ನೀವು ಅನೇಕ ಬಾರಿ ಒಂದು ಸುದ್ದಿಯನ್ನು ಕೇಳಿರುತ್ತೀರಿ. ಅದೇನೆಂದರೆ ವಿಜ್ಞಾನಿಗಳಿಗೆ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ಮನುಷ್ಯರ ಅಸ್ಥಿಪಂಜರ ಸಿಕ್ಕಿದೆ, ಡೈನೋಸಾರ್ ಗಳ ಅಸ್ಥಿಪಂಜರ ಸಿಕ್ಕಿದೆ, ಆ ಜೀವಿಯ ಅಸ್ಥಿಪಂಜರ ಸಿಕ್ಕಿದೆ ಈ ಜೀವಿಯ ಆಸ್ತಿಪಂಜರ ಸಿಕ್ಕಿದೆ ಎಂದು. ಆದರೆ ಎಂದಾದರು ವಿಜ್ಞಾನಿಗಳು ಅದು ಹೇಗೆ ಸಿಕ್ಕಿರುವ ಅಸ್ಥಿಪಂಜರಗಳು ಇಷ್ಟೇ ವರ್ಷಗಳಷ್ಟು ಹಳೆಯದ್ದು ಎಂದು ನಿಖರವಾಗಿ ಹೇಳುತ್ತಾರೆ ಎಂದು ಆಲೋಚಿಸಿದ್ದೀರ? ಅಕಸ್ಮಾತ್ ನೀವು ಆಲೋಚಿಸಿದ್ದರೆ ಈ ವೀಡಿಯೋದಲ್ಲಿ ನಿಮಗೆ ವಿಜ್ಞಾನಿಗಳು ಅದು ಹೇಗೆ ಅದನ್ನು ಕಂಡು ಹಿಡಿಯುತ್ತಾರೆ ಎನ್ನುವುದನ್ನು ವಿವರಿಸುತ್ತೇನೆ ಮುಂದೆ ನೋಡಿ.

ಅಸ್ಥಿಪಂಜರ ಅಥವ ಪಳೆಯುಳಿಕೆಗಳು ಸಿಕ್ಕ ಮೇಲೆ ವಿಜ್ಞಾನಿಗಳು ಮೊದಲು ಅದು ಮನುಷ್ಯನದ್ದ ಅಥವ ಪ್ರಾಣಿಗಳದ್ದ ಎಂದು ಕಂಡು ಹಿಡಿಯುತ್ತಾರೆ. ಅಕಸ್ಮಾತ್ ಅದು ಮನುಷ್ಯನದ್ದು ಆಗಿದ್ದರೆ ಅದು ಗಂಡಿನ ಅಸ್ಥಿಪಂಜರದ ಅಥವ ಹೆಣ್ಣಿನ ಅಸ್ಥಿಪಂಜರವ ಎಂದು ಕಂಡುಹಿಡಿಯುತ್ತಾರೆ. ಇದನ್ನು ಹೇಗೆ ಪತ್ತೆ ಮಾಡುತ್ತಾರೆಂದರೆ ಅಸ್ಥಿಪಂಜರದ ತೊಡೆಯ ಬಾಗದ ಮೂಳೆಯಿಂದ. ಹೆಣ್ಣಿನ ಅಸ್ಥಿಪಂಜರ ಮತ್ತು ಗಂಡಿನ ಅಸ್ಥಿಪಂಜರಕ್ಕೆ ಇರುವ ವ್ಯತ್ಯಾಸವನ್ನು ಯಾವಾಗಲು ತೊಡೆಯ ಬಾಗದಲ್ಲಿರುವ ಮೂಳೆಯಿಂದಲೆ ಕಂಡುಹಿಡಿಯುತ್ತಾರೆ. ಒಂದು ಅಸ್ಥಿಪಂಜರವು ಹೆಣ್ಣಿನ ಅಸ್ಥಿಪಂಜರವೊ ಅಥವ ಗಂಡಿನ ಅಸ್ಥಿಪಂಜರವೊ ಎನ್ನುವುದನ್ನು ತೊಡೆಯ ಬಾಗದಲ್ಲಿರುವ ಮೂಳೆಯಿಂದ ಮಾತ್ರ ಕಂಡುಹಿಡಿಯಲು ಸಾಧ್ಯ. ಆದರೆ ಅಕಸ್ಮಾತ್ ಜನಿಸುವ ವೇಳೆ ಮಗುವು ಸತ್ತಿದ್ದು ಅದರ ಆಸ್ತಿಪಂಜರ ಸಿಕ್ಕಾಗ ಅದು ಗಂಡು ಮಗುವಿನ ಅಸ್ಥಿಪಂಜರವೊ ಅಥವ ಹೆಣ್ಣು ಮಗುವಿನ ಅಸ್ಥಿಪಂಜರವೊ ಎಂದು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಏಕೆಂದರೆ ಅದರ ತೊಡೆಯ ಭಾಗದಲ್ಲಿರುವ ಎಲುಬುಗಳು ಇನ್ನು ಬೆಳೆದಿರುವುದಿಲ್ಲ. ಇದರೊಂದಿಗೆ ಒಂದು ಅಸ್ಥಿಪಂಜರವು ಹೆಣ್ಣಿನದೋ ಅಥವ ಗಂಡಿನದೋ ಎಂದು ಹೇಗೆ ಪತ್ತೆ ಮಾಡುತ್ತಾರೆ ಎನ್ನುವುದು ನಿಮಗೆ ತಿಳಿಯಿತು. ಈಗ ಪ್ರಮುಖವಾದ ಪ್ರಶ್ನೆಗೆ ಬರೋಣ. ಅದುವೆ ಆ ಅಸ್ಥಿಪಂಜರವು ಅದೆಷ್ಟು ವರ್ಷಗಳಷ್ಟು ಹಳೆಯದು ಎಂದು ಹೇಗೆ ಪತ್ತೆ ಮಾಡುತ್ತಾರೆ ಎನ್ನುವುದು. ಇದನ್ನು ಪತ್ತೆ ಮಾಡಲು “ಕಾರ್ಬನ್ ಡೇಟಿಂಗ್” ವಿಧಾನವನ್ನು ಬಳಸುತ್ತಾರೆ. ಬನ್ನಿ ಈಗ ಆ ವಿಧಾನದ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಸಾಧಾರಣವಾಗಿ ಒಂದು ಕಾರ್ಬನ್ ಅಣುವಿನಲ್ಲಿ 6 ಪ್ರೋಟಾನ್ ಮತ್ತು 6 neutron ಇರುತ್ತದೆ. ಇದನ್ನು carbon 12 ಎಂದು ಹೇಳುವರು. ಆದರೆ ಯಾವಾಗ ಸೂರ್ಯನ cosmic ಕಿರಣಗಳು ಭೂಮಿಯ ವಾತಾವರಣದಲ್ಲಿರುವ nitrogen-14 ಗೆ ಬಂದು ತಾಗುತ್ತವೆ ಆಗ ಅದು 6 proton ಮತ್ತು 8 neutron ಇರುವ carbon ಅಣುವಾಗಿ ಪರಿವರ್ತನೆಯಾಗುತ್ತದೆ. ಇದನ್ನೆ carbon 14 ಎಂದು ಕರೆಯುತ್ತಾರೆ. ಯಾವಾಗ ಈ carbon 12 ಮತ್ತು carbon 14 ಆಮ್ಲಜನಕದ ಜೊತೆಗೆ ಸೇರುತ್ತದೆ ಆಗ “ಇಂಗಾಲದ ಡೈ ಆಕ್ಸೈಡ್” ಆಗಿ ಪರಿವರ್ತನೆಯಾಗುತ್ತದೆ. ಇನ್ನು ನಮಗೆಲ್ಲ ತಿಳಿದ ಹಾಗೆ ಮರಗಳು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ತಮ್ಮೊಳಗೆ ತೆಗೆದುಕೊಂಡು ಆಮ್ಲಜನಕವನ್ನು ಹೊರಗೆ ಬಿಡುತ್ತವೆ. ಇಂಗಾಲದ ಡೈ ಆಕ್ಸೈಡ್ ಅನ್ನು ಮರಗಳು ತೆಗೆದುಕೊಳ್ಳುತ್ತವೆ ಅಂದರೆ ಅದರ ಅರ್ಥ ಅದರ ಒಳಗೆ ಕೆಲವು ಪ್ರಮಾಣದಷ್ಟು carbon 12 ಮತ್ತು ಕೆಲವು ಪ್ರಮಾಣ carbon 14 ಇರುತ್ತವೆ. ಈ ಮರಗಳಿಂದ ಅಥವ ಸಸ್ಯಗಳಿಂದ ಪ್ರಾಣಿಗಳು ಅಥವ ಮನುಷ್ಯರು ಒಂದಲ್ಲ ಒಂದು ರೀತಿಯಲ್ಲಿ ಆಹಾರ ಸೇವಿಸುತ್ತವೆ. ಇದರ ಅರ್ಥ ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯಲ್ಲೂ ಕೂಡ ಈ carbon 12 ಮತ್ತು carbon 14 ಅಂಶವಿರುತ್ತದೆ.


ಒಮ್ಮೆ ಈ ಅಂಶಗಳು ದೇಹದ ಒಳಗೆ ಹೋದರೆ carbon 14 ಅಂಶವು ಕನಿಷ್ಠ 5700 ವರ್ಷ ಮತ್ತು ಗರಿಷ್ಠ 60 ಸಾವಿರ ವರ್ಷಗಳವರೆಗು ಎಲುಬುಗಳಲ್ಲಿ ಇರುತ್ತದೆ. ಇನ್ನು carbon 12 ಅಂಶವು ಮಾತ್ರ ಶಾಶ್ವತವಾಗಿ ಹಾಗೆಯೇ ಇರುತ್ತದೆ. ಯಾವಾಗ ಒಂದು ಜೀವಿಯು ಸಾಯುತ್ತದೆ ಆಗ ಅದರ ದೇಹದ ಒಳಗಿರುವ carbon 14 ಅಂಶವು ಹೊರಹೋಗಲು ಶುರು ಮಾಡುತ್ತದೆ. ಸತ್ತಿರುವ ಒಂದು ಜೀವಿಯಿಂದ ಸಂಪೂರ್ಣವಾಗಿ ಹೊರಹೋಗಲು carbon-14 ಗೆ ಗರಿಷ್ಟವೆಂದರೆ 60 ಸಾವಿರ ವರ್ಷಗಳು ಬೇಕು. ಆದರೆ carbon 12 ಮಾತ್ರ ಹಾಗೆಯೇ ಎಲುಬುಗಳಲ್ಲಿ ಇರುತ್ತದೆ. ಈಗ ಒಂದು ಅಸ್ಥಿಪಂಜರ ಸಿಕ್ಕಿದೆಯೆಂದು ತಿಳಿದುಕೊಳ್ಳಿ. ಅದರ ದೇಹದಿಂದ ಅದೆಷ್ಟು ಪ್ರಮಾಣದ carbon 14 ಅಂಶವು ಹೊರಹೋಗಿದೆ ಎಂದು ಪತ್ತೆ ಮಾಡಿ ಅದನ್ನು ಅದರ ದೇಹದಲ್ಲಿರುವ carbon 12 ಅಂಶದ ಜೊತೆಗೆ ratio ತೆಗೆದರೆ ಸಾಕು ಆ ಅಸ್ಥಿಪಂಜರವು ಎಷ್ಟು ವರ್ಷ ಹಳೆಯದು ಎಂದು ತಿಳಿದುಬರುತ್ತದೆ. ಈ ವಿಧಾನವನ್ನು carbon dating ವಿಧಾನ ಎಂದು ಕರೆಯುತ್ತಾರೆ. ಈ ವಿಧಾನದಿಂದ ನಾವು ಗರಿಷ್ಠ 60 ಸಾವಿರ ವರ್ಷಗಳಷ್ಟು ಹಳೆಯ ಅಸ್ಥಿಪಂಜರಗಳನ್ನು ಪತ್ತೆ ಮಾಡಬಹುದು. ನೆನಪಿರಲಿ ಪ್ರತಿ 1 trillion carbon 12 ಅಣುವಿಗೆ(1,000,000,000,000) ಕೇವಲ 1 carbon 14 ಅಣು ಸಮ. ಅಂದರೆ 1 trillion carbon 12 atom : 1 carbon 14 atom. ಭೂಮಿಯ ಮೇಲೆ ಬದುಕಿರುವ ಪ್ರತಿಯೊಂದು ಜೀವಿಯ ದೇಹದಲ್ಲಿ ಇದೇ ratio ಇರುತ್ತದೆ. ಆದರೆ ಯಾವಾಗ ಜೀವಿಯು ಸಾಯುತ್ತದೆ ಅದರ ದೇಹದಲ್ಲಿರುವ carbon 12 ಅಂಶವು ಹಾಗೆಯೇ ಇರುತ್ತದೆ. ಪ್ರತಿ 5730 ವರ್ಷಕ್ಕೊಮ್ಮೆ carbon 14 ಅಂಶವು ಅರ್ಧವಾಗುತ್ತ ಹೋಗುತ್ತದೆ. ಇದನ್ನು half life ಎಂದು ಕರೆಯುತ್ತಾರೆ. ಹೀಗೆ ಗರಿಷ್ಠ 60 ಸಾವಿರ ವರ್ಷದವರೆಗು ಇದು ಇರುತ್ತದೆ.

ಆದರೆ ಈ ಡೈನೋಸಾರ್ ಗಳ ಪಳೆಯುಳಿಕೆಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು ಇವುಗಳು ಲಕ್ಷಾಂತರ ವರ್ಷಗಳ ಹಿಂದೆ ಇದ್ದವು ಎಂದು ಹೇಗೆ ಹೇಳುತ್ತಾರೆ ಎನ್ನುವುದನ್ನು ಈಗ ತಿಳಿಸಿಕೊಡುತ್ತೇನೆ ಕೇಳಿ. ಹೇಗೆ ಈ carbon 14 ಅಂಶದ half life 5730 ವರ್ಷವಿರುತ್ತದೆ ಅದೇ ರೀತಿ plutonium-239 ಅಂಶದ half life 24,110 ವರ್ಷ ಮತ್ತು uranium-235 ಅಂಶದ half life 70 ಕೋಟಿ ವರ್ಷವಿದೆ. ಇವುಗಳು ಕೂಡ ಪ್ರತಿಯೊಂದು ಜೀವಿಯ ದೇಹದಲ್ಲಿರುತ್ತವೆ. ಇವುಗಳನ್ನು ಬಳಸಿಕೊಂಡೆ ಡೈನೋಸಾರ್ ಗಳ ಆಯಸ್ಸು ಕಂಡುಹಿಡಿಯುತ್ತಾರೆ.

Follow Karunadu Today for more Interesting Facts & Stories. 

Click here to Join Our Whatsapp Group