿಶ್ರಣ ಮಾಡಲಾಗುತ್ತದೆ. ಇದೇ ಕಾರಣದಿಂದ ಗಾಲಿಗಳು ಯಾವಾಗಲು ಕಪ್ಪು ಬಣ್ಣದಲ್ಲಿ ಇರುತ್ತವೆ.
3) ನಮಗೆಲ್ಲ ತಿಳಿದ ಹಾಗೆ ಜಗತ್ತಿನ ಅತ್ಯಂತ ಪ್ರಸಿದ್ದ ಚಿತ್ರವಾದ “ಮೊನಾಲಿಸ” ಚಿತ್ರವನ್ನು ಬಿಡಿಸಿದ್ದು “Leonardo da vinci”. ಆದರೆ ಇವರ ಬಗ್ಗೆ ನಿಮಗೆ ತಿಳಿಯದ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸುತ್ತೇನೆ ಕೇಳಿ. ಇವರು ಕೇವಲ ಒಬ್ಬ ಚಿತ್ರಕಲಾಕಾರನಾಗಿರಲಿಲ್ಲ. ಅದರ ಜೊತೆಗೆ ಇವರು ಒಬ್ಬ ಸಂಗೀತಗಾರ, ವಾಸ್ತುಶಿಲ್ಪಿ, ವಿಜ್ಞಾನಿ, ಗಣಿತಶಾಸ್ತ್ರಜ್ಞ, ಎಂಜಿನೀಯರ್, ಅಂಗರಚನಾ ಭೂವಿಜ್ಞಾನಿ, ಸಸ್ಯಶಾಸ್ತ್ರಜ್ಞ ಮತ್ತು ಲೇಖಕ ಆಗಿದ್ದರು. ಹೀಗೆ ಅನೇಕ ಕ್ಷೇತ್ರಗಳಲ್ಲಿ ನಿಪುಣತೆಯನ್ನು ಹೊಂದಿದ್ದ ಇವರು ಜಗತ್ತು ಕಂಡ ಅತ್ಯಂತ ಪ್ರಸಿದ್ದ ಪ್ರತಿಭೆಗಳಲ್ಲಿ ಒಬ್ಬರಾಗಿದ್ದರು.
4) ಜಗತ್ತಿನಲ್ಲಿ ಮೊದಲು ಸೂರ್ಯೋದಯ ಎಲ್ಲಿ ಆಗುತ್ತದೆ ಎಂದು ನಿಮ್ಮನ್ನು ಕೇಳಿದರೆ ಜಪಾನ್ ದೇಶ ಎಂದು ಹೇಳುತ್ತೀರಿ. ಆದರೆ ಭಾರತದಲ್ಲಿ ಎಲ್ಲಿ ಮೊದಲು ಜನಿಸುತ್ತದೆ ಎಂದು ಕೇಳಿದರೆ ಕೆಲವರು ಮಾತ್ರ ಹೇಳುತ್ತಾರೆ. ಇದಕ್ಕೆ ಉತ್ತರವನ್ನು ಈ ಸಂಗತಿಯಲ್ಲಿ ಹೇಳುತ್ತೇನೆ ಕೇಳಿ. ಭಾರತದಲ್ಲಿ ಮೊದಲು ಸೂರ್ಯೋದಯವು ಅರುಣಾಚಲಪ್ರದೇಶದ dong ಎನ್ನುವ ಹಳ್ಳಿಯಲ್ಲಿ ಆಗುತ್ತದೆ. ಭೂಮಿಯಿಂದ 1240 ಮೀಟರ್ ಎತ್ತರವಿರುವ ಈ ಹಳ್ಳಿಯಲ್ಲಿ ಮೊದಲು ಸೂರ್ಯೋದಯವಾಗುತ್ತದೆ ಎಂದು 1999 ರಲ್ಲಿ ಕಂಡುಹಿಡಿಯಲಾಯಿತು. ಇದೇ ಕಾರಣಕ್ಕೆ ಆ ರಾಜ್ಯವನ್ನೂ ಅರುಣಾಛಲ ಪ್ರದೇಶ ಎಂದು ಕರೆದಿರುವುದು. ಅರುಣಾ ಅಂದರೆ ಸೂರ್ಯ ಮತ್ತು ಛಲ ಅಂದರೆ ಉದಯ.
5) ಎಂದಾದರು ನೀವು ಮಲದಿಂದ ಸಾವಿರಾರು ರುಪಾಯಿಗಳನ್ನು ಗಳಿಸುವುದರ ಬಗ್ಗೆ ಕೇಳಿದ್ದೀರ? ಇದೇನಪ್ಪ ಮಲದಿಂದ ಹಣ ಗಳಿಸುವುದೆ? ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಪಡುತ್ತಿದ್ದರೆ ಈ ಸಂಗತಿಯಲ್ಲಿ ನಿಮಗೆ ಹೇಳುವ ವಿಷಯವನ್ನು ಕೇಳಿ ಮತ್ತಷ್ಟು ಆಶ್ಚರ್ಯಕ್ಕೆ ಒಳಗಾಗುತ್ತೀರಿ. ಉತ್ತರ ಆಫ್ರಿಕಾ ಖಂಡದ morocco ದೇಶದಲ್ಲಿ Argan ಎನ್ನುವ ಮರವು ಬೆಳೆಯುತ್ತದೆ. ಈ ಮರದಲ್ಲಿ ಬಿಡುವ ಹಣ್ಣಿನ ಒಳಗಿರುವ ಬೀಜಗಳಿಂದ ಅಡುಗೆ ಎಣ್ಣೆಯನ್ನು ತಯಾರಿಸುತ್ತಾರೆ. ಆದರೆ ಈ ಹಣ್ಣುಗಳನ್ನು ಮರದಿಂದ ಕಿತ್ತು ತರುವುದೇ ದೊಡ್ಡ ಸವಾಲು. ಏಕೆಂದರೆ ಈ ಹಣ್ಣುಗಳ ಸುತ್ತ ವಿಷಪೂರಿತ ಮುಳ್ಳುಗಳಿವೆ. ಆದ್ದರಿಂದ ಅಲ್ಲಿಯ ರೈತರು ತಮ್ಮ ಕುರಿಗಳನ್ನು ಮರಗಳ ಮೇಲೆ ಹತ್ತಲು ಬಿಡುತ್ತಾರೆ. ಅವುಗಳು ಆ ಹಣ್ಣಿನ ಸುತ್ತ ಇರುವ ಎಲೆಗಳನ್ನು ತಿನ್ನುತ್ತ ಆ ಹಣ್ಣನ್ನು ಕೂಡ ತಿನ್ನುತ್ತವೆ. ಹೀಗೆ ತಿಂದ ಮೇಲೆ ಆ ಹಣ್ಣಿನ ಒಳಗಿರುವ ಬೀಜಗಳನ್ನು ನುಂಗುತ್ತವೆ. ನಂತರ ಅದರ ಮಲದ ಮೂಲಕ ಆ ಬೀಜಗಳು ಹೊರ ಬರುತ್ತವೆ. ಈ ಬೀಜಗಳನ್ನು ರೈತರು ಮಲದಿಂದ ಹೊರ ತೆಗೆದು ಅವುಗಳಿಂದ ಎಣ್ಣೆಯನ್ನು extract ಮಾಡುತ್ತಾರೆ. ಈ ಎಣ್ಣೆಯನ್ನು ಮಾರಿ ಹಣಗಳಿಸುತ್ತಾರೆ. ಈ ಎಣ್ಣೆಯನ್ನು “Argan oil” ಎನ್ನುತ್ತಾರೆ. ಇದು ಆ ದೇಶದಲ್ಲಿಯೇ ಪ್ರಸಿದ್ದಿಯಾಗಿರುವ ಅಡುಗೆ ಎಣ್ಣೆಯಾಗಿದೆ.
6) ನೀವು ಎಂದಾದರು ರೈಲಿನ ಬೋಗಿಗಳ ಮೇಲೆ ಬರೆದಿರುವ ಸಂಖ್ಯೆಯನ್ನು ಗಮನಿಸಿ ಆ ಬೋಗಿಗಳ ಮೇಲೆ ಏಕೆ ಆ ರೀತಿ ಬರೆದಿರುತ್ತಾರೆ ಎಂದು ಯೋಚಿಸಿದ್ದರೆ ಈ ಸಂಗತಿಯಲ್ಲಿ ಅದಕ್ಕೆ ಉತ್ತರ ಹೇಳುವೆ ಕೇಳಿ. ಸಂಖ್ಯೆಯ ಮೊದಲ ಎರಡು ಅಕ್ಷರಗಳು ಆ ಭೋಗಿಯನ್ನು ಯಾವ ವರ್ಷ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ. ಉಳಿದ ಮೂರು ಸಂಖ್ಯೆಯು ಭೋಗಿಯ class ಬಗ್ಗೆ ಹೇಳುತ್ತದೆ. ಕೊನೆಯ 3 ಸಂಖ್ಯೆಗಳು “201 ರಿಂದ 400 ರ ಮಧ್ಯೆ ಇದ್ದರೆ ಅದರ ಅರ್ಥ ಆ ಭೋಗಿಯು sleeper class ಗೆ ಸೇರಿದ್ದು. ಅಕಸ್ಮಾತ್ 001 ರಿಂದ 025 ಮಧ್ಯೆ ಇದ್ದರೆ ಅದು “First class AC” ಭೋಗಿ ಎಂದರ್ಥ. 025 ರಿಂದ 050 ರ ಮಧ್ಯೆ ಇದ್ದರೆ second class AC ಭೋಗಿ ಎಂದರ್ಥ. ಇನ್ನು 050 ರಿಂದ 100 ರವರೆಗು ಇದ್ದರೆ ಅದರ ಅರ್ಥ second class ಭೋಗಿ. 101 ರಿಂದ 150 ರ ಮಧ್ಯೆ ಇದ್ದರೆ third class AC ಎಂದರ್ಥ. ಇನ್ನು ಕೊನೆಯದಾಗಿ 401 ರಿಂದ 600 ರ ಮಧ್ಯೆ ಇದ್ದರೆ general ಕ್ಲಾಸ್ ಭೋಗಿ ಎಂದರ್ಥ.ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸುವುದಾದರೆ ಒಂದು ಭೋಗಿಯ ಮೇಲೆ “02337” ಎಂದು ಬರೆದಿದೆ ಎಂದು ಭಾವಿಸಿ. ಮೊದಲ ಎರಡು ಸಂಖ್ಯೆಯಿಂದ ಆ ಭೋಗಿಯು 2002 ರಲ್ಲಿ ನಿರ್ಮಾಣವಾಗಿದೆ ಎಂದು ತಿಳಿಯುತ್ತದೆ. ಕೊನೆಯ ಮೂರು ಸಂಖ್ಯೆಯಾದ 337 ರಿಂದ ನಮಗೆ ತಿಳಿಯುವುದೇನೆಂದರೆ ಆ ಭೋಗಿಯು sleeper class ಗೆ ಸೇರಿದ್ದು.