ಬ್ರಿಟೀಷರು, ಈ ಹೆಸರನ್ನು ಕೇಳಿದರೆ ಸಾಕು ಕೆಂಪು ಮೂತಿಯನ್ನು ಹೊತ್ತ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಬರುತ್ತಾರೆ. ನೂರಾರು ವರ್ಷಗಳ ಕಾಲ ಸಂಪತ್ತಿನಿಂದ ಕೂಡಿದ್ದ ನಮ್ಮ ದೇಶವನ್ನು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ಹೊತ್ತೋಯ್ದ ಇವರನ್ನು ಹೇಗೆ ತಾನೇ ಮರೆಯಲು ಸಾಧ್ಯ. ಕೇವಲ ನಮ್ಮ ದೇಶವನ್ನು ಮಾತ್ರವಲ್ಲದೆ ಪ್ರಪಂಚದ ಶೇಖಡ 80 ರಷ್ಟು ದೇಶಗಳನ್ನು ಕೊಳ್ಳೆ ಹೊಡೆದ ಇವರು ಒಂದಾನೊಂದು ಕಾಲದಲ್ಲಿ ಜಗತ್ತನ್ನೇ ಆಳಿದವರು. ಆದರೆ ಈಗ ಇವರ ದೇಶವು ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗಿಂತ ಕಳಪೆ ಮಟ್ಟದಲ್ಲಿದೆ. ಇವರ ಕೈ ಕೆಳಗೆ ಗುಲಾಮರ ಹಾಗೆ ಇದ್ದ ನಾವುಗಳು ಕೇವಲ 70 ವರ್ಷದಲ್ಲಿ ಮತ್ತೆ ಪುಟಿದೆದ್ದು ಸದೃಡ ದೇಶವನ್ನು ಕಟ್ಟಿಕೊಂಡಿದ್ದೇವೆ. ಆದರೆ ನಮ್ಮ ಸಂಪತ್ತು ಲೂಟಿ ಹೊಡೆದಿದ್ದ ಇವರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ನಿಮಗೆ ಒಂದಾನೊಂದು ಕಾಲದಲ್ಲಿ ಪ್ರಪಂಚವನ್ನೇ ಆಳಿದ್ದ ಬ್ರಿಟೀಷ್ ಸಾಮ್ರಾಜ್ಯವು ನಿಧಾನವಾಗಿ ಹೇಗೆ ಮುಳುಗಿತು ಎನ್ನುವ ಸಂಗತಿಯನ್ನು ವಿವರಿಸುತ್ತೇವೆ.

ಮೊದಲೇ ಹೇಳಿದ ಹಾಗೆ ಭೂಮಿಯ ಶೇಖಡ 80 ರಷ್ಟು ದೇಶಗಳು ಬ್ರಿಟೀಷರ ಆಳ್ವಿಕೆಯಲ್ಲಿ ಇದ್ದರೆ ಇನ್ನುಳಿದ 20 ರಷ್ಟು ದೇಶಗಳು ಬ್ರಿಟೀಷರ ವಿರುದ್ಧ ನಿಲ್ಲುವಷ್ಟು ಶಕ್ತಿಶಾಲಿಯಾಗಿರಲಿಲ್ಲ. ಅಷ್ಟೊಂದು ಬಲಶಾಲಿ ಮತ್ತು ಶ್ರೀಮಂತ ಸಾಮ್ರಾಜ್ಯ ಬ್ರಿಟೀಷರದಾಗಿತ್ತು. ಪ್ರಪಂಚವನ್ನೇ ಆಳಿದ್ದ ಬ್ರಿಟೀಷರ ರಾಜ ಮನೆತನವನ್ನು ನೋಡಿಕೊಳ್ಳಲು ಅಲ್ಲಿನ ಸರ್ಕಾರವೆ ಸಾಕಷ್ಟು ಹಣ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ಈಗ ಬಂದಿದೆ. 3 ಕೋಟಿ 50 ಲಕ್ಷ ಚದುರ ಕಿಲೋಮೀಟರ್ ವರೆಗು ವಿಸ್ತಾರವಾಗಿದ್ದ ಬ್ರಿಟೀಷರ ಸಾಮ್ರಾಜ್ಯವು ಇಂದು ಕೇವಲ 2 ಲಕ್ಷದ 42 ಸಾವಿರದ 459 ಚದುರ ಕಿಲೋಮೀಟರ್ ಜಾಗವನ್ನು ಮಾತ್ರ ಹೊಂದಿದೆ. ನೀವು ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ 100 ವರ್ಷಗಳ ಹಿಂದೆ ಯಾವುದೇ ದೇಶದ ಸಮೃದ್ದಿಯು ಆ ದೇಶದಲ್ಲಿ ಸಿಗುತ್ತಿದ್ದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುತ್ತಿತ್ತು. ಉದಹಾರಣೆಗೆ ನಮ್ಮ ದೇಶವು ರೇಷ್ಮೆ ಮತ್ತು ಸಾಂಬಾರು ಪದಾರ್ಥಗಳನ್ನು ಪ್ರಪಂಚದೆಲ್ಲೆಡೆ ರಫ್ತು ಮಾಡಿ ಅಭಿವೃದ್ದಿ ಹೊಂದುತ್ತಿತ್ತು. ಆದರೆ ಯಾವಾಗ ಬ್ರಿಟೀಷರು ನಮ್ಮ ದೇಶಕ್ಕೆ ಕಾಲಿಟ್ಟರೊ ಅಂದಿನಿಂದ ಇಲ್ಲಿ ಬೆಳೆಯುತ್ತಿದ್ದ ರೇಷ್ಮೆ ಮತ್ತು ಸಾಂಬಾರು ಪದಾರ್ಥಗಳನ್ನು ಕೊಳ್ಳೆ ಹೊಡೆದು ಬೇರೆ ದೇಶಗಳಿಗೆ ಮಾರಿ ಬಂದ ಹಣದಿಂದ ತಮ್ಮ ಸಾಮಾಜ್ಯ ಕಟ್ಟಿದರು. ಇದೇ ರೀತಿಯಲ್ಲಿ ಆಫ್ರಿಕಾದಲ್ಲಿ ಸಿಗುತ್ತಿದ್ದ ಬಂಗಾರ ಮತ್ತು ಕಾಫಿ ಬೀಜಗಳು, ವೆಸ್ಟ್ ಇಂಡೀಸ್ ದೇಶದಲ್ಲಿ ಬೆಳೆಯಲಾಗುತ್ತಿದ್ದ ಸಕ್ಕರೆ ಮತ್ತು ಈಜಿಪ್ಟ್ ದೇಶದ ಹತ್ತಿ ಬೆಳೆ. ಹೀಗೆ ಪ್ರಪಂಚದ ನಾನಾ ದೇಶಗಳಲ್ಲಿ ಸಿಗುತ್ತಿದ್ದ ಅನೇಕ ನೈಸರ್ಗಿಕ ಸಂಪನ್ಮೂಲಗಳನ್ನು ಬ್ರಿಟೀಷರು ಕೊಳ್ಳೆ ಹೊಡೆದು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಹೀಗೆ ಹಣ ಸಂಪಾದಿಸಿ ಸಂಪೂರ್ಣ ವಿಶ್ವವನ್ನೇ ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರು “ಬ್ರಿಟೀಷರ ಸೂರ್ಯನು ಎಂದೂ ಮುಳುಗುವುದಿಲ್ಲ” ಎಂದು ಜಂಭದಿಂದ ಬೀಗುತ್ತಿದ್ದರು.ಆದರೆ 19 ನೆಯ ಶತಮಾನ ಆರಂಭವಾಗುತ್ತಿದ್ದಂತೆ ಅನೇಕ ಬದಲಾವಣೆಗಳು ಪ್ರಪಂಚದಲ್ಲಿ ಆಗತೊಡಗಿದವು.

ಇದರಲ್ಲಿ ಮೊದಲ ಪ್ರಮುಖ ಬದಲಾವಣೆಯೇ “ಮೋಟಾರ್ ಯುಗ”. ಎಲ್ಲೆಡೆ ತಂತ್ರಜ್ಞಾನ ನಿಧಾನವಾಗಿ ಬೆಳೆಯತೊಡಗಿತ್ತು, ಕೇವಲ ಕುದುರೆಗಳ ಮೇಲೆ ಸವಾರಿ ಮಾಡುತ್ತಿದ್ದ ಮನುಷ್ಯರು ಕಾರುಗಳ ಮೇಲೆ ಪ್ರಯಾಣ ಮಾಡಲು ಶುರು ಮಾಡಿದರು. ಯಾವಾಗ ಈ ರೀತಿ ಕಾರುಗಳು ಮಾರುಕಟ್ಟೆಯಲ್ಲಿ ಬರತೊಡಗಿದವೊ ಆಗ ಇವುಗಳನ್ನು ಚಲಾಯಿಸಲು ಬೇಕಾದ ತೈಲಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗತೊಡಗಿತು. ಇದರ ಪರಿಣಾಮದಿಂದಲೆ ಜಗತ್ತಿನಲ್ಲಿ ತೈಲ ಸಿಗುತ್ತಿದ್ದ ದೇಶಗಳ ಮೇಲೆ ಅವಲಂಭನೆ ಹೆಚ್ಚಾಗತೊಡಗಿತು. ಇದರ ಜೊತೆಗೆ “ಎಲೆಕ್ಟ್ರಾನಿಕ್ ಉಪಕರಣಗಳು” ಕೂಡ ಮಾರುಕಟ್ಟೆಗೆ ಬರತೊಡಗಿದವು, ಯಾವ ನೈಸರ್ಗಿಕ ಸಂಪನ್ಮೂಲಗಳಿಂದ ತಮಗೆ ಉಪಯೋಗವಿಲ್ಲವೆಂದು ಬ್ರಿಟೀಷರು ನಿರ್ಲಕ್ಷ್ಯ ಮಾಡಿದ್ದರೋ ಅದೇ ನೈಸರ್ಗಿಕ ಸಂಪನ್ಮೂಲಗಳಿಗೆ ಒಮ್ಮೆಲೇ ಜಗತ್ತಿನೆಲ್ಲೆಡೆ ಸಾಕಷ್ಟು ಬೇಡಿಕೆ ಬರತೊಡಗಿತು. ಇದರೊಂದಿಗೆ ಜಗತ್ತು ನಿಧಾನವಾಗಿ ಆಧುನಿಕ ವಿಜ್ಞಾನದ ಕಡೆಗೆ ಮುಖ ಮಾಡಲು ಶುರು ಮಾಡಿತ್ತು. ಆದರೆ ಇದು ಬ್ರಿಟೀಷರಿಗೆ ನಿಧಾನವಾಗಿ ಮುಳ್ಳಾಗತೊಡಗಿತು. ಕೇವಲ ಅನ್ಯ ದೇಶಗಳ ಕೊಳ್ಳೆ ಹೊಡೆದು ಅದರಿಂದ ಹಣ ಸಂಪಾದನೆ ಮಾಡಿ ಸಾಮ್ರಾಜ್ಯ ನಡೆಸುತ್ತಿದ್ದ ಬ್ರಿಟೀಷರು ಎಂದಿಗೂ ಕೂಡ ನೂತನ ತಂತ್ರಜ್ಞಾನದ ಕಡೆಗೆ ಗಮನ ಹರಿಸಲಿಲ್ಲ. ತಮ್ಮ ದೇಶದಲ್ಲಿ ಇರುವ ತಂತ್ರಜ್ಞಾನವನ್ನು ಬೆಳೆಸುವ ಪ್ರೋತ್ಸಾಹವನ್ನು ನೀಡದೆ ಹೊರ ದೇಶದಲ್ಲಿ ಇರುವ ಅನೇಕ ವಿಜ್ಞಾನಿಗಳನ್ನು ಗುಲಾಮರನ್ನಾಗಿ ನೋಡುತ್ತಿದ್ದ ಪರಿಣಾಮದಿಂದಲೇ ಅವರ ಸಾಮ್ರಾಜ್ಯವು ನಿಧಾನವಾಗಿ ಪತನವಾಗತೊಡಲು ಶುರುವಾಯಿತು.

ಆದರೆ ಇದರ ಲಾಭ ಪಡೆದುಕೊಂಡ ಏಕೈಕ ದೇಶವೇ ಅಮೇರಿಕ. ಪ್ರಪಂಚದಲ್ಲಿ ಇರುವ ಎಲ್ಲಾ ದೇಶಗಳ ಜನರಿಗೂ ಸ್ವಾಗತ ಮಾಡುತ್ತಾ ಹೋದ ಅಮೆರಿಕವು ಅವರ ಬಳಿಯಿದ್ದ ಬುದ್ದಿಶಕ್ತಿಗೆ ಬೆಲೆ ನೀಡಿ ಅವರಿಗೆ ಪ್ರೋತ್ಸಾಹ ಮಾಡುತ್ತ ಹೋಯಿತು. ಇದರ ಪರಿಣಾಮವೇ ಎರಡನೆಯ ಪ್ರಪಂಚ ಯುದ್ದ ಮುಗಿಯುವ ವೇಳೆಗೆ ಅಮೇರಿಕವು ಜಗತ್ತಿನ ಬಲಿಷ್ಠ ರಾಷ್ಟ್ರವಾಯಿತು. ಪ್ರಪಂಚದಲ್ಲಿರುವ ಅನೇಕ ಯುವ ಮತ್ತು ಸೃಜನಶೀಲ ಜನರಿಗೆ ಉದ್ಯೋಗ ಮತ್ತು ಮರಿಯಾದೆ ನೀಡುತ್ತ ಅವರನ್ನು ಬೆಳೆಸಿ ಜೊತೆಗೆ ದೇಶವನ್ನು ಸದೃಡವಾಗಿ ಕಟ್ಟಲು ಶುರು ಮಾಡಿತು ಅಮೇರಿಕ. ಹೀಗೆ ನೋಡ ನೋಡುತ್ತಿದ್ದಂತೆ ಆರ್ಥಿಕ ಸಮೃದ್ದಿ ಹೊಂದ ತೊಡಗಿದ ಅಮೇರಿಕವು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ದೇಶವಾಗಿ ಬೆಳೆಯತೊಡಗಿತು. ಇತ್ತ ಬ್ರಿಟೀಷರ ಸಾಮ್ರಾಜ್ಯವು ಅಮೆರಿಕದ ಮುಂದೆ ಮಂಕಾಗಿ ಸಂಪೂರ್ಣವಾಗಿ ಮುಳುಗಿತು.

Follow Karunadu Today for more Interesting Facts & Stories. 

Click here to Join Our Whatsapp Group