ನಮಗೆಲ್ಲ ತಿಳಿದ ಹಾಗೆ ಆಮ್ಲಜನಕ ಎನ್ನುವುದು ನಮ್ಮ ಭೂಮಿಯ ಮೇಲಿರುವ ಅನೇಕ ಜೀವಿಗಳಿಗೆ ಮತ್ತು ಗಿಡ ಮರಗಳಿಗೆ ಬೇಕಾಗಿರುವ ಅಮೂಲ್ಯವಾದ ಅಂಶ. ಹೇಗೆ ಆಹಾರ ಮತ್ತು ನೀರು ಬದುಕಲು ಬೇಕಾಗಿರುವ ಅತ್ಯಮೂಲ್ಯ ಅಂಶಗಳಲ್ಲಿ ಒಂದಾಗಿದೆ ಅದೇ ರೀತಿ ಆಮ್ಲಜನಕವು ಕೂಡ ಒಂದಾಗಿದೆ. ಈಗ ನಮ್ಮ ಭೂಮಿಯ ಮೇಲೆ 21% ನಷ್ಟು ಆಮ್ಲಜನಕವಿದೆ. ಅಕಸ್ಮಾತ್ ಈ ಆಮ್ಲಜನಕದ ಪ್ರಮಾಣ ದುಪ್ಪಟ್ಟು ಆದರೆ ಭೂಮಿಯ ಮೇಲೆ ಇರುವ ಪ್ರಕೃತಿಯಲ್ಲಿ ಮತ್ತು ಇಲ್ಲಿ ವಾಸಿಸುತ್ತಿರುವ ಜೀವಿಗಳಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂದು ವಿವರಿಸುತ್ತೇವೆ.

ನಮಗೆಲ್ಲ ತಿಳಿದ ಹಾಗೆ ಲಕ್ಷಾಂತರ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಇದ್ದ ಪ್ರಾಣಿ, ಪಕ್ಷಿ ಮತ್ತು ಮರಗಳು ಬೃಹತ್ ಗಾತ್ರದಲ್ಲಿ ಇದ್ದವು. ಆದರೆ ಈಗ ಆ ರೀತಿ ಬೃಹತ್ ಗಾತ್ರದಲ್ಲಿ ಏಕೆ ಬೆಳೆಯಲು ಸಾಧ್ಯವಾಗುತ್ತಿಲ್ಲವೆಂದು ಎಂದಾದರು ಯೋಚಿಸಿದ್ದೀರ? ಅದಕ್ಕೆ ಉತ್ತರ ಆಮ್ಲಜನಕ. ಹೌದು, ಭೂಮಿಯ ಮೇಲೆ ಲಕ್ಷಾಂತರ ವರ್ಷಗಳ ಹಿಂದೆ ಇದ್ದಂತಹ ಆಮ್ಲಜನಕದ ಪ್ರಮಾಣವು ಈಗ ಇಲ್ಲ. ಇದರಿಂದಾಗಿಯೇ ಎಲ್ಲಾ ಜೀವಿಗಳು ದೈತ್ಯಾಕಾರದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಹಕ್ಕೆ ಬೇಕಾಗುವ 98% ನಷ್ಟು ಶಕ್ತಿ ಒದಗುವುದು ಆಮ್ಲಜನಕದಿಂದಲೆ. ಉಳಿದ 2% ನಷ್ಟು ಶಕ್ತಿಯು ನಾವು ತಿನ್ನುವ ಆಹಾರ ಮತ್ತು ನೀರಿನಿಂದ ಸಿಗುತ್ತದೆ. ಅಂದರೆ ಆಮ್ಲಜನಕ ಇಲ್ಲವೆಂದರೆ ನಮ್ಮ ದೇಹಕ್ಕೆ ಬೇಕಾಗುವ ಶಕ್ತಿ ಸಿಗುವುದಿಲ್ಲ. ಕೇವಲ ನಮಗೆ ಮಾತ್ರವಲ್ಲ, ಎಲ್ಲಾ ಜೀವಿಗಳಿಗೂ ಬೇಕಾಗುವ ಶಕ್ತಿ ಈ ಆಮ್ಲಜನಕದಿಂದಲೆ ಸಿಗುವುದು. ಅಕಸ್ಮಾತ್ ಈ ಆಮ್ಲಜನಕದ ಪ್ರಮಾಣ ದುಪ್ಪಟ್ಟಾದರೆ ಇದರಿಂದ ಮೊದಲು ಕೀಟಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೀಟಗಳಿಗೆ ಬೇರೆ ಜೀವಿಗಳ ಹಾಗೆ ಉಸಿರಾಡಲು ಶ್ವಾಸಕೋಶ ಇರುವುದಿಲ್ಲ. ಅವುಗಳಿಗೆ “Tracheae” ಎನ್ನುವ ಪುಟ್ಟ ರಂದ್ರವಿರುತ್ತದೆ. ಈ ರಂಧ್ರದ ಮೂಲಕ ವಾತಾವರಣದಲ್ಲಿರುವ ಆಮ್ಲಜನಕವನ್ನು ನೇರವಾಗಿ ಒಳಗೆ ಎಳೆದುಕೊಳ್ಳುತ್ತವೆ. ಜೇಡ, ಜಿರಲೆ ಮತ್ತು Giant weta ತರಹದ ದೊಡ್ಡ ಕೀಟಗಳಿಗೆ ಉಸಿರಾಡಲು ಹೆಚ್ಚು ಪ್ರಮಾಣದ ಆಮ್ಲಜನಕ ಬೇಕು. ಅಕಸ್ಮಾತ್ ವಾತಾವರಣದಲ್ಲಿ ಹೆಚ್ಚು ಆಮ್ಲಜನಕದ ಅಂಶವಿದ್ದರೆ ಈ ಕೀಟಗಳು ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ತಮ್ಮೊಳಗೆ ಎಳೆದುಕೊಳ್ಳುತ್ತವೆ. ಇದರಿಂದ ಅವುಗಳ ಗಾತ್ರದ ಮೇಲೆ ಪರಿಣಾಮ ಬಿದ್ದು ಬೃಹತ್ ಆಕಾರದಲ್ಲಿ ಬೆಳೆಯುತ್ತವೆ. 300 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ವಾತಾವರಣದಲ್ಲಿ 30% ನಷ್ಟು ಆಮ್ಲಜನಕವಿತ್ತು. ಆದ್ದರಿಂದಲೇ ಆಗ ಜೀವಿಗಳು ಬೃಹತ್ ಗಾತ್ರದಲ್ಲಿ ಬೆಳೆಯುತ್ತಿದ್ದವು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಇನ್ನು ವಾತಾವರಣದಲ್ಲಿ ಹೆಚ್ಚು ಪ್ರಮಾಣದ ಆಮ್ಲಜನಕವಿದ್ದು ಅದು ಮನುಷ್ಯನ ದೇಹದ ಒಳಗೆ ಪ್ರವೇಶಿಸಿದರೆ ಅದರಿಂದ ದೇಹದಲ್ಲಿ ರಕ್ತದ ಸಂಚಾರ ಸರಾಗವಾಗಿ ಆಗುತ್ತದೆ ಮತ್ತು ಮೆದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೆ ದೇಹದ ಒಳಗೆ ರೋಗ ನಿರೋಧಕ ಶಕ್ತಿ ಹೆಚ್ಚು ಬೆಳೆಯುತ್ತದೆ. ಮೆದುಳಿನ ಸಾಮರ್ಥ್ಯ ಹೆಚ್ಚಾಗುವುದರಿಂದ ಮನುಷ್ಯನು ಈಗಿರುವುದಕ್ಕಿಂತ ಹೆಚ್ಚು ಬುದ್ದಿವಂತನಾಗುತ್ತಾನೆ. ಮೈಕಟ್ಟು ಬಲಿಷ್ಟವಾಗಿ ಬೆಳೆದು super human ತರಹ ಆಗುತ್ತಾನೆ. ಇದು ಹೆಚ್ಚು ಆಮ್ಲಜನಕದ ಪ್ರಮಾಣ ನಮ್ಮ ದೇಹದ ಒಳಗೆ ಪ್ರವೇಶಿಸಿದಾಗ ಆಗುವಂತಹ ಲಾಭಗಳು. ದೇಹಕ್ಕೆ ಅವಶ್ಯಕತೆ ಇರುವ ಆಮ್ಲಜನಕದ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣವು ದೇಹದ ಒಳಗೆ ಪ್ರವೇಶಿಸಿದರೆ ಶ್ವಾಸಕೋಶ damage ಆಗುತ್ತದೆ. ಜೊತೆಗೆ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀಳುತ್ತದೆ ಮತ್ತು ದೇಹದ ಒಳಗಿರುವ ಕಣಗಳು ನಾಶವಾಗುತ್ತವೆ. ಇದನ್ನು “Oxygen toxic” ಎಂದು ಕರೆಯುತ್ತಾರೆ. ಸುಲಭವಾದ ಬಾಷೆಯಲ್ಲಿ ಹೇಳುವುದಾದರೆ ಅತಿಯಾದರೆ ಅಮೃತವು ವಿಷವಾಗುತ್ತದೆ ಎನ್ನುತ್ತಾರಲ್ಲ ಹಾಗೆ.

ಇನ್ನು ಇದರಿಂದ ಪ್ರಕೃತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೆಂದರೆ, ವಾತಾವರಣದಲ್ಲಿ ಹೆಚ್ಚು ಆಮ್ಲಜನಕವಿದ್ದರೆ ಅದರಿಂದ ಭೂಮಿಯ ಒಳಗೆ ಪ್ರವೇಶಿಸುವ ಸೂರ್ಯನ ಕಿರಣಗಳ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಪ್ರಪಂಚದೆಲ್ಲೆಡೆ ಅಕಸ್ಮಾತ್ ಕಾಡುಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡರೆ ಬೆಂಕಿಯ ಕೆನ್ನಾಲಿಗೆಯು ತುಂಬಾ ವೇಗವಾಗಿ ವಿಸ್ತಾರವಾಗುತ್ತದೆ. ಏಕೆಂದರೆ ನಮಗೆ ತಿಳಿದ ಹಾಗೆ ಆಮ್ಲಜನಕದ ಪ್ರಮಾಣ ಹೆಚ್ಚಿದ್ದಲ್ಲಿ ಬೆಂಕಿಯು ತುಂಬಾ ದೈತ್ಯ ರೂಪ ಪಡೆಯುತ್ತದೆ.ಇದರಿಂದ ಕಾಡುಗಳ ನಾಶ ಹೆಚ್ಚಾಗುತ್ತದೆ. ವಿಜ್ಞಾನಿಗಳ ಪ್ರಕಾರ 2.5 ಬಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ 50% ನಷ್ಟು ಆಮ್ಲಜನಕವಿತ್ತು. ಆದ್ದರಿಂದಲೆ ಆಗ ಭೂಮಿಯ ಮೇಲೆ mass extinction ಆಗಿತ್ತು. ಇದನ್ನು “Great oxygenation event” ಎಂದು ಕರೆಯಲಾಗಿದೆ. ಇದರ ಬಳಿಕ ಭೂಮಿಯ ಮೇಲೆ ಮತ್ತೆ ಹೊಸ ವಾತಾವರಣ ಸೃಷ್ಟಿಯಾಯಿತು. ಆಗ ಆಮ್ಲಜನಕದ ಪ್ರಮಾಣ 30% ಇತ್ತು. ಆದ್ದರಿಂದಲೆ ಆಗ ಹುಟ್ಟಿದ ಜೀವಿಗಳು ಬೃಹತ್ ಗಾತ್ರದಲ್ಲಿ ಬೆಳೆದಿದ್ದು. ಇನ್ನು ಈಗ 21% ಆಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ನಮ್ಮ ಭೂಮಿ ಸೃಷ್ಟಿಯಾದ ಮೇಲೆ ಪ್ರಕೃತಿಯು ಹಲವಾರು ಟ್ರಯಲ್ ಗಳನ್ನು ಮಾಡಿ ಕೊನೆಗೆ ಭೂಮಿಯ ಮೇಲೆ ಜೀವಿಗಳು ಉಗಮವಾಗುವ ಹಾಗೆ ಬೇಕಾಗಿರುವ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ ಎಂದೆನಿಸುತ್ತದೆ. ಅದೇನೇ ಹೇಳಿ ಒಂದೆಡೆ ಆಮ್ಲಜನಕದ ಪ್ರಮಾಣ ಹೆಚ್ಚಾದಲ್ಲಿ ಲಾಭವಿದ್ದರೆ ಮತ್ತೊಂದೆಡೆ ಅನೇಕ ನಷ್ಟಗಳು ಕೂಡ ಇದೆ. ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group